ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಕಾಮನ್ ಸರ್ವಿಸ್ ಸೆಂಟರ್ ಗಳ ಮೂಲಕ ಆಧಾರ್ ನವೀಕರಣ ಸೌಲಭ್ಯಕ್ಕೆ ಯು.ಐ.ಡಿ.ಎ.ಐ. ಅನುಮತಿ

Posted On: 28 APR 2020 3:19PM by PIB Bengaluru

ಕಾಮನ್ ಸರ್ವಿಸ್ ಸೆಂಟರ್ ಗಳ ಮೂಲಕ ಆಧಾರ್ ನವೀಕರಣ ಸೌಲಭ್ಯಕ್ಕೆ ಯು..ಡಿ... ಅನುಮತಿ

ನಾಗರಿಕರ ಸೇವೆಯಲ್ಲಿ 20,000 ಕಾಮನ್ ಸರ್ವಿಸ್ ಸೆಂಟರ್ ಗಳು

 

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ಒಂದು ದೊಡ್ಡ ಪರಿಹಾರವಾಗಿ, ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ಅಧೀನದಲ್ಲಿರುವ ಸುಮಾರು 20,000 ಎಸ್‌.ಪಿ.ವಿ (ಕಾಮನ್ ಸರ್ವಿಸ್ ಸೆಂಟರ್)ಗಳಲ್ಲಿ, ಬ್ಯಾಂಕಿಂಗ್ ವ್ಯವಹಾರಕ್ರೂಡೀಕಾರರು/ ವರದಿಗಾರರು (ಬಿಸಿ) ರೀತಿಯಲ್ಲಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯು..ಡಿ..ಐ) ಸಂಸ್ಥೆಯು ತನ್ನ "ಆಧಾರ್ ನವೀಕರಣ" ಸೌಲಭ್ಯವನ್ನು ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಕೇಂದ್ರ ಸಂಪರ್ಕ , ಎಂ..ಐ.ಟಿ.ವೈ ಮತ್ತು ಕಾನೂನು ಮತ್ತು ನ್ಯಾಯ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಸುಮಾರು 20,000 ಸಿ.ಎಸ್.‌ಸಿ.ಗಳು ಈಗ ನಾಗರಿಕರಿಗೆ ಈ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಯುಐಡಿಎಐ ನೀಡಿದ ಸೂಚನೆಗಳ ಪ್ರಕಾರ ಸಿ.ಎಸ್.ಸಿ ವಿ.ಎಲ್.ಇ.ಗಳನ್ನು ತಮ್ಮ ಆಧಾರ್ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಪ್ರಾರಂಭಿಸಬೇಕು ಮತ್ತು ಈ ಸೌಲಭ್ಯವು ಹೆಚ್ಚಿನ ಸಂಖ್ಯೆಯ ಗ್ರಾಮೀಣ ನಾಗರಿಕರಿಗೆ ಆಧಾರ್ ಸೇವೆಗಳನ್ನು ತಮ್ಮ ವಾಸಸ್ಥಳಕ್ಕೆ ಹತ್ತಿರವಾಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಬ್ಯಾಂಕಿಂಗ್ ಸೌಲಭ್ಯಗಳನ್ನು ಹೊಂದಿರುವ ಸಿ.ಎಸ್‌.ಸಿ.ಗಳು ತಮ್ಮ ಅಗತ್ಯ ಮೂಲಸೌಕರ್ಯಗಳನ್ನು ನವೀಕರಿಸಿದ ನಂತರ ಮತ್ತು ಇತರ ಅಗತ್ಯ ಅನುಮೋದನೆಗಳನ್ನು ಪಡೆದ ನಂತರ ಯು..ಡಿ..ಐ ಕೆಲಸ ಪ್ರಾರಂಭಿಸಲು ಜೂನ್ 2020ರನ್ನು ಗಡುವಾಗಿ ನಿಗದಿಪಡಿಸಿದೆ. ಈ ನಿಟ್ಟಿನಲ್ಲಿ ಯು..ಡಿ..ಐ ಅಪೇಕ್ಷಿಸಿದ ತಾಂತ್ರಿಕ ಮತ್ತು ಇತರ ನವೀಕರಣಗಳನ್ನು ತಕ್ಷಣವೇ ಮುಗಿಸಲು ಎಲ್ಲಾ ಬಿ.ಸಿ.ಗಳನ್ನು ಸಿ.ಎಸ್‌.ಸಿ. ಸಂಸ್ಥೆಯ ಸಿ..ಒ ಡಾ.ದಿನೇಶ್ ತ್ಯಾಗಿ ಅವರು ಕೇಳಿಕೊಂಡಿದ್ದಾರೆ, ಇದರಿಂದಾಗಿ ಆಧಾರ್ ನವೀಕರಣ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು.

ಸಿ.ಎಸ್‌.ಸಿ. ಮೂಲಕ ಆಧಾರ್ ನವೀಕರಣ ಕಾರ್ಯಗಳನ್ನು ಪುನರಾರಂಭಿಸಿದ್ದಕ್ಕಾಗಿ ಕೇಂದ್ರ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರಿಗೆ ಧನ್ಯವಾದ ಅರ್ಪಿಸಿದ ಡಾ. ತ್ಯಾಗಿ ಅವರು, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಊಹಿಸಿದಂತೆ ಡಿಜಿಟಲ್ ಇಂಡಿಯಾಗುರಿಗಳನ್ನು ಸಾಧಿಸುವ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸುವುದಾಗಿ ಹೇಳಿದರು.

ಕೊವಿಡ್-19 ಹರಡುವುದನ್ನು ತಡೆಗಟ್ಟಲು ವಿಧಿಸಲಾದ ಕಠಿಣ ಲಾಕ್‌ ಡೌನ್ ನಿರ್ಬಂಧಗಳ ಸಮಯದಲ್ಲಿ ಸಿ.ಎಸ್‌.ಸಿ ಮೂಲಕ ಆಧಾರ್ ನವೀಕರಣ ಸೇವೆಗಳ ಪ್ರಾರಂಭ ಮಾಡಿರುವುದು ಗ್ರಾಮೀಣ ಜನತೆಗೆ ಒಂದು ದೊಡ್ಡ ಪರಿಹಾರವಾಗಿದೆ. ಆಧಾರ್ ನವೀಕರಿಸಲು ಈ 20,000 ಹೆಚ್ಚುವರಿ ಕೇಂದ್ರಗಳು ಲಭ್ಯವಿರುವುದರಿಂದ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಳಕೆದಾರರು ಈ ಕೆಲಸಕ್ಕಾಗಿ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿನ ಆಧಾರ್ ಕೇಂದ್ರಗಳಿಗೆ ಇನ್ನು ಮುಂದೆ ಭೇಟಿ ನೀಡಬೇಕಾಗಿಲ್ಲ.

***


(Release ID: 1619033) Visitor Counter : 289