ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಲಾಕ್ ಡೌನ್ ನಡುವೆಯೂ ಹೆಚ್ಚಿದ ಆಹಾರ ಧಾನ್ಯಗಳ ಸಂಗ್ರಹ

Posted On: 07 MAY 2020 6:52PM by PIB Bengaluru

ಲಾಕ್ ಡೌನ್ ನಡುವೆಯೂ ಹೆಚ್ಚಿದ ಆಹಾರ ಧಾನ್ಯಗಳ ಸಂಗ್ರಹ

ಕೇಂದ್ರ ಸಂಗ್ರಹಣೆಗಾಗಿ ಗುರಿ ನಿಗದಿಪಡಿಸಲಾದ 400 ಲಕ್ಷ ಮೆಟ್ರಿಕ್ ಟನ್ ಗೋಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಸಂಗ್ರಹ
45 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರದ, 30 ಲಕ್ಷ ಮೆಟ್ರಿಕ್ ಟನ್ ಕೊಡುಗೆಯಿಂದ ತೆಲಂಗಾಣ ಮುಂಚೂಣಿಯಲ್ಲಿ

3 ತಿಂಗಳ ಒಟ್ಟು ಹಂಚಿಕೆಯಲ್ಲಿ 58% ರಷ್ಟು ಪಿ ಎಂ ಜಿ ಕೆ ವಾಯ್ ಅಡಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಸಂಗ್ರಹ
 

ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಾಗಾಣಿಕೆ ಸಮಸ್ಯೆಗಳ ಮಧ್ಯೆಯೂ  ಪ್ರಸ್ತುತ ಚಾಲ್ತಿಯಲ್ಲಿರುವ ಹಿಂಗಾರು ಹಂಗಾಮಿನಲ್ಲಿ ಗೋಧಿ ಮತ್ತು ಅಕ್ಕಿಯ (2 ನೇ ಬೆಳೆ) ಸಂಗ್ರಹವು ದೇಶಾದ್ಯಂತ ಹೆಚ್ಚಿದೆ. 400 ಲಕ್ಷ ಮೆಟ್ರಿಕ್ ಟನ್ (ಎಲ್ ಎಂ ಟಿ) ಗೋಧಿ ಪೈಕಿ ಕೇಂದ್ರ ಸಂಗ್ರಹಣೆಗಾಗಿ ಶೇಖರಿಸಲಾದ ದಾಸ್ತಾನು 06.05.20 ರವರೆಗೆ 216 ಎಲ್ ಎಂ ಟಿ ತಲುಪಿದೆ. ಗೋಧಿಯನ್ನು ಪ್ರಮುಖವಾಗಿ ಬೆಳೆಯುವ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಮಧ್ಯ ಪ್ರದೇಶ 15 ಏಪ್ರೀಲ್ ನಂತರ ಸಂಗ್ರಹಣೆಯನ್ನು ಪ್ರಾರಂಭಿಸಿದ್ದು ವಿಶೇಷವಾಗಿ ಪ್ರಶಂಸನೀಯ. ಇದರಂತೆ ಸರಕಾರಿ ಏಜನ್ಸಿಗಳು ಇಲ್ಲಿವರೆಗೆ 44.9 ಎಲ್ ಎಂ ಟಿ ಭತ್ತ ಸಂಗ್ರಹಿಸಿದ್ದು ಭತ್ತದ ಸಂಗ್ರಹಣೆ  ಕೂಡಾ ಸುಗಮವಾಗಿ ಸಾಗುತ್ತಿದೆ.

104.28 ಎಲ್ ಎಂ ಟಿ ಸಂಗ್ರಹಿಸಿದ ಪಂಜಾಬ್ ಮುಂಚೂಣಿಯಲ್ಲಿದೆ ನಂತರ ಹರಿಯಾಣ 50.56 ಎಲ್ ಎಂ ಟಿ, ಮಧ್ಯ ಪ್ರದೇಶ ಎಲ್ ಎಂ ಟಿ ಸಂಗ್ರಹಿಸಿ ನಂತರದ ಸ್ಥಾನದಲ್ಲಿವೆ. ಅಕಾಲಿಕ ಮಳೆಯಿಂದಾಗಿ ಈ ರಾಜ್ಯಗಳಲ್ಲಿನ ಗೋಧಿ ಸಂಗ್ರಹಣೆ ಮೇಲೆ ಪರಿಣಾಮ ಬೀರಿದೆ. ಸಂಗ್ರಹಣೆಗಾಗಿ ಆದೇಶಿಸಲಾದ ನಿಗದಿಗಳನ್ನು ಸಡಿಲಿಸುವ ಮೂಲಕ ಭಾರತ ಸರ್ಕಾರ ಈಗಾಗಲೇ ರೈತರ ನೆರವಿಗೆ ಮುಂದೆ ಬಂದಿದ್ದು, ಇದು ಸಂಗ್ರಹಣೆಗೆ ಹೆಚ್ಚಿನ ನೆರವು ನೀಡಿದೆ ಮತ್ತು ರೈತರನ್ನು ಸಂಕಷ್ಟದಿಂದ ಪಾರು ಮಾಡಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನ ಕೂಡಾ ಕೇಂದ್ರ ಸಂಗ್ರಹಣೆಗೆ ಕೊಡುಗೆ ನೀಡಿದ್ದು ಈ ರಾಜ್ಯಗಳಲ್ಲೂ ಸಂಗ್ರಹಣೆ ವೇಗ ಪಡೆದಿದೆ.    

ಬೃಹತ್ ನೀರಾವರಿ ಯೋಜನೆಗಳ ಜಾರಿಯಿಂದಾಗಿ ತೆಲಂಗಾಣದಲ್ಲಿ ಭತ್ತದ ಉತ್ಪಾದನೆಯಲ್ಲಿ ದಿಢೀರ್ ಮುನ್ನಡೆ ಸಾಧಿಸಲಾಗಿದ್ದು ಹೆಚ್ಚಿನ ಭತ್ತದ ಸಂಗ್ರಹಣೆ ಆಗಿದೆ. ಒಟ್ಟು ಭತ್ತದ ಸಂಗ್ರಹಣೆ 45 ಎಲ್ ಎಂ ಟಿ ಯಲ್ಲಿ ತೆಲಂಗಾಣ ಮಾತ್ರ 30 ಎಲ್ ಎಂ ಟಿ ಕೊಡುಗೆ ನೀಡಿದ್ದು ಆಂಧ್ರ ಪ್ರದೇಶ 10 ಎಲ್ ಎಂ ಟಿ ಕೊಡುಗೆ ನೀಡಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಪಕ ಒಗ್ಗೂಡಿ ಕೆಲಸ ಮಾಡುವ ಕಾರ್ಯವೈಖರಿಯಿಂದ ಲಾಕ್ ಡೌನ್ ನಿಂದ ಎದುರಿಸುತ್ತಿರುವ ವಿಭಿನ್ನ ಸವಾಲುಗಳ ಮಧ್ಯೆಯೂ ಈ ಸುಗಮ ಸಂಗ್ರಹಣೆ ಸಾಧ್ಯವಾಗಿದೆ.        

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿ ಎಂ ಜಿ ಕೆ ಎ ವಾಯ್)ಯಡಿಯಲ್ಲಿ ರಾಜ್ಯ ಸರ್ಕಾರಗಳು ಆಹಾರ ಧಾನ್ಯಗಳನ್ನು ಸಂಗ್ರಹಿಸಿ ದೇಶಾದ್ಯಂತದ 80 ಕೋಟಿ ಫಲಾನುಭವಿಗಳಿಗೆ 3 ತಿಂಗಳುಗಳ ಕಾಲ ಉಚಿತವಾಗಿ ತಲಾ 5 ಕೆಜಿ ಆಹಾರ ಧಾನ್ಯ ವಿತರಿಸುತ್ತಿದ್ದು ಇದು 70 ಎಲ್ ಎಂಟಿ ದಾಟಿದೆ ಹಾಗೂ ಇದು 3 ತಿಂಗಳ ಒಟ್ಟು ಬಟವಾಡೆಯ 58% ರಷ್ಟಾಗಿದೆ. ಏಪ್ರೀಲ್ 2020 ರ ಪಾಲಿನ ಸಂಗ್ರಹವನ್ನೆಲ್ಲ ಪ್ರತಿಯೊಂದು ರಾಜ್ಯವೂ ಸಂಗ್ರಹಿಸಿದೆ ಮತ್ತು 5 ಕೇಂದ್ರಾಡಳಿತ ಪ್ರದೇಶಗಳು 3 ತಿಂಗಳಿಗಾಗುವಷ್ಟು ಸಂಪೂರ್ಣ ಪಾಲನ್ನು ಪಡೆದಿವೆ. ಪ್ರತಿ ರಾಜ್ಯ  ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಕಷ್ಟು ಆಹಾರ ಧಾನ್ಯಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಯಾರಿಗೂ ಆತಂಕವಿರದಂತೆ ಆಹಾರ ಧಾನ್ಯಗಳ ಲಭ್ಯತೆಯನ್ನು ಭಾರತ ಸರ್ಕಾರ ಖಚಿತಪಡಿಸುತ್ತಿದೆ.     

***



(Release ID: 1621985) Visitor Counter : 168