ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಐಐಟಿ ದೆಹಲಯಿಂದ ಕಡಿಮೆ ವೆಚ್ಚದ ಪ್ರೋಬ್- ಫ್ರೀ ಕೋವಿಡ್ 19 ಪತ್ತೆಮಾಡುವ ಪರೀಕ್ಷಾ ಕಿಟ್ ಅಭಿವೃದ್ಧಿ
Posted On:
24 APR 2020 6:31PM by PIB Bengaluru
ಐಐಟಿ ದೆಹಲಿಯು ಕಡಿಮೆ ವೆಚ್ಚದ ಪ್ರೋಬ್- ಫ್ರೀ ಕೋವಿಡ್ 19 ಪತ್ತೆಮಾಡುವ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿ, ಮಹತ್ವದ ಸಾಧನೆ ಮಾಡಿದೆ
ಪ್ರೋಬ್-ಫ್ರೀ ಕೋವಿಡ್-19 ಪತ್ತೆಮಾಡುವ ಪರೀಕ್ಷಾ ಕಿಟ್ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ಐಐಟಿ ದೆಹಲಿಯ ವಿಜ್ಞಾನಿಗಳ ತಂಡವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಸನ್ಮಾನಿಸಿದ್ದಾರೆ
ಪರೀಕ್ಷಾ ಕಿಟ್ ಆರೋಗ್ಯ ಸೇವೆಗಳನ್ನು ಸಶಕ್ತಗೊಳಿಸುತ್ತದೆ ಮತ್ತು ಕೋವಿಡ್ 19 ಎದುರಿಸುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತದೆ: ಮಾನವ ಸಂಪನ್ಮೂಲ ಸಚಿವರು
ಪರೀಕ್ಷಾ ಕಿಟ್, ಐಸಿಎಂಆರ್ ಕೋವಿಡ್-19 ಗಾಗಿ ಅನುಮೋದಿಸಿದ ಮೊದಲ ಪರೀಕ್ಷಾ ಕಿಟ್ ಆಗಿದೆ
ಐಐಟಿ ದೆಹಲಿ ತಯಾರಿಸಿದ ಕೋವಿಡ್ 19 ಪರೀಕ್ಷಾ ಕಿಟ್ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿದೆ - ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್'
ಪ್ರೋಬ್- ಫ್ರೀ ಕೋವಿಡ್ 19 ಪತ್ತೆಮಾಡುವ ಪಿಸಿಆರ್ ಡಯಾಗ್ನೋಸ್ಟಿಕ್ ಕಿಟ್ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿಯ ವಿಜ್ಞಾನಿಗಳ ತಂಡವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಇಂದು ಸನ್ಮಾನಿಸಿದರು. ಕಾರ್ಯದರ್ಶಿ, ಎಂಎಚ್ಆರ್ಡಿ (ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ), ಶ್ರೀ ಅಮಿತ್ ಖರೆ; ಹೆಚ್ಚುವರಿ ಕಾರ್ಯದರ್ಶಿ, ಎಂಎಚ್ಆರ್ಡಿ ಶ್ರೀ ರಾಕೇಶ್ ಸರ್ವಾಲ್; ಐಐಟಿ ದೆಹಲಿಯ ನಿರ್ದೇಶಕ, ಶ್ರೀ ರಾಮ್ಗೋಪಾಲ್ ರಾವ್ ಮತ್ತು ಐಐಟಿ ದೆಹಲಿಯ ವಿಜ್ಞಾನಿಗಳ ತಂಡವು ಪ್ರೊ.ವಿವೇಕಾನಂದ್ ಪೆರುಮಾಳ್ ಮತ್ತು ಪ್ರೊ. ಮನೋಜ್ ಮೆನನ್ ನೇತೃತ್ವದಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.
https://twitter.com/DrRPNishank/status/1253636361896132609?s=19
https://twitter.com/DrRPNishank/status/1253656017059098625?s=19
https://twitter.com/DrRPNishank/status/1253637288019415040?s=19
https://twitter.com/DrRPNishank/status/1253637291060289538?s=19
ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಸಂಪನ್ಮೂಲ ಸಚಿವರು, ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಕೋವಿಡ್-19 ಅನ್ನು ಎದುರಿಸಲು ಮುಂದೆ ಬರಲು ಆಹ್ವಾನಿಸಿದ್ದಾರೆ ಮತ್ತು ಈ ಮಹತ್ವದ ಕರೆಗೆ ಪ್ರತಿಕ್ರಿಯೆಯಾಗಿ, ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಪ್ರಮುಖ ಸಂಸ್ಥೆಗಳು ಮುಂಚೂಣಿಗೆ ಬಂದಿವೆ ಮತ್ತು ಶ್ಲಾಘನೀಯ ಕಾರ್ಯವನ್ನು ಮಾಡಿದ್ದಾರೆ ಮತ್ತು ಕೋವಿಡ್-19 ರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ತಮ್ಮ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ನಾವು ನಮ್ಮ ಸ್ವಂತ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ನಾವು ಪ್ರಪಂಚದ ಇತರರನ್ನು ಅವಲಂಬಿಸಬಾರದು ಎಂದು ನಮ್ಮ ಪ್ರಧಾನಮಂತ್ರಿಯವರು ಯಾವಾಗಲೂ ಆಶಿಸುತ್ತಾರೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದ್ದಾರೆ. ಆದ್ದರಿಂದ, ನಮ್ಮ ಸಂಸ್ಥೆಗಳ, ವಿಶೇಷವಾಗಿ ಐಐಟಿಗಳ ಸಂಶೋಧನೆಯ ಸಾಮರ್ಥ್ಯ ಮತ್ತು ಉನ್ನತ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ 19.ಸಾಂಕ್ರಾಮಿಕ ರೋಗದ ಪ್ರಾರಂಭ ಹಂತದ ಆರಂಭದಿಂದಲೂ ಅವುಗಳ ಸಂಶೋಧನೆ ಮತ್ತು ನಾವೀನ್ಯತೆ ಉಪಕ್ರಮಗಳನ್ನು ಹೆಚ್ಚಿಸಲು ಐಐಟಿಗಳೊಂದಿಗೆ ಸಭೆಗಳು ನಡೆದವು,
ವಿಜ್ಞಾನಿಗಳ ತಂಡವನ್ನು ಸನ್ಮಾನಿಸುವಾಗ, ಶ್ರೀ ಪೋಖ್ರಿಯಾಲ್ ಅವರು, ಮಾನವ ಸಂಪನ್ಮೂಲ ಸಚಿವಾಲಯವು ಕೋವಿಡ್ 19 ಸಾಂಕ್ರಾಮಿಕದಿಂದ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ತರಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವ ತನ್ನ ಎಲ್ಲಾ ಸಂಸ್ಥೆಗಳು, ಸಂಶೋಧಕರು, ಶಿಕ್ಷಣ ತಜ್ಞರು, ಅಧ್ಯಾಪಕ ಸದಸ್ಯರು ಮತ್ತು ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿಗಳ ಬಗ್ಗೆ ಬಹಳ ಹೆಮ್ಮೆಪಡುತ್ತದೆ, ಈ ಸಮಸ್ಯೆಯನ್ನು ನಮ್ಮ ದೇಶ ಮಾತ್ರವಲ್ಲದೆ ಇಡೀ ಮಾನವಕುಲವೇ ಎದುರಿಸುತ್ತಿದೆ.
ಭಾರತದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸುವಲ್ಲಿ ಐಐಟಿ ದೆಹಲಿಯ ಪ್ರಯತ್ನವನ್ನು ಸಚಿವರು ಶ್ಲಾಘಿಸಿದರು. ಕಿಟ್ ಆರೋಗ್ಯ ಸೇವೆಗಳನ್ನು ಸಶಕ್ತಗೊಳಿಸುವುದಲ್ಲದೆ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರವನ್ನು ಬೆಂಬಲಿಸುತ್ತದೆ. ಐಐಟಿ ದೆಹಲಿ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್ (ಕೆಎಸ್ಬಿಎಸ್) ನ ಸಂಶೋಧಕರನ್ನು ಅವರು ಅಭಿನಂದಿಸಿದರು, ಅವರು ಕೋವಿಡ್-19 ಗಾಗಿ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ, ಇದನ್ನು ಈಗ ಐಸಿಎಂಆರ್ ಅನುಮೋದಿಸಿದೆ. ಐಸಿಎಂಆರ್ ನಲ್ಲಿ 100% ನಷ್ಟು ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯೊಂದಿಗೆ ಪರೀಕ್ಷಾ ಕಿಟ್ ಅನ್ನು ಮೌಲ್ಯೀಕರಿಸಲಾಗಿದೆ ಎಂದು ತಿಳಿದು ಅವರು ಸಂತೋಷಪಟ್ಟರು. ಐಐಟಿ ದೆಹಲಿಯು ನೈಜ-ಸಮಯದ ಪಿಸಿಆರ್ ಆಧಾರಿತ ರೋಗನಿರ್ಣಯದ ಮೌಲ್ಯಮಾಪನಕ್ಕಾಗಿ ಐಸಿಎಂಆರ್ ಅನುಮೋದನೆ ಪಡೆದ ಮೊದಲ ಶೈಕ್ಷಣಿಕ ಸಂಸ್ಥೆಯಾಗಿದೆ
ಮಾನವ ಸಂಪನ್ಮೂಲ ಸಚಿವಾಲಯವು ತಮ್ಮ ಸಂಶೋಧನಾ ಉಪಕ್ರಮಗಳಿಗಾಗಿ ಸಂಸ್ಥೆಗಳಿಗೆ ಸಾಧ್ಯವಿರುವ ಎಲ್ಲವನ್ನು ಒದಗಿಸುತ್ತದೆ ಎಂದು ಶ್ರೀ ಪೋಖ್ರಿಯಾಲ್ ಎತ್ತಿ ತೋರಿಸಿದರು. ಈ ರೀತಿಯ ಯೋಜನೆಯು ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನ ಮತ್ತು ಸಂಶೋಧನೆಯನ್ನು ಮೌಲ್ಯೀಕರಿಸುವಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಡಿದ ಪ್ರಯತ್ನಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಶ್ರೀ ಪೋಖ್ರಿಯಾಲ್ ಧನ್ಯವಾದಗಳನ್ನು ಅರ್ಪಿಸಿದರು.
ಐಸಿಎಂಆರ್ ಅನುಮೋದಿಸಿದ ಕೋವಿಡ್-19 ಗಾಗಿ ಇದು ಮೊದಲ ಪ್ರೋಬ್-ಫ್ರೀ ಪರೀಕ್ಷಾ ಕಿಟ್ ಆಗಿದೆ ಮತ್ತು ಇದು ನಿರ್ದಿಷ್ಟ ಮತ್ತು ಕೈಗೆಟುಕುವ ಹೆಚ್ಚಿನ ಥ್ರೋಪುಟ್ ಪರೀಕ್ಷೆಗೆ ಉಪಯುಕ್ತವಾಗಿದೆ ಎಂದು ಶ್ರೀ ರಾಮ್ಗೋಪಾಲ್ ರಾವ್ ಸಚಿವರಿಗೆ ಮಾಹಿತಿ ನೀಡಿದರು. ಪ್ರತಿದೀಪಕ ಶೋಧಕಗಳ (ಫ್ಳೋರಸೆಂಟ್ ಪ್ರೋಬ್) ಅಗತ್ಯವಿಲ್ಲದ ಕಾರಣ ಈ ಪರೀಕ್ಷಾ ಕಿಟ್ಟನ್ನು ಸುಲಭವಾಗಿ ಉದ್ದೇಶಕ್ಕನುಗುಣವಾಗಿ ಬದಲಾವಣೆ ಮಾಡಬಹುದು. ತಂಡವು ಸೂಕ್ತವಾದ ಪಾಲುದಾರರೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಕಿಟ್ನ ಆದಷ್ಟು ಬೇಗ ದೊಡ್ಡ ಪ್ರಮಾಣದ ತಯಾರಿಕೆಯ ಗುರಿಯನ್ನಿಟ್ಟುಕೊಂಡಿದೆ.
ಸಂಶೋಧನಾ ತಂಡದಲ್ಲಿ ಪ್ರಶಾಂತ್ ಪ್ರಧಾನ್ (ಪಿಎಚ್ಡಿ ವಿದ್ವಾಂಸರು), ಅಶುತೋಷ್ ಪಾಂಡೆ (ಪಿಎಚ್ಡಿ ವಿದ್ವಾಂಸರು), ಪ್ರವೀಣ್ ತ್ರಿಪಾಠಿ (ಪಿಎಚ್ಡಿ ವಿದ್ವಾಂಸರು), ಡಾ.ಅಖಿಲೇಶ್ ಮಿಶ್ರಾ, ಡಾ.ಪಾರುಲ್ ಗುಪ್ತಾ, ಡಾ. ಮೆನನ್, ಪ್ರೊ.ಬಿಶ್ವಜಿತ್ ಕುಂದು, ಐಐಟಿ ದೆಹಲಿಯ ಪ್ರೊ. ಜೇಮ್ಸ್ ಗೋಮ್ಸ್ ಇರುವರು
***
(Release ID: 1618089)
Visitor Counter : 209