ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಕೋವಿಡ್ -19 ಸಂಕಷ್ಟದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬುಡಕಟ್ಟು ಜನರನ್ನು ಬೆಂಬಲಿಸಲು ಕಿರು ಅರಣ್ಯ ಉತ್ಪನ್ನಗಳ ಖರೀದಿಯನ್ನು ತ್ವರಿತಗೊಳಿಸಲು ರಾಜ್ಯಗಳಿಗೆ ಸರಕಾರದ ಸೂಚನೆ
Posted On:
03 MAY 2020 4:23PM by PIB Bengaluru
ಕೋವಿಡ್ -19 ಸಂಕಷ್ಟದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬುಡಕಟ್ಟು ಜನರನ್ನು ಬೆಂಬಲಿಸಲು ಕಿರು ಅರಣ್ಯ ಉತ್ಪನ್ನಗಳ ಖರೀದಿಯನ್ನು ತ್ವರಿತಗೊಳಿಸಲು ರಾಜ್ಯಗಳಿಗೆ ಸರಕಾರದ ಸೂಚನೆ
ರಾಜ್ಯಗಳಿಂದ ಖರೀದಿ ಚಟುವಟಿಕೆಗಳ ವರದಿಗಾಗಿ ಟ್ರೈಫೆಡ್ ನಿಂದ ಆನ್ ಲೈನ್ ನಿಗಾ ಡ್ಯಾಶ್ ಬೋರ್ಡ್
ಕೋವಿಡ್ -19 ರಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅನುಲಕ್ಷಿಸಿ ಮತ್ತು ಎಂ.ಎಫ್.ಪಿ. ಸಂಗ್ರಹದ ಋತು ಇದಾಗಿರುವ ಹಿನ್ನೆಲೆಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಬುಡಕಟ್ಟು ಜನರನ್ನು ಬೆಂಬಲಿಸಲು ಕಿರು ಅರಣ್ಯ ಉತ್ಪನ್ನಗಳ ಖರೀದಿಯನ್ನು ತ್ವರಿತಗೊಳಿಸುವಂತೆ ಎಲ್ಲಾ ರಾಜ್ಯಗಳಿಗೂ ಸಲಹೆ ಮಾಡಿದೆ.
ರಾಜ್ಯಗಳು ಕಿರು ಅರಣ್ಯ ಉತ್ಪನ್ನಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದು, 10 ರಾಜ್ಯಗಳಲ್ಲಿ ಕಾರ್ಯಾಚರಣೆ ಆರಂಭವಾಗಿದೆ. ಹಣಕಾಸು ವರ್ಷ 2020-21 ರಲ್ಲಿ ಇದುವರೆಗೆ 20.30 ಕೋ.ರೂ.ಗಳ ಖರೀದಿಯನ್ನು ಮಾಡಲಾಗಿದೆ. 49 ಅರಣ್ಯೋತ್ಪನ್ನಗಳಿಗೆ 2020 ರ ಮೇ 1 ರಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಎಂ.ಎಸ್.ಪಿ.ಯನ್ನು ಪರಿಷ್ಕರಿಸಿದ್ದು, ಇದರಿಂದ ಎಂ.ಎಫ್.ಪಿ. ಗಾಗಿ ಇಡೀಯ ಖರೀದಿ ಕಾರ್ಯಾಚರಣೆಗೆ ಇನ್ನಷ್ಟು ವೇಗ ದೊರೆಯಲಿದೆ. ಕೋವಿಡ್ ಜಾಗತಿಕ ಸಾಂಕ್ರಾಮಿಕ ತಂದಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ನಡೆದಿದೆ.
ಕಿರು ಅರಣ್ಯ ಉತ್ಪತ್ತಿಗಳ ಖರೀದಿಗೆ ಸಂಬಂಧಿಸಿ ರಾಜ್ಯ ಮಟ್ಟದಲ್ಲಿ ಕಾರ್ಯ ಚಟುವಟಿಕೆಗಳನ್ನು ವರದಿ ಮಾಡುವುದಕ್ಕಾಗಿ ಆನ್ ಲೈನ್ ಡ್ಯಾಶ್ ಬೋರ್ಡನ್ನು ರಚಿಸಲಾಗಿದೆ. ಇದಕ್ಕೆ ವನ್ ಧನ್ ಮೋನಿಟ್ ಡ್ಯಾಶ್ ಬೋರ್ಡ್ ಎಂದು ಕರೆಯಲಾಗಿದ್ದು, ಇದು “ಟ್ರೈಫೆಡ್ ಇ- ಸಂಪರ್ಕ ಸೇತು” ವಿನ ಭಾಗವಾಗಿದೆ. ಇದನ್ನು ಪ್ರತೀ ಪಂಚಾಯತಿಯಿಂದ ಮತ್ತು ವನ್ ಧನ್ ಕೇಂದ್ರಗಳಿಂದ ಮೈಲ್ ಅಥವಾ ಮೊಬೈಲ್ ಮೂಲಕ ಮಾಹಿತಿ ವಿನಿಮಯಕ್ಕಾಗಿ ರೂಪಿಸಲಾಗಿದೆ. ಟ್ರೈಫೆಡ್ 10 ಲಕ್ಷ ಗ್ರಾಮಗಳು , ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಹಭಾಗಿಗಳು, ಏಜೆನ್ಸಿಗಳು, ಮತ್ತು ಎಸ್.ಎಚ್.ಜಿ.ಗಳನ್ನು ಜೋಡಿಸಲು ಉದ್ದೇಶಿಸಿದೆ. ರಾಜ್ಯ ಅನುಷ್ಟಾನ ಏಜೆನ್ಸಿಗಳು ಈಗಾಗಲೇ ಡ್ಯಾಶ್ ಬೋರ್ಡ್ ಗಳನ್ನು ಅವರ ರಾಜ್ಯಗಳಲ್ಲಿ ಕೆಲಸದ ಪ್ರಗತಿಯಾದಂತೆ ಸಕಾಲಿಕಗೊಳಿಸಲು ಆರಂಭಿಸಿವೆ.
ಹಾತ್ ಬಜಾರ್ ಗಳಿಂದ ಎಂ.ಎಫ್.ಪಿ. ಖರೀದಿಗಾಗಿ ರಾಜ್ಯಗಳು ವನ್ ಧನ್ ಕೇಂದ್ರಗಳನ್ನು ಅವುಗಳ ಪ್ರಾಥಮಿಕ ಖರೀದಿ ಏಜೆಂಟರನ್ನಾಗಿ ನೇಮಿಸಿವೆ. ವನ್ ಧನ್ ಕೇಂದ್ರಗಳು 31.35 ಎಂ.ಟಿ.ಎಸ್.ನಷ್ಟು ಎಂ.ಎಫ್.ಸಿ.ಗಳನ್ನು ಒಟ್ಟು 1.11 ಕೋ.ರೂ. ಗಳ ಮೊತ್ತದವುಗಳಷ್ಟನ್ನು ಖರೀದಿಸಿವೆ. ಪ್ರಧಾನ ಮಂತ್ರಿ ವನ್ ಧನ್ ಕಾರ್ಯಕ್ರಮ ಅಡಿಯಲ್ಲಿ 1126 ವಿ.ಡಿ.ವಿ.ಕೆ. ಗಳನ್ನು 21 ರಾಜ್ಯಗಳಲ್ಲಿ ಮತ್ತು 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಜೂರು ಮಾಡಲಾಗಿದ್ದು, 3.6 ಲಕ್ಷ ಬುಡಕಟ್ಟು ಫಲಾನುಭವಿಗಳು ಉದ್ಯಮಶೀಲತೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.
ವನ್ ಧನ್ ಕೇಂದ್ರದ ಯೋಜನೆಯು ದೇಶದಲ್ಲಿ ಬುಡಕಟ್ಟು ಜನರ ಸಂಖ್ಯೆ ಸಾಕಷ್ಟು ಇರುವ 22 ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದೆ ಮತ್ತು ಇದು ದೇಶದಲ್ಲಿಯ 1.1 ಕೋಟಿಗೂ ಅಧಿಕ ಬುಡಕಟ್ಟು ಕುಟುಂಬಗಳಿಗೆ ಪ್ರಯೋಜನ ಒದಗಿಸುವ ಸಾಮರ್ಥ್ಯ ಹೊಂದಿದೆ.
“ಬುಡಕಟ್ಟು ಜನರ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವುದಕ್ಕಾಗಿ ಮತ್ತು ಮಾರುಕಟ್ಟೆ ಮಾಡುವುದಕ್ಕಾಗಿ ಸಾಂಸ್ಥಿಕ ಬೆಂಬಲ “ ಒದಗಿಸುವ ಯೋಜನೆಯು ಕನಿಷ್ಟ ಬೆಂಬಲ ಬೆಲೆ ಘಟಕ ಮತ್ತು ಮೌಲ್ಯವರ್ಧನೆ ಘಟಕವನ್ನು ಒಳಗೊಂಡಿದೆ ಮತ್ತು ಅದು ಬುಡಕಟ್ಟು ಜನರ ಆದಾಯ ಹೆಚ್ಚಿಸುವ ಹಾಗು ಅವರಲ್ಲಿ ಉದ್ಯಮಶೀಲತ್ವವನ್ನು ಉತ್ತೇಜಿಸುವ ಉದ್ದೇಶವನ್ನು ಒಳಗೊಂಡಿದೆ. ಬುಡಕಟ್ಟು ಜನರ ಉತ್ಪನ್ನಗಳಿಗೆ ಹೆಚ್ಚಿನ ಮತ್ತು ಆಕರ್ಷಕ ದರವನ್ನು ಖಾತ್ರಿಪಡಿಸಲು 2020 ರ ಮೇ 1 ರಂದು ಎಂ.ಎಫ್. ಪಿ.ಗಳಿಗೆ ಎಂ.ಎಸ್.ಪಿ.ಗಳ ಪುನರ್ವಿಮರ್ಶಿತ ದರ ಪಟ್ಟಿಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹೊರಡಿಸಿದೆ. ಇದನ್ನು ಎಂ.ಎಫ್.ಪಿ. ದರ ನಿಗದಿ ಕೋಶ ಮತ್ತು ಪ್ರಮುಖ ಎಂ. ಎಫ್.ಪಿ. ಶ್ರೀಮಂತ ರಾಜ್ಯಗಳ ಜೊತೆ ಸಮಾಲೋಚಿಸಿದ ಬಳಿಕವಷ್ಟೇ , ಕೋವಿಡ್ -19 ರ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಬುಡಕಟ್ಟು ಜನರಿಗೆ ಪ್ರಯೋಜನಗಳನ್ನು ಒದಗಿಸುವುದಕ್ಕಾಗಿ ಮಾಡಲಾಗಿದೆ. ಕೋವಿಡ್ 19 ಇವರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಈ ಪರಿಷ್ಕೃತ ದರಗಳು ಬುಡಕಟ್ಟು ಜನರಿಗೆ ಬಹಳ ಅವಶ್ಯವಾದ ಬೆಂಬಲವನ್ನು ನೀಡುವುದು ಮಾತ್ರವಲ್ಲ, ರಾಜ್ಯಗಳಲ್ಲಿ ಎಂ.ಎಫ್.ಪಿ. ಖರೀದಿ ಕಾರ್ಯಕ್ಕೆ ಉತ್ತೇಜನ ನೀಡಲಿವೆ.
***
(Release ID: 1620857)
Visitor Counter : 230
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Odia
,
Tamil
,
Telugu
,
Malayalam