ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಡಾ. ಜಿತೇಂದ್ರ ಸಿಂಗ್ ಅವರಿಂದ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳ ಬಳಕೆಗಾಗಿ ಕೇಂದ್ರೀಯ ಭಂಡಾರ್ ಸಿದ್ಧಪಡಿಸಿದ 4900 ರಕ್ಷಣಾತ್ಮಕ ಕಿಟ್ಗಳ ಹಸ್ತಾಂತರ
Posted On:
01 MAY 2020 5:32PM by PIB Bengaluru
ಡಾ. ಜಿತೇಂದ್ರ ಸಿಂಗ್ ಅವರಿಂದ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳ ಬಳಕೆಗಾಗಿ ಕೇಂದ್ರೀಯ ಭಂಡಾರ್ ಸಿದ್ಧಪಡಿಸಿದ 4900 ರಕ್ಷಣಾತ್ಮಕ ಕಿಟ್ಗಳ ಹಸ್ತಾಂತರ
ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (ಡಿಒಎನ್ ಇ ಆರ್), ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿ ಕಚೇರಿ ರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಸಚಿವರಾದ ಡಾ.ಜಿತೇಂದ್ರ ಸಿಂಗ್ ರವರು ವೈದ್ಯಕೀಯ ರಂಗದವರ ಮತ್ತು ಪೊಲೀಸ್ ಪಡೆಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು ಮತ್ತು ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಯನ್ನು ಅವರ ಕಾರ್ಯಕ್ಕೆ ಮೆಚ್ಚುಗೆಯ ಸಂಕೇತವಾಗಿ, ಬಳಸುವುದಕ್ಕಾಗಿ ಸ್ಯಾನಿಟೈಜರ್, ಹ್ಯಾಂಡ್ ವಾಶ್ ಇತ್ಯಾದಿಗಳನ್ನು ಒಳಗೊಂಡಿರುವ ಕೇಂದ್ರೀಯ ಭಂಡಾರ್ ಅವರು ಒಟ್ಟುಗೂಡಿಸಿದ 4900 ರಕ್ಷಣಾತ್ಮಕ ಕಿಟ್ ಗಳನ್ನು ಹಸ್ತಾಂತರಿಸಿದರು ಸಚಿವರ ನಿವಾಸದಲ್ಲಿ ನಡೆದ ಸಣ್ಣ ಕಾರ್ಯಕ್ರಮವೊಂದರಲ್ಲಿ ಇಂದು ಕಿಟ್ಗಳನ್ನು ಆರೋಗ್ಯ ಸಚಿವಾಲಯ ಮತ್ತು ದೆಹಲಿ ಪೊಲೀಸ್ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಲಾಯಿತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಜಿತೇಂದ್ರ ಸಿಂಗ್, ಕಳೆದ ಹಲವು ವಾರಗಳಿಂದ ನಮ್ಮ ದೇಶವು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿದೆ ಎಂದು ಹೇಳಿದರು. ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ವಿಧಿಸಲಾದ ನಿಯಮಗಳನ್ನು ಅನುಸರಿಸಿ ಹೆಚ್ಚಿನ ನಾಗರಿಕರು ಮನೆಯಲ್ಲಿಯೇ ಇರುವಂತಾಗಿದ್ದರೆ, ಕೆಲವು ವ್ಯಕ್ತಿಗಳು, ಅಂದರೆ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳು ಈ ಸಂಕಷ್ಟದ ಸಮಯದಲ್ಲಿ ತಮ್ಮ ಸಾಮಾನ್ಯ ಕರ್ತವ್ಯಕ್ಕಿಂತಲೂ ಮಿಗಿಲಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕರೆಗೆ ಸ್ಪಂದಿಸಿದ ಅವರು, ಲಾಕ್ಡೌನ್ ಘೋಷಣೆಯ ನಂತರ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಸಚಿವಾಲಯಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಅವರು ಹೇಳಿದರು.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಆಶ್ರಯದಲ್ಲಿ ಕಲ್ಯಾಣ ಯೋಜನೆಯಾದ ಕೇಂದ್ರಭಂಡಾರ್, ಅಗತ್ಯ ವಸ್ತುಗಳನ್ನು ನಿಯಮಿತವಾಗಿ ಮತ್ತು ನಿರಂತರವಾಗಿ ಪೂರೈಸುವ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಈ ತಿಂಗಳ ಮೊದಲ ವಾರದಲ್ಲಿ ಡಾ.ಜಿತೇಂದ್ರ ಸಿಂಗ್ ಅವರು ಕೇಂದ್ರೀಯ ಭಂಡಾರ್ ನ ಖಾದ್ಯ ಮತ್ತು ಗೃಹೋಪಯೋಗಿ ವಸ್ತುಗಳನ್ನೊಳಗೊಂಡ 2200 ಅಗತ್ಯವಾದ ಕಿಟ್ಗಳನ್ನು ಡಿಎಂ (ಸೆಂಟ್ರಲ್) ಮತ್ತು ಎಸ್ಡಿಎಂ, ಸಿವಿಲ್ ಲೈನ್ಸ್, ಮಧ್ಯ ದೆಹಲಿ ಜಿಲ್ಲೆಗೆ ಅಗತ್ಯವಿರುವ ಕುಟುಂಬಗಳಿಗೆ ವಿತರಿಸಲು ಹಸ್ತಾಂತರಿಸಿದರು.
***
(Release ID: 1620408)
Visitor Counter : 181