ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಸರಕಾರದಿಂದ ಅಂತರ ಸಚಿವಾಲಯ ಕೇಂದ್ರೀಯ ತಂಡಗಳ (ಐ.ಎಂ.ಸಿ.ಟಿ.) ರಚನೆ

Posted On: 24 APR 2020 5:10PM by PIB Bengaluru

ಕೋವಿಡ್-19 ಹರಡುವಿಕೆ ಪರಿಣಾಮಕಾರಿಯಾಗಿ ತಡೆಯುವಲ್ಲಿ ರಾಜ್ಯದ ಪ್ರಯತ್ನಗಳನ್ನು ಒಗ್ಗೂಡಿಸಲು ಹಾಗು ಪರಿಸ್ಥಿತಿಯ ಮೌಲ್ಯಮಾಪನ ಮಾಡಲು ಕೇಂದ್ರ ಸರಕಾರದಿಂದ ಅಂತರ ಸಚಿವಾಲಯ ಕೇಂದ್ರೀಯ ತಂಡಗಳ (.ಎಂ.ಸಿ.ಟಿ.) ರಚನೆ

 

ದೇಶದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಕ್ರಮಗಳ ಹಲವಾರು ಉಲ್ಲಂಘನೆಗಳು ವರದಿಯಾಗಿವೆ. ಇದು ಕೋವಿಡ್ -19 ಹರಡುವ ಅಪಾಯವನ್ನು, ಗಂಭೀರ ಆರೋಗ್ಯ ಅಪಾಯವನ್ನೂ ತಂದಿಟ್ಟಿದ್ದು ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾದುದಾಗಿದೆ. ಮುಂಚೂಣಿ ಆರೋಗ್ಯ ರಕ್ಷಣಾ ವೃತ್ತಿಪರರ ಮೇಲೆ ಹಿಂಸೆ, ಪೊಲಿಸ್ ಸಿಬ್ಬಂದಿಗಳ ಮೇಲೆ ದಾಳಿ, ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ನಿಯಮಗಳ ಪಾಲನೆಯಲ್ಲಿ ನಿರ್ಲಕ್ಷ ಮತ್ತು ಕ್ವಾರಂಟೈನ್ ಕೇಂದ್ರಗಳ ಸ್ಥಾಪನೆಗೆ ವಿರೋಧ ಇತ್ಯಾದಿಗಳು ಉಲ್ಲಂಘನೆಗಳಲ್ಲಿ ಸೇರಿವೆ.

ಕೇಂದ್ರ ಸರಕಾರವು ಅಂತರ ಸಚಿವಾಲಯ ಕೇಂದ್ರೀಯ ತಂಡಗಳನ್ನು (ಟಿ.ಎಂ.ಸಿ.ಟಿ.ಗಳನ್ನು ) ರಚಿಸಿದೆ. ಗುಜರಾತಿಗೆ ಎರಡು ಮತ್ತು ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಗೆ ( ಮೊದಲು ರಚಿಸಲಾಗಿದ್ದ ಮುಂಬಯಿ-ಪುಣೆ ತಂಡದ ಪ್ರದೇಶವಾರು ವಿಸ್ತೀರ್ಣದ ಜವಾಬ್ದಾರಿಯನ್ನು ವಿಸ್ತರಿಸಲಾಗಿದೆ) ತಲಾ ಒಂದರಂತೆ ತಂಡಗಳು ರಚನೆಯಾಗಿವೆ. ತಂಡಗಳು ಸ್ಥಳದಲ್ಲಿ ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತವೆ ಮತ್ತು ಅವುಗಳ ಪರಿಹಾರಕ್ಕೆ ರಾಜ್ಯ ಅಧಿಕಾರಿಗಳಿಗೆ ಅವಶ್ಯ ನಿರ್ದೇಶನಗಳನ್ನು ನೀಡುತ್ತವೆ ಮತ್ತು ಅವುಗಳ ವರದಿಯನ್ನು ಸಾಮಾನ್ಯ ಸಾರ್ವಜನಿಕರ ವಿಸ್ತಾರ ಹಿತಾಸಕ್ತಿಗಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತವೆ.

ವಿಶೇಷವಾಗಿ ಪ್ರಮುಖ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಅಥವಾ ಉದ್ಭವಿಸುತ್ತಿರುವ ಹಾಟ್ ಸ್ಪಾಟ್ ಗಳಾದಂತಹ ಅಹಮದಾಬಾದ್ ಮತ್ತು ಸೂರತ್ (ಗುಜರಾತ್) ; ಥಾಣೆ (ಮಹಾರಾಷ್ಟ್ರ) , ಹೈದರಾಬಾದ್ (ತೆಲಂಗಾಣ) ಮತ್ತು ಚೆನ್ನೈ (ತಮಿಳು ನಾಡು) ಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ತಂಡಗಳು ಕೋವಿಡ್ -19 ಹರಡುವುದನ್ನು ನಿರ್ಬಂಧಿಸುವಲ್ಲಿ ಕೇಂದ್ರದ ತಜ್ಞತೆಯನ್ನು ಬಳಸಿಕೊಳ್ಳಲಿವೆ ಮತ್ತು ಕೋವಿಡ್ -19 ವಿರುದ್ದ ಹೋರಾಡುವಲ್ಲಿ ರಾಜ್ಯಗಳ ಪ್ರಯತ್ನಗಳನ್ನು ಒಗ್ಗೂಡಿಸಿ ಕಾರ್ಯದಲ್ಲಿ ದಕ್ಷತೆಯನ್ನು ತರಲಿವೆ.

.ಎಂ.ಸಿ.ಟಿ. ಗಳು ಲಾಕ್ ಡೌನ್ ಕ್ರಮಗಳ ಪರಿಪಾಲನೆ ಮತ್ತು ಅನುಷ್ಟಾನ ವಿಪತ್ತು ನಿರ್ವಹಣಾ ಕಾಯ್ದೆ 2005 ಮಾರ್ಗದರ್ಶಿಗಳ ಅನ್ವಯ ಆಗಿದೆಯೇ ಎಂಬುದರ ಸಹಿತ ಜೀವನಾವಶ್ಯಕ ವಸ್ತುಗಳ ಪೂರೈಕೆ ; ಮನೆಯಿಂದ ಹೊರಗೆ ಜನರ ಚಲನ ವಲನ ಸಂದರ್ಭ ಸಾಮಾಜಿಕ ಅಂತರ ಪಾಲನೆ, ಆರೋಗ್ಯ ಮೂಲಸೌಕರ್ಯದ ಸಿದ್ದತೆ, ಆಸ್ಪತ್ರೆ ಸೌಲಭ್ಯಗಳು ಮತ್ತು ಜಿಲ್ಲೆಯಲ್ಲಿ ಮಾದರಿಗಳ ಅಂಕಿ ಅಂಶಗಳು , ಆರೋಗ್ಯ ವೃತ್ತಿಪರರ ಸುರಕ್ಷೆ, ಪರೀಕ್ಷಾ ಕಿಟ್ ಗಳ ಲಭ್ಯತೆ , ಪಿ.ಪಿ..ಗಳು , ಮುಖಗವಸುಗಳು ಮತ್ತು ಇತರ ಸುರಕ್ಷಾ ಸಲಕರಣೆಗಳು ; ಕಾರ್ಮಿಕ ಮತ್ತು ಬಡಜನರ ಪರಿಹಾರ ಶಿಬಿರಗಳಲ್ಲಿಯ ಸ್ಥಿತಿ ಗತಿ ಸಹಿತ ಹಲವಾರು ವಿಷಯಗಳಿಗೆ ಆದ್ಯತೆ ನೀಡಲಿವೆ.

ಒಂದು ವೇಳೆ ಮೇಲೆ ಹೇಳಲಾದ ಉಲ್ಲಂಘನೆಗಳು ಯಾವುದೇ ತಡೆ ಕ್ರಮಗಳಿಲ್ಲದೆ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ /ಉದಯಿಸುತ್ತಿರುವ ಹಾಟ್ ಸ್ಪಾಟ್ ಗಳಲ್ಲಿ ಅಥವಾ ಗುಚ್ಚ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕದ ಆಸ್ಫೋಟ ಸಂಭವಿಸುವ ಸಾಧ್ಯತೆಗಳಿದ್ದಲ್ಲಿ ನಡೆದಿದ್ದರೆ ಅದು ದೇಶದ ಜನತೆಯ ಆರೋಗ್ಯಕ್ಕೆ ಅಪಾಯ ತರಬಲ್ಲದು.

ಸಮಿತಿಗಳನ್ನು ಕೇಂದ್ರ ಸರಕಾರವು 2005 ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 35(1), 35(2)(), 35(2)() ಮತ್ತು 35(2)()ಗಳ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಬಳಸಿ ರಚಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿಯಲ್ಲಿ ಹೊರಡಿಸಲಾದ ಎಂ.ಎಚ್.. ಮಾರ್ಗದರ್ಶಿಗಳಲ್ಲಿ ಹೇಳಲಾದ ಕ್ರಮಗಳಿಗಿಂತಲೂ ಕಠಿಣ ಕ್ರಮಗಳನ್ನು ಹೇರಬಹುದು ಎಂದೂ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಸಲಹೆ ಮಾಡಲಾಗಿದೆ.

ಭಾರತದ ಸುಪ್ರೀಂ ಕೋರ್ಟು ಕೂಡಾ , ತನ್ನ ದಿನಾಂಕ 31.03.2020 ಆದೇಶದಲ್ಲಿ ಎಲ್ಲಾ ರಾಜ್ಯ ಸರಕಾರಗಳು, ಸಾರ್ವಜನಿಕ ಪ್ರಾಧಿಕಾರಗಳು, ಮತ್ತು ದೇಶದ ನಾಗರಿಕರು ಭಾರತ ಸರಕಾರ ಹೊರಡಿಸಿದ ಆದೇಶಗಳನ್ನು ಮತ್ತು ನಿರ್ದೇಶನಗಳನ್ನು ಸಾರ್ವಜನಿಕ ಸುರಕ್ಷೆಯ ದೃಷ್ಟಿಯಿಂದ ಅಕ್ಷರಶಃ ನಿಷ್ಟೆಯಿಂದ ಪಾಲಿಸಬೇಕು ಎಂದು ಹೇಳಿದೆ. ಅಪೆಕ್ಸ್ ನ್ಯಾಯಾಲಯದ ಅಭಿಪ್ರಾಯವನ್ನು ನಿರ್ದೇಶನವೆಂದು ಪರಿಗಣಿಸುವಂತೆ ಎಲ್ಲಾ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ತಿಳಿಸಲಾಗಿದೆ.

.ಎಂ.ಸಿ.ಟಿ.ಗಳು ತಮ್ಮ ಭೇಟಿಯನ್ನು ಶೀಘ್ರವೇ ನೀಡಲಿವೆ.

***


(Release ID: 1618335) Visitor Counter : 269