ನೌಕಾ ಸಚಿವಾಲಯ

ಕೇಂದ್ರ ನೌಕಾಯಾನ ಸಚಿವಾಲಯದಿಂದ ಹೊಸ ಜಾಲತಾಣ

Posted On: 30 APR 2020 4:44PM by PIB Bengaluru

ಕೇಂದ್ರ ನೌಕಾಯಾನ ಸಚಿವಾಲಯದಿಂದ ಹೊಸ ಜಾಲತಾಣ ( shipmin.gov.in )

 

ಕೇಂದ್ರ ನೌಕಾಯಾನ ಸಚಿವಾಲಯವು ತನ್ನ ಜಾಲತಾಣ shipmin.gov.in ಅನ್ನು ಏಪ್ರಿಲ್ 30, 2020 ರಿಂದ ನವೀಕರಿಸಿ ಹೊಸ ರೂಪ ನೀಡಿದೆ. ತೆರೆದ ಮುಕ್ತ ತಂತ್ರಜ್ಞಾನವನ್ನು ಆಧರಿಸಿ ನಿರ್ಮಿಸಿದ ಈ ಹೊಸ ಜಾಲತಾಣವನ್ನು ಎನ್ಐಸಿ ಕ್ಲೌಡ್ ಮೇಘರಾಜ್‌ನಲ್ಲಿ ನಿಯೋಜಿಸಲಾಗಿದೆ. ಭಾರತ ಸರ್ಕಾರದ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಹೊರಡಿಸಿರುವ ಭಾರತೀಯ ಸರ್ಕಾರಿ ಜಾಲತಾಣಗಳ (ಜಿ.ಐ.ಜಿ.ಡಬ್ಲ್ಯು.) ಮಾರ್ಗಸೂಚಿಗಳ ಪ್ರಕಾರ ಜಾಲತಾಣ ವಿನ್ಯಾಸಗೊಳಿಸಲಾಗಿದೆ. ಉತ್ತಮವಾಗಿ ವಿನ್ಯಾಸಗೊಳಿಸಿದ ಹೊಸ ಜಾಲತಾಣವು ಕ್ರಿಯಾತ್ಮಕ ಮುಖಪುಟವನ್ನು ಹೊಂದಿದೆ. ಉತ್ತಮ ವೀಡಿಯೊ ಅಪ್‌ಲೋಡ್ ಸೌಲಭ್ಯದೊಂದಿಗೆ ಸಾಮಾಜಿಕ ಮಾಧ್ಯಮ ಸಂಯೋಜನೆ ಈ ಜಾಲತಾಣದಲ್ಲಿರುವುದು ಇನ್ನೊಂದು ವೈಶಿಷ್ಟ್ಯತೆಯಾಗಿದೆ.

***(Release ID: 1620239) Visitor Counter : 14