ರಕ್ಷಣಾ ಸಚಿವಾಲಯ
ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ಕೋವಿಡ್-19 ವಿರುದ್ಧದ ರಾಷ್ಟ್ರದ ಹೋರಾಟದಲ್ಲಿ ಎನ್ಸಿಸಿ ಕೊಡುಗೆಯನ್ನು ಪರಿಶೀಲಿಸಿದರು
Posted On:
05 MAY 2020 4:08PM by PIB Bengaluru
ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ಕೋವಿಡ್-19 ವಿರುದ್ಧದ ರಾಷ್ಟ್ರದ ಹೋರಾಟದಲ್ಲಿ ಎನ್ಸಿಸಿ ಕೊಡುಗೆಯನ್ನು ಪರಿಶೀಲಿಸಿದರು
ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್-19 ಹರಡುವುದನ್ನು ತಡೆಗಟ್ಟುವಲ್ಲಿ ನ್ಯಾಶನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ನೀಡಿದ ಕೊಡುಗೆಯನ್ನು ಪರಿಶೀಲಿಸಿದುರ. ರಕ್ಷಣಾ ಮಂತ್ರಿಯವರು ದೇಶಾದ್ಯಂತ ಇರುವ 17 ಎನ್ಸಿಸಿ ನಿರ್ದೇಶನಾಲಯಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಮೊದಲ ಸಭೆ ಇದಾಗಿತ್ತು. ಡಿಜಿ ಎನ್ಸಿಸಿಯ ಲೆಫ್ಟಿನೆಂಟ್ ಜನರಲ್ ರಾಜೀವ್ ಚೋಪ್ರಾ ಮತ್ತು ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಸಹ ಸಭೆಯಲ್ಲಿ ಭಾಗವಹಿಸಿದ್ದರು.
ರಕ್ಷಣಾ ಮಂತ್ರಿಯವರು ತಮ್ಮ ಆರಂಭಿಕ ನುಡಿಗಳಲ್ಲಿ ದೇಶವು ಸವಾಲಿನ ಸಮಯದಲ್ಲಿ ಸಾಗುತ್ತಿದೆ ಮತ್ತು ಕೋವಿಡ್-19 ಅನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಈ ಬಿಕ್ಕಟ್ಟಿನಿಂದ ರಾಷ್ಟ್ರವು ಯಶಸ್ವಿಯಾಗಿ ಹೊರಹೊಮ್ಮುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ -19 ಅನ್ನು ತಡೆಗಟ್ಟುವಲ್ಲಿ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡುತ್ತಿರುವ, ಎನ್ಸಿಸಿ ನಿರ್ದೇಶನಾಲಯಗಳ ಶೇಕಡಾ 25 ಬಾಲಕಿಯರನ್ನು ಒಳಗೊಂಡ 60 ಸಾವಿರಕ್ಕೂ ಹೆಚ್ಚು ಎನ್ಸಿಸಿ ಕೆಡೆಟ್ಗಳು ನಿರ್ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಶ್ರೀ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ,
ಎನ್ಸಿಸಿ ಕೆಡೆಟ್ಗಳು ಸಾಗಾಣಿಕೆ ಮತ್ತು ಪೂರೈಕೆಯ ಸರಪಳಿಯ ನಿರ್ವಹಣೆಯ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಅಗತ್ಯ ಆಹಾರ ಸಾಮಗ್ರಿಗಳು, ಔಷಧಿಗಳ ಪೂರೈಕೆಗಳ ಸಾಗಾಣಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು, ಟ್ರಾಫಿಕ್ ಡ್ಯೂಟಿಗಳಿಗೆ ಸಹಾಯ ಮಾಡುವುದು ಇತ್ಯಾದಿಗಳು. ಕೆಲವು ಕೆಡೆಟ್ಗಳು ಸಾಮಾಜಿಕ ಮಾಧ್ಯಮಕ್ಕಾಗಿ ಶೈಕ್ಷಣಿಕ ವೀಡಿಯೊಗಳನ್ನು ಸಹ ತಯಾರಿಸಿದ್ದಾರೆ, ಇತರರು ಮುಖಗವಸುಗಳನ್ನು ತಯಾರಿಸಿ ಸ್ಥಳೀಯವಾಗಿ.ವಿತರಿಸಿದ್ದಾರೆ
ಅವರ ಪ್ರಶಂಸನೀಯ ಪಾತ್ರವನ್ನು ಶ್ಲಾಘಿಸುವಾಗ, ರಕ್ಷಣಾ ಮಂತ್ರಿಯವರು ಎನ್ಸಿಸಿ ಕೆಡೆಟ್ಗಳನ್ನು ಯಾವುದಕ್ಕೆ ತರಬೇತಿ ಪಡೆದಿದ್ದಾರೋ ಅಂತಹ ಕಾರ್ಯಗಳಿಗೆ ಮಾತ್ರ ನಿಯೋಜಿಸಬೇಕು ಎಂದು ಎಚ್ಚರಿಸಿದರು.
ಪರಿಶೀಲನಾ ಸಭೆಯಲ್ಲಿ ಶ್ರೀ ರಾಜನಾಥ್ ಸಿಂಗ್ ಅವರು ಎನ್ಸಿಸಿಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಮತ್ತು ಕರಾವಳಿ ಮತ್ತು ಗಡಿ ಪ್ರದೇಶಗಳಲ್ಲಿ ಅದರ ವಿಸ್ತರಣೆಗೆ ಮುಂದುವರಿಯಲು ನಿರ್ಧರಿಸಿದೆ ಎಂದು ಘೋಷಿಸಿದರು.
ಹೊಸ ಮತ್ತು ಬದಲಾದ ಕಾಲಕ್ಕೆ ಹೆಚ್ಚು ಪ್ರಸ್ತುತವಾಗುವಂತೆ ಮಾಡುವ ಉದ್ದೇಶದಿಂದ ಎನ್ಸಿಸಿಯ ಆಧುನೀಕರಣದ ಬಗ್ಗೆ ರಕ್ಷಣಾ ಮಂತ್ರಿ ಒತ್ತಿ ಹೇಳಿದರು. ಎನ್ಸಿಸಿ ಚಟುವಟಿಕೆಗಳನ್ನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸೆಮಿಸ್ಟರ್ ವ್ಯವಸ್ಥೆಗೆ ಹೊಂದಿಕೆಯಾಗುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.
ಎನ್ಸಿಸಿ ನಿರ್ದೇಶನಾಲಯಗಳ ಎಡಿಜಿಗಳು ಮತ್ತು ಡಿಡಿಜಿಗಳು ರಕ್ಷಾ ಮಂತ್ರಿಯವರೊಂದಿಗೆ ನೇರ ಸಂವಾದದ ಅನನ್ಯ ಅವಕಾಶಕ್ಕಾಗಿ ಸರ್ವಾನುಮತದಿಂದ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಆಯಾ ನಿರ್ದೇಶನಾಲಯಗಳಲ್ಲಿ ಕೋವಿಡ್-19 ವಿರುದ್ಧ ಹೋರಾಡುವಲ್ಲಿ ಎನ್ಸಿಸಿ ಕೆಡೆಟ್ಗಳ ಕೊಡುಗೆಯನ್ನು ಅವರಿಗೆ ತಿಳಿಸಿದರು.
ಕೆಡೆಟ್ಗಳ ಮನೋಸ್ಥೈರ್ಯ ತುಂಬಾ ಹೆಚ್ಚಾಗಿದೆ ಮತ್ತು ಅವರ ಕೊಡುಗೆ ನಾಗರಿಕರಿಂದ ಮತ್ತು ಆಡಳಿತದಿಂದ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ವಿವರಿಸಿದರು.
***
(Release ID: 1621529)
Visitor Counter : 249