ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ರಷ್ಯಾದ ಇಂಧನ ಸಚಿವ ಶ್ರೀ ಅಲೆಗ್ಸಾಂಡರ್ ನೊವಾಕ್ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ಸಮಾಲೋಚನೆ

Posted On: 07 MAY 2020 10:12AM by PIB Bengaluru

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ರಷ್ಯಾದ ಇಂಧನ ಸಚಿವ ಶ್ರೀ ಅಲೆಗ್ಸಾಂಡರ್ ನೊವಾಕ್ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ಸಮಾಲೋಚನೆ

 

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು, ರಷ್ಯಾದ ಇಂಧನ ಸಚಿವ ಶ್ರೀ ಅಲೆಗ್ಸಾಂಡರ್ ನೊವಾಕ್ ಅವರೊಂದಿಗೆ 2020 ಮೇ 6ರಂದು ವಿಡಿಯೋ ಸಂವಾದದ ಮೂಲಕ ಸಮಾಲೋಚನೆ ನಡೆಸಿದರು. ಅವರು ಪ್ರಸಕ್ತ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆ ಸ್ಥಿತಿಗತಿ ಕುರಿತು ಸಮಾಲೋಚಿಸಿದರು ಮತ್ತು ತೈಲ ಮತ್ತು ಅನಿಲ ವಲಯ ಹಾಗೂ ಕೋಕಿಂಗ್ ಕಲ್ಲಿದ್ದಲು ವಲಯಗಳಲ್ಲಿ ಮಾಡಿಕೊಂಡಿರುವ ದ್ವಿಪಕ್ಷೀಯ ಸಹಕಾರ ಸಂಬಂಧಗಳ ಕುರಿತು ಪರಾಮರ್ಶೆ ನಡೆಸಿದರು.

ಸಚಿವ ನೊವಾಕ್ ಅವರು, ಭಾರತದ ಸಚಿವರಿಗೆ ಇತ್ತೀಚೆಗೆ ಸಹಿ ಹಾಕಲಾದ ಒಪಿಇಸಿ+ ಒಪ್ಪಂದದ ಕುರಿತು ವಿವರ ನೀಡಿದರು. ಸಚಿವ ಪ್ರಧಾನ್ ಅವರು ಒಪ್ಪಂದವನ್ನು ಸ್ವಾಗತಿಸಿ, ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರತೆ ಮತ್ತು ಸಂಭವನೀಯತೆ ಕಾಯ್ದುಕೊಳ್ಳಲು ಇದೊಂದು ಪ್ರಮುಖ ಹೆಜ್ಜೆಯಾಗಲಿದೆ. ಭಾರತ ಒಂದು ಬಳಕೆದಾರರ ರಾಷ್ಟ್ರವಾಗಿರುವುದರಿಂದ ಅದು ಮಹತ್ವದ್ದಾಗಿದೆ ಎಂದು ಹೇಳಿದರು. ರಷ್ಯಾದ ಸಚಿವರು, ಪ್ರಮುಖ ದ್ವಿಪಕ್ಷೀಯ ಪಾಲುದಾರರಾಗಿ ಭಾರತ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಪ್ರಮುಖ ಹೈಡ್ರೋ ಕಾರ್ಬನ್ ಬಳಕೆದಾರರ ಬೇಡಿಕೆ ನಿಟ್ಟಿನಲ್ಲಿ ಮಹತ್ವದ್ದು ಎಂದರು. ಸಚಿವ ಪ್ರಧಾನ್ ಅವರು, ಭಾರತದ ಆರ್ಥಿಕತೆ ಹೈಡ್ರೋಕಾರ್ಬನ್ ಗೆ ಬೇಡಿಕೆಯ ಕೇಂದ್ರವಾಗಿ ಮುಂದುವರಿಯಲಿದೆ ಎಂದು ಪ್ರತಿಪಾದಿಸಿದರು.

ಉಭಯ ಸಚಿವರು ಎರಡು ದೇಶಗಳ ನಡುವೆ ಪ್ರಸ್ತುತ ಪ್ರಗತಿಯಲ್ಲಿರುವ ರೋಸ್ ನೆಫ್ಟ್ ನೊಂದಿಗಿನ ವಾಸ್ಟೋಕ್ ಯೋಜನೆ, ನೊವಾಟೆಕ್ ಎಲ್ಎನ್ ಜಿ ಪೂರೈಕೆ, ಗೇಲ್ ಮತ್ತು ಗಾಝ್ ಪ್ರೋಮ್ ನಡುವಿನ ಸಹಕಾರ, ಗಾಝ್ ಪ್ರೋಮ್ ನೆಫ್ಟ್ ನೊಂದಿಗಿನ ಜಂಟಿ ಯೋಜನೆ ಭಾರತೀಯ ತೈಲಕ್ಕೆ ರೋಜ್ ನೆಫ್ಟ್ ನಿಂದ ಕಚ್ಚಾ ತೈಲ ಪೂರೈಕೆ ಇತ್ಯಾದಿ ಯೋಜನೆಗಳ ಕುರಿತು ಪರಾಮರ್ಶಿಸಿದರು. ಕೋವಿಡ್-19ನಿಂದಾಗಿ ಉದ್ಭವಿಸಿರುವ ಅನಿರೀಕ್ಷಿತ ಸಂಕಷ್ಟದ ಸಮಯದಲ್ಲೂ ಭಾರತ ಸಹಕಾರ ಮುಂದುವರಿಸಿರುವುದಕ್ಕೆ ರಷ್ಯಾ ಮೆಚ್ಚುಗೆ ವ್ಯಕ್ತಪಡಿಸಿತು. ಸಚಿವ ನೊವಾಕ್ ಅವರು, ಭಾರತದ ಇಂಧನ ಅಗತ್ಯತೆಗಳಿಗೆ ಬೆಂಬಲ ನೀಡುವ ಆಕಾಂಕ್ಷೆಯನ್ನು ಪುನರ್ ಪ್ರತಿಪಾದಿಸಿದರು.

ಸಭೆಯ ವೇಳೆ ಭಾರತದ ಪ್ರಧಾನಮಂತ್ರಿ ಅವರು 2019 ಸೆಪ್ಟೆಂಬರ್ ನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ವೇಳೆ ಮಾಡಿಕೊಂಡಿದ್ದ ಕೋಕಿಂಗ್ ಕಲ್ಲಿದ್ದಲು ವಲಯದಲ್ಲಿನ ಒಪ್ಪಂದದ ಸಹಕಾರ ಬಲವರ್ಧನೆ ಪ್ರಗತಿ ಸಾಧಿಸಿರುವುದಕ್ಕೆ ವಿಶೇಷ ಒತ್ತು ನೀಡಲಾಯಿತು. ನಿಟ್ಟಿನಲ್ಲಿ, ಒಪ್ಪಂದ ಅಂತಿಮಗೊಳಿಸುವ ಉದ್ದೇಶದಿಂದ ಕಲ್ಲಿದ್ದಲು ಸಹಕಾರ ಬಲವರ್ಧನೆ ಕುರಿತಂತೆ ಶೀಘ್ರವೇ ಉನ್ನತಮಟ್ಟದ ಸಭೆ ನಡೆಸಬೇಕೆಂಬ ಶ್ರೀ ಪ್ರಧಾನ್ ಅವರ ಸಲಹೆಯನ್ನು ರಷ್ಯಾದ ಸಚಿವರು ಸ್ವಾಗತಿಸಿದರು.

ಭಾರತದ ಕಡೆಯಿಂದ ರಷ್ಯಾದೊಂದಿಗಿನ ದೀರ್ಘಕಾಲದ ಸಹಕಾರವನ್ನು ಸ್ವಾಗತಿಸಲಾಯಿತು ಮತ್ತು ಸಚಿವ ಪ್ರಧಾನ್ ಅವರು, ಪರಿಸ್ಥಿತಿ ಸುಧಾರಿಸಿದ ನಂತರ ಭಾರತಕ್ಕೆ ಭೇಟಿ ನೀಡುವಂತೆ ಸಚಿವ ನೊವಾಕ್ ಅವರಿಗೆ ಮಾಡಿದ್ದ ಮನವಿಯನ್ನು ಪುನರುಚ್ಚರಿಸಿದರು. ಅಲ್ಲದೆ ಈಮಧ್ಯೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆಗಳನ್ನು ಮುಂದುವರಿಸುವಂತೆ ಉಭಯ ಸಚಿವರು ತಮ್ಮ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು.

ಉಭಯ ದೇಶಗಳು, ಸದ್ಯದ ಜಾಗತಿಕ ಇಂಧನ ಸ್ಥಿತಿಗತಿಯ ಸವಾಲನ್ನು ಮೌಲ್ಯಮಾಪನ ಮಾಡಲು ಒಪ್ಪಿದವು ಮತ್ತು ಬೇಡಿಕೆ ನಿಟ್ಟಿನಲ್ಲಿ ಭಾರತ ಪ್ರಮುಖ ಪಾತ್ರವಹಿಸಲಿದ್ದು, ಅದು ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ ಆಧಾರವಾಗಲಿದೆ.

***


(Release ID: 1621753) Visitor Counter : 313