ಹಣಕಾಸು ಸಚಿವಾಲಯ
ಕೆಲವು ಉದ್ದಿಮೆಗಳ ನೋಂದಣಿ, ಅನುಮೋದನೆ ಮತ್ತಿತರ ಹೊಸ ಪ್ರಕ್ರಿಯೆಗಳ ಪಾಲನೆ ಅವಧಿ 2020ರ ಅಕ್ಟೋಬರ್ 1ರ ವರೆಗೆ ಮುಂದೂಡಿಕೆ
Posted On:
09 MAY 2020 10:41AM by PIB Bengaluru
ಕೆಲವು ಉದ್ದಿಮೆಗಳ ನೋಂದಣಿ, ಅನುಮೋದನೆ ಮತ್ತಿತರ ಹೊಸ ಪ್ರಕ್ರಿಯೆಗಳ ಪಾಲನೆ ಅವಧಿ 2020ರ ಅಕ್ಟೋಬರ್ 1ರ ವರೆಗೆ ಮುಂದೂಡಿಕೆ
ಅನಿರೀಕ್ಷಿತ ಮಾನವೀಯ ಮತ್ತು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಿಬಿಡಿಟಿ ಕೆಲವು ಉದ್ದಿಮೆಗಳಿಗೆ ಅನುಮೋದನೆ/ನೋಂದಣಿ ಮತ್ತು ಅಧಿಸೂಚನೆಗಳ ಕುರಿತಂತೆ ಹೊಸ ಪ್ರಕ್ರಿಯೆ ಪಾಲನೆಯನ್ನು 2020ರ ಅಕ್ಟೋಬರ್ 1 ರ ವರೆಗೆ ಮುಂದೂಡಿದೆ. ಅದರಂತೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ ಅಡಿಯಲ್ಲಿ 10(23ಸಿ), 12ಎಎ, 35 ಮತ್ತು 80ಜಿ ಅಡಿಯಲ್ಲಿ ಅನುಮೋದಿತ ಉದ್ದಿಮೆಗಳ ನೋಂದಣಿ ಮತ್ತು ಅಧಿಸೂಚನೆಗಳನ್ನು, 2020ರ ಅಕ್ಟೋಬರ್ 1 ರೊಳಗೆ ಅಂದರೆ ಮೂರು ತಿಂಗಳಲ್ಲಿ ಮಾಹಿತಿ ನೀಡುವ ಅಗತ್ಯವಿತ್ತು. ಆ ಅವಧಿಯನ್ನು 2020ರ ಡಿಸೆಂಬರ್ 31ರ ವರೆಗೆ ಮುಂದೂಡಲಾಗಿದೆ. ಅಲ್ಲದೆ ಹೊಸ ಉದ್ದಿಮೆಗಳಿಗೆ ಅನುಮೋದನೆ/ನೋಂದಣಿ ಮತ್ತು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಿ, ಅವುಗಳಿಗೂ ಸಹ 2020ರ ಅಕ್ಟೋಬರ್ 1 ಅನ್ವಯವಾಗುವಂತೆ ಮಾಡಲಾಗಿದೆ.
ಈ ಕುರಿತಂತೆ ಮುಂದಿನ ದಿನಗಳಲ್ಲಿ ಅಗತ್ಯ ಶಾಸನಾತ್ಮಕ ತಿದ್ದುಪಡಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಮಾರಕ ಕೊರೊನಾ ಸೋಂಕು(ಕೋವಿಡ್) ಹರಡುತ್ತಿರುವುದು ಮತ್ತು ಆನಂತರದ ಲಾಕ್ ಡೌನ್ ನಿಂದಾಗಿ ಹೊಸ ಪ್ರಕ್ರಿಯೆ 2020ರ ಜೂನ್ 1 ರಿಂದ ಜಾರಿಗೊಳಿಸುವ ಬಗ್ಗೆ ಹಣಕಾಸು ಸಚಿವಾಲಯ ಸಂಬಂಧಿಸಿದವರಿಂದ ಆತಂಕ ವ್ಯಕ್ತಪಡಿಸಿ, ಹಲವು ಮನವಿಗಳನ್ನು ಸ್ವೀಕರಿಸಿತ್ತು. ಹೊಸ ಪ್ರಕ್ರಿಯೆ ಅಳವಡಿಕೆ ಅವಧಿಯನ್ನು ಮುಂದೂಡುವಂತೆ ಹೆಚ್ಚಿನ ಮನವಿಗಳು ಬಂದಿದ್ದವು.
ಹಣಕಾಸು ಕಾಯ್ದೆ 2020 ಪ್ರಕಾರ ಆದಾಯ ತೆರಿಗೆ ಇಲಾಖೆ ಕಾಯ್ದೆ ಸೆಕ್ಷನ್ 10(23ಸಿ), 12ಎಎ, 35 ಮತ್ತು 80ಜಿ ಅಡಿಯಲ್ಲಿ ಬರುವ ಕೆಲವು ಉದ್ದಿಮೆಗಳಿಗೆ ಅನುಮೋದನೆ, ನೋಂದಣಿ ಮತ್ತು ಅಧಿಸೂಚನೆಗೆ ಹೊಸ ಪ್ರಕ್ರಿಯೆ 2020ರ ಜೂನ್ 1 ರಿಂದ ಜಾರಿಗೆ ಬರಬೇಕಾಗಿತ್ತು. ಹೊಸ ಪದ್ಧತಿಯಲ್ಲಿ ಈಗಾಗಲೇ ಕಾಯ್ದೆಯ ಸೆಕ್ಷನ್ ಗಳನ್ವಯ ಅನುಮೋದನೆ ಪಡೆದಿರುವ/ನೋಂದಣಿ ಮಾಡಿಕೊಂಡಿರುವ/ಅಧಿಸೂಚಿತ ಉದ್ದಿಮೆಗಳು ಮೂರು ತಿಂಗಳಲ್ಲಿ ಅಂದರೆ 2020ರ ಆಗಸ್ಟ್ 31ರೊಳಗೆ ಮಾಹಿತಿಯನ್ನು (ಇಂಟಿಮೇಶನ್) ಸಲ್ಲಿಸುವುದು ಕಡ್ಡಾಯವಿತ್ತು. ಅಲ್ಲದೆ 2020ರ ಜೂನ್ 1 ರಿಂದ ಜಾರಿಗೆ ಬರುವಂತೆ ಹೊಸ ಉದ್ದಿಮೆಗಳಿಗೆ ಅನುಮೋದನೆ/ ನೋಂದಣಿ ಮತ್ತು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಏಕರೂಪಗೊಳಿಸಲಾಗಿತ್ತು.
***
(Release ID: 1622485)
Visitor Counter : 288
Read this release in:
Assamese
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Odia
,
Tamil
,
Telugu
,
Malayalam