ಗೃಹ ವ್ಯವಹಾರಗಳ ಸಚಿವಾಲಯ
ವಿಶಾಖಟ್ಟಣಂ ಅನಿಲ ಸೋರಿಕೆ ದುರಂತದ ಸ್ಥಿತಿಗತಿ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಎನ್ ಸಿಎಂಸಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಸಂಪುಟ ಕಾರ್ಯದರ್ಶಿ
Posted On:
08 MAY 2020 6:14PM by PIB Bengaluru
ವಿಶಾಖಟ್ಟಣಂ ಅನಿಲ ಸೋರಿಕೆ ದುರಂತದ ಸ್ಥಿತಿಗತಿ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಎನ್ ಸಿಎಂಸಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಸಂಪುಟ ಕಾರ್ಯದರ್ಶಿ
ರಾಷ್ಟ್ರೀಯ ಸಂಕಷ್ಟ ನಿರ್ವಹಣಾ ಸಮಿತಿ, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ಸತತ ಎರಡನೇ ದಿನವಾದ ಇಂದು ಸಭೆ ಸೇರಿ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆ ದುರಂತದ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿತು. ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ, ಸಮಿತಿಗೆ ವಾಸ್ತವ ಸ್ಥಿತಿಗತಿ ಮತ್ತು ಘಟನೆಯ ನಂತರ ಕೈಗೊಂಡಿರುವ ಕ್ರಮಗಳು ಮತ್ತು ಘಟಕದಲ್ಲಿ ಸೋರಿಕೆ ತಡೆಗೆ ಹಾಗೂ ಜನರನ್ನು ಸ್ಥಳಾಂತರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಟ್ಯಾಂಕರ್ ಗಳಿಂದ ಮತ್ತೆ ಅನಿಲ ಸೋರಿಕೆಯಾಗದಂತೆ ತಡೆಯಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಅನಿಲ ಸೋರಿಕೆಯಿಂದಾಗಿ ಆರೋಗ್ಯ ಮತ್ತು ನೀರು ಹಾಗೂ ವಾಯು ಗುಣಮಟ್ಟದ ಮೇಲೆ ಆಗಲಿರುವ ದೀರ್ಘಕಾಲದ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಯಿತು.
ಸಂಪುಟ ಕಾರ್ಯದರ್ಶಿಗಳು ಪ್ರಸಕ್ತ ಸ್ಥಿತಿಗತಿ, ಸಿದ್ಧತಾ ಕ್ರಮಗಳು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳ ಕುರಿತು ಮಾಹಿತಿಯನ್ನು ಪಡೆದರು ಮತ್ತು ರಾಜ್ಯಕ್ಕೆ ಅಗತ್ಯಬಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ರಾಸಾಯನಿಕ ಸುರಕ್ಷತೆ ಮತ್ತು ಕೈಗಾರಿಕೆಗಳ ಪ್ರಕ್ರಿಯೆ ಬಗ್ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಜ್ಞರು ಸಮಾಲೋಚನೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿರುವ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಅಂತಹ ತಜ್ಞರುಗಳ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ. ಅದೇ ರೀತಿ ವೈದ್ಯಕೀಯ ತಜ್ಞರ ಜೊತೆಯೂ ಸಮಾಲೋಚನೆಗಳನ್ನು ನಡೆಸಲು ವ್ಯವಸ್ಥೆಗಳನ್ನು ಮಾಡಲಾಗಿದ್ದು, ವೈದ್ಯಕೀಯ ಮಾನದಂಡಗಳನ್ನು ಅನುಸರಿಸಲಾಗುವುದು. ಪ್ರತಿಬಂಧಕ ರಾಸಾಯನಿಕಗಳನ್ನು ರವಾನಿಸುವ ಮೂಲಕ ನೆರವಿನ ಅಗತ್ಯತೆಯನ್ನು ಖಾತ್ರಿಪಡಿಸಲಾಗುತ್ತಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್ ಹಾಗೂ ಫಾರ್ಮಸಿಟಿಕಲ್ಸ್ ಸಚಿವಾಲಯಗಳ ಕಾರ್ಯದರ್ಶಿಗಳು, ಎನ್ ಡಿಆರ್ ಎಫ್ ನ ಪ್ರಧಾನ ನಿರ್ದೇಶಕರು ಮತ್ತು ಏಮ್ಸ್ ನ ಆರೋಗ್ಯ ಸೇವೆಗಳ ನಿರ್ದೇಶಕರು, ಎಂಎಚ್ಎ ಮತ್ತು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ, ವಿಶಾಖಪಟ್ಟಣಂ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
***
(Release ID: 1622332)
Visitor Counter : 182