ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲಿ ಉಳಿದಿರುವ ವಿದೇಶಿ ಪ್ರಜೆಗಳಿಗೆ ಕೆಲವು ರಾಯಭಾರ ಕಚೇರಿ ಸೇವೆಗಳ ಪ್ರದಾನ, ಅಂತಾರಾಷ್ಟ್ರೀ ವಾಯು ಯಾನದ ಮೇಲಿನ ನಿರ್ಬಂಧ ತೆರೆವು ಬಳಿಕ 30 ದಿನಗಳೊಳಗೆ ಭಾರತದಿಂದ ಪ್ರಯಾಣಿಸಲು ಅವಕಾಶ

Posted On: 05 MAY 2020 8:03PM by PIB Bengaluru

ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲಿ ಉಳಿದಿರುವ ವಿದೇಶಿ ಪ್ರಜೆಗಳಿಗೆ ಕೆಲವು ರಾಯಭಾರ ಕಚೇರಿ ಸೇವೆಗಳ ಪ್ರದಾನ, ಅಂತಾರಾಷ್ಟ್ರೀ ವಾಯು ಯಾನದ ಮೇಲಿನ ನಿರ್ಬಂಧ ತೆರೆವು ಬಳಿಕ 30 ದಿನಗಳೊಳಗೆ ಭಾರತದಿಂದ ಪ್ರಯಾಣಿಸಲು ಅವಕಾಶ

 

ಕೋವಿಡ್ 19 ನಿಗ್ರಹಿಸುವ ಸಲುವಾಗಿ ವಿಧಿಸಲಾದ ಪ್ರಯಾಣದ ನಿರ್ಬಂಧಗಳ ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲಿ ಉಳಿದಿರುವ ವಿದೇಶಿ ಪ್ರಜೆಗಳಿಗೆ 2020 ಮೇ 3ರವರೆಗೆ ಉಚಿತವಾಗಿ ರಾಯಭಾರ ಕಚೇರಿ ಸೇವೆಗಳನ್ನು ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ), 17.04.2020ರಂದು ಪ್ರದಾನ ಮಾಡಿದೆ. (Https : //pib.gov.in/PressReleseDetail.aspx? PRID = 1615496).

ವಿಷಯವನ್ನು ಪರಿಗಣಿಸಿದ ನಂತರ, ಪ್ರಸ್ತುತ ಭಾರತದಲ್ಲಿ ಉಳಿದಿರುವ ವಿದೇಶಿಯರಿಗೆ ಪ್ರಾದೇಶಿಕ ನೋಂದಣಿ ಅಧಿಕಾರಿಗಳು / ವಿದೇಶಿಯರ ನೋಂದಣಿ ಅಧಿಕಾರಿಗಳ ಕಚೇರಿಯಿಂದ ಕೆಳಗಿನ ರಾಯಭಾರ ಕಚೇರಿ ಸೇವೆಗಳನ್ನು ಒದಗಿಸುವ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

ವೀಸಾ ಅವಧಿ ಮುಗಿದಿರುವ ಅಥವಾ 01.02.2020 (ಮಧ್ಯರಾತ್ರಿ) ರಿಂದ ವೀಸಾ ಅವಧಿ ಮುಗಿಯಲಿರುವ ವಿದೇಶಿ ಪ್ರಜೆಗಳ ನಿಯಮಿತ ವೀಸಾ, -ವೀಸಾ ಅಥವಾ ಷರತ್ತು ಬದ್ಧ ವಾಸ್ತವ್ಯದ ಅವಧಿಯನ್ನು ವಿದೇಶೀಯರು ಆನ್ ಲೈನ್ ಅರ್ಜಿ ಸಲ್ಲಿಸಿದಲ್ಲಿ, ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿರ್ಬಂಧವನ್ನು ಭಾರತ ಸರ್ಕಾರ ತೆಗೆದುಹಾಕುವ ದಿನಾಂಕದವರೆಗೆ ಉಚಿತ ಆಧಾರದ ಮೇಲೆ ವಿಸ್ತರಿಸಲಾಗುವುದು.

ಪ್ರಯಾಣಿಕರ ಅಂತಾರಾಷ್ಟ್ರೀಯ ವಾಯು ಯಾನದ ಮೇಲಿನ ನಿರ್ಬಂಧವನ್ನು ತೆರವು ಮಾಡಿದ 30 ದಿನಗಳವರೆಗೆ ಇಂಥ ವಿಸ್ತರಣೆಗಳನ್ನು ಅವಧಿ ಮೀರಿ ಉಳಿದ ಕಾರಣಕ್ಕಾಗಿ ವಿಧಿಸುವ ದಂಡವಿಲ್ಲದೆ ಮಂಜೂರು ಮಾಡಲಾಗುವುದು. ಅಂತಹ ವಿದೇಶಿ ಪ್ರಜೆಗಳು ತೆರಳಲು, ವಿನಂತಿಸಿದರೆ, ಅದೇ ನಿಟ್ಟಿನಲ್ಲಿ ಅನುಮತಿಸಲಾಗುವುದು.

 

ಅಧಿಕೃತ ಆದೇಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

***


(Release ID: 1621504) Visitor Counter : 247