ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಏಪ್ರಿಲ್ 2019 - ಜನವರಿ 2020 ರಲ್ಲಿ ರೂ. 2.68 ಲಕ್ಷ ಕೋಟಿ ಮೌಲ್ಯದೊಂದಿಗೆ, ಮೊದಲ ಬಾರಿಗೆ ರಫ್ತು ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಉದ್ಯಮವನ್ನು ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಅಭಿನಂದಿಸಿದರು
Posted On:
25 APR 2020 4:44PM by PIB Bengaluru
ಏಪ್ರಿಲ್ 2019 - ಜನವರಿ 2020 ರಲ್ಲಿ ರೂ. 2.68 ಲಕ್ಷ ಕೋಟಿ ಮೌಲ್ಯದೊಂದಿಗೆ, ಮೊದಲ ಬಾರಿಗೆ ರಫ್ತು ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಉದ್ಯಮವನ್ನು ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಅಭಿನಂದಿಸಿದರು
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು ಮೊದಲ ಬಾರಿಗೆ ದೇಶದ ಉನ್ನತ ರಫ್ತು ಕ್ಷೇತ್ರವಾಗಿ ಮಾಡಿದ್ದಕ್ಕಾಗಿ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಉದ್ಯಮ ಕ್ಷೇತ್ರವನ್ನು ಅಭಿನಂದಿಸಿದ್ದಾರೆ. ಜಗತ್ತಿಗೆ ಗುಣಮಟ್ಟದ ರಾಸಾಯನಿಕಗಳನ್ನು ಮತ್ತು ಪೆಟ್ರೋಕೆಮಿಕಲ್ಸ್ ಪೂರೈಸುವ ಮೂಲಕ ರಾಸಾಯನಿಕಗಳನ್ನು ತಯಾರಿಸಿವ ಪ್ರಮುಖ ಜಾಗತಿಕ ಕೇಂದ್ರವನ್ನಾಗಿ ಭಾರತವನ್ನು ಮಾಡಲು ಸಂಪೂರ್ಣ ಬೆಂಬಲದ ಭರವಸೆಯನ್ನು ಸಚಿವರು ನೀಡಿದ್ದಾರೆ.
“ನನ್ನ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ನಿರಂತರ ಪ್ರಯತ್ನಗಳಿಂದಾಗಿ ಈ ಉದ್ಯಮಕ್ಷೇತ್ರವು ಮೊದಲ ಬಾರಿಗೆ ರಫ್ತು ಮಾಡುವ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಬರಲು ಸಾಧ್ಯವಾಗಿದೆ ” ಎಂದು ಈ ಸಾಧನೆಯಲ್ಲಿ ತಮ್ಮ ಇಲಾಖೆ ವಹಿಸಿರುವ ಪ್ರಮುಖ ಪಾತ್ರವನ್ನು ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಟ್ವೀಟ್‌ನಲ್ಲಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ
"ಏಪ್ರಿಲ್ 2019 ರಿಂದ ಜನವರಿ 2020 ರ ಅವಧಿಯಲ್ಲಿ ರಾಸಾಯನಿಕಗಳ ರಫ್ತು ಹಿಂದಿನ ಅವಧಿಗೆ ಹೋಲಿಸಿದರೆ 7.43% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಒಟ್ಟು ರಾಸಾಯನಿಕಗಳ ರಫ್ತು ರೂ. 2.68 ಲಕ್ಷ ಕೋಟಿ ಮೌಲ್ಯವಿದ್ದು, ಇದು ಒಟ್ಟು ರಫ್ತಿನ 14.35% ರಷ್ಟಿದೆ" ಎಂದು ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಮಾಹಿತಿ ನೀಡಿದರು.
***
(Release ID: 1618325)
Visitor Counter : 174