ನಾಗರೀಕ ವಿಮಾನಯಾನ ಸಚಿವಾಲಯ

ಕೋವಿಡ್ -19 ಸಂಕಷ್ಟದಲ್ಲಿ ವಾಯುಯಾನ ವೃತ್ತಿಪರರು ಮತ್ತು ಭಾಗೀದಾರರ ಶ್ಲಾಘನೀಯ ಪ್ರಯತ್ನಗಳಿಗೆ ಶ್ರೀ ಹರ್ದೀಪ್ ಸಿಂಗ್ ಪುರಿ ಮೆಚ್ಚುಗೆ

Posted On: 24 APR 2020 5:27PM by PIB Bengaluru

ಕೋವಿಡ್ -19 ಸಂಕಷ್ಟದಲ್ಲಿ ವಾಯುಯಾನ ವೃತ್ತಿಪರರು ಮತ್ತು ಭಾಗೀದಾರರ ಶ್ಲಾಘನೀಯ ಪ್ರಯತ್ನಗಳಿಗೆ ಶ್ರೀ ಹರ್ದೀಪ್ ಸಿಂಗ್ ಪುರಿ ಮೆಚ್ಚುಗೆ

ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಲೈಫ್ ಲೈನ್ ಉಡಾನ್ ವಿಮಾನಗಳ ಮೂಲಕ 3,43,635 ಕಿ.ಮೀ . ಕ್ರಮಿಸಿ 591 ಟನ್ನಿಗೂ ಅಧಿಕ ಸರಕು ಸಾಗಾಟ

 

ಲೈಫ್ ಲೈನ್ ಉಡಾನ್ ಮೂಲಕ ದೇಶಾದ್ಯಂತ ನಾಗರಿಕರಿಗೆ ಜೀವ ರಕ್ಷಕ ಔಷಧಿ ಮತ್ತು ಅವಶ್ಯಕ ಸರಕುಗಳನ್ನು ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಪೂರೈಸುವ ಮೂಲಕ ವಾಯುಯಾನ ಕ್ಷೇತ್ರದ ವೃತ್ತಿಪರರು ಮತ್ತು ಭಾಗೀದಾರರು ತೋರಿದ ಶ್ಲಾಘನೀಯ ಪ್ರಯತ್ನಗಳನ್ನು ನಾಗರಿಕ ವಾಯುಯಾನ ಖಾತೆಯ ಪ್ರಭಾರ ಸಹಾಯಕ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಕೊಂಡಾಡಿದ್ದಾರೆ. ಇಂದು ಮಾಡಿರುವ ಟ್ವೀಟೊಂದರಲ್ಲಿ ಅವರು ಲೈಫ್ ಲೈನ್ ಉಡಾನ್ ವಿಮಾನಗಳು ಇಂದಿನವರೆಗೆ 3,43,635 ಕಿಲೋ ಮೀಟರ್ ದೂರವನ್ನು ಕ್ರಮಿಸಿವೆ ಎಂಬುದನ್ನು ಸಚಿವರು ಹಂಚಿಕೊಂಡಿದ್ದಾರೆ. ಏರಿಂಡಿಯಾ, ಅಲಯೆನ್ಸ್ ಏರ್, ..ಎಫ್. ಮತ್ತು ಖಾಸಗಿ ಕ್ಯಾರಿಯರ್ ಗಳ 347 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯಾಚರಿಸಿವೆ. ಇವುಗಳಲ್ಲಿ 206 ವಿಮಾನಗಳನ್ನು ಏರಿಂಡಿಯಾ ಮತು ಅಲಯೆನ್ಸ್ ಏರ್ ಗಳು ನಿರ್ವಹಿಸಿವೆ. ಇಂದಿನವರೆಗೆ 591.66 ಟನ್ ಸರಕನ್ನು ಸಾಗಾಟ ಮಾಡಲಾಗಿದೆ.

2020 ಏಪ್ರಿಲ್ 19-23 ನಡುವೆ ವಿಸ್ತಾರಾವು 7 ಸರಕು ವಿಮಾನಗಳನ್ನು ನಿರ್ವಹಿಸಿದ್ದು 8,989 ಕಿ.ಮಿ. ದೂರ ಕ್ರಮಿಸಿ 20 ಟನ್ ಸರಕನ್ನು ಸಾಗಾಟ ಮಾಡಿದೆ. 2020 ಮಾರ್ಚ್ 24 ರಿಂದ ಏಪ್ರಿಲ್ 23 ವರೆಗೆ ಸ್ಪೈಸ್ ಜೆಟ್ 522 ಸರಕು ವಿಮಾನಗಳನ್ನು ನಿರ್ವಹಿಸಿದೆ. ಅದು 7,94,846 ಕಿ.ಮಿ. ದೂರ ಕ್ರಮಿಸಿ 3993 ಟನ್ ಸರಕನ್ನು ಸಾಗಾಟ ಮಾಡಿದೆ. ಇವುಗಳಲ್ಲಿ 178 ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳು. ಬ್ಲೂ ಡಾರ್ಟ್ 184 ಸರಕು ಸಾಗಣೆ ವಿಮಾನಗಳನ್ನು ನಿರ್ವಹಿಸಿದೆ. 1,87,155 ಕಿ.ಮಿ. ದೂರವನ್ನು ಕ್ರಮಿಸಿ 2957 ಟನ್ ಸರಕನ್ನು 2020 ಮಾರ್ಚ್ 25 ರಿಂದ ಏಪ್ರಿಲ್ 23 ನಡುವೆ ಸಾಗಾಟ ಮಾಡಿದೆ. ಇವುಗಳಲ್ಲಿ 6 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಏಪ್ರಿಲ್ 3 ರಿಂದ 23 ನಡುವೆ ಇಂಡಿಗೋ 37 ಸರಕು ಸಾಗಣೆ ವಿಮಾನಗಳನ್ನು ನಿರ್ವಹಿಸಿದೆ. 48,344 ದೂರವನ್ನು ಕ್ರಮಿಸಿ 101 ಟನ್ ಸರಕನ್ನು ಸಾಗಾಟ ಮಾಡಿದೆ ಇದರಲ್ಲಿ 8 ಅಂತಾರಾಷ್ಟ್ರೀಯ ವಿಮಾನಗಳು ಕೂಡಾ ಸೇರಿವೆ. ಇದರಲ್ಲಿ ವೈದ್ಯಕೀಯ ಪೂರೈಕೆಗಳನ್ನು ಸರಕಾರಕ್ಕೆ ಉಚಿತವಾಗಿ ಪೂರೈಕೆ ಮಾಡಲಾಗಿರುವುದೂ ಸೇರಿದೆ. ದೇಶೀಯ ಸರಕು ನಿರ್ವಾಹಕರು ಸರಕು ವಿಮಾನಗಳನ್ನು ವಾಣಿಜ್ಯಿಕ ಆಧಾರದಲ್ಲಿ ನಿರ್ವಹಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ವಲಯದಲ್ಲಿ ಏರಿಂಡಿಯಾವು 2020 ಏಪ್ರಿಲ್ 23 ರಂದು ಹಾಂಕಾಂಗ್ ಮತ್ತು ಗುವಾಂಗ್ ಝು ಗಳಿಂದ ತಂದ ವೈದ್ಯಕೀಯ ಸರಕಿನ ಪ್ರಮಾಣ 61 ಟನ್. ಇದಲ್ಲದೆ ಬ್ಲೂ ಡಾರ್ಟ್ 2020 ಏಪ್ರಿಲ್ 14 ರಿಂದ ಏಪ್ರಿಲ್ 23 ರವರೆಗೆ ಗುವಾಂಗ್ ಝು ನಿಂದ 86 ಟನ್ ವೈದ್ಯಕೀಯ ಪೂರೈಕೆಗಳನ್ನು ಹೊತ್ತು ತಂದಿದೆ.

***



(Release ID: 1618561) Visitor Counter : 162