ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ ಅವರು ಮಧ್ಯಪ್ರದೇಶದಲ್ಲಿ ಕೋವಿಡ್ -19 ನಿರ್ವಹಣೆಗೆ ತೆಗೆದುಕೊಂಡ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು

Posted On: 04 MAY 2020 5:26PM by PIB Bengaluru

ಡಾ. ಹರ್ಷವರ್ಧನ್ ಅವರು ಮಧ್ಯಪ್ರದೇಶದಲ್ಲಿ ಕೋವಿಡ್ -19 ನಿರ್ವಹಣೆಗೆ ತೆಗೆದುಕೊಂಡ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು

ರಾಜ್ಯಕ್ಕೆ ಕೇಂದ್ರದಿಂದ ಎಲ್ಲಾ ಬೆಂಬಲವಿದೆ ಎಂದು ಭರವಸೆ ನೀಡಿದರು ಮತ್ತು ಬಾಧಿತವಲ್ಲದ ಜಿಲ್ಲೆಗಳಲ್ಲೂ ಕಣ್ಗಾವಲಿನ ಬಗ್ಗೆ ಹೆಚ್ಚಾಗಿ ಗಮನಹರಿಸಲು ಸಲಹೆ ನೀಡಿದರು

 

ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ . ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ರವರು ಇಂದು ಮಧ್ಯಪ್ರದೇಶದ ಆರೋಗ್ಯ ಸಚಿವ ಶ್ರೀ ನರೋತ್ತಮ್ ಮಿಶ್ರಾ ಅವರೊಂದಿಗೆ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸಭೆ ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್-19 ನಿರ್ವಹಣೆಗಾಗಿ ಮತ್ತು ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ನಡೆಸಿದರು.

ಆರಂಭದಲ್ಲಿ, ಕೋವಿಡ್-19 ಕಾರಣದಿಂದಾಗಿ ಹೆಚ್ಚಿನ ಸಾವಿನ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಡಾ. ಹರ್ಷ್ ವರ್ಧನ್, "ಕೆಲವು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎನ್ನುವುದು ನೋವಿನ ಸಂಗತಿ" ಎಂದು ಹೇಳಿದ್ದಾರೆ. ಕೋವಿಡ್-19ನಿಂದಾಗಿ ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಸರಿಯಾದ ಮಧ್ಯಸ್ಥಿಕೆಗಳು, ಹೆಚ್ಚು ಪರಿಣಾಮಕಾರಿ ಕಣ್ಗಾವಲು ಮತ್ತು ಆರಂಭಿಕ ರೋಗನಿರ್ಣಯವು ರಾಜ್ಯದ ಮೊದಲ ಆದ್ಯತೆಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ತಡೆಗಟ್ಟುವ, ಪೂರ್ವಭಾವಿ ಮತ್ತು ಸಮಗ್ರ ಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ತೆಗೆದುಕೊಳ್ಳುವುದು ಮತ್ತು ಕೇಂದ್ರವು ನಿಗದಿಪಡಿಸಿದ ಶಿಷ್ಟಾಚಾರಗಳನ್ನು ಅನುಸರಿಸಿ, ಹೊಸ ಪ್ರಕರಣಗಳು ಸಂಭವಿಸದಂತೆ ತಡೆಯುವುದು ಸಮಯದ ಅಗತ್ಯವಾಗಿದೆ.ಎಂದು ಹೇಳಿದರು.

ತೀವ್ರವಾದ ತೀವ್ರ ಉಸಿರಾಟದ ಸೋಂಕುಗಳು (ಎಸ್ ಆರ್ ) / ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್ಐ) ಪ್ರಕರಣಗಳ ಹುಡುಕಾಟ, ಕಣ್ಗಾವಲು ಮತ್ತು ಪರೀಕ್ಷೆಯನ್ನು ನಡೆಸುವ ಮೂಲಕ ರಾಜ್ಯವು ಬಾಧಿತವಲ್ಲದ ಜಿಲ್ಲೆಗಳತ್ತ ಗಮನ ಹರಿಸಬೇಕಾಗಿದೆ ಎಂದು ಡಾ. ಹರ್ಷ್ ವರ್ಧನ್ ಉತ್ತೇಜಿಸಿದರು, ಏಕೆಂದರೆ ಇದು ಸೋಂಕಿನ ಪ್ರಕರಣಗಳು ಮತ್ತಷ್ಟು ಹರಡುವುದನ್ನು ತಪ್ಪಿಸಬಹುದು. ಇತರ ಪ್ರದೇಶಗಳಲ್ಲಿ. ಕೈ ತೊಳೆಯುವುದು, ಸಾಮಾಜಿಕ ಅಂತರ ಮುಂತಾದ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸಮುದಾಯ ಸ್ವಯಂಸೇವಕರನ್ನು ವಾರ್ಡ್ ಮಟ್ಟದಲ್ಲಿ ಗುರುತಿಸಬಹುದು ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಳಂಕವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಬಹುದು ಎಂದು ಅವರು ಹೇಳಿದರು.

"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತ್ವರಿತ ಮತ್ತು ದೀರ್ಘಕಾಲೀನ ಕ್ರಮಗಳ ಭಾಗವಾಗಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಮೂಲಕ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಮತ್ತು ಕಲಿಕಾ ನೆರವನ್ನು ಒದಗಿಸುತ್ತದೆ" ಎಂದು ಅವರು ಹೇಳಿದರು. ಡಾ. ಹರ್ಷ್ ವರ್ಧನ್ ಅವರು 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮತ್ತು ಯಾವುದೇ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಹ ರಾಜ್ಯದಲ್ಲಿ ಆದ್ಯತೆಯ ಮೇಲೆ ರೋಗನಿರ್ಣಯ ಮಾಡಬಹುದು ಎಂದು ಒತ್ತಾಯಿಸಿದರು.

ಕೋವಿಡ್-19 ನಿರ್ವಹಣೆ ದೆಸೆಯಿಂದ ಕೋವಿಡ್ -19 ಅಲ್ಲದ ಸೇವೆಗಳು ಮತ್ತು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ (ಎನ್ಟಿಇಪಿ), ತಾಯಿಯ ಮತ್ತು ಮಕ್ಕಳ ಆರೋಗ್ಯ, ಡಯಾಲಿಸಿಸ್, ಕೀಮೋಥೆರಪಿ, ವ್ಯಾಕ್ಸಿನೇಷನ್, ಇಮ್ಯುನೈಸೇಶನ್ ಮುಂತಾದ ಕಾರ್ಯಕ್ರಮಗಳಿಗೆ ಅಡ್ಡಿಯಾಗದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕು ಎಂದು ಡಾ.ಹರ್ಷ್ ವರ್ಧನ್ ಸಲಹೆ ನೀಡಿದರು.. ವಿವಿಧ ಕಾಯಿಲೆಗಳಿಗೆ ರಾಜ್ಯಗಳ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್ಎಂಐಎಸ್) ದಲ್ಲಿ ಲಭ್ಯವಿರುವ ದತ್ತಾಂಶವನ್ನು ಅಪಾಯದ ವಿವರಗಳಿಗಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಸಾರ್ಥಕ್ ಮತ್ತು ಆರೋಗ್ಯ-ಸೇತು ಆ್ಯಪ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದ್ದಕ್ಕಾಗಿ ಇಂದೋರ್ ಆಡಳಿತ ಮತ್ತು ಆರೋಗ್ಯ ಅಧಿಕಾರಿಗಳನ್ನು ಡಾ.ಹರ್ಷ್ ವರ್ಧನ್ ಶ್ಲಾಘಿಸಿದರು ಮತ್ತು ಇತರ ಜಿಲ್ಲೆಗಳನ್ನೂ ಸಹ ಅಪ್ಲಿಕೇಶನ್ಗಳ ಬಳಕೆಯನ್ನು ಜನಪ್ರಿಯಗೊಳಿಸಬೇಕೆಂದು ಕೇಳಿಕೊಂಡರು.

ಶ್ರೀಮತಿ ಪ್ರೀತಿ ಸುಧನ್, ಕಾರ್ಯದರ್ಶಿ (ಎಚ್ಎಫ್ಡಬ್ಲ್ಯು), ಶ್ರೀ ರಾಜೇಶ್ ಭೂಷಣ್, ಒಎಸ್ಡಿ (ಎಚ್ಎಫ್ಡಬ್ಲ್ಯು), ಶ್ರೀ ಸಂಜೀವ ಕುಮಾರ್, ವಿಶೇಷ ಕಾರ್ಯದರ್ಶಿ (ಆರೋಗ್ಯ), ಎಂ.ಎಸ್. ವಂದನಾ ಗುರ್ನಾನಿ, ಎಎಸ್ ಮತ್ತು ಎಂಡಿ (ಎನ್ಎಚ್ಎಂ), ಶ್ರೀ ವಿಕಾಸ್ ಶೀಲ್, ಜಂಟಿ ಕಾರ್ಯದರ್ಶಿ, ಡಾ. ಮನೋಹರ್ ಅಗ್ನಾನಿ, ಜಂಟಿ ಕಾರ್ಯದರ್ಶಿ ಡಾ.ಎಸ್.ಕೆ. ಮಧ್ಯಪ್ರದೇಶದ ಪ್ರಧಾನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಎನ್ಸಿಡಿಸಿ ನಿರ್ದೇಶಕ ಸಿಂಗ್, ಭೋಪಾಲ್ ನಿರ್ದೇಶಕರು ಏಮ್ಸ್, ಮಧ್ಯಪ್ರದೇಶದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1620978) Visitor Counter : 226