ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್ -19 ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ತರಬೇತಿ ಅಕಾಡೆಮಿ ಯಿಂದ ಐ.ಎ.ಎಸ್. ಅಧಿಕಾರಿಗಳಿಗೆ  ಆನ್ ಲೈನ್ ಮೂಲಕದ ತರಬೇತಿ - ಕೇಂದ್ರ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಶ್ಲಾಘನೆ

Posted On: 28 APR 2020 5:14PM by PIB Bengaluru

ಕೋವಿಡ್ -19 ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ತರಬೇತಿ ಅಕಾಡೆಮಿ ಯಿಂದ ..ಎಸ್. ಅಧಿಕಾರಿಗಳಿಗೆ  ಆನ್ ಲೈನ್ ಮೂಲಕದ ತರಬೇತಿ - ಕೇಂದ್ರ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಶ್ಲಾಘನೆ

 

ಈಶಾನ್ಯ ಅಭಿವೃದ್ದಿ ಹಾಗು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) , ಡಾ. ಜಿತೇಂದ್ರ ಸಿಂಗ್ ಅವರು ಇಂದು ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ತರಬೇತಿ ಅಕಾಡೆಮಿಯ (ಎಲ್.ಬಿ.ಎಸ್.ಎನ್...)  ನಿರ್ದೇಶಕರು ಮತ್ತು ಬೋಧಕ ಸಿಬ್ಬಂದಿವರ್ಗದವರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದರು.

ಕೋವಿಡ್ -19 ಸಂಬಂಧಿ ವಿಷಯ ಮತ್ತು ಅಕಾಡೆಮಿ ನಿಭಾಯಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು.. ..ಎಸ್. ತರಬೇತಿ ಪಡೆಯುತ್ತಿರುವ ಅಧಿಕಾರಿಗಳ ಮೊದಲ ಹಂತದ ತರಬೇತಿ ಸಹಿತ ಅಕಾಡೆಮಿಯ ವಿವಿಧ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ  ರೂಪಿಸಲಾಗಿರುವ ಕಾರ್ಯಕ್ರಮಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು. ತರಗತಿಗಳನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿದ್ದು ಅವರ ಕೊಠಡಿಗಳಲ್ಲೇ ಕುಳಿತು ವೀಕ್ಷಿಸಬಹುದು. ಆಹಾರವನ್ನು ಅವರ ಹಾಸ್ಟೆಲುಗಳಿಗೆ ಕಳುಹಿಸಲಾಗುತ್ತಿದೆ, ಪಾತ್ರೆಗಳ ಮತ್ತು ಕೋಣೆಗಳ ಸ್ವಚ್ಚತೆಯನ್ನು ತರಬೇತಿ ಪಡೆಯುತ್ತಿರುವ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ . ಆನ್ ಲೈನ್ ಚರ್ಚೆ, ಅಸೈನ್  ಮೆಂಟ್ ಗಳು ಮತ್ತು ರಚನಾತ್ಮಕವಾಗಿ ರೂಪಿಸಲಾದ ಮಾಹಿತಿಗಳ ಮೂಲಕ ಕೋವಿಡ್ -19 ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಲಾಗುತ್ತಿದೆ ಎಂಬ ಬಗ್ಗೆ ಅವರಿಗೆ ತಿಳಿಸಲಾಯಿತು. ಆಕಾಡೆಮಿ ನಿರ್ದೇಶಕರು, ಜಾಗತಿಕ ಸಾಂಕ್ರಾಮಿಕದಂತಹ ಸ್ಥಿತಿಯಲ್ಲಿ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಸಚಿವರಿಗೆ ತಿಳಿಸಿದರು. ಕೋವಿಡ್ -19 ನಿವಾರಿಸಲು ಅತ್ಯುತಮ ಪದ್ದತಿಗಳನ್ನು ದಾಖಲು ಮಾಡುವ ಅಕಾಡೆಮಿಯ ಉಪಕ್ರಮ, ವಿಪತ್ತು ನಿರ್ವಹಣಾ ಕೇಂದ್ರ, ಆನ್ ಲೈನ್ ಮಾದರಿ, ಮೌಲ್ಯಮಾಪನ / ಪರಾಮರ್ಶೆಗಳ ಮೂಲಕ ಮೊದಲ ಹಂತದ ತರಬೇತಿಯ ಪೂರ್ಣಗೊಳಿಸುವಿಕೆ ಮತ್ತು ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಹಾಗು ಕೋವಿಡ್ -19 ಕ್ಕಾಗಿ ಮೇಲ್ದರ್ಜೆಗೇರಿಸುವಿಕೆ, ವೈದ್ಯಕೀಯ ಮೂಲ ಸೌಕರ್ಯ ಹಾಗಿ ಕೋವಿಡ್ -19 ಕ್ಕಾಗಿ ಅದನ್ನು ಮೇಲ್ದರ್ಜೆಗೇರಿಸುವಿಕೆ , ನಾಗರಿಕ ಸೇವೆಗಳ ಸಂಘಟನೆಯ ರಾಷ್ಟ್ರೀಯ ವಿಪತ್ತು ನೆರವು (ಕರುಣಾ ) ಸ್ಥಳೀಯ ಸಮುದಾಯಗಳನ್ನು ತಲುಪುವಿಕೆ-ಟಿಬೆಟಿಯನ್ , ಸಿ.ಪಿ.ಡಬ್ಯು.ಡಿ. ಕಾರ್ಮಿಕರು ಇತ್ಯಾದಿಗಳ ಬಗ್ಗೆಯೂ ಅವರು ಮಾಹಿತಿ ಒದಗಿಸಿದರು

ಅಕಾಡೆಮಿಯು ತನ್ನ ತರಬೇತಿಯನ್ನು ತಂತ್ರಜ್ಞಾನದ ನವೀನ ಬಳಕೆ ಮತ್ತು ಕಲಿಕಾ ಆಡಳಿತ ವ್ಯವಸ್ಥೆಯ ಮೂಲಕ ಮರುಶೋಧಿಸಿಕೊಂಡಿದೆ. ತರಬೇತಿಯಲ್ಲಿರುವ ಅಧಿಕಾರಿಗಳಿಗೆ ಎಲ್ಲಾ ಮಾಹಿತಿಗಳನ್ನು ಮತ್ತು ಅಸೈನ್ ಮೆಂಟ್ ಗಳನ್ನು ಅದರದ್ದೇ ಆದ ಗ್ಯಾನ್ ಪೋರ್ಟಲ್ ಮೂಲಕ ಒದಗಿಸಲಾಗುತ್ತಿದೆ. ಪ್ರಯತ್ನಗಳ ಬೆಂಬಲಾರ್ಥ ಅದು ಅಂತರ್ಜಾಲ ರೇಡಿಯೋ ಸೌಲಭ್ಯವನ್ನೂ ಅಳವಡಿಸಿಕೊಂಡಿದೆ.

ವಿವಿಧ ಕ್ಲಬ್ ಗಳು ಮತ್ತು ಸೊಸೈಟಿಗಳ ಮೂಲಕ ವಿವಿಧ ಕಾರ್ಯ ಚಟುವಟಿಕೆಗಳನ್ನು, ಸ್ಪರ್ಧೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜ ಸೇವೆಗಳ ಸೊಸೈಟಿಯು ಸ್ವಸಹಾಯ ಗುಂಪುಗಳು ತಯಾರಿಸಿದ ಮುಖಗವಸುಗಳನ್ನು ಖರೀದಿಸುವಲ್ಲಿ ಮತ್ತು ತರಬೇತಿಯಲ್ಲಿರುವ ಅಧಿಕಾರಿಗಳಿಗೆ ವಿತರಿಸುವಲ್ಲಿ ನಿರತವಾಗಿದೆ. ಜಿಲ್ಲಾಡಳಿತದ ಸಹಯೋಗದಲ್ಲಿ ಅಕಾಡೆಮಿಯು ಸುತ್ತಮುತ್ತಲಿನ ಕುಟುಂಬಗಳಿಗೆ ಪಡಿತರ ವಿತರಿಸುವಲ್ಲಿಯೂ ಕೈಜೋಡಿಸಿದೆ. ವಿಪತ್ತು ನಿರ್ವಹಣಾ ಕೇಂದ್ರವು ದೇಶಾದ್ಯಂತ ಕೋವಿಡ್ -19 ನಿರ್ವಹಣೆಯಲ್ಲಿಯ ಅತ್ಯುತ್ತಮ ಪದ್ದತಿಗಳನ್ನು ಸಂಗ್ರಹ ಮಾಡುವುದರಲ್ಲಿ  ನಿರತವಾಗಿದೆ. ನಾಗರಿಕ ಸೇವಾ ಸಂಘಟನೆಯಾದಕರುಣಾಮೂಲಕ ಅಕಾಡೆಮಿಯ ವಿವಿಧ ಬೋಧಕ ಸಿಬ್ಬಂದಿಗಳು ಉಪಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಅಕಾಡೆಮಿಯ ಎಲ್ಲಾ ವಿಭಾಗಗಳೂ ಸಾಮಾಜಿಕ ಅಂತರ ಮತ್ತು ಸ್ವಚ್ಚತೆ ಇತ್ಯಾದಿಗಳಿಗೆ ಸಂಬಂಧಿಸಿ ತಮ್ಮದೇ ಆದ ಎಸ್..ಪಿ.ಗಳನ್ನು ರೂಪಿಸಿವೆ. ಹೊರಗಿನಿಂದ ಬರುವ ಸಿಬ್ಬಂದಿಗಳು ಸಹಿತ ಅಕಾಡೆಮಿಯ ಎಲ್ಲಾ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗದರ್ಶಿಗಳ ಪ್ರಕಾರ ಬೋಧಕ ಸಿಬ್ಬಂದಿಗಳು ತರಬೇತಿ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮತ್ತು ಜಿಲ್ಲಾಡಳಿತದ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆ.

ಅಕಾಡೆಮಿಯು ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ ಡಾ. ಜಿತೇಂದ್ರ ಸಿಂಗ್ ಕೊವಿಡ್-19 ವಿಪತ್ತನ್ನು  ನಿಭಾಯಿಸಲು ಪ್ರಯತ್ನಗಳು ನಡೆಯಲಿವೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು.

***



(Release ID: 1619184) Visitor Counter : 147