ಹಣಕಾಸು ಸಚಿವಾಲಯ

ವರದಿ ಕೇಳಿಲ್ಲ, ತನಿಖೆಯ ವಿಚಾರಣೆಯನ್ನು ಪ್ರಾರಂಭಿಸಲಾಗುತ್ತಿದೆ: ಸಿ.ಬಿ.ಡಿ.ಟಿ

Posted On: 26 APR 2020 8:16PM by PIB Bengaluru

ವರದಿ ಕೇಳಿಲ್ಲ, ತನಿಖೆಯ ವಿಚಾರಣೆಯನ್ನು ಪ್ರಾರಂಭಿಸಲಾಗುತ್ತಿದೆ: ಸಿ.ಬಿ.ಡಿ.ಟಿ

 

ಕೊವಿಡ್ -19 ಪರಿಸ್ಥಿತಿಯನ್ನು ನಿಭಾಯಿಸಲು ಕೆಲವು .ಆರ್.ಎಸ್. ಅಧಿಕಾರಿಗಳು ನೀಡಿದ ಸಲಹೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿವೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿ.ಬಿ.ಡಿ.ಟಿ) ಇಂದು ತಿಳಿಸಿದೆ.

ಅಂತಹ ವರದಿಯನ್ನು ತಯಾರಿಸಲು .ಆರ್.ಎಸ್. ಅಸೋಸಿಯೇಷನ್ ಅನ್ನು ಅಥವಾ ಅಧಿಕಾರಿಗಳನ್ನು ಸಿ.ಬಿ.ಡಿ.ಟಿ ಎಂದಿಗೂ ಕೇಳಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಚೇರಿಯ ಅಧಿಕೃತ ವಿಷಯಗಳ ಕುರಿತು, ತಮ್ಮ ವೈಯಕ್ತಿಕ ಅಭಿಪ್ರಾಯಗಳು ಮತ್ತು ಸಲಹೆಗಳೊಂದಿಗೆ ಸಾರ್ವಜನಿಕವಾಗಿ ಸಂವಹನಕ್ಕೆ ಹೋಗುವ ಮೊದಲು, ಅಧಿಕಾರಿಗಳು ಯಾವುದೇ ಅನುಮತಿಯನ್ನು ಕೋರಿಲ್ಲ, ಹಾಗೂ ಇದು ಅಸ್ತಿತ್ವದಲ್ಲಿರುವ ನೀತಿ ನಿಯಮಗಳ ಉಲ್ಲಂಘನೆಯಾಗಿದೆ. ವಿಷಯದಲ್ಲಿ ಅಗತ್ಯ ತನಿಖಾ ವಿಚಾರಣೆ ಆರಂಭಿಸಲಾಗುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಆಕ್ಷೇಪಾರ್ಹ ವರದಿಯು, ಸಿ.ಬಿ.ಡಿ.ಟಿ/ ಹಣಕಾಸು ಸಚಿವಾಲಯದ ಅಧಿಕೃತ ಅಭಿಪ್ರಾಯಗಳನ್ನು ಯಾವುದೇ ರೀತಿಯಲ್ಲಿ ಪ್ರತಿಬಿಂಬಿಸುವುದಿಲ್ಲ ಎಂದು ಪ್ರಕಟಣೆ ಮೂಲಕ ಸ್ಪಷ್ಟಪಡಿಸಲಾಗಿದೆ.

***(Release ID: 1618836) Visitor Counter : 12