ಭಾರೀ ಕೈಗಾರಿಕೆಗಳ ಸಚಿವಾಲಯ

ಕೊವಿಡ್-19 ವಿರುದ್ದ ಕಾರ್ಯಯೋಜನೆಗಳಿಗಾಗಿ ಪ್ರಧಾನಮಂತ್ರಿಯವರ ನಾಯಕತ್ವವನ್ನು ಹೊಗಳಿದ ಆಟೋಮೊಬೈಲ್ ಉದ್ಯಮದ ದಿಗ್ಗಜರು

Posted On: 30 APR 2020 4:32PM by PIB Bengaluru

ಕೊವಿಡ್-19 ವಿರುದ್ದ ಕಾರ್ಯಯೋಜನೆಗಳಿಗಾಗಿ ಪ್ರಧಾನಮಂತ್ರಿಯವರ ನಾಯಕತ್ವವನ್ನು ಹೊಗಳಿದ ಆಟೋಮೊಬೈಲ್ ಉದ್ಯಮದ ದಿಗ್ಗಜರು
ಜೀವನೋಪಾಯ, ಸಂಪನ್ಮೂಲ ಕ್ರೋಢೀಕರಣ ಮತ್ತು ಕ್ಷೇತ್ರ ಪುನರುಜ್ಜೀವನಗೊಳಿಸುವ ಕ್ರಮಗಳ ಕುರಿತು ಸುದೀರ್ಘ ಚರ್ಚೆ ಮಾಡಿದೆವು: ಶ್ರೀ ಪ್ರಕಾಶ್ ಜಾವಡೇಕರ್

 

ಭಾರತದ ಆಟೋಮೊಬೈಲ್ ಕ್ಷೇತ್ರದ ಮೇಲೆ ಕೊವಿಡ್-19 ನ ಸಂಭವನೀಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಪರಿಣಾಮವನ್ನು ಕಡಿಮೆ ಮಾಡಲು ಸಂಭವನೀಯ ನೀತಿಗಳು ಮತ್ತು ಉದ್ಯಮ ಕ್ಷೇತ್ರದ ಸಲಹೆಗಳನ್ನು ಆಲಿಸಲು ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಭಾರತೀಯ ವಾಹನ ಉದ್ಯಮ ಕ್ಷೇತ್ರದ ಆಯ್ದ ಸಿ..ಒಗಳ ತಂಡದದೊಂದಿಗೆ ಸಭೆ ನಡೆಸಿದರು. ವೀಡಿಯೊ ಸಂವಾದ ಮೂಲಕ ನಡೆದ ಸಭೆಯಲ್ಲಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದು, ಜೀವನೋಪಾಯ ಮತ್ತು ಸಂಪನ್ಮೂಲಗಳ ಕ್ರೋಢೀಕರಣದಿಂದ ಹಿಡಿದು ಎಲ್ಲಾ ಸಲಹೆಗಳನ್ನು ಅವಲೋಕಿಸಲಾಯಿತು. ಅಗತ್ಯ ಬೇಡಿಕೆಗಳನ್ನು ಮುಂದಿಟ್ಟಿದ್ದಲ್ಲದೆ, ಚರ್ಚೆಯ ಅವಧಿಯಲ್ಲಿ ಬಹಳ ಉತ್ತಮವಾದ ದೃಢಸಲಹೆಗಳೂ ಬಂದಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಮುಂದಿನ ದಿನಗಳಲ್ಲಿ, ಮತ್ತೆ ಕೆಲಸಕ್ಕೆ ಸೇರುವ ಮೊದಲು ಕಾರ್ಮಿಕರಿಗೆ ಬ್ಯಾಚ್ ಪರೀಕ್ಷೆ, ಆನ್‌ಲೈನ್ ನೋಂದಣಿ, ನಂತರ ಮಾರಾಟದ ಸ್ಥಳಗಳ ನೈರ್ಮಲ್ಯೀಕರಣ, ಇಬ್ಬರು ಕಾರ್ಮಿಕರ ನಡುವೆ ಭೌತಿಕ ವಿಭಜಕವನ್ನು ನೀಡುವುದು ಮುಂತಾದ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ಕೇಂದ್ರ ಸಚಿವ ಶ್ರೀ ಜಾವಡೇಕರ್ ಹೇಳಿದರು.

ಇಡೀ ಆಟೋಮೋಟಿವ್ ಇಂಡಸ್ಟ್ರಿಯ ವ್ಯಾಲ್ಯೂ ಚೈನ್ ಅನ್ನು ಪುನಃ ತೆರೆಯುವುದಕ್ಕೆ ಸಂಬಂಧಿಸಿದ ಕೆಲವು ಸಲಹೆಗಳೊಂದಿಗೆ ಮಾರಾಟಗಾರರಿಗೆ ಬೆಂಬಲ; ಉದ್ಯೋಗ ಬೆಂಬಲ ಮಧ್ಯಸ್ಥಿಕೆಗಳು; ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸುವುದು ಮತ್ತು ಹಣಕಾಸಿನ ಬೆಂಬಲದ ಅವಶ್ಯಕತೆಗೆ ಸಂಬಂಧಿಸಿದಂತೆ ಉದ್ಯಮವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಎತ್ತಿ ತೋರಿಸಿದರು; .ಹಾಗೂ “ಈ ಎಲ್ಲಾ ಸಲಹೆಗಳು ಮತ್ತು ಬೇಡಿಕೆಗಳನ್ನು ಸಾರಿಗೆ ಸಚಿವಾಲಯ, ವಾಣಿಜ್ಯ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಸಂಬಂಧಪಟ್ಟ ಇತರ ಸಚಿವಾಲಯಗಳೊಂದಿಗೆ ಚರ್ಚಿಸುತ್ತೇವೆ ಎಂದು ಉದ್ಯಮದ ನಾಯಕರಿಗೆ ಕೇಂದ್ರ ಸಚಿವ ಶ್ರೀ ಜಾವಡೇಕರ್ ಭರವಸೆ ನೀಡಿದರು.

ಕೊವಿಡ್ ಯೊಂದಿಗೆ ವ್ಯವಹರಿಸುವಾಗ ಕೈಗೊಂಡ ಅತ್ಯುತ್ತಮ ವಿಧಾನಗಳಿಗಾಗಿ ಪ್ರಧಾನಮಂತ್ರಿಯ ನಾಯಕತ್ವವನ್ನು ಈ ಉದ್ಯಮ ಕ್ಷೇತ್ರದ ದಿಗ್ಗಜಗಳು ಮೆಚ್ಚಿದರು. "ಭಾರತವು ಕೊವಿಡ್ ಅನ್ನು ನಿರ್ವಹಿಸುವಲ್ಲಿ ನಿಜವಾಗಿಯೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ ಮತ್ತು ನಾವು ಅಮೂಲ್ಯವಾದ ಜೀವಗಳನ್ನು ಉಳಿಸಿದ್ದೇವೆ, ಈಗ ನಾವು ಜೀವನೋಪಾಯದತ್ತ ಗಮನ ಹರಿಸಬೇಕಾಗಿದೆ" ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವರು ಒತ್ತಿ ಹೇಳಿದರು.

ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ರಾಜ್ಯ ಸಚಿವ ಶ್ರೀ ಅರ್ಜುನ್ ಮೇಘವಾಲ್ ಮತ್ತು ಬೃಹತ್ ಕೈಗಾರಿಕೆಗಳು ಕಾರ್ಯದರ್ಶಿ ಶ್ರೀ ಅರುಣ್‌ ಗೋಯೆಲ್ ಸಹ ಈ ಚರ್ಚೆಗಳಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಲು ಒಇಎಂಗಳು ಮತ್ತು ಆಟೋ ಕಾಂಪೊನೆಂಟ್ ವಲಯದಿಂದಲೂ ಪ್ರಾತಿನಿಧ್ಯವಿತ್ತು. ಸಿಯಾಮ್ ಅಧ್ಯಕ್ಷ ಶ್ರೀ ರಾಜನ್ ವಾಧೇರಾ ಮತ್ತು ಎಸಿಎಂಎ ಅಧ್ಯಕ್ಷ ಶ್ರೀ ದೀಪಕ್ ಜೈನ್ ಮುಂತಾದವರು ಈ ಕೈಗಾರಿಕಾ ತಂಡದ ಸಹ-ನೇತೃತ್ವ ವಹಿಸಿದ್ದರು. ಭಾಗವಹಿಸಿದ ಇತರ ಹಿರಿಯ ಸಿಇಒಗಳಲ್ಲಿ ಶ್ರೀ ಆರ್ ಸಿ ಭಾರ್ಗವ , ಶ್ರೀ ಪವನ್ ಮುಂಜಾಲ್; ಶ್ರೀ ವಿಕ್ರಮ್ ಕಿರ್ಲೋಸ್ಕರ್ ಮತ್ತು ಡಾ. ಪವನ್ ಗೋಯೆಂಕಾ ಕೂಡಾ ಸೇರಿದ್ದಾರೆ.

***



(Release ID: 1620240) Visitor Counter : 107