ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಆರ್ಥಿಕ ಹಿನ್ನಡೆಯಿಂದ ಹೊರಬರಲು ಪೂರ್ಣ ಸಹಕಾರ ನೀಡುವುದಾಗಿ ಬಸ್ ಮತ್ತು ಕಾರ್ ನಿರ್ವಾಹಕರಿಗೆ ಗಡ್ಕರಿ ಭರವಸೆ

Posted On: 06 MAY 2020 4:18PM by PIB Bengaluru

ಆರ್ಥಿಕ ಹಿನ್ನಡೆಯಿಂದ ಹೊರಬರಲು ಪೂರ್ಣ ಸಹಕಾರ ನೀಡುವುದಾಗಿ ಬಸ್ ಮತ್ತು ಕಾರ್ ನಿರ್ವಾಹಕರಿಗೆ ಗಡ್ಕರಿ ಭರವಸೆ

 

ಸರಕಾರಕ್ಕೆ ತಮ್ಮ ಎಲ್ಲಾ ಸಮಸ್ಯೆಗಳ ಅರಿವು ಇದೆ, ಮತ್ತು ಅದು ಅವರ ಸಮಸ್ಯೆಗಳನ್ನು ಬಗೆ ಹರಿಸಲು ಪೂರ್ಣ ಸಹಾಯ ಮಾಡಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಹಾಗು ಎಮ್.ಎಸ್.ಎಂ. . ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ದೇಶದ ಬಸ್ಸು ಮತ್ತು ಕಾರ್ ನಿರ್ವಾಹಕರಿಗೆ ಭರವಸೆ ನೀಡಿದ್ದಾರೆ. ತಾವು ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ಜೊತೆ ಮತ್ತು ಹಣಕಾಸು ಸಚಿವರ ಜೊತೆ ನಿಯತವಾಗಿ ಸಂಪರ್ಕದಲ್ಲಿದ್ದು, ಅವರು ಕೋವಿಡ್ -19 ಸಂಕಷ್ಟದ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಹೆಚ್ಚುವರಿ ಅವಧಿಯ ಕೆಲಸವನ್ನು ಮಾಡುತ್ತಿದ್ದಾರೆ ಎಂದೂ ಶ್ರೀ ಗಡ್ಕರಿ ಹೇಳಿದರು.

ವೀಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಬಸ್ಸು ಮತ್ತು ಕಾರ್ ನಿರ್ವಾಹಕರ ಮಹಾಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗಡ್ಕರಿ ಸಾರಿಗೆ ಮತ್ತು ಹೆದ್ದಾರಿಗಳನ್ನು ಮುಕ್ತ ಮಾಡಿರುವುದರಿಂದ ಸಾರ್ವಜನಿಕರಲ್ಲಿ ಕ್ರಮ ಭರವಸೆ ಮೂಡಿಸಲಿದೆ ಎಂದರು. ಸಾರ್ವಜನಿಕ ಸಾರಿಗೆ ಕೂಡಾ ಕೆಲವು ಮಾರ್ಗದರ್ಶಿಗಳೊಂದಿಗೆ ಶೀಘ್ರವೇ ತೆರೆದುಕೊಳ್ಳಲಿದೆ ಎಂದ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸುರಕ್ಷಾ ಕ್ರಮಗಳಾದ ಕೈ ತೊಳೆಯುವುದು, ಸ್ಯಾನಿಟೈಸ್ ಮಾಡುವುದು, ಮುಖಗವಸುಗಳನ್ನು ಹಾಕುವುದು ಇತ್ಯಾದಿಗಳನ್ನು ಬಸ್ಸು ಮತ್ತು ಕಾರುಗಳನ್ನು ನಿರ್ವಹಿಸುವಾಗ ಅನುಸರಿಸಬೇಕು ಎಂದೂ ಹೇಳಿದರು.

ಸಭಿಕರ ಕೆಲವು ಆತಂಕಗಳಿಗೆ ಉತ್ತರಿಸಿದ ಸಚಿವರು ತಮ್ಮ ಸಚಿವಾಲಯವು ಲಂಡನ್ ಮಾದರಿಯ ಸಾರ್ವಜನಿಕ ಸಾರಿಗೆಯನ್ನು ಅಂಗೀಕರಿಸುವ ಬಗ್ಗೆ ಚಿಂತನೆ ನಡೆಸಿದೆ, ಅಲ್ಲಿ ಸರಕಾರದ ಹೂಡಿಕೆ ಅತ್ಯಲ್ಪ ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸಲಾಗುತ್ತದೆ ಎಂದರು. ಭಾರತೀಯ ಬಸ್ಸು ಮತ್ತು ಟ್ರಕ್ಕುಗಳ ಬಾಡಿಗಳ ಕಳಪೆ ಗುಣಮಟ್ಟವನ್ನು ಪ್ರಸ್ತಾಪಿಸಿದ ಅವರು ಇವು 5-6 ವರ್ಷ ಕಾರ್ಯನಿರ್ವಹಿಸುತ್ತವೆ, ಆದರೆ ಯುರೋಪಿಯನ್ ಮಾದರಿಗಳು 15 ವರ್ಷದವರೆಗೆ ಬಾಳಿಕೆ ಬರುತ್ತವೆ ಎಂದು ಹೇಳಿದರು. ಅವರ ಉತ್ತಮ ಪದ್ದತಿಗಳನ್ನು ಅನುಸರಿಸುವಂತೆ ಕರೆ ನೀಡಿದ ಸಚಿವ ಗಡ್ಕರಿ ಅವರು ಅವು ದೇಶೀಯ ಉದ್ಯಮಕ್ಕೆ ಧೀರ್ಘಾವಧಿಯಲ್ಲಿ ಆರ್ಥಿಕವಾಗಿಯೂ ಅನುಕೂಲಕರ ಎಂದರು.

ಈಗ ಚಾಲ್ತಿಯಲ್ಲಿರುವ ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಣಕಾಸು ಸ್ಥಿತಿ ಬಿಗುವಾಗಿರುವುದರ ಬಗ್ಗೆ ತಮಗೂ ಅರಿವಿದೆ ಎಂದು ಹೇಳಿದ ಸಚಿವರು ಇದನ್ನು ನಿಭಾಯಿಸಲು ಎಲ್ಲಾ ಭಾಗೀದಾರರೂ ಒಗ್ಗೂಡಿ ಹೋರಾಡಬೇಕು ಎಂದರು. ಚೀನಾ ಮಾರುಕಟ್ಟೆಯಿಂದ ಹೊರಬರಲು ಯತ್ನಿಸುತ್ತಿರುವ ವಿಶ್ವದ ಕೈಗಾರಿಕೆಗಳು ಅತ್ಯುತ್ತಮ ವ್ಯಾಪಾರೋದ್ಯಮದ ಅವಕಾಶಗಳನ್ನು ಒದಗಿಸುತ್ತಿರುವುದರತ್ತ ಬೆಟ್ಟು ಮಾಡಿದ ಸಚಿವರು ಅವಕಾಶವನ್ನು ಬಳಸಿಕೊಂಡು ವಿದೇಶಿ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡುವಂತೆ ಭಾರತದ ಕೈಗಾರಿಕೋದ್ಯಮ ಅವರಿಗೆ ಆಹ್ವಾನ ನೀಡಬೇಕು ಎಂದರು. ದೇಶವು ಕೈಗಾರಿಕೋದ್ಯಮಿಗಳ ಜೊತೆಗೂಡಿ ಎರಡೂ ಯುದ್ದಗಳನ್ನು ಅಂದರೆ ಕೊರೊನಾ ವಿರುದ್ದದ ಯುದ್ದ, ಮತ್ತು ಆರ್ಥಿಕತೆ ಹಿನ್ನಡೆಯ ವಿರುದ್ದದ ಯುದ್ದವನ್ನು ಗೆಲ್ಲುವುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮಹಾ ಒಕ್ಕೂಟದ ಸದಸ್ಯರು ಬಡ್ಡಿ ಪಾವತಿ ರಿಯಾಯತಿ, ಸಾರ್ವಜನಿಕ ಸಾರಿಗೆಯ ಪುನರಾರಂಭ, ವಯೋ ಮಿತಿ ಹೆಚ್ಚಳ, ಜೀವಿತಾವಧಿ ಮಿತಿ, ರಾಜ್ಯ ತೆರಿಗೆಗಳ ಸ್ಥಾಗಿತ್ಯ, ಎಂ.ಎಸ್.ಎಂ. . ಪ್ರಯೋಜನಗಳ ವಿಸ್ತರಣೆ, ವಿಮಾ ಪಾಲಿಸಿ ಅವಧಿಯ ವಿಸ್ತರಣೆ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು ಮತ್ತು ಸಾರ್ವಜನಿಕ ಸಾರಿಗೆಯ ಪರಿಸ್ಥಿತಿಯನ್ನು ಸುಧಾರಿಸಲು ಸಲಹೆಗಳನ್ನು ನೀಡಿದರು.

***



(Release ID: 1621729) Visitor Counter : 143