PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 29 APR 2020 6:49PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ 7695 ಜನರು ಗುಣಮುಖರಾಗಿದ್ದಾರೆ. ಇದು ನಮ್ಮ ಒಟ್ಟು ಗುಣಮುಖ ದರವನ್ನು 24.5%. ಗೇರಿಸಿದೆ. ಈಗ ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 31,332. ಕೋವಿಡೇತರ ಅವಶ್ಯಕ ವೈದ್ಯಕೀಯ ಸೇವೆಯನ್ನು ನಿರ್ಲಕ್ಷಿಸಬಾರದು ಎಂದು ಕಾರ್ಯದರ್ಶಿ ( ಎಚ್.ಎಫ್.ಡಬ್ಲ್ಯು.) ದೃಢವಾಗಿ ಹೇಳಿದ್ದಾರೆ. ಡಯಾಲಿಸಿಸ್, ಕ್ಯಾನ್ಸರ್ ಚಿಕಿತ್ಸೆ, ಮಧು ಮೇಹ, ಗರ್ಭಿಣಿ ಸ್ತ್ರೀಯರು, ಮತ್ತು ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು ಶುಶ್ರೂಷೆ ಒದಗಿಸತಕ್ಕದ್ದು. ಸರಕಾರದ ನಿಯಂತ್ರಣ ಕ್ರಮಗಳಲ್ಲಿ ಸಹಾಯ ಮಾಡುವ ಸ್ವ ಮೌಲ್ಯಮಾಪನ ಸಾಧನವಾಗಿರುವ ಆರೋಗ್ಯ ಸೇತು ಆಪ್ ನ್ನು ಉತ್ತೇಜಿಸುವಂತೆ ಅವರು ರಾಜ್ಯಗಳನ್ನು ಕೋರಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619317

ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಕಾರ್ಯದರ್ಶಿಗಳ ಜೊತೆ ಕೇಂದ್ರ ಎಚ್.ಆರ್.ಡಿ. ಸಚಿವರ ಸಂವಾದ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು ಈಗಿರುವ ಕೋವಿಡ್ -19  ಪರಿಸ್ಥಿತಿ ದುರದೃಷ್ಟಕರವಾದುದು, ಆದರೆ ಇಲ್ಲಿ  ಜಾಣ್ಮೆಯಿಂದ ಕಾರ್ಯಾಚರಿಸಿ , ಹೊಸ ಪ್ರಯೋಗಗಳನ್ನು ಮಾಡಿ ,ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಬೇಕಿದೆ , ಸುರಕ್ಷೆಯನ್ನು ಖಾತ್ರಿಪಡಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯನ್ನು ಸಾಧಿಸಬೇಕಿದೆ ಎಂದರು. ಶಾಲೆಗಳಲ್ಲಿ ಬೇಸಿಗೆ ರಜೆ ಅವಧಿಯಲ್ಲಿ ಮಧ್ಯಾಹ್ನದ ಊಟ ಒದಗಿಸಲು ಅನುಮೋದನೆ ನಿಡಲಾಗಿದೆ, ಇದಕ್ಕೆ ಹೆಚ್ಚುವರಿ 1,600  ಕೋ.ರೂ. ಖರ್ಚು ಬರಲಿದ್ದು ಅದನ್ನು ಒದಗಿಸಲಾಗುವುದು ಎಂದರು. ಬೋರ್ಡ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸುವಂತೆ ಅವರು ರಾಜ್ಯಗಳನ್ನು ಕೋರಿದರು ಮತ್ತು ಸಿ.ಬಿ.ಎಸ್..ಗೂ ಅವರವರ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619006

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ  ವಿವಿಧ ಕಡೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಜನತೆ ಮತ್ತು ವಲಸೆ ಕಾರ್ಮಿಕರ ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ  ಅವಕಾಶ

ಕೋವಿಡ್ -19  ವಿರುದ್ದ ಹೋರಾಡಲು ವಿಧಿಸಲಾದ  ಲಾಕ್ ಡೌನ್ ನಿರ್ಬಂಧಗಳ ಪಲಿತಾಂಶವಾಗಿ ದೇಶದ  ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ಸಿಲುಕಿ ಹಾಕಿಕೊಂಡಿದ್ದಾರೆ. ಈಗ ಕೇಂದ್ರ  ಸರಕಾರವು ಹೀಗೆ ಸಿಲುಕಿ ಹಾಕಿಕೊಂಡಿರುವವರು ರಸ್ತೆ ಮೂಲಕ ಸಂಚಾರ ಮುಂದುವರೆಸಲು ಅನುಮತಿ ನೀಡಿದೆ. ಒಂದು ರಾಜ್ಯದಿಂದ / ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿತ ರಾಜ್ಯಗಳು ಪರಸ್ಪರ ಸಮಾಲೋಚಿಸಿ ಒಪ್ಪಿಗೆ ನೀಡಿದ ಬಳಿಕ  ಅವರಿಗೆ ಸಂಚಾರದ ಅವಕಾಶ ಲಭಿಸುತ್ತದೆ. ಮತ್ತು ಅವರು ತಮ್ಮ ನಿಗದಿತ  ಸ್ಥಳಕ್ಕೆ ತಲುಪಿದಾಗ ಅವರ  ದೈಹಿಕ ತಪಾಸಣೆಯನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳು ನಡೆಸಿ , ಅವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಬೇಕಾದ ಅಗತ್ಯ ಕಂಡುಬಾರದೇ ಇದ್ದಲ್ಲಿ  ಗೃಹ ಕ್ವಾರಂಟೈನ್ ನಲ್ಲಿರಿಸುತ್ತಾರೆ. ಅವರನ್ನು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619318

ಕೋವಿಡ್ -19 ತೊಲಗಿಸುವ ಪರಿಹಾರಗಳನ್ನು ತ್ವರಿತವಾಗಿ ಅಭಿವೃದ್ದಿಪಡಿಸುವಂತೆ ವಿಜ್ಞಾನಿಗಳನ್ನು  ಡಾ. ಹರ್ಷ ವರ್ಧನ ಆಗ್ರಹಿಸಿದ್ದಾರೆ

ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಅದರ ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ರಂಗದ ಉದ್ಯಮಗಳಾದ ಬಿ..ಆರ್..ಸಿ. ಮತ್ತು ಬಿ..ಬಿ.ಸಿ..ಎಲ್. ಗಳುಹಾಲಿ ಚಾಲ್ತಿಯಲ್ಲಿರುವ ಕೋವಿಡ್ -19 ಸಂಕಷ್ಟವನ್ನು ನಿಭಾಯಿಸಲು , ವಿಶೇಷವಾಗಿ ಲಸಿಕೆಯನ್ನು ದೇಶೀಯವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು , ತ್ವರಿತ ಪರೀಕ್ಷೆ ಮತ್ತು ಆರ್.ಟಿ.-ಪಿ.ಸಿ.ಆರ್. ರೋಗ ಪತ್ತೆ ಕಿಟ್ ಗಳ ಬಗ್ಗೆ ಡಾ. ಹರ್ಷ ವರ್ಧನ ಅವರು ಪರಾಮರ್ಶೆ ನಡೆಸಿದರು. ಕನಿಷ್ಟ  ಅರ್ಧ ಡಜನ್ನಿನಷ್ಟು ಅಭ್ಯರ್ಥಿಗಳ ಲಸಿಕೆಗಳನ್ನು ಬೆಂಬಲಿಸಲಾಗುತ್ತಿದೆ, ಇದರಲ್ಲಿ ನಾಲ್ಕು ಮುನ್ನಡೆ ಹಂತದಲ್ಲಿವೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619183

ಕೋವಿಡೋತ್ತರ ಕಾಲದಲ್ಲಿ ,ಜಾಗತಿಕ ಪೂರೈಕೆ ಸರಪಳಿಯಲ್ಲಿ ಅನುಭವ ಗ್ರಾಹ್ಯ ಬದಲಾವಣೆಗಳಾಗಲಿವೆ , ಮತ್ತು ಭಾರತವು ವಿಶ್ವ ವ್ಯಾಪಾರದಲ್ಲಿ ಪ್ರಮುಖ ಪಾಲನ್ನು ಹಿಡಿಯುವುದನ್ನು ಎದುರು ನೋಡುತ್ತಿದೆ , ಎನ್ನುತ್ತಾರೆ ಶ್ರೀ ಪೀಯುಶ್ ಗೋಯೆಲ್

ರಫ್ತುದಾರರು ವಿಶ್ವ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಮತ್ತು ಸ್ಪರ್ಧಾತ್ಮಕ ಪ್ರಯೋಜನಗಳನ್ನು ಗುರುತಿಸಿಕೊಂಡು ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಗಮನ ಕೇಂದ್ರೀಕರಿಸಿಕೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪೀಯುಶ್ ಗೋಯೆಲ್ ಕರೆ ನೀಡಿದ್ದಾರೆ. ಕೋವಿಡೋತ್ತರ ಕಾಲದಲ್ಲಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಅನುಭವಗ್ರಾಹ್ಯವಾದ ಬದಲಾವಣೆಗಳು ಆಗಲಿವೆ, ಮತ್ತು ಭಾರತೀಯ ಕೈಗಾರಿಕೋದ್ಯಮಿಗಳು  ಹಾಗು ರಫ್ತುದಾರರು ವಿಶ್ವ ವ್ಯಾಪಾರದಲ್ಲಿ ಗಮನಾರ್ಹ ಪಾಲನ್ನು ಪಡೆಯುವುದನ್ನು ಎದುರು ನೋಡುತ್ತಿರಬೇಕು ಎಂದವರು ಹೇಳಿದರು. ಅವರ ಪ್ರಯತ್ನಗಳಿಗೆ ಸರಕಾರವು ಕ್ರಿಯಾಶೀಲ ಬೆಂಬಲ ನೀಡುತ್ತದೆ ಮತ್ತು ಅನುಕೂಲಗಳನ್ನು ಒದಗಿಸುತ್ತದೆ, ಮತ್ತು ವಿದೇಶಗಳಲ್ಲಿರುವ ಭಾರತೀಯ ಮಿಶನ್ ಗಳು ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಲ್ಲವು ಎಂದರು. ಪ್ರೋತ್ಸಾಹಧನವನ್ನು ನೀಡಬಹುದು, ಆದರೆ ಅದಕ್ಕೆ ಸಮರ್ಥನೆ ಬೇಕು, ನ್ಯಾಯೋಚಿತವಾಗಿರಬೇಕು  ಮತ್ತು ಅವು ಡಬ್ಯು.ಟಿ.. ಅನುಸರಣೆಯನ್ನು ಮಾಡುತ್ತಿರಬೇಕು ಎಂದೂ  ಸಚಿವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619315

ಕೋವಿಡ್ -19 ವಿರುದ್ದ ಹೋರಾಟದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳಿಗೆ ಶ್ರೀ ರವಿ ಶಂಕರ ಪ್ರಸಾದ್ ಮೆಚ್ಚುಗೆ

ಕೇಂದ್ರ ಇಲೆಕ್ಟ್ರಾನಿಕ್ಸ್ ಮತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ರವಿ ಶಂಕರ ಪ್ರಸಾದ್ ಅವರು 2020 ಏಪ್ರಿಲ್ 28 ರಂದು ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ  ಜೊತೆ ಸಭೆ ನಡೆಸಿದರುಮನೆಯಿಂದ ಕೆಲಸ ಮಾಡುವ ಮಾನದಂಡಗಳ ಸಡಿಲಿಕೆಯ ದೂರಸಂಪರ್ಕ ಇಲಾಖೆಯ ಗಡುವನ್ನು ಏಪ್ರಿಲ್ 30 ರಿಂದ 2020 ಜುಲೈ 31 ರವರೆಗೆ  ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದರು. ಭಾರತ್ ನೆಟ್ ಯೋಜನೆಯನ್ನು ಬೆಂಬಲಿಸುವಂತೆ ರಾಜ್ಯಗಳನ್ನು ಕೋರಿದ ಅವರು ಬಗ್ಗ್ಗೆ ಪರ್ಶೀಲಿಸುವಂತೆ ಹೇಳಿದರು. ಆರೋಗ್ಯ ಸೇತು ಆಪ್ ದತ್ತಾಂಶಗಳು ರಾಜ್ಯಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಆನ್ ಲೈನ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದರು. ದೂರವಾಣಿ ಬಳಕೆದಾರರಿಗೆ ಇಂತಹದೇ ಪರಿಹಾರಗಳು ಲಭ್ಯವಾಗುವಂತೆ ಮಾಡಲು ಅದನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619105

ದಿವ್ಯಾಂಗರಿಗೆ ಕೋವಿಡ್ -19 ಪರೀಕ್ಷಾ ಕೇಂದ್ರಗಳು ಮತ್ತು ಕ್ವಾರಂಟೈನ್ ಸೌಲಭ್ಯಗಳಲ್ಲಿ ಹಾಗು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಲ್ಲಿ  ದಿವ್ಯಾಂಗರಿಗೆ ಮೂಲ ಭೌತಿಕ ಆವಶ್ಯಕತೆಗಳು ಲಭ್ಯ ಇರುವುದನ್ನು ಖಾತ್ರಿಪಡಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯದಿಂದ ಪತ್ರ

ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ದೈಹಿಕ ನ್ಯೂನತೆ ಇರುವ  ವ್ಯಕ್ತಿಗಳ ಸಶಕ್ತೀಕರಣ ಇಲಾಖೆಯ ಕಾರ್ಯದರ್ಶಿ (ಡಿ..ಪಿ.ಡಬ್ಲ್ಯು.ಡಿ.) ಅವರು ಜಾಗತಿಕ ಸಾಂಕ್ರಾಮಿಕದ ಪರಿಣಾಮಗಳನ್ನು ನಿವಾರಿಸಲು ಹಲವು ಕೋವಿಡ್ -೧೯ ಕೇಂದ್ರಗಳನ್ನು ಕಂಟೈನ್ ಮೆಂಟ್ ಘಟಕಗಳೆಂದು, ಐಸೋಲೇಶನ್ ಚಿಕಿತ್ಸಾ ಕೇಂದ್ರಗಳೆಂದೂ, ಮತ್ತು ಪರೀಕ್ಷಾ ಕೇಂದ್ರಗಳೆಂದೂ ವೈದ್ಯಕೀಯ ಉದ್ದೇಶದಿಂದ ಅವುಗಳ ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಬೇಕಾಗಿ   ಅವಶ್ಯಕತೆಗೆ ಅನುಗುಣವಾಗಿ ಗುರುತಿಸಲಾಗಿದೆ. ಈಗಿನ ಸಂಕಷ್ಟದ ಸ್ಥಿತಿಯು ದಿವ್ಯಾಂಗರಿಗೆ ದೊಡ್ಡ ಬೆದರಿಕೆಯಾಗಿದೆ , ಇದು ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಎಂಬ ಒಂದೇ ಕಾರಣಕ್ಕೆ ಅಲ್ಲಅಂತಹ ಕೋವಿಡ್ ಸಂಬಂಧಿ ಸೌಲಭ್ಯಗಳಲ್ಲಿ ಅವರಿಗೆ ಅವಶ್ಯವಾದ ಭೌತಿಕ ಪರಿಸರ, ಪರಿಸರ ವ್ಯವಸ್ಥೆ ಇಲ್ಲದಿರುವುದೂ ಕಾರಣ ಎಂದು ಹೇಳಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619284

ಪ್ರಧಾನ ಮಂತ್ರಿ ಮತ್ತು ಕೆನಡಾ ಪ್ರಧಾನ ಮಂತ್ರಿ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಅವರು ಕೆನಡಾ ಪ್ರಧಾನ ಮಂತ್ರಿ ಗೌರವಾನ್ವಿತ ಜಸ್ಟಿನ್ ಟ್ರುಡೇವ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಇರುವ ಪರಿಸ್ಥಿತಿಯನ್ನು ಇಬ್ಬರು ನಾಯಕರೂ ಚರ್ಚಿಸಿದರು. ಜಾಗತಿಕ ಒಗ್ಗಟ್ಟು ಮತ್ತು ಸಮನ್ವಯ , ಪೂರೈಕೆ ಸರಪಳಿಯ ನಿರ್ವಹಣೆ ಮತ್ತು ಸಹಯೋಗದ ಸಂಶೋಧನಾ ಚಟುವಟಿಕೆಗಳ ಮಹತ್ವವನ್ನು ಇಬ್ಬರೂ ಮನಗಂಡರು. ಕೆನಡಾದಲ್ಲಿರುವ ಭಾರತೀಯರಿಗೆ ಅದರಲ್ಲೂ ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ನೀಡಿದ ಸಹಾಯ ಮತ್ತು ಬೆಂಬಲಕ್ಕಾಗಿ ಕೆನಡಾದ ಪ್ರಧಾನ ಮಂತ್ರಿ ಅವರಿಗೆ ಪ್ರಧಾನ ಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619155

ಕಳೆದ ವರ್ಷಕ್ಕೆ ಹೋಲಿಸಿದರೆ ಲಾಕ್ ಡೌನ್ ಅವಧಿಯಲ್ಲಿ ಖಾಸಗಿ ಆಹಾರ ಧಾನ್ಯಗಳ (ಪಿ.ಎಫ್.ಜಿ.) ಸಾಗಾಟದಲ್ಲಿ ಭಾರೀ ಹೆಚ್ಚಳ

2020 ಮಾರ್ಚ್ 25 ರಿಂದ ಏಪ್ರಿಲ್ 28 ವರೆಗೆ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೇಯು 7.75 ಲಕ್ಷ ಟನ್ನಿಗೂ (303 ರೇಕುಗಳುಅಧಿಕ ಪಿ.ಎಫ್.ಜಿ. ಸರಕು ಸಾಗಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 6.62 ಲಕ್ಷ ಟನ್ನು  (243 ರೇಕುಗಳು) ಗಳಾಗಿತ್ತು. ಆಹಾರ ಧಾನ್ಯಗಳಂತಹ ಕೃಷಿ ಉತ್ಪನ್ನಗಳನ್ನು ಸಕಾಲದಲ್ಲಿ ಪಡೆದುಕೊಂಡು ಅಡೆತಡೆರಹಿತ ಪೂರೈಕೆ ಸರಪಳಿಯನ್ನು ಖಾತ್ರಿಪಡಿಸಲು ರೈಲ್ವೇಯು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619310

ಎಫ್..ಸಿ.ಸಿ.. ಮತ್ತು ಪ್ರಮುಖ ಕೈಗಾರಿಕಾ ಸದಸ್ಯರ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಶ್ರೀಮತಿ ಹರ್ಶಿಮ್ ರತ್ ಕೌರ್ ಬಾದಲ್

ರೈತರ ಪ್ರಯೋಜನಕ್ಕಾಗಿ ಆಹಾರ ಧಾನ್ಯಗಳು ಮತ್ತು ಬೇಗ ಹಾಳಾಗುವ ವಸ್ತುಗಳನ್ನು ಖರೀದಿಸಲು ಮುಂದೆ ಬರಬೇಕು ಎಂದು ಕೈಗಾರಿಕೋದ್ಯಮದ ಸದಸ್ಯರಿಗೆ ಕೇಂದ್ರ ಎಫ್.ಪಿ.ಸಚಿವರು ಮನವಿ ಮಾಡಿದ್ದಾರೆ. ಕೈಗರಿಕೋದ್ಯಮದ ಸದಸ್ಯರಿಗೆ ಸಚಿವಾಲಯದಿಂದ ಅವಶ್ಯ ಬೆಂಬಲದ ಭರವಸೆಯನ್ನು ನೀಡಿರುವ ಸಚಿವರು ಯಾವುದೇ ಸಹಾಯಕ್ಕಾಗಿ ಕಾರ್ಯ ಪಡೆಯ ಜೊತೆ ಸಂಪರ್ಕದಲ್ಲಿರುವಂತೆ ಎಲ್ಲಾ ಸದಸ್ಯರಿಗೆ ಸಲಹೆ ಮಾಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619149

ಮೊಟ್ಟ ಮೊದಲ ಪೀಟರ್ಸ್ ಬರ್ಗ್ ವಾತಾವರಣ ವರ್ಚುವಲ್ ಸಮಾವೇಶದಲ್ಲಿ ವಾತಾವರಣ ಬದಲಾವಣೆಯ ವಿಷಯಗಳ ಬಗ್ಗೆ ಭಾರತವು 30 ದೇಶಗಳ ಜೊತೆ ಚರ್ಚೆಯಲ್ಲಿ ಪಾಲ್ಗೊಂಡಿತು

ಪೀಟರ್ಸ್ ಬರ್ಗ್ ವಾತಾವರಣ ಸಮ್ಮೇಳನದ ಹನ್ನೊಂದನೆ ಅಧಿವೇಶನದಲ್ಲಿ ಭಾರತವು ಇತರ 30 ದೇಶಗಳೊಂದಿಗೆ ಕೋವಿಡ್ -19 ಬಳಿಕದ ಸ್ಥಿತಿಯಲ್ಲಿ ಆರ್ಥಿಕತೆ ಮತ್ತು ಸಮಾಜಗಳಲ್ಲಿ ಮರುಉತ್ಸಾಹ ತುಂಬುವ ಸವಾಲುಗಳ ನಿಭಾವಣೆಯ ಬಗ್ಗೆ ಹಾದಿಗಳನ್ನು ಮತ್ತು ಕ್ರಮಗಳನ್ನು ಅನ್ವೇಷಿಸುವ ಬಗ್ಗೆ ಚರ್ಚಿಸಿತು. ಸಾಮೂಹಿಕ ಪುನಃ ಶ್ಚೇತನ  ಮತ್ತು ವಾತಾವರಣ ಸಂಬಂಧಿ ಕ್ರಮಗಳನ್ನು ತ್ವರಿತಗೊಳಿಸುವಿಕೆ ಹಾಗು ಅಪಾಯಕ್ಕೆ ಈಡಾಗುವ ಸಂಭಾವ್ಯತೆಯಲ್ಲಿರುವರನ್ನು ಬೆಂಬಲಿಸುವಿಕೆ ಬಗ್ಗೆ ಯೂ ಸಮಾಲೋಚನೆಗಳ ನಡೆದವು.

ವಿವರಗಳಿಗೆ: https://pib.gov.in/PressReleseDetail.aspx?PRID=1619061

ಕೋವಿಡ್ 19  ಹಿನ್ನೆಲೆಯಲ್ಲಿ ಉದ್ಯೋಗದಾತರಿಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯದಂತೆ ಅಥವಾ ವೇತನವನ್ನು ಕಡಿಮೆ ಮಾಡದಂತೆ ಸಲಹೆ ನೀಡಲು ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕಾರ್ಮಿಕ ಸಚಿವಾಲಯದ ಕೋರಿಕೆ: ಪಿ..ಬಿ. ವಸ್ತು ಸ್ಥಿತಿ ಶೋಧ ಸುದ್ದಿಯನ್ನು ಖಚಿತಪಡಿಸಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1619346

ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್ ಗಳ ಜೊತೆ ಡಾ. ಹರ್ಷ ವರ್ಧನ ವೀಡಿಯೋ ಕಾನ್ಫರೆನ್ಸ್

ಕೋವಿಡ್ -19 ವಿರುದ್ದ ಭಾರತದ ಯುದ್ದ ಹಾದಿಯನ್ನು ಪ್ರಧಾನವಾಗಿ ಪ್ರಸ್ತಾಪಿಸಿದ ಅವರು ಸಮಯದಲ್ಲಿ ನಮ್ಮ ಧೋರಣೆಯು ಐದು ಅಂಶಗಳನ್ನು ಒಳಗೊಂಡಿತ್ತು. (1,) ನಿರಂತರವಾಗಿ ಪರಿಸ್ಥಿತಿಯ ಬಗ್ಗೆ  ಜಾಗೃತಿ (ii.)  ಪೂರ್ವತಯಾರಿಯ ಮತ್ತು ಧನಾತ್ಮಕ ಮುಂಜಾಗರೂಕತಾ ಧೋರಣೆ, (iii.)  ನಿರಂತರವಾಗಿ ಉದ್ಭವಿಸುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಹಂತ ಹಂತವಾದ ಪ್ರತಿಕ್ರಿಯೆ, (iv.) ಎಲ್ಲಾ ಮಟ್ಟಗಳಲ್ಲಿಯೂ ಅಂತರ ವಲಯವಾರು ಸಮನ್ವಯ, ( v.) ರೋಗದ ವಿರುದ್ದ ಹೋರಾಡಲು ಜನತಾ ಆಂದೋಲನದ ನಿರ್ಮಾಣ ಇದರಲ್ಲಿತ್ತು ಎಂದರು. ಇದು ನಮ್ಮ ವೈಶಿಷ್ಟವೂ ಆಗಿತ್ತು ಎಂದವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619287

ದೇಶಾದ್ಯಂತ ಸ್ವ-ಸಹಾಯ ಗುಂಪುಗಳಿಂದ ಒಂದು ಕೋಟಿಗೂ ಅಧಿಕ ಮುಖಗವಸುಗಳು ಸಿದ್ದ.

ದೇಶಾದ್ಯಂತ ಇರುವ ವಿವಿಧ ಸ್ವ ಸಹಾಯ ಗುಂಪುಗಳು ಒಂದು ಕೋಟಿಗೂ ಅಧಿಕ ಮುಖಗವಸುಗಳನ್ನು ತಯಾರಿಸಿವೆ. ಇದು ಅವಿಶ್ರಾಂತ ಪ್ರಯತ್ನ, ಧನಾತ್ಮಕ ಶಕ್ತಿ,ಮತ್ತು ಕೋವಿಡ್ -19  ವಿರುದ್ದ ಹೋರಾಡುವ ಎಸ್.ಎಚ್.ಜಿ.ಗಳ ಸಂಯುಕ್ತ ನಿರ್ಧಾರವನ್ನು ತೋರಿಸುತ್ತದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಡೇ-ಎನ್.ಯು.ಎಲ್.ಎಂ. ಪ್ರಮುಖ ಯೋಜನೆಯಡಿ ಕೆಲಸ ನಡೆದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619192

ಮುಂಗಾರುವಿಗಾಗಿ ತಯಾರಾಗುತ್ತಿದೆ ಜಲ್ ಶಕ್ತಿ ಅಭಿಯಾನ್

ಈಗಿರುವ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಜಲ್ ಶಕ್ತಿ ಅಭಿಯಾನ್ ತಯಾರಾಗುತ್ತಿದೆ ಮತ್ತು ಅದರ ವಿವಿಧ ಘಟಕಾಂಶಗಳ ಮೂಲಕ ಗ್ರಾಮೀಣ್ ಆರ್ಥಿಕತೆಗೆ ಉತ್ತೇಜನ ಕೊಡಲಿದೆ. ವರ್ಷ ಕೋವಿಡ್ -19  ತುರ್ತು ಸ್ಥಿತಿಯಿಂದಾಗಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಕಾರ್ಮಿಕ ಶಕ್ತಿ ಲಭ್ಯ ಇರುವುದರಿಂದಾಗಿ ಬರಲಿರುವ ಮುಂಗಾರುವಿಗಾಗಿ ಅಭಿಯಾನವು ಸಿದ್ದಗೊಳ್ಳುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619166

ಸ್ಮಾರ್ಟ್ ಸಿಟಿ ಕಲ್ಯಾಣ್ ಡೊಂಬಿವಿಲಿಯ ಕೋವಿಡ್ -19 ಡ್ಯಾಶ್ ಬೋರ್ಡ್ ಈಗ ಸಾರ್ವಜನಿಕರಿಗೆ ಮುಕ್ತ

ವಿವರಗಳಿಗೆ: https://pib.gov.in/PressReleseDetail.aspx?PRID=1619174

ಪ್ರವಾಸೋದ್ಯಮ ಸಚಿವಾಲಯದಿಂದ 11 ನೇ ವೆಬಿನಾರ್, ’ದೇಖೋ ಅಪ್ನಾ ದೇಶ್ ಅಡಿಯಲ್ಲಿ  ಭಾರತ ಎಂಬ ಮಹಾಕಾವ್ಯ ಅಸಂಖ್ಯಾತ ಕಥೆಗಳ ಭೂಮಿಉಪಶೀರ್ಷಿಕೆಯಲ್ಲಿ  ಆಯೋಜಿಸಲ್ಪಟ್ಟಿತ್ತು

ವಿವರಗಳಿಗೆ: https://pib.gov.in/PressReleseDetail.aspx?PRID=1619178

ಹಕಾರ್ಡ್ ( HCARD), ಎಂಬ ರೊಬೋಟ್  ಕೋವಿಡ್ -19 ರಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ರಕ್ಷಣಾ ವಾರಿಯರ್ ಗಳಿಗೆ ಸಹಾಯ ಮಾಡುತ್ತದೆ

ವಿವರಗಳಿಗೆ: https://pib.gov.in/PressReleseDetail.aspx?PRID=1619169

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

 

  • ಚಂಡೀಗಢ: ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳವಾದುದರಿಂದ ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಸಲಹೆಗಾರರು ಸಾಂಕ್ರಾಮಿಕ ಸ್ಪೋಟವನ್ನು ನಮ್ಮೆಲ್ಲ ಶಕ್ತಿಯನ್ನು ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ತಹಬಂದಿಗೆ ತರಬೇಕು ಎಂದಿದ್ದಾರೆ. ಬಾಪು ಧಾಮ್ ಕಾಲನಿಯ ಸೆಕ್ಟರ್ 26 ಮತ್ತು ಸೆಕ್ಟರ್ 30-ಬಿ. ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ. ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಮಾಡಿರುವುದಲ್ಲದೆ, ಸ್ಥಳೀಯರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಗೊಳಿಸಲಾಗುತ್ತಿದೆ, ಇದಕ್ಕಾಗಿ ಸ್ಥಳೀಯರ ಮತ್ತು ನಾಯಕರ ಸಹಾಯವನ್ನು ಪಡೆಯಲಾಗುವುದು ಎಂದವರು ತಿಳಿಸಿದ್ದಾರೆ. ಪ್ರದೇಶದಲ್ಲಿ ಸಾಮಾಜಿಕ ಅಂತರ ಪಾಲನೆಯನ್ನು ಉಲ್ಲಂಘಿಸುವವರ ಮೇಲೆ ನಿಗಾ ಇಡಲು ಮತ್ತು ಅವರನ್ನು ಪತ್ತೆ ಹಚ್ಚಲು ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು ಹಾಗು ಡ್ರೋನ್ ಕ್ಯಾಮರಾ ಛಾಯಾಚಿತ್ರಗಳನ್ನು ಬಳಸಲಾಗುವುದು ಎಂದರು. ಪ್ರದೇಶಗಳಲ್ಲಿ ಕರ್ಫ್ಯೂ ಆದೇಶಗಳ ಕಟ್ಟು ನಿಟ್ಟಿನ ಅನುಷ್ಟಾನವನ್ನು ಖಾತ್ರಿಗೊಳಿಸಲು ಪೊಲೀಸರು ನಿಯಮಿತವಾಗಿ ಗಸ್ತು ತಿರುಗುತ್ತಾರೆ.
  • ಪಂಜಾಬ್: ಗ್ರಾಮಗಳಲ್ಲಿರುವ ಮಹಿಳಾ ಸ್ವಸಹಾಯ ಗುಂಪುಗಳು ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ವಾರಿಯರ್ ಗಳಾಗಿ ಮೂಡಿ ಬಂದಿದ್ದಾರೆ. ಪಂಜಾಬಿನ ಗ್ರಾಮೀಣಾಬಿವೃದ್ದಿ ಇಲಾಖೆಯ ಮೂಲಕ ಎಸ್.ಎಚ್.ಜಿ.ಗಳು ಮುಖಗವಸುಗಳನ್ನು, ಏಪ್ರನ್ ಗಳನ್ನು ಮತ್ತು ಗ್ಲೋವ್ಸ್ ಗಳನ್ನು ನಾಗರಿಕ ಆಡಳಿತ, ಪೊಲೀಸರು ಮತ್ತು ಪಂಚಾಯತ್ ಗಳಿಗಾಗಿ ತಯಾರಿಸುತ್ತಿದ್ದಾರೆ. ಪಂಜಾಬ್ ಸರಕಾರದ .ಟಿ.. ವಿದ್ಯಾರ್ಥಿಗಳು ಲಾಕ್ ಡೌನ್ ಅವಧಿಯಲ್ಲಿ ಮುಖಗವಸುಗಳನ್ನು ತಯಾರಿಸುವಲ್ಲಿ ಅಗ್ರ ಸ್ಥಾನದಲ್ಲಿದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
  • ರಿಯಾ: ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ ಉಪಕ್ರಮಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಂದರ್ಭದಲ್ಲಿ ಸಹಾಯ ಒದಗಿಸಲು ಮತ್ತು ಖರೀದಿ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯ ಸರಕಾರವು ಸಂಕಷ್ಟದಲ್ಲಿರುವ ಜನರಿಗಾಗಿ -ಪಿ.ಡಿ.ಎಸ್. ಮೂಲಕ ಪಡಿತರ ಟೋಕನ್ ಗಳನ್ನು ಒದಗಿಸಿದೆ, ಇವರಿಗೆ ಮೂರು ತಿಂಗಳ ಕಾಲ ಉಚಿತವಾಗಿ ಪಡಿತರ ಒದಗಿಸಲಾಗುತ್ತದೆ.
  • ಹಿಮಾಚಲ ಪ್ರದೇಶ: ಸಹಾಯವಾಣಿ ಮತ್ತು -ಮೈಲ್ ಮೂಲಕ ಸರಕಾರಕ್ಕೆ ಮನವಿ ಮಾಡಿರುವ 5000 ಕ್ಕೂ ಅಧಿಕ ಮಂದಿಗೆ ಸಹಾಯ ಮಾಡುವುದರೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಹಿಮಾಚಲದ ಜನರನ್ನು ತಲುಪಲು ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅವರು ದೊಡ್ಡ ಸಂಖ್ಯೆಯಲ್ಲಿ  ಹಿಮಾಚಲದ ಜನರು ಸಿಲುಕಿ ಹಾಕಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ  ಪತ್ರ ಬರೆದು ಅವರಿಗೆ ಅವಶ್ಯ ಸಹಾಯ ಒದಗಿಸುವಂತೆ ಕೋರಿಕೊಂಡಿದ್ದಾರೆ
  • ಕೇರಳ: ಕೋವಿಡ್ 19  ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರಕಾರಿ ಸಿಬ್ಬಂದಿಗಳ ವೇತನ ಕಡಿತಕ್ಕೆ ಅನುವು ಮಾಡಿಕೊಡುವ ಸುಗ್ರೀವಾಜ್ಞೆಗೆ ಸರಕಾರ ಅನುಮೋದನೆ ನೀಡಿದೆ. ಮೊದಲು ಕೇರಳ ಹೈಕೋರ್ಟು ಕುರಿತಾದ ಸರಕಾರದ ಆದೇಶಕ್ಕೆ ತಡೆ ನೀಡಿತ್ತು.. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ಮುಖಗವಸುಗಳನ್ನು ಕಡ್ದಾಯ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕಾಸರಗೋಡಿನಲ್ಲಿ ಪಾಸಿಟಿವ್ ಆಗಿರುವ ವ್ಯಕ್ತಿಯ ಸೋಂಕಿನ ಮೂಲ ಕಂಡು ಹಿಡಿಯಲು ಆರೋಗ್ಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ವಿವಿಧ ಧಾರ್ಮಿಕ ನಾಯಕರು ಮೇ 3 ರಂದು ಜಾಗತಿಕ ಸಾಂಕ್ರಾಮಿಕರಿಂದ ಬಾಧಿತರಾದವರಿಗೆಲ್ಲಾ ಜಂಟಿ ಪ್ರಾರ್ಥನಾ ದಿನವನ್ನು ಆಚರಿಸಲು ರಾಜ್ಯಕ್ಕೆ ಮನವಿ ಮಾಡಿವೆ. ನಿನ್ನೆಯವರೆಗೆ ಒಟ್ಟು ದೃಢೀಕೃತ ಪ್ರಕರಣಗಳು 485 ಆಕ್ಟಿವ್ ಪ್ರಕರಣಗಳು: 123, ಗುಣಮುಖರಾದವರು 359.
  • ತಮಿಳುನಾಡು: ಚೆನ್ನೈಯ ಆಹಾರ ಪೂರೈಕೆ ಸಿಬ್ಬಂದಿಗೆ ಕೋವಿಡ್ 19  ದೃಢಪಟ್ಟಿದೆ. , ತಂದೆ ಸೋಂಕಿನಿಂದ ಮೃತಪಟ್ಟಿದ್ದಾರೆ.ತಮಿಳುನಾಡಿನಲ್ಲಿ ಅಕ್ಕಿ ಕಾರ್ಡ್ ಹೊಂದಿರುವ ಎಲ್ಲಾ ಕಾರ್ಡುದಾರರಿಗೂ ಮೂರು ತಿಂಗಳ ಕಾಲ ಅವರ ನಿಗದಿತ ಪ್ರಮಾಣಕ್ಕಿಂತ ದುಪ್ಪಟ್ಟು ಉಚಿತ ಅಕ್ಕಿ ದೊರೆಯಲಿದೆ. ವಿದೇಶಗಳಿಂದ ಮರಳಿ ಬರಲು ಉದ್ದೇಶಿಸಿರುವ ಕಾರ್ಮಿಕರಿಗಾಗಿ ಪೋರ್ಟಲ್ ಆರಂಭಿಸಲು ತಮಿಳುನಾಡು ಯೋಜಿಸಿದೆ. ನಗರದ ಎಲ್ಲಾ ಕೇಂದ್ರೀಯ, ರಾಜ್ಯ,ಮತ್ತು  ಅವಶ್ಯಕ ಸೇವೆಗಳ ಸಂಸ್ಥೆಗಳಿಗೆ ಅವರ ಕಚೇರಿಗಳನ್ನು ದಿನಕ್ಕೆರಡು ಬಾರಿ ಕ್ರಿಮಿನಾಶಕಗೊಳಿಸಲು ಚೆನ್ನೈ ಮಹಾನಗರ ಪಾಲಿಕೆ ಆದೇಶಿಸಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 2048. ಆಕ್ಟಿವ್ ಪ್ರಕರಣಗಳು: 902, ಸಾವುಗಳು: 25. ಬಿಡುಗಡೆಗೊಂಡವರು: 1128. ಗರಿಷ್ಟ ಪ್ರಕರಣಗಳು ಚೆನ್ನೈಯಿಂದ , 673.
  • ಕರ್ನಾಟಕ: ಇಂದು 9 ಹೊಸ ಪ್ರಕರಣಗಳು ದೃಢಪಟ್ಟಿವೆ. ಕಲಬುರ್ಗಿಯಿಂದ 8 ಮತ್ತು ಬೆಳಗಾವಿಯಿಂದ 1., ಒಟ್ಟು ಪ್ರಕರಣಗಳ ಸಂಖ್ಯೆ 532 . ಇದುವರೆಗೆ 20 ಮಂದಿ ಮೃತಪಟ್ಟಿದ್ದಾರೆ ಮತ್ತು 215 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
  • ಆಂಧ್ರಪ್ರದೇಶ: ಕಳೆದ 24 ಗಂಟೆಗಳಲ್ಲಿ 73 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 1332.ಆಕ್ಟಿವ್ ಪ್ರಕರಣಗಳು;1014,ಗುಣಮುಖರಾದವರು: 287.ಸಾವುಗಳು: 31. ಎಲ್ಲಾ ಸರಕಾರಿ ಇಲಾಖೆಗಳು, ಬ್ಯಾಂಕುಗಳು, ಗುತ್ತಿಗೆ ಸಿಬ್ಬಂದಿಗಳು, ಮಾಧ್ಯಮ ಸಿಬ್ಬಂದಿಗಳು , ವರ್ತಕರು, ಸಾರಿಗೆ ವಾಹನಗಳ ಚಾಲಕರು ವೈರಸ್ ಹರಡುವಿಕೆ ತಡೆಯಲು   ಆರೋಗ್ಯ ಸೇತು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ರಾಜ್ಯ ಸರಕಾರ ಸೂಚಿಸಿದೆ. ಲಾಕ್ ಡೌನ್ ರದ್ದಾದರೆ ಮೇ 3 ಬಳಿಕ ಕಂಟೈನ್ ಮೆಂಟ್ ವಲಯದಲ್ಲಿ ಅನುಷ್ಟಾನಿಸಬೇಕಾದ ಕಾರ್ಯತಂತ್ರವನ್ನು ರೂಪಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಲಹೆ ಮಾಡಲಾಗಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು: ಕರ್ನೂಲು (343 ) , ಗುಂಟೂರು (283 ), ಕೃಷ್ಣಾ (236 )
  • ತೆಲಂಗಾಣ: ನೆರೆಯ ಆಂಧ್ರ ಪ್ರದೇಶಕ್ಕಿಂತ ರಾಜ್ಯದಲ್ಲಿ ಕಡಿಮೆ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ವ್ಯಾಪಕ ಪ್ರಮಾಣದ ಪರೀಕ್ಷೆಗಳು ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಹೈದರಾಬಾದಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (..ಟಿ.) ಯಲ್ಲಿ ರೊಚ್ಚಿಗೆದ್ದ ವಲಸೆ ಕಾರ್ಮಿಕರು ಹಿಂಸಾಚಾರಕ್ಕೆ ಇಳಿದುದರಿಂದ ಪೊಲಿಸ್ ವಾಹನ ಹಾನಿಗೀಡಾಗಿದೆ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಒಟ್ಟು ಪ್ರಕರಣಗಳು: 1009. ಆಕ್ಟಿವ್ ಪ್ರಕರಣಗಳು: 610.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ 728 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವುದರೊಂದಿಗೆ  ಒಟ್ಟು ಪ್ರಕರಣಗಳ ಸಂಖ್ಯೆ 9,318 ಕ್ಕೇರಿದೆ. ಒಟ್ಟು ಮೃತಪಟ್ಟವರು: 369 , ಇದುವರೆಗೆ 1,388 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಡುವೆ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ ತನ್ನ 70 ಬಸ್ಸುಗಳನ್ನು ರಾಜಸ್ಥಾನದ ಕೋಟಾಕ್ಕೆ ಕಳುಹಿಸಿದೆ. ರಾಜ್ಯದ 1,600 ರಷ್ಟು ವಿದ್ಯಾರ್ಥಿಗಳು ಲಾಕ್ ಡೌನ್ ನಿಂದಾಗಿ ಅಲ್ಲಿ ಸಿಲುಕಿಕೊಂಡಿದ್ದಾರೆ. ವಿದಾರ್ಥಿಗಳು ಹಲವಾರು ..ಟಿ. ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರವಾಗಿ ಪ್ರಸಿದ್ದವಾಗಿರುವ ಕೋಟಾದಲ್ಲಿ ಕಲಿಯುತ್ತಿದ್ದಾರೆ.
  • ಗುಜರಾತ್: ಗುಜರಾತಿನಲ್ಲಿ ಮತ್ತೆ 196 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 3,744 ಕ್ಕೆ ಜಿಗಿದಿದೆ. ಇವುಗಳಲ್ಲಿ 434  ಪ್ರಕರಣಗಳು ಗುಣಮುಖವಾಗಿವೆ ಮತ್ತು 181 ಮಂದಿ ಮೃತಪಟ್ಟಿದ್ದಾರೆ.
  • ರಾಜಸ್ಥಾನ: ಬುಧವಾರದಂದು ರಾಜಸ್ಥಾನದಲ್ಲಿ ಕೊರೊನಾವೈರಸ್ಸಿನ 29 ಹೊಸ ಪ್ರಕರಣಗಳು ವರದಿಯಾಗಿವೆ ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 2393 ಕ್ಕೇರಿದೆ. ವೈರಸ್ಸಿಗೆ ರಾಜ್ಯದಲ್ಲಿ ಇದುವರೆಗೆ 52 ಸಾವುಗಳು ಸಂಭವಿಸಿವೆ. ಜೈಪುರವೊಂದರಲ್ಲೇ 27 ಸಾವುಗಳಾಗಿವೆ. 781 ಮಂದಿ ರೋಗಿಗಳು ಇದುವರೆಗೆ  ಗುಣಮುಖರಾಗಿದ್ದಾರೆ.
  • ಮಧ್ಯಪ್ರದೇಶ: ಮತ್ತೆ 25 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಮಧ್ಯಪ್ರದೇಶದಲ್ಲಿ ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 2,387ಕ್ಕೆ ಜಿಗಿದಿದೆ.ಇವರಲ್ಲಿ 377 ಮಂದಿ ಗುಣಮುಖರಾಗಿದ್ದಾರೆ. 120 ಮಂದಿ ಮೃತಪಟ್ಟಿದ್ದಾರೆ.
  • ಛತ್ತೀಸಗಢ: ಛತ್ತೀಸಗಢದಲ್ಲಿ ಇಂದಿನವರೆಗೆ ಬರೇ 4 ಆಕ್ಟಿವ್ ಕೋವಿಡ್-19 ಪ್ರಕರಣಗಳಿವೆ. ಇದುವರೆಗೆ ವರದಿಯಾದ 38 ಪ್ರಕರಣಗಳಲ್ಲಿ 34 ಪ್ರಕರಣಗಳು ಗುಣಮುಖವಾಗಿವೆ.
  • ಗೋವಾ: ಬರೇ 7 ಪ್ರಕರಣಗಳು ವರದಿಯಾಗಿದ್ದ ಗೋವಾದಲ್ಲಿ ಈಗ ಕೋವಿಡ್ -19 ಯಾವುದೇ  ಸೋಂಕಿತ ವ್ಯಕ್ತಿಯೂ ಇಲ್ಲ.
  • ಅರುಣಾಚಲ ಪ್ರದೇಶ: ಸ್ವೈನ್ ಜ್ವರ ಹರಡುವ ಭೀತಿಯಿಂದಾಗಿ ಇಟಾನಗರ ಜಿಲ್ಲಾಧಿಕಾರಿ ರಾಜಧಾನಿ ವಲಯದಲ್ಲಿ  ಹಂದಿಗಳ ಸಾಗಾಟ ಮತ್ತು ಅವುಗಳ ಮಾಂಸ ಮಾರಾಟವನ್ನು ನಿಷೇಧಿಸಿದ್ದಾರೆ
  • ಅಸ್ಸಾಂ: ಕೋವಿಡ್ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಹೊಸ ಕಾರ್ಯವ್ಯೂಹವನ್ನು ಹೊಂದುವುದು ಸಂಕೀರ್ಣ ಸಂಗತಿ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಹೇಳಿದ್ದಾರೆ. ಇದಕ್ಕಾಗಿ ಹಾದಿಯನು ರೂಪಿಸಲು ಆವರು ಅಸ್ಸಾಂನ ಕಾಲೇಜು ಪ್ರಾಂಶುಪಾಲರ ಮಂಡಳಿ ಮತ್ತು ಅಸ್ಸಾಂ ಕಾಲೇಜು ಶಿಕ್ಷಕರ ಸಂಘಟನೆಗಳು, ಪ್ರಧಾನ ಕಾರ್ಯದರ್ಶಿ ಮತ್ತು ಶಿಕ್ಷಣ ಆಯುಕ್ತರ ಜೊತೆ ಸಭೆ ನಡೆಸಿದರು.
  • ಮಣಿಪುರ: ಕರ್ಫ್ಯು ಮತ್ತು ಲಾಕ್ ಡೌನ್ ಆದೇಶ ಉಲ್ಲಂಘನೆಗಾಗಿ ನಿನ್ನೆ 784 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತು 1 ಲಕ್ಷ ರೂಪಾಯಿಯಷ್ಟು ದಂಡವನ್ನು ವಿಧಿಸಲಾಗಿದೆ.
  • ಮಿಜೋರಾಂ: ಮಿಜೋರಾಂನ   693 ಮಂದಿ ನಾಲ್ಕು ಈಶಾನ್ಯ ರಾಜ್ಯಗಳಲ್ಲಿ ಸಿಲುಕಿ ಹಾಕಿ ಕೊಂಡಿದ್ದು, ಅವರನ್ನು ಏಪ್ರಿಲ್ 30 ರಿಂದ ಮೇ 2 ರೊಳಗೆ ಮಿಜೋರಾಂಗೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ವಾಹನಗಳು ಇಲ್ಲದವರಿಗೆ ಸರಕಾರ ವಾಹನಗಳನ್ನು ವ್ಯವಸ್ಥೆ ಮಾಡಲಿದೆ.
  • ಮೇಘಾಲಯ: ಶಿಲ್ಲಾಂಗಿನ ಎನ್...ಜಿ.ಆರ್..ಎಚ್.ಎಂ.ಎಸ್. ನಲ್ಲಿ ಟೆಲಿ ವೈದ್ಯಕೀಯ ಸೌಲಭ್ಯಕ್ಕೆ ಮುಖ್ಯಮಂತ್ರಿ ಚಾಲನೆ. ಕೋವಿಡ್ ಸಂಬಂಧಿತ ಪ್ರಕರಣಗಳು ಮತ್ತು ಇತರ ಸಾಮಾನ್ಯ ಪ್ರಕರಣಗಳಲ್ಲಿ ದೂರ ಪ್ರದೇಶದ ಜನತೆಗೆ ಆನ್ ಲೈನ್ ಮೂಲಕ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಸವಲತ್ತು ಇದರಿಂದ ಲಭ್ಯ.
  • ನಾಗಾಲ್ಯಾಂಡ್: ಇಂಧನ ದರ ಹೆಚ್ಚಳಕ್ಕೆ ರಾಜ್ಯ ಸರಕಾರದ ನಿರ್ಧಾರ. ಈಗಿರುವ ತೆರಿಗೆ ಮತ್ತು ಮೇಲ್ತೆರಿಗೆಗಳ ಜೊತೆಯಲ್ಲಿ ಕೋವಿಡ್ -19 ಮೇಲ್ತೆರಿಗೆಯನ್ನು ಎಲ್ಲಾ ಇಂಧನ ಉತ್ಪಾದನೆಗಳ ಮೇಲೆ ಜಾರಿ ಮಾಡಲಾಗುವುದು ಎಂದು ಸರಕಾರಿ ಆದೇಶ ಹೇಳಿದೆ.
  • ಸಿಕ್ಕಿಂ: ಹೊಸದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿರುವ ಸಿಕ್ಕಿಂನ ಮಹಿಳೆ ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. ಆಕೆಗೆ ವೈರಸ್ ಎಲ್ಲಿಂದ ತಗಲಿತು ಎಂಬ ಬಗ್ಗೆ ಇದುವರೆಗೆ ಮಾಹಿತಿ ಇಲ್ಲ ಎಂದಿರುವ ಅಸ್ಸಾಂ ಮುಖ್ಯಮಂತ್ರಿ ಆಕೆಗೆ ಸೂಕ್ತ ಚಿಕಿತ್ಸೆ ದೊರೆಯುತ್ತದೆ ಎಂದು ಭರವಸೆ ನೀಡಿರುವುದಲ್ಲದೆ , ಜನತೆ ಭಯ ಭೀತರಾಗಬೇಕಾದ ಅಗತ್ಯ ಇಲ್ಲ ಎಂದಿದ್ದಾರೆ.
  • ತ್ರಿಪುರಾ: ಕೋವಿಡ್ -19 ಕಾರಣಕ್ಕಾಗಿ ಸರಕಾರವು ಎಂ.ಜಿ. ನರೇಗಾ ಕಾಮಗಾರಿಗಳನ್ನು ಝುಮಿಯಾ ಕುಟುಂಬದ ಓರ್ವರಿಗೆ 202 ರೂಪಾಯಿಗಳಂತೆ 6 ದಿನಗಳ ಕಾಲ ನೀಡಲಿದೆ ಅಂದರೆ ಕುಟುಂಬಕ್ಕೆ 1212 ರೂಪಾಯಿಗಳ ಕೆಲಸ ಸಿಗಲಿದೆ.

 

ಪಿ.ಐ.ಬಿ. ವಾಸ್ತವ ಪರಿಶೀಲನೆ

 

***



(Release ID: 1619445) Visitor Counter : 224