ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್-19 ಪರಿಸ್ಥಿತಿ ಸೃಷ್ಠಿಸಿದ ಹೂಡಿಕೆಯ ವಾತಾವರಣವನ್ನು ಭಾರತದ ಕೃಷಿ-ರಾಸಾಯನಿಕ ಯೋಜನೆಗಳಲ್ಲಿ ಜಂಟಿ ಸಹಯೋಗದ ಹೂಡಿಕೆಯಾಗಿ ಆಕರ್ಷಿಸುವತ್ತ ಎಚ್‌.ಐ.ಎಲ್ ಕಾರ್ಯಾಚರಣೆ

Posted On: 27 APR 2020 5:52PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಸದಾನಂದ ಗೌಡ ಅವರ ಸಲಹೆಯನ್ನು ತೆಗೆದುಕೊಳ್ಳುತ್ತಾ ಕೋವಿಡ್-19 ಪರಿಸ್ಥಿತಿ ಸೃಷ್ಠಿಸಿದ ಹೂಡಿಕೆಯ ವಾತಾವರಣವನ್ನು ಭಾರತದ ಕೃಷಿ-ರಾಸಾಯನಿಕ ಯೋಜನೆಗಳಲ್ಲಿ ಜಂಟಿ ಸಹಯೋಗದ ಹೂಡಿಕೆಯಾಗಿ ಆಕರ್ಷಿಸುವತ್ತ ಎಚ್..ಎಲ್ ಕಾರ್ಯಾಚರಣೆ

ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಎಚ್..ಎಲ್ (ಭಾರತ) ಉತ್ತಮ ಕಾರ್ಯಕ್ಷಮತೆಯನ್ನು ತೋರಿಸುತ್ತಿದೆ

 

ಭಾರತೀಯ ಕಾರ್ಪೊರೇಟ್ಗಳು ವಿಶೇಷವಾಗಿ ತಮ್ಮ ಸಚಿವಾಲಯದ ಅಧೀನದಲ್ಲಿರುವ ಪಿ.ಎಸ್.ಯು.ಗಳು ಕೋವಿಡ್-19 ಪ್ರತಿಕೂಲತೆಯನ್ನು ವಿದೇಶದಿಂದ ಹೂಡಿಕೆಗಳನ್ನು ಆಕರ್ಷಿಸುವ ಅವಕಾಶವಾಗಿ ಪರಿವರ್ತಿಸಲು ಪ್ರಯತ್ನಿಸಬೇಕು" ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಸಲಹೆ ನೀಡಿದ್ದಾರೆ. ಅವರ ನಿರ್ದೇಶನದ ಮೇರೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ನೂತನ ಪ್ರಯತ್ನವನ್ನು ಕೈಗೊಂಡಿದೆ. ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾಗುವ ಅಡೆತಡೆಗಳನ್ನು ನಿವಾರಿಸಲು ಜಾಗತಿಕ ಉದ್ಯಮಗಳೊಂದಿಗೆ ಜಂಟಿ ಸಹಯೋಗದ ಹೂಡಿಕೆ ಅನ್ವೇಷಿಸುವ ಮೂಲಕ ಕಾರ್ಯಕ್ಷಮತೆಯನ್ನು ಬಲಪಡಿಸಲು ಕೇಂದ್ರ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಸೂಚಿಸಿದೆ. ಕೇಂದ್ರ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ತನ್ನ ಪಿ.ಎಸ್.ಯು.ಗಳನ್ನು ಸುಗಮವಾಗಿ ನಡೆಸಲು, ನೂತನ ಉಪಕ್ರಮಗಳನ್ನು ತೆಗೆದುಕೊಂಡಿದೆ.

ಸಚಿವರ ಸಲಹೆಯ ಮೇರೆಗೆ, ಇಲಾಖೆಯ ಅಡಿಯ ಸಿ.ಪಿ.ಎಸ್.ಯು ಆಗಿರುವ ಎಚ್..ಎಲ್ ತನ್ನ ವ್ಯಾಪಾರ ಪ್ರದೇಶವನ್ನು ವಿಸ್ತರಿಸಲು ಮುಂದಾಗಿದೆ. ಗುತ್ತಿಗೆ ಉತ್ಪಾದನೆ ಅಥವಾ ಪ್ಲ್ಯಾನ್-ಆನ್-ಲೀಸ್ ವ್ಯವಸ್ಥೆ ಸೇರಿದಂತೆ ಎಚ್..ಎಲ್ನೊಂದಿಗೆ ವ್ಯವಹಾರಕ್ಕಾಗಿ ಮತ್ತು ಭಾರತದಲ್ಲಿ ಹೂಡಿಕೆಗಾಗಿ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ / ನಿಯೋಗಗಳಿಗೆ ಆಯಾ ದೇಶಗಳಲ್ಲಿನ ಆಸಕ್ತ ಕೃಷಿ-ರಾಸಾಯನಿಕ ತಯಾರಕರನ್ನು ಆಹ್ವಾನಿಸಲು ಪ್ರಸ್ತಾಪಗಳನ್ನು ಇಲಾಖೆ ಕಳುಹಿಸಿದೆ.

ಕೋವಿಡ್ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದರೂ, ಇತ್ತೀಚಿನ ಕಾರ್ಯಕ್ಷಮತೆಯ ದೃಷ್ಟಿಯಿಂದ ದೇಶದ ವಿವಿಧ ಭಾಗಗಳಲ್ಲಿ ಆರೋಗ್ಯ ವಿಭಾಗಗಳಲ್ಲಿ ಡಿ.ಡಿ.ಟಿ, ಮತ್ತು ಕೃಷಿ ವಿಭಾಗಗಳಲ್ಲಿ ಬೀಜಗಳು ಹಾಗೂ ಕೀಟನಾಶಕಗಳಂತಹ ರಾಸಾಯನಿಕ ಅಗತ್ಯ ವಸ್ತುಗಳ ಪೂರೈಕೆಯನ್ನು ಎಚ್..ಎಲ್ ಮಾಡುತ್ತಿದೆ.

ಕೋವಿಡ್-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ಇರುವುದರಿಂದಾಗಿ ಎಚ್..ಎಲ್ ಘಟಕಗಳ ಉತ್ಪಾದನೆಯಲ್ಲೂ ಪರಿಣಾಮ ಬೀರಿದೆ, ಆದರೆ ಈಗ ಏಪ್ರಿಲ್ 24, 2020 ರಂದು ಕೊನೆಗೊಂಡ ತಿಂಗಳ ಕೊನೆಯ ವಾರದಲ್ಲಿ ಸಂಸ್ಥೆ ಉತ್ತಮ ಮಾರಾಟದ ಕಾರ್ಯಕ್ಷಮತೆಯನ್ನು ತೋರಿಸಿದೆ. ಹಾಗೂ 37.99 ಮೆಟ್ರಿಕ್ ಟನ್ ಕೃಷಿ-ರಾಸಾಯನಿಕಗಳನ್ನು ಮಾರಾಟ ಮಾಡಿದೆ, ಅಲ್ಲದೆ 97 ಮೆಟ್ರಿಕ್ ಟನ್ ಡಿ.ಡಿ.ಟಿ.ಯನ್ನು ರವಾನಿಸಿದೆ, ಜೊತೆಗೆ, ಪೆರು ದೇಶಕ್ಕೆ 80% ಡ್ಲ್ಯೂ.ಪಿ. 10 ಮೆ.ಟನ್ ಮ್ಯಾಂಕೋಜೆಬ್ ರಫ್ತು ಆದೇಶವನ್ನು ಕಾರ್ಯಗತಗೊಳಿಸಿದೆ. ಲೋಕಸ್ಟ್ ಕಂಟ್ರೋಲ್ ಕಾರ್ಯಕ್ರಮಕ್ಕಾಗಿ ಮಾಲಾಥಿಯನ್ ಟೆಕ್ನಿಕಲ್ ಪೂರೈಕೆಗಾಗಿ ಕೃಷಿ ಸಚಿವಾಲಯದೊಂದಿಗೆ ಹಂಚಿಕೊಂಡಿರುವ ಒಪ್ಪಂದವನ್ನೂ ಎಚ್..ಎಲ್ ಸಂಸ್ಥೆ ಪೂರ್ತಿಗೊಳಿಸಿದೆ.

***



(Release ID: 1618844) Visitor Counter : 117