ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೊವಿಡ್-19 ನಿಯಂತ್ರಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಆಧಾರಿತ ತಾಂತ್ರಿಕ ಪರಿಹಾರ ಮತ್ತು ಉತ್ಪನ್ನಗಳ ಜೊತೆಗೆ ಸಿ.ಎಸ್.ಐ.ಆರ್. ಸಂಸ್ಥೆ ಹ್ಯಾಂಡ್ ಸ್ಯಾನಿಟೈಸರ್, ಸಾಬೂನು ಮತ್ತು ಸೋಂಕು ನಿವಾರಕಗಳನ್ನು ಒದಗಿಸುತ್ತಿದೆ

Posted On: 25 APR 2020 4:11PM by PIB Bengaluru

ಕೊವಿಡ್-19 ನಿಯಂತ್ರಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಆಧಾರಿತ ತಾಂತ್ರಿಕ ಪರಿಹಾರ ಮತ್ತು ಉತ್ಪನ್ನಗಳ ಜೊತೆಗೆ ಸಿ.ಎಸ್..ಆರ್. ಸಂಸ್ಥೆ ಹ್ಯಾಂಡ್ ಸ್ಯಾನಿಟೈಸರ್, ಸಾಬೂನು ಮತ್ತು ಸೋಂಕು ನಿವಾರಕಗಳನ್ನು ಒದಗಿಸುತ್ತಿದೆ

 

ಕೊರೊನವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟವು ನಿಯಮಿತವಾಗಿ ಕೈ ತೊಳೆಯುವುದರೊಂದಿಗೆ ಪ್ರಾರಂಭವಾಗುತ್ತದೆ. ಇದು ರಕ್ಷಣೆಯ ಪ್ರಮುಖ ಮುಂಚೂಣಿ ಕಾರ್ಯವಾಗಿ ಹೊರಹೊಮ್ಮಿದೆ. ಆಲ್ಕೋಹಾಲ್-ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳು ಸೂಕ್ಷ್ಮಜೀವಿಗಳ ರಕ್ಷಣಾತ್ಮಕ ಹೊರಗಿನ ಪ್ರೋಟೀನ್ಗಳನ್ನು ಹಾಳುಗೆಡಹುವ ಮತ್ತು ಅವುಗಳ ಹೊರ ಪೊರೆಗಳನ್ನು ಕರಗಿಸುವ ಮೂಲಕ ವೈರಸ್ಗಳನ್ನು ಕೊಲ್ಲುತ್ತವೆ. ಆದಾಗ್ಯೂ, ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದಂತೆ, ಕೈ ನೈರ್ಮಲ್ಯದ ಸ್ಯಾನಿಟೈಸರ್ಗಳ ಅತಿಯಾದ ಖರೀದಿಯಿಂದಾಗಿ ಉಗ್ರಾಣಗಳ ಸಂಗ್ರಹದಿಂದ ಶೀಘ್ರದಲ್ಲೇ ಎಲ್ಲವೂ ಖಾಲಿಯಾಯಿತು, ಹಾಗೂ ನಕಲಿ, ಕಳಪೆಗುಣಮಟ್ಟದ ಮತ್ತು ಸಂಶಯಾಸ್ಪದ ಹ್ಯಾಂಡ್ ಸ್ಯಾನಿಟೈಸರ್ಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿದವು.

ಸಾರ್ಸ್ - ಕೊವ್ - 2 ವೈರಸ್ ವಿರುದ್ಧ ರಕ್ಷಣೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವು ಪ್ರಮುಖವಾಗಿ ಮುಂಚೂಣಿಯಲ್ಲಿದ್ದ ಅಂಶಗಳು ಎಂದು ಅರಿತಿರುವ ಸಿ.ಎಸ್..ಆರ್. ಲ್ಯಾಬ್ಗಳು ತಕ್ಷಣವೇ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳ ಆಧಾರದ ಮೇಲೆ ಸುರಕ್ಷಿತ, ರಾಸಾಯನಿಕ ಮುಕ್ತ ಮತ್ತು ಆಲ್ಕೊಹಾಲ್ ಆಧಾರಿತ ಪರಿಣಾಮಕಾರಿ ಕೈ ನೈರ್ಮಲ್ಯದ ಸ್ಯಾನಿಟೈಸರ್ಗಳು ಮತ್ತು ಸೋಂಕು ನಿವಾರಕಗಳನ್ನು ತಯಾರಿಸಿದೆ.

"ದೇಶವು ಎದುರಿಸುತ್ತಿರುವ ಕೆಲವು ಸವಾಲು, ಸಮಸ್ಯೆಗಳಿಗೆ ಅತ್ಯಾಧುನಿಕ ವಿಜ್ಞಾನದ ಆಧಾರದ ಮೇಲೆ ಯಾವಾಗಲೂ ತಾಂತ್ರಿಕ ಪರಿಹಾರಗಳನ್ನು ಸಿ.ಎಸ್..ಆರ್. ಒದಗಿಸಿದೆ. ಉತ್ತಮ ವೈಜ್ಞಾನಿಕ ಅನುಭವದ ನಮ್ಮ ಪ್ರಯೋಗಾಲಯಗಳು ಕೊವಿಡ್-19 ಅನ್ನು ಎದುರಿಸುವಲ್ಲಿ ಔಷಧಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಅದೇ ಸಮಯದಲ್ಲಿ, ಸಾಂಕ್ರಾಮಿಕ ರೋಗದ ನಂತರ ದಿನಗಳ ದೇಶದ ನಾಗರಿಕರ ಅಗತ್ಯತೆಗಾಗಿ ಕೈ ಸ್ಯಾನಿಟೈಸರ್ಗಳು, ಸಾಬೂನುಗಳು ಮತ್ತು ಸೋಂಕುನಿವಾರಕಗಳನ್ನು ಒದಗಿಸುವ ಮೂಲಕ ತಕ್ಷಣದ ಪರಿಹಾರವನ್ನು ನೀಡಲು ನಮ್ಮ ಪ್ರಯೋಗಾಲಯಗಳು ಸಿದ್ಧವಾಗಿದೆಎಂದು ಸಿ.ಎಸ್..ಆರ್. ಸಂಸ್ಥೆಯ ಡಿಜಿ. ಡಾ.ಶೇಖರ್ ಸಿ. ಮಾಂಡೆ ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಹರಡಿರುವ ಹಲವಾರು ಸಿ.ಎಸ್..ಆರ್. ಪ್ರಯೋಗಾಲಯಗಳು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಸೋಂಕುನಿವಾರಕಗಳನ್ನು ತಯಾರಿಸಿ ವಿತರಿಸುವ ಮೂಲಕ ದೇಶದ ನಾಗರಿಕರಿಗೆ ತಕ್ಷಣದ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುವ ಪ್ರಯತ್ನಗಳನ್ನು ಪ್ರಾರಂಭಿಸಿದೆ.

  • ಇಲ್ಲಿಯವರೆಗೆ, ಸಿ.ಎಸ್..ಆರ್. ಪ್ರಯೋಗಾಲಯಗಳಲ್ಲಿ ಸುಮಾರು 50,000 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಸೋಂಕುನಿವಾರಕಗಳನ್ನು ಉತ್ಪಾದಿಸಲಾಗಿದೆ ಮತ್ತು ಸಮಾಜದ ವಿವಿಧ ವರ್ಗಗಳಿಗೆ ಸೇರಿದ 1,00,000 ಕ್ಕೂ ಹೆಚ್ಚು ಜನರಿಗೆ ವಿತರಿಸಲಾಗಿದೆ.
  • ಇದಲ್ಲದೆ, ಪೊಲೀಸ್ ಪಡೆ, ಪುರಸಭೆ, ನಿಗಮಗಳು, ವಿದ್ಯುತ್ ಸರಬರಾಜು ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಪಂಚಾಯಿತಿಗಳು ಮತ್ತು ಬ್ಯಾಂಕುಗಳು ಮತ್ತು ಹಲವಾರು ಇತರ ಇಲಾಖೆಗಳ ಸಿಬ್ಬಂದಿಗಳಿಗೆ ಸ್ಯಾನಿಟೈಸರ್ ಮತ್ತು ಸೋಂಕುನಿವಾರಕಗಳನ್ನು ವಿತರಿಸಲು ಸಿ.ಎಸ್..ಆರ್. ಪ್ರಯೋಗಾಲಯಗಳು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಮಾಡಿದೆ.
  • ಸಿ.ಎಸ್..ಆರ್. ಪ್ರಯೋಗಾಲಯಗಳು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳಿಂದ ಪರಿಣಾಮಕಾರಿ, ಸುರಕ್ಷಿತ ಮತ್ತು ಒಳ್ಳೆ ಸ್ಯಾನಿಟೈಸರ್ ಮತ್ತು ಸೋಂಕುನಿವಾರಕಗಳನ್ನು ಅಭಿವೃದ್ಧಿಪಡಿಸಿವೆ. ಉದಾಹರಣೆಗೆ, ಎಚ್.ಪಿ, ಪಾಲಂಪೂರ್ ಮೂಲದ ಸಿ.ಎಸ್..ಆರ್.-ಐಹೆಚ್ಬಿಟಿಯ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳ ಪ್ರಕಾರ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ, ಆದರೆ ಇದು ಪ್ಯಾರಾಬೆನ್ಸ್, ಸಿಂಥೆಟಿಕ್ ಸುಗಂಧ, ಟ್ರೈಕ್ಲೋಸನ್ ಮತ್ತು ಥಾಲೇಟ್ಗಳಂತಹ ರಾಸಾಯನಿಕಗಳನ್ನು ಬಳಸದೆ, ಸಕ್ರಿಯ ಚಹಾ ಪದಾರ್ಥಗಳು, ನೈಸರ್ಗಿಕ ರುಚಿಗಳು ಮತ್ತು ಆಲ್ಕೋಹಾಲ್ ಒಳಗೊಂಡಿರುವ ರಾಸಾಯನಿಕ ರಹಿತ ಸ್ಯಾನಿಟೈಸರ್ ಗಳಾಗಿವೆ.
  • ದೇಶದ ದಕ್ಷಿಣ ಭಾಗದಲ್ಲಿರುವ, ಸಿ.ಎಸ್..ಆರ್.-ಐಐಸಿಟಿ ಸಂಸ್ಥೆಯು ಪ್ರಮಾಣೀಕರಿಸಿದ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜಿಂಗ್ ಜೆಲ್ ತಯಾರಿಸಿದೆ. ಅದರಲ್ಲಿ 800 ಲೀಟರ್ ಅನ್ನು ತೆಲಂಗಾಣ ಪೊಲೀಸ್ ಮತ್ತು ಬೃಹತ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಕಾರ್ಮಿಕರಿಗೆ ವಿತರಿಸಲಾಯಿತು. ಇದಲ್ಲದೆ, ಸಿ.ಎಸ್..ಆರ್.-ಸಿಎಲ್ಆರ್ಐ, ಚೆನ್ನೈ ಮತ್ತು ಸಿ.ಎಸ್..ಆರ್.-ಸಿಇಸಿಆರ್ಐ ಕಾರೈಕುಡಿಗಳು ಸ್ಥಳೀಯ ಜಿಲ್ಲಾಡಳಿತ, ಪುರಸಭೆ, ವೈದ್ಯಕೀಯ ಕಾಲೇಜುಗಳು, ಪೊಲೀಸ್ ಠಾಣೆ ಮತ್ತು ಪಂಚಾಯಿತಿಗಳಲ್ಲಿ ನೂರಾರು ಲೀಟರ್ ಸ್ಯಾನಿಟೈಸರ್ಗಳನ್ನು ವಿತರಿಸಿದವು
  • ಲಖನೌದಲ್ಲಿ, ಹಲವಾರು ಸಿ.ಎಸ್..ಆರ್. ಲ್ಯಾಬ್ಗಳು ಬಹಳ ಸಕ್ರಿಯವಾಗಿವೆ ಮತ್ತು ಸಿ.ಎಸ್..ಆರ್.-ಐಐಟಿಆರ್, ಲಕ್ನೋ 2800 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ತಯಾರಿಸಿದೆ. ಇನ್ಸ್ಟಿಟ್ಯೂಟ್ ಸ್ಯಾನಿಟೈಸರ್ ಘಟಕಗಳನ್ನು ಜಿಲ್ಲಾಡಳಿತ, ರಾಜ್ಯ ಮಿಷನ್ ಆಫ್ ಕ್ಲೀನ್ ಗಂಗಾ (ಎಸ್.ಎಂ.ಸಿ.ಜಿ.), ವಿದ್ಯುತ್ ಸರಬರಾಜು ಸಂಸ್ಥೆ, ಪೊಲೀಸ್ ಆಡಳಿತ, ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿದೆ. ಸಿ.ಎಸ್..ಆರ್.-ಎನ್ಬಿಆರ್ಐ ಗಿಡಮೂಲಿಕೆಗಳ ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ತಂತ್ರಜ್ಞಾನಗಳನ್ನು ದೊಡ್ಡ ಪ್ರಮಾಣದ ಉತ್ಪಾದನೆಗಾಗಿ ಎರಡು ಉದ್ಯಮಿಗಳಿಗೆ ವರ್ಗಾಯಿಸಿದೆ. ಲಕ್ನೋದ ವಿವಿಧ ವಲಯಗಳಲ್ಲಿನ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗೆ 1500 ಲೀಟರ್ ಸ್ಯಾನಿಟೈಸರ್ ಗಳನ್ನು ವಿತರಿಸಿದೆ. ಸಿ.ಎಸ್..ಆರ್.-ಸಿಐಎಎಂಪಿ ತನ್ನ ಲಕ್ನೋ ಮೂಲದ ಪೈಲಟ್ ಯೋಜನೆಯ ಸೌಲಭ್ಯದಲ್ಲಿ ತಯಾರಿಸಿದ 1000 ಬಾಟಲಿಗಳು ಹ್ಯಾಂಡ್ ಸ್ಯಾನಿಟೈಸರ್ (ಹ್ಯಾಂಕೂಲ್), 1000 ಬಾಟಲ್ ಫ್ಲೋರ್ ಸೋಂಕುನಿವಾರಕ (ಸ್ವಾಬೀ) ಮತ್ತು 50 ಲೀಟರ್ ಫ್ಲೋರ್ ಕ್ಲೀನರ್ (ಕ್ಲಿಯಾಂಗೆರ್ಮ್) ಅನ್ನು ಲಕ್ನೋ ನಗರ ನಿಗಮ್ ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ಹಸ್ತಾಂತರಿಸಿದೆ
  • ಈಶಾನ್ಯದಲ್ಲಿ, ಸಿ.ಎಸ್..ಆರ್.-ನೀಸ್ಟ್, ಸುಮಾರು 1300 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಜೋರ್ಹತ್ ವಾಯುಪಡೆಯ ನಿಲ್ದಾಣಕ್ಕೆ ವಿತರಿಸಿದೆ, ಮತ್ತು ಜಿಲ್ಲಾಡಳಿತ, ಜೋರ್ಹತ್ ರೈಲ್ವೆ ನಿಲ್ದಾಣ ಮತ್ತು ಪೊಲೀಸ್ ಠಾಣೆ, .ಎನ್.ಜಿ.ಸಿ ಮತ್ತು ಎಫ್.ಸಿ., ಇಂಫಾಲ್ನಲ್ಲಿನ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಹತ್ತಿರದ ಹಳ್ಳಿಗಳ ಜನರಿಗೆ ಸಹ ವಿತರಿಸಿದೆ.
  • ಜಮ್ಮುವಿನಲ್ಲಿ, ಸಿ.ಎಸ್..ಆರ್. - ಐಐಐಎಂ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ವಾಯುಪಡೆ ನಿಲ್ದಾಣ ಮತ್ತು ಭಾರತೀಯ ಸೇನೆಯ ಸಿಬ್ಬಂದಿಗಳಿಗೆ 1800 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ವಿತರಿಸಿದೆ. ಸಿ.ಎಸ್..ಆರ್.-ಐಐಪಿ, ಡೆಹ್ರಾಡೂನ್ ಸಂಸ್ಥೆಯು ಡೂನ್ ಆಸ್ಪತ್ರೆ, ಪೊಲೀಸ್ ಇಲಾಖೆ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗೆ ಸುಮಾರು 1000 ಲೀಟರ್ ಸ್ಯಾನಿಟೈಸರ್ಗಳನ್ನು ಪೂರೈಸಿದೆ.
  • ಪಶ್ಚಿಮದಲ್ಲಿ, ಭಾವನಗರದ ಸಿ.ಎಸ್..ಆರ್.-ಸಿಎಸ್ಎಂಸಿಆರ್ ಸಂಸ್ಥೆಯ ವಿಜ್ಞಾನಿಗಳು ಭಾವನಗರ ವೈದ್ಯಕೀಯ ಕಾಲೇಜಿಗೆ (ಬಿ.ಎಂ.ಸಿ) ನೈರ್ಮಲ್ಯ ಸಾಧನಗಳನ್ನು ಪೂರೈಸಿದ್ದಾರೆ.
  • ಸಿಎಸ್ಆರ್-ಐಎಂಎಂಟಿ, ಭುವನೇಶ್ವರವು ಆಲ್ಕೋಹಾಲ್ ಆಧಾರಿತ ಮತ್ತು ಸೋಂಕು ನಿರೋಧಕ ಗುಣದ ಸಸ್ಯದ ಸಾರದಿಂದ ಮಾಡಿದ ದ್ರವರೂಪದ ಆರೊಮ್ಯಾಟಿಕ್ ಕೈ-ಒರಸುವ(ರಬ್) ಸೋಂಕು ನಿರೋಧಕ ಕಂಡುಹುಡುಕಿವೆ
  • ಸಾಂಕ್ರಾಮಿಕ ಕೊರೊನಾವೈರಸ್ ವಿರುದ್ಧ ರಕ್ಷಣಾತ್ಮಕ ಕ್ರಮವಾಗಿ ಸಾಬೂನು ಬೇಡಿಕೆ ಹೆಚ್ಚುತ್ತಿರುವುದರಿಂದ, ನೈಸರ್ಗಿಕ ಸಪೋನಿನ್ಗಳೊಂದಿಗೆ ಗಿಡಮೂಲಿಕೆ ಸಾಬೂನುಗಳನ್ನು ಸಹ ಸಿ.ಎಸ್..ಆರ್.-ಐಹೆಚ್ಬಿಟಿ, ಪಾಲಂಪೂರ್ ಅಭಿವೃದ್ಧಿಪಡಿಸಿದೆ. ಗಿಡಮೂಲಿಕೆ ಸಾಬೂನುಗಳ ಸಂಯೋಜನೆಯಲ್ಲಿ ಯಾವುದೇ ಖನಿಜ ತೈಲ, ಎಸ್.ಎಲ್..ಎಸ್ (ಸೋಡಿಯಂ ಲಾರೆಥ್ಸಲ್ಫೇಟ್) ಮತ್ತು ಎಸ್.ಡಿ.ಎಸ್ (ಸೋಡಿಯಂ ಡೋಡೆಸಿಲ್ ಸಲ್ಫೇಟ್) ಇರುವುದಿಲ್ಲ ಮತ್ತು ಪರಿಣಾಮಕಾರಿಯಾದ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆರ್ಧ್ರಕ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ವಾಣಿಜ್ಯ ಉತ್ಪಾದನೆ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಲಭ್ಯವಾಗುವಂತೆ ಹಿಮಾಚಲ ಪ್ರದೇಶ ಮೂಲದ ಎರಡು ಕಂಪನಿಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸಲಾಗಿದೆ.

ಇದಲ್ಲದೆ, ಇತರ ಅನೇಕ ಸಿ.ಎಸ್..ಆರ್. ಪ್ರಯೋಗಾಲಯಗಳು ಸ್ಯಾನಿಟೈಸರ್ಗಳ ದೊಡ್ಡ-ಪ್ರಮಾಣದ ಉತ್ಪಾದನೆಗಾಗಿ ತಮ್ಮ ತಂತ್ರಜ್ಞಾನವನ್ನು ಸ್ಥಳೀಯ ಪ್ರದೇಶಗಳ ಮತ್ತು ಸುತ್ತಮುತ್ತಲಿನ ಎಂ.ಎಸ್.ಎಂ..ಗಳು ಮತ್ತು ಇತರ ಕೈಗಾರಿಕೆಗಳಿಗೆ ವರ್ಗಾಯಿಸಿ ಉತ್ಪಾದಿಸುವಲ್ಲಿ ಯಶಸ್ವಿಯಾಗಿವೆ.

#CSIRFightsCovid19

***



(Release ID: 1618568) Visitor Counter : 167