ರಕ್ಷಣಾ ಸಚಿವಾಲಯ

ಯು ವಿ ಸೋಂಕು ನಿರೋಧಕ ಟವರ್ ಅಭಿವೃದ್ಧಿಪಡಿಸಿದ ಡಿ ಆರ್ ಡಿ ಒ

Posted On: 04 MAY 2020 5:13PM by PIB Bengaluru

ಯು ವಿ ಸೋಂಕು ನಿರೋಧಕ ಟವರ್ ಅಭಿವೃದ್ಧಿಪಡಿಸಿದ ಡಿ ಆರ್ ಡಿ ಒ

 

ಹೆಚ್ಚು ಸೋಂಕು ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರಗತಿಯಲ್ಲಿ ರಾಸಾಯನಿಕ ಮುಕ್ತವಾಗಿ ಸೋಂಕು ನಿವಾರಣೆಗೆ ಅಲ್ಟ್ರಾ ವಯೋಲೆಟ್ (ಯು ವಿ) ಟವರ್ ನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ)ಅಭಿವೃದ್ಧಿಪಡಿಸಿದೆ.

ಈ ಪರಿಕರಕ್ಕೆ ಯು ವಿ ಬ್ಲಾಸ್ಟರ್ ಎಂದು ಹೆಸರಿಸಲಾಗಿದ್ದು ಯು ವಿ ಆಧಾರಿತ ಪ್ರದೇಶ ಸೋಂಕು ನಿವಾರಕವಾಗಿದೆ. ಗುರುಗ್ರಾಂ ನಲ್ಲಿರುವ ಮೆ/ಎಸ್ ನ್ಯು ಏಜ್ ಇನ್ಸ್ಟ್ರುಮೆಂಟ್ ಪ್ರೈವೇಟ್  ಲಿಮಿಟೆಡ್ ಮತ್ತು ದೆಹಲಿಯಲ್ಲಿರುವ ಡಿ ಆರ್ ಡಿ ಒ ದ ಪ್ರಮುಖ ಪ್ರಯೋಗಾಲಯವಾದ ಲೇಸರ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ (ಎಲ್ ಎ ಎಸ್ ಟಿ ಇ ಸಿ) ಜೊತೆಗೂಡಿ  ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ರಾಸಾಯನಿಕ ವಿಧಾನಗಳೊಂದಿಗೆ ಸೋಂಕು ರಹಿತವನ್ನಾಗಿಸಲು ಸೂಕ್ತವಲ್ಲದ ಪ್ರಯೋಗಾಲಯಗಳು ಮತ್ತು ಕಚೇರಿಗಳಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೂಟರ್ ಗಳು ಮತ್ತು ಇತರ ಸಾಧನಗಳಂತಹ ಹೈಟೆಕ್ ಮೇಲ್ಮೈ ಹೊಂದಿರುವ ಪರಿಕರಗಳಿಗೆ ಯುವಿ ಬ್ಲಾಸ್ಟರ್ ಉಪಯುಕ್ತವಾಗಿದೆ. ಈ ಉತ್ಪನ್ನ ಬಹಳಷ್ಟು ಜನಪ್ರವಾಹವಿರುವ ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್ ಗಳು, ಮೆಟ್ರೊಗಳು, ಹೋಟಲ್ ಗಳು, ಕಾರ್ಖಾನೆಗಳು, ಕಚೇರಿಗಳು ಇತ್ಯಾದಿಗಳಿಗೆ ಬಹಳ ಪರಿಣಾಮಕಾರಿಯಾಗಿದೆ.  

ಮೊಬೈಲ್ ಅಥವಾ ಲ್ಯಾಪ್ ಟಾಪ್ ನಿಂದ ವೈ ಫೈ ಲಿಂಕ್ ಬಳಸಿ ಈ ಯು ವಿ ಆಧಾರಿತ ಪ್ರದೇಶ ಸ್ಯಾನಿಟೈಸರ್ ನಿಂದ ದೂರದಿಂದಲೇ ಕಾರ್ಯಾಚರಣೆ ಮಾಡಬಹುದಾಗಿದೆ. 360 ಡಿಗ್ರಿ ಪ್ರಕಾಶಕ್ಕಾಗಿ ಪ್ರತಿ ದೀಪ 254  ಎನ್ ಎಂ ತರಂಗಾಂತರದಲ್ಲಿ 43  ವ್ಯಾಟ್ ಗಳ ಯುವಿ-ಸಿ ಶಕ್ತಿ ಹೊಂದಿದ 6 ದೀಪಗಳನ್ನು ಈ ಉಪಕರಣ ಹೊಂದಿದೆ. ಕೋಣೆಯೊಳಗೆ ವಿವಿಧ ಭಾಗಗಳಲ್ಲಿ ಈ ಉಪಕರಣವನ್ನು ಇರಿಸಿ 12 x 12 ಅಡಿ ಸುತ್ತಳತೆ ಹೊಂದಿರುವ ಒಂದು ಕೋಣೆಗೆ ಸೋಂಕು ನಿವಾರಣೆ ಸಮಯ 10 ನಿಮಿಷ ಮತ್ತು 400 ಚದರಡಿ ಪ್ರದೇಶಕ್ಕೆ 30 ನಿಮಿಷ ಬೇಕಾಗುತ್ತದೆ  

ಕೋಣೆಯನ್ನು ಅಕಸ್ಮಾತ್ತಾಗಿ ತೆರೆದಾಗ ಅಥವಾ ಮನುಷ್ಯ ಪ್ರವೇಶವಾದಲ್ಲಿ ಈ ಸೋಂಕು ನಿವಾರಕ ತನ್ನಷ್ಟಕ್ಕೆ ತಾನೇ ಆಫ್ ಆಗುತ್ತದೆಇದು ಈ ಉಪಕರಣವನ್ನು ಕೈಯಿಂದಲೇ ನಿಯಂತ್ರಿಸಬಹುದಾದ ಮತ್ತೊಂದು ಪ್ರಮುಖ ಸುರಕ್ಷತಾ ಲಕ್ಷಣವಾಗಿದೆ.

***(Release ID: 1620991) Visitor Counter : 289