ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯಿಂದ 30 ಲಕ್ಷಕ್ಕೂ ಅಧಿಕ ಉಚಿತ ಊಟ ವಿತರಣೆ
Posted On:
30 APR 2020 4:18PM by PIB Bengaluru
ಭಾರತೀಯ ರೈಲ್ವೆಯಿಂದ 30 ಲಕ್ಷಕ್ಕೂ ಅಧಿಕ ಉಚಿತ ಊಟ ವಿತರಣೆ
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಸುಮಾರು 300 ಸ್ಥಳಗಳಲ್ಲಿ ವಿತರಣೆ
ಭಾರತೀಯ ರೈಲ್ವೆ ಸಂಸ್ಥೆಗಳು ಬಿಸಿ ಊಟ ಒದಗಿಸಿ ಪ್ರತಿದಿನ ಸಾವಿರಾರು ಜನರಿಗೆ ಭರವಸೆ ನೀಡುತ್ತಿದೆ
ಕೋವಿಡ್-19 ಕಾರಣದಿಂದಾಗಿ ಸೃಷ್ಠಿಯಾದ ರಾಷ್ಟ್ರೀಯ ಲಾಕ್‌ಡೌನ್ ಸಮಯದಲ್ಲಿ ಭಾರತೀಯ ರೈಲ್ವೆ ವಿತರಣೆ ಮಾಡುತ್ತಿರುವ ಉಚಿತ ಬಿಸಿ ಬಿಸಿ ಊಟ ವಿತರಣೆಯ ಸಂಖ್ಯೆಯಿಂದು ಮೂರು ದಶಲಕ್ಷವನ್ನು ದಾಟಿದೆ. ಏಪ್ರಿಲ್ 20, 2020 ರಂದು, ಭಾರತೀಯ ರೈಲ್ವೆ ಉಚಿತ ಊಟ ವಿತರಣೆಯಲ್ಲಿ 2 ದಶಲಕ್ಷವನ್ನು ತಲುಪಿತ್ತು ಮತ್ತು ಕಳೆದ 10 ದಿನಗಳಲ್ಲಿ, ಉಚಿತ ಊಟ ವಿತರಣೆಯ ಸಂಖ್ಯೆ ಒಂದು ಮಿಲಿಯನ್ ಗಡಿ ದಾಟಿದೆ.
ಜಾಗತಿಕ ಸಾಂಕ್ರಾಮಿಕವು ಸಂದಿಗ್ಧ ಸನ್ನಿವೇಶಗಳನ್ನು ಸೃಷ್ಟಿಸಿದೆ, ಈ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ಹೆಚ್ಚು ಹಾನಿಗೊಳಗಾದವರು ಸಿಕ್ಕಿಬಿದ್ದ ವ್ಯಕ್ತಿಗಳು, ದೈನಂದಿನ ಕೂಲಿ ಕಾರ್ಮಿಕರು, ವಲಸಿಗರು, ಮಕ್ಕಳು, ಕೂಲಿಗಳು, ಮನೆಯಿಲ್ಲದವರು, ಬಡವರು ಮತ್ತು ಇತರ ಅನೇಕರು ಹೀಗೆ ಹೆಚ್ಚಿನ ಸಂಖ್ಯೆಯ ಜನರು ಹಸಿವಿನಿಂದ ಬಳಲುತ್ತಿದ್ದಾರೆ. .
ಕೋವಿಡ್-19 ಕಾರಣದಿಂದಾಗಿ ಬೀಗ ಹಾಕಿದ ನಂತರ ಅಗತ್ಯವಿರುವ ಜನರಿಗೆ ಬಿಸಿ ಊಟವನ್ನು ಒದಗಿಸಲು ಹಲವಾರು ರೈಲ್ವೆ ಸಂಸ್ಥೆಗಳಿಗೆ ಸೇರಿದ ಭಾರತೀಯ ರೈಲ್ವೆ ಸಿಬ್ಬಂದಿಗಳು ಮಾರ್ಚ್ 28, 2020 ರಿಂದ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ. ರೈಲ್ವೆ ಬೃಹತ್ ಬೇಯಿಸಿದ ಆಹಾರವನ್ನು ಕಾಗದದ ತಟ್ಟೆಗಳೊಂದಿಗೆ ಊಟಕ್ಕೆ ಮತ್ತು ಐ.ಆರ್.ಸಿ.ಟಿ.ಸಿ ಮೂಲ ಅಡಿಗೆಮನೆ, ಆರ್.ಪಿ.ಎಫ್ ಸಂಪನ್ಮೂಲಗಳು ಮತ್ತು ಎನ್.ಜಿ.ಒಗಳ ಕೊಡುಗೆಗಳ ಮೂಲಕ ಭೋಜನಕ್ಕೆ ಆಹಾರ ಪ್ಯಾಕೆಟ್‌ಗಳನ್ನು ಒದಗಿಸುತ್ತಿದೆ. ಅಗತ್ಯವಿರುವವರಿಗೆ ಆಹಾರವನ್ನು ತಲುಪಿಸುವಾಗ, ಸಾಮಾಜಿಕ ಅಂತರವನ್ನು ಮತ್ತು ನೈರ್ಮಲ್ಯವನ್ನು ಗಮನಿಸಲಾಗುತ್ತಿದೆ.
ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯವಿರುವ ಜನರ ಆಹಾರ ಅಗತ್ಯತೆಗಳನ್ನು ಪೂರೈಸಲು ನಿಲ್ದಾಣದ ಸುತ್ತಮುತ್ತಲೂ ಸಹ ಆರ್.ಪಿ.ಎಫ್, ಜಿ.ಆರ್.ಪಿ, ವಲಯಗಳ ವಾಣಿಜ್ಯ ಇಲಾಖೆಗಳು, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಮತ್ತು ಎನ್.ಜಿ.ಒಗಳ ಸಹಾಯದಿಂದ ಕೂಡಾ ಆಹಾರ ವಿತರಣೆ ನಡೆಯುತ್ತಿದೆ.
ನವದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೆಂಟ್ರಲ್, ಅಹಮದಾಬಾದ್, ಭೂಸಾವಲ್, ಹೌರಾ, ಪಾಟ್ನಾ, ಗಯಾ, ರಾಂಚಿ, ಕತಿಹಾರ್, ದೀನ್ ದಯಾಳ್ ಉಪಾಧ್ಯಾಯ ನಗರ, ಬಾಲಸೋರ್, ವಿಜಯವಾಡ, ಖುರ್ಡಾ, ಕಟ್ಪಾಡಿ, ತಿರುಚಿರಾಪಳ್ಳಿ ಧನ್ ಬಾದ್, ಗುವಾಹಟಿ, ಸಮಸ್ತಿಪುರ, ಪ್ರಯಾಗರಾಜ್, ಇಟಾರ್ಸಿ, ವಿಶಾಖಪಟ್ಟಣಂ, ಚೆಂಗಲ್ಪಟು, ಪುಣೆ, ಹಾಜಿಪುರ, ರಾಯ್‌ಪುರ ಮತ್ತು ತತಾನಗರಗಳಲ್ಲಿ ಐ ಆರ್ ಸಿ ಟಿ ಸಿ ಮೂಲ ಅಡಿಗೆಮನೆಗಳ ಸಕ್ರಿಯ ಸಹಕಾರದೊಂದಿಗೆ ವಿವಿಧ ವಲಯಗಳಾದ ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ಮಧ್ಯದಕ್ಷಿಣಗಳಲ್ಲಿ ಒಟ್ಟಾರೆಯಾಗಿ ಏಪ್ರಿಲ್ 30, 2020 ರವರೆಗೆ 30 ಲಕ್ಷಕ್ಕೂ ಹೆಚ್ಚು ಬಿಸಿ ಊಟವನ್ನು ವಿತರಿಸಲಾಗಿದೆ.
ಈ ಪೈಕಿ ಸುಮಾರು 17.17 ಲಕ್ಷ ಬೇಯಿಸಿದ ಊಟವನ್ನು ಐಆರ್ ಸಿಟಿಸಿ ಒದಗಿಸಿದೆ, ಸುಮಾರು 5.18 ಲಕ್ಷ ಊಟವನ್ನು ಆರ್‌ಪಿಎಫ್ ತನ್ನ ಸ್ವಂತ ಸಂಪನ್ಮೂಲಗಳಿಂದ ಒದಗಿಸಿದೆ, ಸುಮಾರು 2.53 ಲಕ್ಷ ಊಟವನ್ನು ವಾಣಿಜ್ಯ ಮತ್ತು ರೈಲ್ವೆಯ ಇತರ ಇಲಾಖೆಗಳು ಒದಗಿಸಿವೆ ಮತ್ತು ಸುಮಾರು 5.60 ಲಕ್ಷ ಊಟವನ್ನು ರೈಲ್ವೆ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಎನ್ಜಿಒಗಳಿಂದ.
ನೀಡಲಾಗಿದೆ
ಐಆರ್ ಸಿಟಿಸಿ, ಇತರ ರೈಲ್ವೆ ಇಲಾಖೆಗಳು, ಎನ್ಜಿಒಗಳು ಮತ್ತು ತನ್ನದೇ ಆದ ಅಡಿಗೆಮನೆಗಳಿಂದ ತಯಾರಿಸಿದ ಅಗತ್ಯವಿರುವ ಜನರಿಗೆ ಆಹಾರ ವಿತರಣೆಯಲ್ಲಿ ರೈಲ್ವೆ ಸಂರಕ್ಷಣಾ ಪಡೆಯು ಕೂಡಾ ಪ್ರಮುಖ ಪಾತ್ರ ವಹಿಸಿದೆ. 28.03.2020 ರಂದು 74 ಸ್ಥಳಗಳಲ್ಲಿ 5419 ನಿರ್ಗತಿಕರಿಗೆ ಆಹಾರ ವಿತರಣೆಯಿಂದ ಪ್ರಾರಂಭಿಸಿ, ಈ ಸಂಖ್ಯೆ ಪ್ರತಿದಿನವೂ ಹೆಚ್ಚಾಗುತ್ತಾ ಹೋಯಿತು. ಪ್ರಸ್ತುತ ದೇಶಾದ್ಯಂತ ಸುಮಾರು 300 ಸ್ಥಳಗಳಲ್ಲಿ ಪ್ರತಿದಿನ ಸರಾಸರಿ ಸುಮಾರು 50000 ಜನರಿಗೆ ಆರ್‌ಪಿಎಫ್ ಊಟ ನೀಡುತ್ತಿದೆ.
***
(Release ID: 1619944)
Visitor Counter : 200
Read this release in:
Punjabi
,
English
,
Urdu
,
Marathi
,
Hindi
,
Manipuri
,
Assamese
,
Bengali
,
Gujarati
,
Odia
,
Telugu
,
Malayalam