PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 27 APR 2020 6:57PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

  • ಇದುವರೆಗೆ 6,184 ಜನರು ಗುಣಮುಖರಾಗಿದ್ದಾರೆ, ಗುಣಮುಖರಾಗುವ ದರ 22.17 %
  • ನಿನ್ನೆಯಿಂದೀಚೆಗೆ , 1396 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಕೋವಿಡ್ -19 ದೃಢೀಕೃತ ಪ್ರಕರಣಗಳ ಸಂಖ್ಯೆ 27,892. ಕಳೆದ 24 ಗಂಟೆಗಳಲ್ಲಿ 48 ಹೊಸ ಸಾವುಗಳು ಸಂಭವಿಸಿವೆ.
  • ಸರಕಾರವು ಅನುಕೂಲಕರಗೊಳಿಸುವ ನೀತಿಗೆ ಆದ್ಯತೆ ನೀಡುತ್ತಿದೆ ಮತ್ತು  ಅವಶ್ಯಕ ವಸ್ತುಗಳ ಪೂರೈಕೆ ಸರಪಳಿಯಲ್ಲಿರುವ ಅಡೆ ತಡೆಗಳನ್ನು ನಿವಾರಿಸುತ್ತಿದೆ.
  • ಕೋವಿಡ್ -19 ನಿಭಾವಣೆಗಾಗಿ ಮುಂದಿನ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಪ್ರಧಾನ ಮಂತ್ರಿ ಸಂವಾದ.
  • ಲಾಕ್ ಡೌನ್ ನಿಂದಾಗಿ ಧನಾತ್ಮಕ ಫಲಿತಾಂಶಗಳು ಬಂದಿವೆ ; ಕಳೆದ ಒಂದೂವರೆ ತಿಂಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
  • ಸರಕಾರಿ ಸಿಬ್ಬಂದಿಗಳ ನಿವೃತ್ತಿ ವಯೋಮಿತಿಯನ್ನು ಇಳಿಕೆ ಮಾಡುವ ಯಾವುದೇ ಕ್ರಮ ಇಲ್ಲ ಎಂದು ಡಾ. ಜಿತೇಂದ್ರ ಸಿಂಗ್ ಸ್ಪಷ್ಟೋಕ್ತಿ
  • ತ್ವರಿತ ಪ್ರತಿಕಾಯ (ಆಂಟಿ ಬಾಡಿ) ಪರೀಕ್ಷಾ ಕಿಟ್ ಗಳ ದರದ ಸುತ್ತಲಿನ ವಿವಾದಕ್ಕೆ .ಸಿ.ಎಂ.ಆರ್. ಸ್ಪಷ್ಟನೆ; ಸರಕಾರಕ್ಕೆ ಒಂದು ರೂಪಾಯಿ ಕೂಡಾ ನಷ್ಟವಾಗುವುದಿಲ್ಲ ಎಂದು ಹೇಳಿಕೆ.
  • 8 ಈಶಾನ್ಯ ರಾಜ್ಯಗಳಲ್ಲಿ 5 ರಾಜ್ಯಗಳು ಕೊರೊನಾ ಮುಕ್ತ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತು  ಅಪ್ ಡೇಟ್

ಇದುವರೆಗೆ 6,184 ಜನರು ಗುಣಮುಖರಾಗಿದ್ದಾರೆ. ಗುಣಮುಖರಾಗುವ ದರ 22.17%. ನಿನ್ನೆಯಿಂದೀಚೆಗೆ 1396 ಹೊಸ ಪ್ರಕರಣಗಳ ಹೆಚ್ಚಳ ವರದಿಯಾಗಿದೆ. ಭಾರತದಲ್ಲಿ ಇದುವರೆಗೆ ಒಟ್ಟು 27,892 ಜನರಲ್ಲಿ  ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 48 ಹೊಸ ಸಾವುಗಳು ವರದಿಯಾಗಿವೆ. ಒಟ್ಟು ಸಾವಿಗೀಡಾದವರ ಸಂಖ್ಯೆ 872. ದೇಶದಲ್ಲಿ  ಈ ಮೊದಲು ಪ್ರಕರಣಗಳು ಇದ್ದ 16 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಒಟ್ಟು 85 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಆಹಾರ ಮತ್ತು ಔಷಧಿಗಳನ್ನು ಸಾಗಾಟ ಮಾಡುವ ಟ್ರಕ್ ಗಳ ಶೇಕಡಾವಾರು ಪ್ರಮಾಣ ಮಾರ್ಚ್ 30 ಕ್ಕೆ 46% ಇದ್ದದ್ದು, 2020ರ ಏಪ್ರಿಲ್ 25 ಕ್ಕೆ 76 % ಗೇರಿದೆ. ಇದೇ ಅವಧಿಯಲ್ಲಿ ರೈಲ್ವೇ ರೇಕುಗಳ ಸಾಗಾಟದ ಶೇಕಡಾವಾರು ಪ್ರಮಾಣ 67 % ನಿಂದ 76 % ಗೇರಿದೆ.   ಬಂದರುಗಳಲ್ಲಿ ಸರಕು ನಿರ್ವಹಣೆ 70 % ನಿಂದ 87 % ಗೇರಿದೆ. ಪ್ರಮುಖ ಮಂಡಿಗಳ ಕಾರ್ಯಾಚರಣೆ ಪ್ರಮಾಣದಲ್ಲಿ 61% ನಿಂದ 79% ಗೆ ಹೆಚ್ಚಳವಾಗಿದೆ. ಸರಕಾರಿ ಏಜೆನ್ಸಿಗಳು ,ಎನ್.ಜಿ.ಒ.ಗಳು ಮತ್ತು ಕೈಗಾರಿಕೆಗಳು ದಿನಂಪ್ರತಿ 1.5 ಕೋಟಿ ಜನರಿಗೆ ಬೇಯಿಸಿದ ಆಹಾರವನ್ನು ಒದಗಿಸುತ್ತಿವೆ. ಸರಕಾರವು ಈಗ ಸುಲಭಗೊಳಿಸುವ ನೀತಿಯತ್ತ ಗಮನ ಹರಿಸುತ್ತಿದೆ ಮತ್ತು ಅವಶ್ಯಕ ಸಾಮಗ್ರಿಗಳ ಪೂರೈಕೆ ಸರಪಳಿಯಲ್ಲಿಯ ಅಡೆ ತಡೆಗಳನ್ನು ನಿವಾರಿಸುತ್ತಿದೆ. ತಳಮಟ್ಟದಲ್ಲಿಯ ನಿರ್ದಿಷ್ಟ ಅಡೆ ತಡೆಗಳನ್ನು ನಿವಾರಿಸುತ್ತಿದೆ ಹಾಗು ಪೂರೈಕೆ ವಾರಿಯರ್ ಗಳ ಉತ್ತಮ ಪದ್ದತಿಗಳನ್ನು ಪ್ರಚುರಪಡಿಸುತ್ತಿದೆ, ಪ್ರಮುಖ ಸೂಚ್ಯಂಕಗಳ ಮೇಲೆ ನಿಗಾ ಇರಿಸಿದೆ. 

ವಿವರಗಳಿಗೆ: https://pib.gov.in/PressReleseDetail.aspx?PRID=1618839

ಕೋವಿಡ್ -19 ನಿಭಾಯಿಸುವ ಮುಂದಿನ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಪ್ರಧಾನ ಮಂತ್ರಿ ಸಂವಾದ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿ  ಕೋವಿಡ್ -19 ರಿಂದಾಗಿ ಉದ್ಭವಿಸುತ್ತಿರುವ ಪರಿಸ್ಥಿತಿ ಮತ್ತು ಈ  ಜಾಗತಿಕ ಸಾಂಕ್ರಾಮಿಕ ನಿಭಾಯಿಸಲು ಮುಂದಿನ ಯೋಜನೆಗಳ ಬಗ್ಗೆ ಸಮಾಲೋಚನೆ ಮಾಡಿದರು. ದೇಶವು ಕಳೆದ ಒಂದೂವರೆ ತಿಂಗಳಲ್ಲಿ ಲಾಕ್ ಡೌನ್ ನಿಂದಾಗಿ ಧನಾತ್ಮಕ ಫಲಿತಾಂಶ ಪಡೆದಿದೆ , ಮತ್ತು ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದರು. ಭಾರತದ ಜನಸಂಖ್ಯೆ ಹಲವು ದೇಶಗಳ ಜನಸಂಖ್ಯೆಯ ಮೊತ್ತದಷ್ಟಿದೆ , ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಪರಿಸ್ಥಿತಿ ಮಾರ್ಚ್ ತಿಂಗಳ ಆರಂಭದ ವೇಳೆಗೆ ಒಂದೇ ರೀತಿ ಇತ್ತು. ಆದರೆ ಸಕಾಲಿಕ ಕ್ರಮದಿಂದಾಗಿ ಭಾರತವು ಹಲವು ಜನರನ್ನು ರಕ್ಷಿಸಲು ಸಮರ್ಥವಾಯಿತು ಎಂದವರು ಹೇಳಿದರು. ಆದಾಗ್ಯೂ ವೈರಸ್ಸಿನ ಅಪಾಯ ಬಹಳ ದೂರವೇನೂ ಹೋಗಿಲ್ಲ, ಸತತ ನಿಗಾ ಬಹಳ ಮುಖ್ಯ ಎಂದು ಅವರು ಮುಂಜಾಗರೂಕತೆಯನ್ನು ಹೇಳಿದರು. ಹವಾಮಾನದಲ್ಲಿಯ ಬದಲಾವಣೆ, ಬೇಸಿಗೆಯ ಮತ್ತು ಮುಂಗಾರು ಆರಂಭ ಗೊಂಡಾಗ ಅನಾರೋಗ್ಯ ಈ ಋತುಮಾನದಲ್ಲಿ ಬರುವ ಸಾಧ್ಯತೆ ಇದೆ. ಮುಂದಿನ ವ್ಯೂಹವನ್ನು ರಚಿಸಿಕೊಳ್ಳುವಾಗ ಈ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ಅವರು ಮುಖ್ಯಮಂತ್ರಿಗಳನ್ನು ಕೋರಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618668

ತ್ವರಿತ ಪ್ರತಿಕಾಯ ಪರೀಕ್ಷೆ ದರಗಳ ಸುತ್ತ ಎದ್ದಿರುವ ವಿವಾದದ ವಸ್ತು ಸ್ಥಿತಿ

ಕೋವಿಡ್ -19  ರ ವಿರುದ್ದ ಹೋರಾಡಲು ಪರೀಕ್ಷೆ ಒಂದು ಅತ್ಯಂತ ನಿರ್ಣಾಯಕ ಶಸ್ತ್ರ. ಮತ್ತು ಐ.ಸಿ.ಎಂ.ಆರ್. ಪರೀಕ್ಷೆಯನ್ನು ಹೆಚ್ಚಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.ಇದಕ್ಕೆ ಕಿಟ್ ಗಳ ಖರೀದಿ ಮತ್ತು ಅವುಗಳನ್ನು ರಾಜ್ಯಗಳಿಗೆ ಪೂರೈಸುವುದು ಅಗತ್ಯ. ಈ ಖರೀದಿಯನ್ನು ಈ ಕಿಟ್ ಗಳಿಗೆ ಜಾಗತಿಕವಾಗಿ ಅತ್ಯಂತ ಬೇಡಿಕೆ ಇದ್ದ ಸಂದರ್ಭದಲ್ಲಿ ಖರೀದಿಸಲಾಗಿದೆ. ಮತ್ತು ಇವುಗಳ ಖರೀದಿಗೆ ಹಲವಾರು ರಾಷ್ಟ್ರಗಳು ತಮ್ಮ ಪೂರ್ಣ ಇಚ್ಚಾಶಕ್ತಿ, ಹಣಕಾಸು ಮತ್ತು ರಾಜತಾಂತ್ರಿಕತೆಯನ್ನು ಬಳಸುತ್ತವೆ.  ಅವುಗಳ ಸಾಧನೆಯ ವೈಜ್ಞಾನಿಕ ಮೌಲ್ಯಮಾಪನ , ಅವುಗಳ ಪ್ರಶ್ನಾರ್ಹತೆ ಜೊತೆಗೆ ಕಡಿಮೆ ಸಾಧನೆಯ ಇನ್ನೊಂದು ಮಾದರಿಯ ತುಲನೆ ಮಾಡಿ ಬೇಡಿಕೆ ಆದೇಶವನ್ನು ರದ್ದು ಮಾಡಲಾಗಿದೆ. ಐ.ಸಿ.ಎಂ.ಆರ್. ಈ ಪೂರೈಕೆಗಳಿಗೆ ಸಂಬಂಧಿಸಿ ಯಾವುದೇ ಪಾವತಿ ಮಾಡಿಲ್ಲ. ಅವಶ್ಯ ಪ್ರಕ್ರಿಯೆಗಳನ್ನು ಪಾಲಿಸಿರುವುದರಿಂದ  (100 % ಮುಂಗಡ ಪಾವತಿಯೊಂದಿಗೆ ಖರೀದಿಸಲು ಮುಂದಾಗದೆ) ಭಾರತ ಸರಕಾರವು ಒಂದು ರೂಪಾಯಿಯನ್ನು ಕೂಡಾ ಕಳೆದುಕೊಳ್ಳುವುದಿಲ್ಲ.

ವಿವರಗಳಿಗೆ: https://pib.gov.in/PressReleseDetail.aspx?PRID=1618845

ಸರಕಾರದ ಸಿಬ್ಬಂದಿಗಳ ನಿವೃತ್ತಿ ವಯೋಮಿತಿಯನ್ನು ಕಡಿಮೆ ಮಾಡುವ ಯಾವುದೇ ಕ್ರಮ ಇಲ್ಲ. ಅಂತಹ ಪ್ರಸ್ತಾಪ ಚರ್ಚೆಗೆ ಬಂದೂ ಇಲ್ಲ.ಅಥವಾ ಸರಕಾರದ ಯಾವ ಮಟ್ಟದಲ್ಲೂ ಬಗ್ಗೆ ಯತ್ನಗಳು ನಡೆದಿಲ್ಲ: ಡಾ. ಜಿತೇಂದ್ರ ಸಿಂಗ್

ಸರಕಾರಿ ಸಿಬ್ಬಂದಿಗಳ ನಿವೃತ್ತಿ ವಯೋಮಿತಿಯನ್ನು 50 ವರ್ಷಕ್ಕೆ ಇಳಿಸಲು ಸರಕಾರ ಪ್ರಸ್ತಾಪ ಮಂಡಿಸಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಬಲವಾಗಿ ತಳ್ಳಿ ಹಾಕಿರುವ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ನಿವೃತ್ತಿ ವಯೋಮಿತಿಯನ್ನು ಇಳಿಸುವ ಯಾವುದೇ ಪ್ರಸ್ತಾಪ ಇಲ್ಲ , ಅಂತಹ  ಯಾವುದೇ ಪ್ರಸ್ತಾಪ ಚರ್ಚೆಯಾಗಿಯೂ ಇಲ್ಲ, ಮತ್ತು ಸರಕಾರದ ಯಾವುದೇ ಮಟ್ಟದಲ್ಲಿ ಆ ಚಿಂತನೆ /ಯತ್ನಗಳು ನಡೆದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618843

ಕೋವಿಡ್ -19 ಕ್ಕೆ ನಿಯೋಜಿತ  ಆಸ್ಪತ್ರೆ: ...ಎಂ.ಸ್. ಟ್ರೌಮಾ ಕೇಂದ್ರದಲ್ಲಿ ಸಿದ್ದತಾ ಸ್ಥಿತಿಯ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿದ ಸಚಿವ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರಿಂದು ಹೊಸದಿಲ್ಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್  ಟ್ರೂಮಾ ಕೇಂದ್ರ (ಜೆ.ಪಿ. ಎನ್.ಎ.ಟಿ.ಸಿ.) ಕ್ಕೆ ಭೇಟಿ ನೀಡಿ ಕೋವಿಡ್ -19 ನಿಭಾಯಿಸಲು ಆಲ್ಲಿಯ ಸಿದ್ದತಾ ಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಕೋವಿಡ್ -19 ರೋಗಿಗಳಿಗೆ ನಿಗದಿತವಾಗಿರುವ ಕೋವಿಡ್ ಆಸ್ಪತ್ರೆಯಲ್ಲಿ ಒದಗಿಸಲಾಗುವ ಚಿಕಿತ್ಸೆ ಮತ್ತು ನೆರವನ್ನು ಸ್ವತಹ ವೀಕ್ಷಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618842

ಎಂಟು ಈಶಾನ್ಯ ರಾಜ್ಯಗಳಲ್ಲಿ ಐದು ರಾಜ್ಯಗಳು ಕೊರೊನಾ ಮುಕ್ತ, ಉಳಿದ ಮೂರು ರಾಜ್ಯಗಳಲ್ಲಿ  ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಸೇರ್ಪಡೆಯಾಗಿಲ್ಲ: ಡಾ. ಜಿತೇಂದ್ರ ಸಿಂಗ್

ಎಂಟು ಈಶಾನ್ಯ ರಾಜ್ಯಗಳ ಪೈಕಿ ಐದು ರಾಜ್ಯಗಳು ಕೊರೊನಾ ಮುಕ್ತವಾಗಿವೆ. ಉಳಿದ ಮೂರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಸೇರ್ಪಡೆಯಾಗಿಲ್ಲ. ಶಿಲ್ಲಾಂಗ್ ನಲ್ಲಿಯ ಈಶಾನ್ಯ ಮಂಡಳಿಯ (ಎನ್.ಇ.ಸಿ.) ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸರಕಾರಿ ಮಂಡಳಿಗಳು ಹಾಗು ಪಿ.ಎಸ್.ಯು.ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಗತಿ ಪರಿಶೀಲನೆ  ಮಾಡಿದ ಬಳಿಕ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಈ ವಿಷಯವನ್ನು ಪ್ರಕಟಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618843

ವರದಿಯನ್ನು ಎಂದೂ ಕೇಳಿಲ್ಲ, ತನಿಖೆ ನಡೆಸಲಾಗುತ್ತಿದೆ: ಸಿ.ಬಿ.ಡಿ.ಟಿ.

ಸಾಮಾಜಿಕ ಮಾಧ್ಯಮಗಳಲ್ಲಿ ಕೋವಿಡ್ -19  ಪರಿಸ್ಥಿತಿ ನಿಭಾವಣೆಗೆ ಸಂಬಂಧಿಸಿ ಕೆಲವು ಐ.ಆರ್.ಎಸ್. ಅಧಿಕಾರಿಗಳ ಸಲಹೆ ಕೇಳಲಾಗಿದೆ ಎಂಬ ವರದಿಗಳು ಚಲಾವಣೆಯಲ್ಲಿವೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿ.ಬಿ.ಡಿ.ಟಿ.) ಇಂದು ಹೇಳಿದೆ. ಸಿ.ಬಿ.ಡಿ.ಟಿ.ಯು ಎಂದೂ ಐ.ಆರ್.ಎಸ್. ಸಂಘಟನೆಯನ್ನಾಗಲೀ ಅಥವಾ ಈ ಅಧಿಕಾರಿಗಳನ್ನಾಗಲೀ ಅಂತಹ  ವರದಿ ತಯಾರಿಸಲು ಹೇಳಿಲ್ಲ ಎಂದು ಸ್ಪಷ್ಟೋಕ್ತಿಗಳಲ್ಲಿ ಹೇಳಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618836

ಕೋವಿಡ್ ಗಾಗಿರುವ ರೈಲ್ವೇ ತುರ್ತು ಘಟಕ ದಿನನಿತ್ಯ 13,000 ವಿಚಾರಣೆ, ಕೋರಿಕೆಗಳು ಮತು ಸಲಹೆಗಳನ್ನು ಸ್ವೀಕರಿಸಿ ನಿಭಾಯಿಸುತ್ತಿದೆ

ಭಾರತೀಯ ರೈಲ್ವೇಯು ಪ್ರಯಾಣಿಕರ ಹಿತಾಸಕ್ತಿ ಮತ್ತು ಎಲ್ಲಾ ವಾಣಿಜ್ಯಿಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು 360 ಡಿಗ್ರಿ ಕ್ರಮಗಳನ್ನು ಖಾತ್ರಿಪಡಿಸಿದೆ ಮತ್ತು ಕೋವಿಡ್ -19 ರಿಂದಾಗಿರುವ ಲಾಕ್ ಡೌನ್ ಅವಧಿಯಲ್ಲಿ  ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಸದಾ ಚಾಲನೆಯಲ್ಲಿಡಲೂ ಕ್ರಮಗಳನ್ನು ಅನುಷ್ಟಾನಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618639

ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳ ಜೊತೆ ಶ್ರೀ ನಿತಿನ್ ಗಡ್ಕರಿ ಸಂವಾದ, ಕೋವಿಡ್ -19 ಜಾಗತಿಕ ಸಾಂಕ್ರಾಮಿಕವನ್ನು ಅವಕಾಶವನ್ನಾಗಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸುವುದಕ್ಕೆ ಕರೆ

ಸಚಿವರು ಯು.ಕೆ, ಕೆನಡ, ಸಿಂಗಾಪುರ, ಮತ್ತು ಇತರ ಯುರೋಪಿಯನ್ ದೇಶಗಳ ಮತ್ತು ಆಸ್ಟ್ರೇಲಿಯಾದಂತಹ ವಿದೇಶಗಳಲ್ಲಿರುವ ಭಾರತೀಯ ಸಾಗರೋತ್ತರ ವಿದ್ಯಾರ್ಥಿಗಳ ಜೊತೆ “ಜಾಗತಿಕ ಸಾಂಕ್ರಾಮಿಕಕ್ಕೆ ಭಾರತದ ಪ್ರತಿಕ್ರಿಯೆ: ಭಾರತದ ಹಾದಿ” ಶೀರ್ಷಿಕೆಯಲ್ಲಿ ಸಂವಾದ ನಡೆಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದ ಮುಂದಿರುವ ಹಾದಿ ಎಂದರೆ  ಧನಾತ್ಮಕವಾಗಿ ಉಳಿದುಕೊಳ್ಳುವುದು ಮತ್ತು ಈ ಪ್ರತಿಕೂಲ ಪರಿಸ್ಥಿತಿಯನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಲು ದೃಢವಾದ ಪ್ರಯತ್ನಗಳನ್ನು ಮಾಡುವುದಾಗಿದೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618823

ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಲೈಫ್ ಲೈನ್ ಉಡಾನ್ ಅಡಿಯಲ್ಲಿ ದೇಶಾದ್ಯಂತ 684 ಟನ್ನಿಗೂ ಅಧಿಕ ಅವಶ್ಯಕ ವಸ್ತುಗಳು ಮತ್ತು ವೈದ್ಯಕೀಯ ಸರಕಿನ ಪೂರೈಕೆ

“ಲೈಫ್ ಲೈನ್ ಉಡಾನ್” ವಿಮಾನಗಳನ್ನು ಕೋವಿಡ್ -19 ರ ವಿರುದ್ದ ಭಾರತ ನಡೆಸುತ್ತಿರುವ ಯುದ್ದವನ್ನು ಬೆಂಬಲಿಸಿ ದೇಶದ ವಿವಿಧೆಡೆಗಳ ದುರ್ಗಮ ಪ್ರದೇಶಗಳಿಗೆ ಅವಶ್ಯಕ ವೈದ್ಯಕೀಯ ಸರಕು ಸಾಗಾಟ ಮಾಡಲು  ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಏರಿಂಡಿಯಾ, ಅಲಯೆನ್ಸ್ ಏರ್ , ಐ.ಎ.ಎಫ್, ಮತ್ತು ಖಾಸಗಿ ಕ್ಯಾರಿಯರ್ ಗಳ 383 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇಂದಿನವರೆಗೆ ಸಾಗಾಟ ಮಾಡಲಾದ ಸರಕಿನ ಪ್ರಮಾಣ ಸುಮಾರು 684.08 ಟನ್ನುಗಳು . ಒಟ್ಟು ಕ್ರಮಿಸಿದ ವಾಯು ದೂರ  3,76,952 ಕಿಲೋ ಮೀಟರುಗಳು.  ಜಮ್ಮು ಮತ್ತು ಕಾಶ್ಮೀರ , ಲಡಾಖ್, ದ್ವೀಪಗಳು ಮತ್ತು ಈಶಾನ್ಯ ವಲಯಕ್ಕೆ ಸಂಕೀರ್ಣ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸಲು ಪವನ ಹಂಸ ಲಿಮಿಟೆಡ್ ಸಹಿತ ಹೆಲಿಕಾಪ್ಟರು ಸೇವೆಗಳನ್ನು ಬಳಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618837

ಕೋವಿಡ್ -19 ವಿರುದ್ದದ ಹೋರಾಟದಲ್ಲಿ ..ಎಫ್. ಬೆಂಬಲ

ಭಾರತೀಯ ವಾಯು ಪಡೆಯು  (ಐ.ಎ.ಎಫ್.) ಪ್ರಸ್ತುತ ಜಾರಿಯಲ್ಲಿರುವ ನೊವೆಲ್ ಕೊರೊನಾ ವೈರಸ್ ಜಾಗತಿಕ ಸಾಂಕ್ರಾಮಿಕದಲ್ಲಿ ಭಾರತ ಸರಕಾರಕ್ಕೆ ಎದುರಾಗುತ್ತಿರುವ ಆವಶ್ಯಕತೆಗಳನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಐ.ಎ.ಎಫ್. ದೇಶದೊಳಗೆ  ವೈದ್ಯಕೀಯ ಸಾಮಗ್ರಿಗಳು ಮತ್ತು ಪಡಿತರವನ್ನು ಸಾಗಿಸುವ ಹಾಗು ವೈದ್ಯಕೀಯ ಸಿಬ್ಬಂದಿಗಳನ್ನು ಕರೆದೊಯ್ಯುವ ಕೆಲಸವನ್ನು ಮುಂದುವರೆಸಿದೆ. ಈ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲು ಅದು ರಾಜ್ಯ ಸರಕಾರಗಳು ಮತ್ತು ಬೆಂಬಲದ ಏಜೆನ್ಸಿಗಳನ್ನು ಸೂಕ್ತ ಸಲಕರಣೆಗಳೊಂದಿಗೆ ಸಿದ್ದಗೊಳಿಸಲು ನೆರವಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618838

 

ಪಿ..ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

  • ಪಂಜಾಬ್: ಸರಕಾರಿ ಏಜೆನ್ಸಿಗಳು ಮತ್ತು ಖಾಸಗಿ ವರ್ತಕರು ಪಂಜಾಬಿನಲ್ಲಿ 6,79,220 ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದ್ದಾರೆ. ಕಾರ್ಖಾನೆ ಕಾರ್ಮಿಕರ ಸುರಕ್ಷೆ ಮತ್ತು ಕ್ಷೇಮವನ್ನು ಖಾತ್ರಿಗೊಳಿಸಲು ಆರೋಗ್ಯ ಇಲಾಖೆಯು ಕೆಲಸದ ಸ್ಥಳದಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯವನ್ನು ಕಾಪಾಡಲು , ಕೊರೋನಾ ವೈರಸ್ ಹರಡುವುದನ್ನು ತಡೆಯುವ ವಿಶಾಲ ಉದ್ದೇಶದೊಂದಿಗೆ ವಿವರವಾದ ಸಲಹಾ ಸೂಚಿಯನ್ನು ಹೊರಡಿಸಿದೆ. ಸಿಬ್ಬಂದಿಗಳು ಆರೋಗ್ಯ ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿರುವ ಸಲಹಾ ಸೂಚಿಯು ಯಾವುದೇ ಸೋಂಕು ಸೂಚನೆಗಳು ಕಂಡು ಬಂದರೆ ಮುಂಚಿತವಾಗಿ ಚಿಕಿತ್ಸೆ ಪಡೆಯಲು ಸ್ವಯಂ ವರದಿ ಮಾಡಿಕೊಳ್ಳಬಹುದು ಎಂದೂ ಅವರಿಗೆ ತಿಳಿಸಿದೆ. ಕೋವಿಡ್ -19 ಕ್ಕೆ ಸಂಬಂಧಿಸಿ ವಸ್ತು ಸ್ಥಿತಿಯನ್ನು ಪರಿಶೀಲಿಸದೆ ವದಂತಿಗಳನ್ನು ಹರಡುವಲ್ಲಿ ನಿರತರಾಗಬಾರದು ಎಂದು ಅದರಲ್ಲಿ ತಿಳಿಸಲಾಗಿದೆ.
  • ರಿಯಾ: ರಾಜ್ಯ ಸರಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಕೋವಿಡ್ -19 ರಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ವೃತ್ತಿಪರರು ಮತ್ತು ಮುಂಚೂಣಿ ಕಾರ್ಯಕರ್ತರ ವಿರುದ್ದ ನಡೆಯಬಹುದಾದ ಯವುದೇ ಹಿಂಸಾಕೃತ್ಯಗಳನ್ನು ತಡೆಯಲು ಮತ್ತು ಅವರಿಗೆ ಸುರಕ್ಷೆಯನ್ನು ಖಾತ್ರಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿರುವ ನೋಡಲ್ ಅಧಿಕಾರಿಗಳು ವೈದ್ಯಕೀಯ ವೃತ್ತಿಪರರ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಸುರಕ್ಷಾ ವಿಷಯಗಳನ್ನು ಪರಿಹರಿಸಲು ಸದಾ ಲಭ್ಯರಿರುತ್ತಾರೆ. *ರಾಜ್ಯದಲ್ಲಿ ಒಟ್ಟು 19.26 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು 130707 ಮಂದಿ ಕೃಷಿಕರಿಂದ ಕಳೆದ ಐದು ದಿನಗಳಲ್ಲಿ ಖರೀದಿಸಲಾಗಿದೆ.
  • ಅರುಣಾಚಲ ಪ್ರದೇಶ: ಇಟಾನಗರ ಜಿಲ್ಲಾಧಿಕಾರಿ ಅವರು  ಅಸ್ಸಾಂ ನಿಂದ ಪೂರೈಕೆಯಾಗುವ ತರಕಾರಿ ಬಳಕೆಗೆ ಸುರಕ್ಷಿತ ಎಂದು ಹೇಳಿದ್ದಾರೆ.
  • ಮಣಿಪುರ: ಪ್ರಧಾನ ಮಂತ್ರಿ ಅವರ ಜೊತೆ ವಿ.ಸಿ.ಯಲ್ಲಿ ಪಾಲ್ಗೊಂಡ ಬಳಿಕ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು  ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ರಾಜ್ಯಗಳು ಮತ್ತು ಕೇಂದ್ರದ ಸಂಯುಕ್ತ ಪ್ರಯತ್ನಗಳ ಬಗ್ಗೆ ಚರ್ಚಿಸಿದರು.; ಹಸಿರು ವಲಯದಲ್ಲಿ ಮತ್ತು ಕೋವಿಡ್ 19 ಬಾಧಿಸದ ಜಿಲ್ಲೆಗಳಲ್ಲಿ ಸಡಿಲಿಕೆ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಯಿತು ಎಂದಿದ್ದಾರೆ.
  • ಮೇಘಾಲಯ: ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಅವರು ವಿ.ಸಿ. ಬಳಿಕ ಲಾಕ್ ಡೌನ್ ಮುಂದುವರಿಯುತ್ತದೆ ಎಂದು ಘೋಷಿಸಿದರು. ಆದರೆ ಅಲ್ಲಿ ಇನ್ನಷ್ಟು ಸಡಿಲಿಕೆಗಳು ಇರುತ್ತವೆ ಎಂದೂ ಹೇಳಿದರು. ಅವರಿಂದು ಮೇಘಾಲಯ ಮಾದರಿಯ ತ್ವರಿತ ಪ್ರತಿಕ್ರಿಯಾ ವ್ಯವಸ್ಥೆ ಬಗ್ಗೆ ಪ್ರಧಾನಿಯವರಿಗೆ ಸಲಹೆ ಮಾಡಿದರು . ವ್ಯವಸ್ಥೆಯಲ್ಲಿ ಹೊಸ ಕೋವಿಡ್ -19  ಪ್ರಕರಣ ಪತ್ತೆಯಾದಾಕ್ಷಣವೇ ನಿಗದಿತ ಸಮಯಮಿತಿಯಲ್ಲಿ ಆರೋಗ್ಯ, ಆಡಳಿತ ಮತ್ತು ಪೊಲೀಸ್ ಇಲಾಖೆಗಳಿಂದ  ಪ್ರತಿಕ್ರಿಯೆ ಆರಂಭವಾಗುತ್ತದೆ.
  • ಮಿಜೋರಾಂಪ್ರಧಾನ ಮಂತ್ರಿ ಅವರ ಜೊತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಂಡಿದ್ದ ಮಿಜೋರಾಂ ಮುಖ್ಯಮಂತ್ರಿ  ಅವರು ರಾಜ್ಯ ಸರಕಾರ ಕೈಗೊಂಡ ಕ್ರಮಗಳನ್ನು , ಮಿಜೋರಾಂ ಜನತೆಯ ಶಿಸ್ತು ಮತ್ತು ಸಹಕಾರವನ್ನು ವಿವರಿಸಿದರು. .  
  • ನಾಗಾಲ್ಯಾಂಡ್: ಗಡಿ ಪ್ರದೇಶಗಳಿಗೆ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ರವಾನಿಸಲಾಗಿದೆ ಎಂದು ಸರಕಾರ ಹೇಳಿದೆಯಲ್ಲದೆ  ಎಲ್ಲಾ ಪ್ರವೇಶದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದೂ ತಿಳಿಸಿದೆ
  • ಸಿಕ್ಕಿಂ: ಪಾರದರ್ಶಕತೆಯನ್ನು ಕಾಪಾಡಿಕೊಂಡು ವೈರಸ್ಸನ್ನು ನಿರ್ಬಂಧಿಸಿರುವುದಕ್ಕೆ ಪ್ರಧಾನ ಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಮುಖ್ಯಮಂತ್ರಿಗಳು ತಿಳಿದ್ದಾರೆ. ರಾಜ್ಯವು ನೀಡಿರುವ ಮಾಹಿತಿ ದೇಶದ ಕೆಲವು ಪ್ರದೇಶಗಳಲ್ಲಿ ರೋಗವನ್ನು ನಿರ್ಬಂಧಿಸಲು ಕೇಂದ್ರ ಸರಕಾರಕ್ಕೆ ಉಪಯುಕ್ತ ಎಂದಿದ್ದಾರೆ.
  • ತ್ರಿಪುರಾ: ರಾಜ್ಯದ  ಮಾರುಕಟ್ಟೆಗಳಲ್ಲಿ ಥರ್ಮಲ್ ತಪಾಸಣೆ ಇರುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಮತ್ತು ಮೂತ್ರ ವಿಸರ್ಜನೆ ಮಾಡುವುದನ್ನು ಕೈಬಿಡಬೇಕು ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
  • ಕೇರಳ: ಕೇಂದ್ರ ಗೃಹ ಸಚಿವರ ಜೊತೆ ನಡೆಸಿದ ಟೆಲಿಕಾನ್ಫರೆನ್ಸ್ ನಲ್ಲಿ ಮುಖ್ಯಮಂತ್ರಿಗಳು ಲಾಕ್ ಡೌನನ್ನು ಹಂತ ಹಂತವಾಗಿ ಹಿಂಪಡೆಯಬೇಕು, ಹಾಟ್ ಸ್ಪಾಟ್ ಗಳನ್ನು ಹೊರತುಪಡಿಸಿ ಸಡಿಲಿಕೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾ ವೈರಸ್ಸಿನ ಸಮುದಾಯ ಪ್ರಸರಣ ಕಂಡು ಬಂದಿಲ್ಲ. ಈಡುಕ್ಕಿಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ ಹಾಗು ಕೊಟ್ಟಾಯಂನಲ್ಲಿ  ಕಂಟೈನ್ ಮೆಂಟ್ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ವಿವಿಧ ದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ 1.5 ಲಕ್ಷ ಕೇರಳೀಯರು ರಾಜ್ಯಕ್ಕೆ ಮರಳಲು ಆನ್ ಲೈನ್ ನೊಂದಾವಣೆ ಮಾಡಿಕೊಂಡಿದ್ದಾರೆ. ನಿನ್ನೆಯವರ್ಗೆ ಒಟ್ಟು ದೃಢೀಕೃತ ಪ್ರಕರಣಗಳು 469 , ಅಕ್ಟಿವ್ ಪ್ರಕರಣಗಳು-123, ಗುಣಮುಖರಾದವರು: 342
  • ತಮಿಳುನಾಡು: ಪ್ರಸ್ತುತ ದರದ ಡಿ..ಯನ್ನು 2021 ಜುಲೈ ವರೆಗೆ ರಾಜ್ಯ ಸರಕಾರ ಸ್ಥಗಿತಗೊಳಿಸಿದೆ. .ಎಲ್. ನಗದೀಕರಣವನ್ನು ವರ್ಷದವರೆಗೆ ಮುಂದೂಡಿದೆ. ವಾರದಲ್ಲಿ ರಕ್ತದ ಪ್ಲಾಸ್ಮಾ ಚಿಕಿತ್ಸೆ ಪ್ರಯೋಗಕ್ಕೆ ಕೇಂದ್ರದ ಅನುಮತಿ ದೊರೆಯಬಹುದು ಎಂಬ ನಿರೀಕ್ಷೆಯನ್ನು ತಮಿಳುನಾಡು ಆರೋಗ್ಯ ಸಚಿವರು ವ್ಯಕ್ತಪಡಿಸಿದ್ದಾರೆ. ಮದ್ರಾಸ್ ವೈದ್ಯಕೀಯ ಕಾಲೇಜಿನ ಇನ್ನಿಬ್ಬರು ಪಿ.ಜಿ. ವಿದ್ಯಾರ್ಥಿಗಳು ಕೋವಿಡ್ -19  ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 1885,ಆಕ್ಟಿವ್ ಪ್ರಕರಣಗಳು: 838, ಸಾವುಗಳು_ 24, ಬಿಡುಗಡೆಯಾದವರು 1020, ಗರಿಷ್ಟ ಪ್ರಕರಣಗಳು ಚೆನ್ನೈಯೊಂದರಲ್ಲೇ 523.
  • ಕರ್ನಾಟಕ: 8 ಹೊಸ ಪ್ರಕರಣಗಳು ಇಂದು ದೃಢೀಕೃತಗೊಂಡಿವೆ. ವಿಜಯಪುರ, ಬಾಗಲಕೋಟೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 2 , ಬೆಂಗಳೂರು ಮತ್ತು ಮಂಡ್ಯಾಗಳಲ್ಲಿ ತಲಾ 1 ಪ್ರಕರಣಗಳು. 50 ವರ್ಷದ ಕೋವಿಡ್ -19 ರೋಗಿಯೊಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಪಾದಿಸಲಾಗಿದೆ. ಒಟ್ಟು ಪ್ರಕರಣಗಳು ;511, ಸಾವುಗಳು 19 ಗುಣಮುಖರಾದವರು 188
  • ಆಂಧ್ರ ಪ್ರದೇಶ: ಕಳೆದ 24 ಗಂಟೆಗಳಲ್ಲಿ 80 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1177 ಕ್ಕೇರಿದೆ. ಆಕ್ಟಿವ್ ಪ್ರಕರಣಗಳು 911, ಗುಣಮುಖರಾದವರು: 235, ಸಾವುಗಳ ಸಂಖ್ಯೆ: 31. ಓರ್ವ ಸಿ.ಎಸ್.. ಸಹಿತ 4 ಮಂದಿ ಸಿಬ್ಬಂದಿಗಳು ಮತ್ತು ಆಂಧ್ರ ಪ್ರದೇಶ ರಾಜ್ಯಪಾಲರ ನರ್ಸಿಂಗ್ ಸಿಬ್ಬಂದಿಯಲ್ಲಿ ಕೋವಿಡ್ 19 ಕಂಡುಬಂದಿದೆ; ರಾಜಭವನದ ಎಲ್ಲಾ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕಡಪದ 4 ಪ್ರದೇಶಗಳನ್ನು ಸರಕಾರವು ಕೆಂಪು ವಲಯಗಳೆಂದು  ಘೋಷಿಸಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು: ಕರ್ನೂಲು (292 ) . ಗುಂಟೂರು (237 ) ಕೃಷ್ಣಾ (210 ) , ನೆಲ್ಲೂರು (79  ) ಚಿತ್ತೂರು (73 ) 
  • ತೆಲಂಗಾಣ: ಅಂತರ ಸಚಿವಾಲಯ ಕೇಂದ್ರೀಯ ತಂಡ (.ಸಿ.ಎಂ.ಟಿ.) ವು ರೋಗಿಗಳ ಸಂಪರ್ಕವನ್ನು ಪತ್ತೆ ಹಚ್ಚುವಲ್ಲಿ ತೆಲಂಗಾಣ ಪೊಲಿಸರು ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದೆ. ಮತ್ತು ಕಂಟೈನ್ ಮೆಂಟ್ ವಲಯಗಳಲ್ಲಿ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಈಗಿರುವ ಭದ್ರತಾ ವ್ಯವಸ್ಥೆಯನ್ನು ಮುಂದುವರೆಸುವಂತೆ ಸಲಹೆ ಮಾಡಿದೆ. ಗಚಿಬೌಲಿ ಕ್ರೀಡಾ ಸಂಕೀರ್ಣದ 1500 ಹಾಸಿಗೆಗಳ ವಿಶೇಷ ಕೋವಿಡ್ -19 ಆಸ್ಪತ್ರೆಯನ್ನು ನಿಯೋಜಿತ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಾಗಿಸಲಾಗಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ  1001.
  • ಮಧ್ಯಪ್ರದೇಶ: ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 2,120 ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 175 ಹೊಸ ಪ್ರಕರಣಗಳು ವರದಿಯಾಗಿವೆ. 302 ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ವಿವಿಧ ಆಸ್ಪತ್ರೆಗಳಿಂದ ಬಿಡುಘಡೆಯಾಗಿದ್ದಾರೆ. ಇದುವರೆಗೆ ಗೆ 103 ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ 1,650 ರೋಗಿಗಳ ಆರೋಗ್ಯ ಸ್ಥಿರವಾಗಿದೆ,  35 ರೋಗಿಗಳು ವೆಂಟಿಲೇಟರಿನಲ್ಲಿದ್ದಾರೆ
  • ಗುಜರಾತ್: ರಾಜ್ಯದಲ್ಲಿ ಕೋವಿಡ್ ಗೆಂದೇ ಮೀಸಲಿಟ್ಟ ವಿಶೇಷ ಆಸ್ಪತ್ರೆಗಳಲ್ಲಿ ಒಟ್ಟು61 ಆಸ್ಪತ್ರೆಗಳಲ್ಲಿ 10,500 ಹಾಸಿಗೆಗಳು ಲಭ್ಯ ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯವು ಸಾಕಷ್ಟು ಎಚ್.ಸಿ.ಕ್ಯೂ.ಎಸ್. ಮತ್ತು ಅಝಿಥ್ರೋಮೈಸಿನ್ ಔಷಧಿಗಳ ಸಾಕಷ್ಟು ದಾಸ್ತಾನನ್ನು ಹೊಂದಿದೆ. ಎನ್ 95 ಮತ್ತು 3 ಪದರಗಳ ಮುಖಗವಸುಗಳು ಮತ್ತು ಪಿ.ಪಿ..ಕಿಟ್ ಗಳ ದಾಸ್ತಾನು ಕೂಡಾ ಇದೆ. ಸರಕಾರಿ ಆಸ್ಪತ್ರೆಗಳಲ್ಲಿ 1061ವೆಂಟಿಲೇಟರುಗಳು ಲಭ್ಯ ಇವೆ, ಹಾಗು 1700 ವೆಂಟಿಲೇಟರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇವೆ. ಒಂದು ಸಾವಿರಕ್ಕೂ ಅಧಿಕ ವೆಂಟಿಲೇಟರುಗಳ ಖರೀದಿಗೆ  ರಾಜ್ಯ ಸರಕಾರ  ಮುಂದಾಗಿದೆ.
  • ಮಧ್ಯಪ್ರದೇಶದ 1.10 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಗುಜರಾತಿನಲ್ಲಿ ಗರಿಷ್ಟ ಸಂಖ್ಯೆಯ ಅಂದರೆ 35,000 ಕಾರ್ಮಿಕರು ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 25,000 ಮತ್ತು ರಾಜಸ್ಥಾನದಲ್ಲಿ 15,000 ಕಾರ್ಮಿಕರಿದ್ದಾರೆ. ರಾಜಸ್ಥಾನದಲ್ಲಿ ಕೆಲಸ ಹುಡುಕಿಕೊಂಡಿದ್ದ ಹೆಚ್ಚಿನ ಕಾರ್ಮಿಕರು ಮನೆಗಳಿಗೆ ಮರಳಿದ್ದಾರೆ, ಗುಜರಾತಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾರ್ಮಿಕರು ಮನೆಗಳಿಗೆ ಹಿಂದಿರುಗಲು ಆರಂಭಿಸಿದ್ದಾರೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ವಲಸೆ ಕಾರ್ಮಿಕರನ್ನು ಮನೆಗಳಿಗೆ  ಕಳುಹಿಸುವ ವ್ಯವಸ್ಥೆ ಮಾಡುವ ಕುರಿತಂತೆ ಮಾತುಕತೆ ನಡೆಸುತ್ತಿವೆ.
  • ಮಹಾರಾಷ್ಟ್ರ: ನಗರದ  ಹಲವಾರು ಕಂಟೈನ್ ಮೆಂಟ್ ವಲಯಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಮುಂಬಯಿ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ. ನಗರದಾದ್ಯಂತ ಇರುವ 1,036 ಕಂಟೈನ್ ಮೆಂಟ್ ವಲಯಗಳಲ್ಲಿ 231 ರಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ವರದಿಯಾಗಿಲ್ಲ ಎಂದವರು ಹೇಳಿದ್ದಾರೆ. ಏತನ್ಮಧ್ಯೆ ಪಾಸಿಟಿವ್ ಆಗಿದ್ದ 53 ಪತ್ರಕರ್ತರ ಪೈಕಿ 31 ಮಂದಿಯನ್ನು 24 ಗಂಟೆಗಳಲ್ಲಿ ಎರಡು ಬಾರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಅವರನ್ನು 14 ದಿನಗಳ ಕಾಲ ಗೃಹ ಕ್ವಾರಂಟೈನ್ ನಲ್ಲಿಡಲಾಗಿದೆ.

 

ಪಿ..ಬಿ. ವಾಸ್ತವ ಪರಿಶೀಲನೆ

***

 



(Release ID: 1618846) Visitor Counter : 292