ಹಣಕಾಸು ಸಚಿವಾಲಯ

ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯ ಕಾರ್ಯಪಡೆಯ ಅಂತಿಮ ವರದಿಯನ್ನು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದೆ

Posted On: 29 APR 2020 3:48PM by PIB Bengaluru

ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯ ಕಾರ್ಯಪಡೆಯ ಅಂತಿಮ ವರದಿಯನ್ನು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದೆ

 

ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯ (ಎನ್‌ಐಪಿ) ಕುರಿತ ಕಾರ್ಯಪಡೆ ತನ್ನ 2019-25ನೇ ಸಾಲಿನ ಅಂತಿಮ ವರದಿಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದೆ. 2019-2025ರ ಸಾಲಿನ ರಾಷ್ಟ್ರೀಯ ಮೂಲಸೌಕರ್ಯ ಯೊಜನೆ ಕುರಿತ ಕಾರ್ಯಪಡೆಯ ಸಾರಾಂಶ ವರದಿಯನ್ನು ಈಗಾಗಲೇ ಹಣಕಾಸು ಸಚಿವೆರು ಡಿಸೆಂಬರ್ 31, 2019 ರಂದು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2019-20ರ ಬಜೆಟ್ ಭಾಷಣದಲ್ಲಿ, ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ ರೂ. 100 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು ಎಂದಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆ 2019 ರಲ್ಲಿ ಇದನ್ನು ಪುನರುಚ್ಚರಿಸಿದ್ದು ಈ ಅವಧಿಗೆ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ರೂ. 100 ಲಕ್ಷ ಕೋಟಿ ರೂ. ಮೀಸಲಿಡಲಾಗಿದ್ದು, ಇದು ಜೀವನ ಮಟ್ಟವನ್ನು ಸುಧಾರಿಸುವುದರ ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆಎಂದಿದ್ದರು.

ದೇಶದಲ್ಲೇ ಮೊದಲ-ರೀತಿಯ, ದೇಶಾದ್ಯಂತ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ಎಲ್ಲಾ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವ ಸರ್ಕಾರದ ಯೋಜನೆಯಾಗಿದೆ. ಇದು ಯೋಜನೆಯ ತಯಾರಿಕೆಯನ್ನು ಸುಧಾರಿಸುವ, ಹೂಡಿಕೆಗಳನ್ನು (ದೇಶೀಯ ಮತ್ತು ವಿದೇಶಿ) ಮೂಲಸೌಕರ್ಯಕ್ಕೆ ಆಕರ್ಷಿಸುವ ಗುರಿಯನ್ನು ಹೊಂದಿದೆ ಮತ್ತು 2025 ರ ಹಣಕಾಸು ವರ್ಷದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ.

ಉಪ-ವಲಯಗಳಲ್ಲಿ ಲೈನ್ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯ ಸೇರಿದಂತೆ ವಿವಿಧ ಪಾಲುದಾರರು ಒದಗಿಸಿದ ಮಾಹಿತಿಯನ್ನು ಒಟ್ಟುಗೂಡಿಸುವ ಮೂಲಕ ಹಾರ್ಮೋನೈಸ್ಡ್ ಮಾಸ್ಟರ್ ಲಿಸ್ಟ್ ಆಫ್ ಇನ್ಫ್ರಾಸ್ಟ್ರಕ್ಚರ್‌ನಲ್ಲಿ ಮೂಲಸೌಕರ್ಯ ವಿವರ ನೀಡುವ ಉತ್ತಮ ಪ್ರಯತ್ನದ ಆಧಾರದ ಮೇಲೆ ಮಾಡಲಾಗುತ್ತದೆ ಎನ್‌ಐಪಿಯ ವರದಿ. ಒಂದು ಯೋಜನೆಗೆ ರೂ.100 ಕೋಟಿಗಿಂತ ಹೆಚ್ಚಿನ ವೆಚ್ಚದ ಎಲ್ಲಾ ಯೋಜನೆಗಳನ್ನು (ಗ್ರೀನ್‌ಫೀಲ್ಡ್ ಅಥವಾ ಬ್ರೌನ್‌ಫೀಲ್ಡ್, ಅನುಷ್ಠಾನದಲ್ಲಿ ಅಥವಾ ಪರಿಕಲ್ಪನೆಯ ಅಡಿಯಲ್ಲಿ) ಎನ್‌ಐಪಿಯಡಿ ಒಂದಡೆ ರೂಪಿಸಲು, ಸೆರೆಹಿಡಿಯಲು ಮತ್ತು ಸೇರಿಸಲು ಪ್ರಯತ್ನಿಸಲಾಗಿದೆ.

ಎನ್ಐಪಿ ಕಾರ್ಯಪಡೆಯ ಅಂತಿಮ ವರದಿಯು 2020-25ರ ಆರ್ಥಿಕ ಅವಧಿಯಲ್ಲಿ ಒಟ್ಟು ರೂ.111 ಲಕ್ಷ ಕೋಟಿಗಳ ಮೂಲಸೌಕರ್ಯ ಹೂಡಿಕೆಯನ್ನು ಯೋಜಿಸಿ ರೂಪಿಸಿದೆ. ಎನ್ಐಪಿ ವರದಿ ಸಾರಾಂಶ ಬಿಡುಗಡೆಯಾದಾಗಿನಿಂದ ಕೇಂದ್ರ ಸಚಿವಾಲಯಗಳು / ರಾಜ್ಯ ಸರ್ಕಾರಗಳು ಒದಗಿಸಿದ ಹೆಚ್ಚುವರಿ / ತಿದ್ದುಪಡಿ ದತ್ತಾಂಶಗಳನ್ನು ಸೇರಿಸಲಾದ ಸಮಗ್ರ ಮಾಹಿತಿಗಳು ಒಟ್ಟು ಮೂರು ಸಂಪುಟದ ಎನ್ಐಪಿ ಕಾರ್ಯಪಡೆಯ ಅಂತಿಮ ವರದಿಯಲ್ಲಿದೆ. ಸಂಪುಟ I ಮತ್ತು II ಅನ್ನು ಡಿಇಎ ವೆಬ್‌ಸೈಟ್ www.dea.gov.in, www.pppinindia.gov.in ನಲ್ಲಿ ಮತ್ತು ಹಣಕಾಸು ಸಚಿವಾಲಯದ ಪೋರ್ಟಲ್ ಮತ್ತು ಸಂಪುಟ III & ಬಿ ಯಲ್ಲಿ ಸೇರ್ಪಡೆಗೊಂಡ ಪ್ರಾಜೆಕ್ಟ್ ಡೇಟಾಬೇಸ್ ಅನ್ನು ಭಾರತ ಹೂಡಿಕೆ ಗ್ರಿಡ್ ಪೋರ್ಟಲ್‌ನಲ್ಲಿ ಸರಿಯಾದ ಸಮಯದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಒಟ್ಟು ನಿರೀಕ್ಷಿತ ಬಂಡವಾಳ ವೆಚ್ಚದಲ್ಲಿ ರೂ. 111 ಲಕ್ಷ ಕೋಟಿ, ರೂ.44 ಲಕ್ಷ ಕೋಟಿ (ಎನ್‌ಐಪಿಯ 40%) ಯೋಜನೆಗಳು ಅನುಷ್ಠಾನದಲ್ಲಿವೆ, ರೂ.33 ಲಕ್ಷ ಕೋಟಿ (30%) ಮೌಲ್ಯದ ಯೋಜನೆಗಳು ಪರಿಕಲ್ಪನಾ ಹಂತದಲ್ಲಿವೆ ಮತ್ತು ರೂ.22 ಲಕ್ಷ ಕೋಟಿ (20%) ಮೌಲ್ಯದ ಯೋಜನೆಗಳು ಅಭಿವೃದ್ಧಿಯಲ್ಲಿವೆ. ರೂ.11 ಲಕ್ಷ ಕೋಟಿ (10%) ಮೌಲ್ಯದ ಯೋಜನೆಗಳಿಗೆ ಯೋಜನಾ ಪೂರ್ವ ಹಂತ ಲಭ್ಯವಿಲ್ಲ. ಇಂಧನ (24%), ರಸ್ತೆಗಳು (18%), ನಗರ (17%) ಮತ್ತು ರೈಲ್ವೆ (12%) ಮುಂತಾದ ಕ್ಷೇತ್ರಗಳು ಭಾರತದಲ್ಲಿ ಯೋಜಿತ ಮೂಲಸೌಕರ್ಯ ಹೂಡಿಕೆಗಳಲ್ಲಿ ಸುಮಾರು 71% ನಷ್ಟಿದೆ. ಭಾರತದಲ್ಲಿ ಎನ್‌ಐಪಿ ಅನುಷ್ಠಾನಗೊಳಿಸುವಲ್ಲಿ ಕೇಂದ್ರ (39%) ಮತ್ತು ರಾಜ್ಯಗಳು (40%) ಬಹುತೇಕ ಸಮಾನ ಪಾಲು ಹೊಂದುವ ನಿರೀಕ್ಷೆಯಿದೆ, ನಂತರ ಖಾಸಗಿ ವಲಯ (21%) ಪಾಲು ಹೊಂದುವ ನಿರೀಕ್ಷೆಯಿದೆ.

ಭಾರತದಲ್ಲಿನ ಇತ್ತೀಚಿನ ಮೂಲಸೌಕರ್ಯದ ವ್ಯವಸ್ಥೆಗಳನ್ನು ಗುರುತಿಸಿದೆ, ಮತ್ತು ಹೈಲೈಟ್ ಮಾಡಿದೆ ಮತ್ತು ಜಾಗತಿಕವಾಗಿರುವ ಎಲ್ಲಾ ಕ್ಷೇತ್ರಗಳ ಮೂಲಸೌಕರ್ಯಗಳ ಮಾಹಿತಿ ಅಂತಿಮ ವರದಿ ನೀಡಿದೆ. ಇದು ವಲಯದ ಪ್ರಗತಿ, ಕೊರತೆ ಮತ್ತು ಸವಾಲುಗಳನ್ನು ಸಹ ಒಟ್ಟು ಗೂಡಿಸಿ ಸಮಗ್ರವಾದ ಚಿತ್ರಣವನ್ನು ಸೆರೆಹಿಡಿಯುತ್ತದೆ. ಅಸ್ತಿತ್ವದಲ್ಲಿರುವ ವಲಯ ನೀತಿಗಳನ್ನು ನವೀಕರಿಸುವುದರ ಜೊತೆಗೆ, ಅಂತಿಮ ವರದಿಯು ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿನ ಮೂಲಸೌಕರ್ಯ ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ಮುಂದೂಡಲು ಸುಧಾರಣೆಗಳಿಗಾಗಿ ಒಂದು ವರ್ಗವನ್ನು ಗುರುತಿಸಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಅಭಿವೃದ್ಧಿ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವುದು, ಮೂಲಸೌಕರ್ಯ ಸ್ವತ್ತುಗಳ ಹಣಗಳಿಕೆ, ಭೂ ಹಣಗಳಿಕೆ¸ ಮುನ್ಸಿಪಲ್ ಬಾಂಡ್‌ಗಳು ಸೇರಿದಂತೆ ಕಾರ್ಪೊರೇಟ್ ಬಾಂಡ್ ಮಾರಾಟ ಇತ್ಯಾದಿಗಳ ಮೂಲಕ ಎನ್‌ಐಪಿಗೆ ಹಣಕಾಸು ಒದಗಿಸುವ ಮಾರ್ಗಗಳನ್ನು ಈ ವರದಿಯು ಸೂಚಿಸಿದೆ.

ಮೂರು ಸಮಿತಿಗಳನ್ನು ಸ್ಥಾಪಿಸಲು ಕಾರ್ಯಪಡೆ ಶಿಫಾರಸು ಮಾಡಿದೆ:

ಎನ್ಐಪಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ವಿಳಂಬವನ್ನು ತೆಗೆದುಹಾಕುವ ಸಮಿತಿ;

ಅನುಷ್ಠಾನವನ್ನು ಅನುಸರಿಸಲು ಪ್ರತಿ ಮೂಲಸೌಕರ್ಯ ಸಚಿವಾಲಯ ಮಟ್ಟದಲ್ಲಿ ಸ್ಟೀರಿಂಗ್ ಸಮಿತಿ; ಮತ್ತು

ಎನ್ಐಪಿಗೆ ಹಣಕಾಸಿನ ಸಂಪನ್ಮೂಲಗಳನ್ನು ಸಂಗ್ರಹಿಸಲು ಡಿಇಎದಲ್ಲಿ ಸ್ಟೀರಿಂಗ್ ಸಮಿತಿ.

 

ಮೂಲಭೂತ ಮೇಲ್ವಿಚಾರಣೆಯು ಸಚಿವಾಲಯ ಮತ್ತು ಯೋಜನಾ ಏಜೆನ್ಸಿಯೊಂದಿಗೆ ಇರುತ್ತದೆ, ಆದರೆ ಸುಧಾರಣೆಗಳನ್ನು ಕೈಗೊಳ್ಳಲು ಮತ್ತು ಸ್ಥಗಿತಗೊಂಡ ಯೋಜನೆಗಳ ಸಮಸ್ಯೆಗಳನ್ನು ಎದುರಿಸಲು ಉನ್ನತ ಮಟ್ಟದ ಮೇಲ್ವಿಚಾರಣೆಯ ಅವಶ್ಯಕತೆಯಿದೆ. ಶಿಫಾರಸು ಮಾಡಲಾದ ಆಡಳಿತ , ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಚೌಕಟ್ಟಿನ ಮೂಲ ಅಂಶಗಳನ್ನು ಎನ್ಐಪಿ ವರದಿಯ ಸಂಪುಟ -1 ರಲ್ಲಿ ನೀಡಲಾಗಿದೆ.

ನಿರೀಕ್ಷಿತ ಹೂಡಿಕೆದಾರರೊಂದಿಗೆ ಅದರ ಹಣಕಾಸು ಸಹಾಯಕ್ಕಾಗಿ ಎನ್ಐಪಿ ವರದಿಯ ಗೋಚರತೆಯನ್ನು ಒದಗಿಸಲು ಶೀಘ್ರದಲ್ಲೇ ಎನ್ಐಪಿ ಪ್ರಾಜೆಕ್ಟ್ ಡೇಟಾಬೇಸ್ ಅನ್ನು ಇಂಡಿಯಾ ಇನ್ವೆಸ್ಟ್ಮೆಂಟ್ ಗ್ರಿಡ್ (ಐಐಜಿ) ನಲ್ಲಿ ಹೋಸ್ಟ್ ಮಾಡಲಾಗುತ್ತದೆ; ದೇಶೀಯ ಮತ್ತು ವಿದೇಶಿ, ನವೀಕರಿಸಿದ ಪ್ರಾಜೆಕ್ಟ್ ಮಟ್ಟದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿಯೊಂದು ವರ್ಷಗಳ ಸಚಿವಾಲಯ/ ರಾಜ್ಯವು ಹೊಸ ಯೋಜನೆಗಳನ್ನು ಇಲ್ಲಿ ಸೇರಿಸಲಾಗುತ್ತದೆ ಮತ್ತು ಆಯಾ ಯೋಜನೆಯ ವಿವರಗಳನ್ನು ಪೂರ್ವ ನಿರ್ಧಾರಿತ ಸಮಯದ ಮಧ್ಯಂತರದಲ್ಲಿ ನವೀಕರಿಸಲಾಗುತ್ತದೆ, ಇದರಿಂದ ನವೀಕರಿಸಿದ ಡೇಟಾ ನಿರೀಕ್ಷಿತ ಹೂಡಿಕೆದಾರರಿಗೆ ಸದಾ ಲಭ್ಯವಿರುತ್ತದೆ.

***



(Release ID: 1619598) Visitor Counter : 230