ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳೊಂದಿಗೆ 2020ರ ಮಾ.30ರಿಂದ ಮೇ.4ರ ಅವಧಿಯಲ್ಲಿ ಡಿಎಆರ್ ಪಿಜಿ ಯ ಕೋವಿಡ್-19 ಸಾರ್ವಜನಿಕ ಕುಂದು ಕೊರತೆಗಳ ಪರಿಹಾರ ಪ್ರಗತಿ ವರದಿ ಪರಾಮರ್ಶಿಸಿದ ಡಾ. ಜಿತೇಂದ್ರ ಸಿಂಗ್

Posted On: 05 MAY 2020 4:28PM by PIB Bengaluru

28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳೊಂದಿಗೆ 2020 ಮಾ.30ರಿಂದ ಮೇ.4 ಅವಧಿಯಲ್ಲಿ ಡಿಎಆರ್ ಪಿಜಿ ಕೋವಿಡ್-19 ಸಾರ್ವಜನಿಕ ಕುಂದು ಕೊರತೆಗಳ ಪರಿಹಾರ ಪ್ರಗತಿ ವರದಿ ಪರಾಮರ್ಶಿಸಿದ ಡಾ. ಜಿತೇಂದ್ರ ಸಿಂಗ್

ಡಿಎಆರ್ ಪಿಜಿಯ ಕೋವಿಡ್-19 ಕುಂದುಕೊರತೆ ಪ್ರಕರಣಗಳ ವಿಲೇವಾರಿಯ ವೇಗಕ್ಕೆ ತೃಪ್ತಿ; ಅವಧಿಯಲ್ಲಿ ಒಟ್ಟು 52,327 ಸಾರ್ವಜನಿಕ ದೂರುಗಳ ಇತ್ಯರ್ಥ

 

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ 2020 ಮಾ.30ರಿಂದ ಮೇ.4 ಅವಧಿಯಲ್ಲಿ ಡಿಎಆರ್ ಪಿಜಿಯ ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವರದಿಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು ಮತ್ತು ಕುಂದುಕೊರತೆಗಳ ಪರಿಹಾರದ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಅವಧಿಯಲ್ಲಿ ಡಿಎಆರ್ ಪಿಜಿಯ ರಾಷ್ಟ್ರೀಯ ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳ ನಿಗಾ (https://darpg.gov.in) ಅಡಿಯಲ್ಲಿ 52,327 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಅವುಗಳಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು 41,626 ದೂರುಗಳನ್ನು ಇತ್ಯರ್ಥಪಡಿಸಿವೆ. ಕೇಂದ್ರ ಸರ್ಕಾರ ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕೆ ತೆಗೆದುಕೊಂಡಿರುವ ಸರಾಸರಿ ಅವಧಿ 1.45 ದಿನ/ದೂರುಗಳಿಗೆ ಡಿಎಆರ್ ಪಿಜಿ ಸುಮಾರು 20,000 ಪ್ರಕರಣಗಳನ್ನು ಭೌತಿಕವಾಗಿ ವಿಶ್ಲೇಷಿಸಿ ಮತ್ತು ನಾಗರಿಕರು ತೃಪ್ತರಾಗಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅವರಿಂದ ಪ್ರತಿಕ್ರಿಯೆ ಪಡೆಯಲು ಕರೆಗಳನ್ನು ಮಾಡಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಸಾರ್ವಜನಿಕ ದೂರುಗಳ ಇತ್ಯರ್ಥ ಅಧಿಕಾರಿಗಳ ಜೊತೆ ಆರು ಸುತ್ತಿನ ವಿಡಿಯೋ ಸಂವಾದಗಳನ್ನು ನಡೆಸಲಾಗಿದೆ. ಡಿಎಆರ್ ಪಿಜಿ 10,701 ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದ್ದು, ರಾಜ್ಯಗಳು ದೂರುಗಳನ್ನು ಯಶಸ್ವಿಯಾಗಿ ಪರಿಹರಿಸಿವೆ.

https://static.pib.gov.in/WriteReadData/userfiles/image/image001D6P1.jpg

ಡಾ. ಜಿತೇಂದ್ರ ಸಿಂಗ್ ಅವರು, ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಲು ದೃಢ ಬದ್ಧತೆಯನ್ನು ತೋರಿದ ರಾಜ್ಯ ಸರ್ಕಾರಗಳು ಮತ್ತು ಡಿಎಆರ್ ಪಿಜಿ ಅಧಿಕಾರಿ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಅವರು ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ತಾಂತ್ರಿಕವಾಗಿ ಮುಂದುವರಿದಿರುವ ದೊಡ್ಡ ದೇಶಗಳಾದ ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ಹರಿಯಾಣ, ಕೇರಳ ರಾಜ್ಯಗಳು ಎರಡು ನಿಗದಿತ ವೆಬ್ ಪೋರ್ಟಲ್ ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೆ, ಈಶಾನ್ಯ ಪ್ರದೇಶಗಳ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸಂಪರ್ಕದ ಕೆಲವು ಅಡೆತಡೆಗಳ ನಡುವೆಯೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಕಾಲದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಬಗೆಹರಿಸುತ್ತಿರುವುದನ್ನು ಖಾತ್ರಿಪಡಿಸುತ್ತಿರುವುದರಿಂದ ಸರ್ಕಾರದ ಮೇಲಿನ ಸಾರ್ವಜನಿಕ ವಿಶ್ವಾಸ ಉಳಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಲಾಕ್ ಡೌನ್ ಅವಧಿಯಲ್ಲಿ ಹಲವು ಜಿಲ್ಲಾ ಕಲೆಕ್ಟರ್ ಗಳು ಶ್ಲಾಘನೀಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಅಂತಹವರಲ್ಲಿ ಕಲೆಕ್ಟರ್ ರೆಸೈ ಅವರು ಸಾಮಾಜಿಕ ಅಂತರವನ್ನು ಖಾತ್ರಿಪಡಿಸುವ ಸಲುವಾಗಿ ವೈಷ್ಣೋದೇವಿ ಯಾತ್ರೆಯನ್ನು ಮುಂದೂಡಿದ್ದು ಉಲ್ಲೇಖಾರ್ಹ ಎಂದರು. ಅಂತಹುದೇ ಕ್ರಮಗಳನ್ನು ಆಶೋತ್ತರ ಜಿಲ್ಲೆಗಳಲ್ಲಿ ಕಲೆಕ್ಟರ್ ಗಳು ಕೈಗೊಂಡು, ಲಾಕ್ ಡೌನ್ ವೇಳೆ ಗ್ರಾಮ ಮಟ್ಟದಲ್ಲಿ ಆಹಾರ ಪೂರೈಕೆ ಖಾತ್ರಿಪಡಿಸುವಾಗ ಎಚ್ಚರಿಕೆ ವಹಿಸಿದ್ದಾರೆ. ರಾಜ್ಯ ಮಟ್ಟದ ಪ್ರಮುಖ ಯಶೋಗಾಥೆಗಳೆಂದರೆ ವಲಸೆ ಕಾರ್ಮಿಕರ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಅಂತರ ರಾಜ್ಯ ಸಂಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಲೆಕ್ಟರ್ ಗಳು ಮತ್ತು ರಾಜ್ಯಗಳು ಅತ್ಯಂತ ಪ್ರಮುಖ ಪಾತ್ರವಹಿಸಿವೆ ಎಂದರು. ಅಲ್ಲದೆ ರಾಜ್ಯಗಳು, ಆಸ್ಪತ್ರೆ ಮೂಲಸೌಕರ್ಯ, ಕ್ವಾರಂಟೈನ್ ಶಾಲಾ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು, ವೇತನ ಮತ್ತು ಉದ್ಯೋಗ ವಿಷಯಗಳು ಹಾಗೂ ಇತರೆ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿವೆ.

ಸಾರ್ವಜನಿಕ ಕುಂದುಕೊರತೆಗಳನ್ನು ಇತ್ಯರ್ಥಪಡಿಸುವುದು ಮೋದಿ ಸರ್ಕಾರದ ಅತ್ಯಂತ ಪ್ರಮುಖ ಆದ್ಯತಾ ವಿಷಯವಾಗಿದೆ ಎಂದ ಡಾ. ಜಿತೇಂದ್ರ ಸಿಂಗ್, 2014-20 ಅವಧಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಸಂಖ್ಯೆ 2 ಲಕ್ಷ ಪ್ರಕರಣಗಳಿಂದ ಸುಮಾರು 20 ಲಕ್ಷ ಪ್ರಕರಣಗಳಿಗೆ ಏರಿಕೆಯಾಗಿದೆ ಎಂದರು. ಡಿಎಆರ್ ಪಿಜಿ ಸಾರ್ವಜನಿಕ ಕುಂದುಕೊರತೆಗಳಿಗೆ ಅತ್ಯಂತ ಕ್ಷಿಪ್ರವಾಗಿ ಸ್ಪಂದಿಸುತ್ತಿದ್ದು, ಅವುಗಳ ಇತ್ಯರ್ಥ ಪ್ರಮಾಣ ಶೇ.90ರಷ್ಟಿದೆ. ಅಲ್ಲದೆ ದೂರುಗಳ ಪರಿಹಾರದ ಗುಣಮಟ್ಟದ ಖಾತ್ರಿಗೆ, ಪ್ರತಿಕ್ರಿಯೆ ಪಡೆಯಲು ಮತ್ತೆ ದೂರವಾಣಿ ಕರೆಗಳನ್ನು ಮಾಡಲಾಗುತ್ತಿದೆ. ಕ್ರಮಗಳಿಂದಾಗಿ ಸರ್ಕಾರದ ಆದ್ಯತೆಗಳಲ್ಲಿ ಪ್ರಜೆಗಳು ಅತ್ಯಂತ ಪ್ರಮುಖ ಎಂದು ವಿಶ್ವಾಸ ಮೂಡಿಸುವುದನ್ನು ಪುನರ್ ಪ್ರತಿಪಾದಿಸಲಾಗುತ್ತಿದೆ.

ಪರಿಶೀಲನಾ ಸಭೆಯಲ್ಲಿ, ಡಿಎಆರ್ ಪಿಜಿ ಕಾರ್ಯದರ್ಶಿ ಡಾ. ಕ್ಷೇತ್ರಪತಿ ಶಿವಾಜಿ, ಡಿಎಆರ್ ಪಿಜಿ ಹೆಚ್ಚುವರಿ ಕಾರ್ಯದರ್ಶಿ ವಿ.ಶ್ರೀನಿವಾಸ್ ಮತ್ತು ಡಿಎಆರ್ ಪಿಜಿ ಜಂಟಿ ಕಾರ್ಯದರ್ಶಿ ಶ್ರೀಮತಿ ಜಯ ದುಬೆ ಭಾಗವಹಿಸಿದ್ದರು. ರಾಜ್ಯ ಸರ್ಕಾರಗಳನ್ನು ಪ್ರತಿನಿಧಿಸುವ ಹಿರಿಯ ಅಧಿಕಾರಿಗಳು ಸೇದಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು.

***



(Release ID: 1621525) Visitor Counter : 205