ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆಯ ವೇಗ ಹೆಚ್ಚಿಸುವಂತೆ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಶ್ರೀ ಧರ್ಮೇಂದ್ರ ಪ್ರಧಾನ್ ಕರೆ

Posted On: 23 APR 2020 7:29PM by PIB Bengaluru

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆಯ ವೇಗ ಹೆಚ್ಚಿಸುವಂತೆ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಶ್ರೀ ಧರ್ಮೇಂದ್ರ ಪ್ರಧಾನ್ ಕರೆ

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತ ಮರುಪೂರಣ ಸಿಲಿಂಡರ್ ಗಳ ಸರಬರಾಜಿನ ವೇಗವನ್ನು ಹೆಚ್ಚಿಸುವಂತೆ ಹಾಗೂ ಶೃದ್ಧೆಯಿಂದ ಮತ್ತು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಎಲ್ ಪಿ ಜಿ ಸಿಲಿಂಡರ್ ಸರಬರಾಜು ಸರಪಳಿಯ ಎಲ್ಲ ಪಾಲುದಾರರಿಗೆ ಕರೆ ನೀಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮುಂದಿನ 3 ತಿಂಗಳಿಗೆ 8 ಕೋಟಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು 3 ಉಚಿತ ಸಿಲಿಂಡರ್ ಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ದೇಶಾದ್ಯಂತದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿಗಳು) ಜಿಲ್ಲಾ ನೋಡಲ್ ಅಧಿಕಾರಿಗಳ ಜೊತೆಗೆ ಇಂದು ನಡೆಸಿದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಶ್ರೀ ಪ್ರಧಾನ್ ಕೋವಿಡ್ – 19 ಮತ್ತು ಲಾಕ್ ಡೌನ್ ನಂಥ ಅನಿರೀಕ್ಷಿತವಾದ ಬಿಕ್ಕಟ್ಟಿನ ಇಂಥ ಪರಿಸ್ಥಿತಿಯಲ್ಲಿ ಬಡವರಿಗಾಗಿ ಸರ್ಕಾರ ಪ್ಯಾಕೇಜ್ ಒಂದನ್ನು ಒದಗಿಸುತ್ತಿದೆ ಮತ್ತು  ಅವರಿಗೆ ಉಚಿತ ಸಿಲಿಂಡರ್ ಒದಗಿಸುವುದು ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಹೇಳಿದರು. ಏಪ್ರೀಲ್ ನ ಆರಂಭಿಕ 3 ವಾರಗಳಲ್ಲಿ ಸುಮಾರು 40% ಫಲಾನುಭವಿಗಳು ಸಿಲಿಂಡರ್ ಪಡೆದುಕೊಂಡಿದ್ದಾರೆ ಮತ್ತು ಗುರಿಯನ್ನು ತಲುಪಲು ಸಿಲಿಂಡರ್ ಬುಕ್ ಮಾಡುವ ಮತ್ತು ಸರಬರಾಜಿನ ವೇಗವನ್ನು ಹೆಚ್ಚಿಸಬೇಕಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರುಅತ್ಯುತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ, ಗುರಿ ಸಾಧನೆಯ ಯೋಜನೆಯಂತೆ ಕಾರ್ಯನಿರ್ವಹಿಸಲು ಮತ್ತು ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಡಿ ಎನ್ ಒ ಗಳಿಗೆ ಅವರು ಕರೆ ನೀಡಿದರು. ಮನೆ ಮನೆಗೆ ಸಿಲಿಂಡರ್ ತಲುಪಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಯಾವುದೇ ಹೆಚ್ಚುವರಿ ಶುಲ್ಕ ಬೇಡಿಕೆಯ ದೂರುಗಳು ಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಆದರೆ ಇತರ ಸಾಮಾನ್ಯ ಗ್ರಾಹಕರ ಪೂರೈಕೆಯಲ್ಲೂ ಯಾವುದೇ ಪರಿಣಾಮವಾಗಬಾರದು ಎಂದು ಅವರು ಹೇಳಿದರು. ಎಲ್ಲ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಲಾಕ್ ಡೌನ್ ಗಾಗಿ ಎಂ ಹೆಚ್ ಎ ನೀಡಿದ ಎಲ್ಲ ಸೂಚನೆಗಳನ್ನು ಅನುಸರಿಸಿ ಮತ್ತು ಆರೋಗ್ಯ ಸೇತು ಆಪ್ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಕೂಡಾ ಅವರು ಡಿ ಎನ್ ಒ ಗಳಿಗೆ ಕರೆ ನೀಡಿದರು.

ಜನರನ್ನು ತಲುಪಲು, ಗ್ರಾಹಕರು ತಮ್ಮ ಖಾತೆಗಳಿಂದ ಹಣ ಪಡೆಯಲು ಮತ್ತು ಸಿಲಿಂಡರ್ ಗಳನ್ನು ಬುಕ್ ಮಾಡಲು ಡಿ ಎನ್ ಒ ಗಳು ಸಹ ತಮ್ಮ ಅನೇಕ ಹೊಸ ಯೋಚನೆಗಳನ್ನು ಜಾರಿಗೊಳಿಸಿದ್ದಾಗಿ, ಈ ಸಂವಾದದಲ್ಲಿ ಹೇಳಿದರುಈ ಯೋಜನೆಯ ಕುರಿತು ಮತ್ತು ಅದರ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವರು ವಿವಿಧ ವಿಧಾನಗಳನ್ನು ಬಳಸುತ್ತಿದ್ದಾರೆ. ಈ ವಿಧಾನಗಳಲ್ಲಿ ಜಿಲ್ಲಾಡಳಿತದ ಸಹಾಯ, ಕಿರಾಣಿ ಅಂಗಡಿಗಳ ಸಹಾಯ ಮತ್ತು ಹೊಂದಿಕೊಳ್ಳುವ ಸಮಯವನ್ನು ಅಳವಡಿಸಿಕೊಳ್ಳುವುದು ಸೇರಿವೆ. ಇವರಲ್ಲಿ ಬಹಳಷ್ಟು ಜನ ಪಿ ಎಂ ಕೇರ್ಸ್ ನಿಧಿಗೆ ಒಗ್ಗೂಡಿ ಕೊಡುಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ ಮತ್ತು ಆರೋಗ್ಯ ಸೇತು ಆಪ್ ಬಗ್ಗೆಯೂ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ

ಬಿಹಾರದ ಸುಪೌಲ್ ನಲ್ಲಿ ದರೋಡೆಕೋರರು ಎಲ್ ಪಿ ಜಿ ವಿತರಕರ ಮೇಲೆ ಹಲ್ಲೆ ನಡೆಸಿ ಅವನು ಸಾವಿಗೀಡಾದ  ಘಟನೆ ದುರದೃಷ್ಟಕರ ಎಂದು ಸಚಿವರಾದ ಪ್ರಧಾನ್ ಬೇಸರ ವ್ಯಕ್ತಪಡಿಸಿದರು. ಅಗಲಿದ ಅವರ ಆತ್ಮದ ಶಾಂತಿಗಾಗಿ ಸಭೆಯ ಮುನ್ನ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಅವರು ಮೃತರ ಕುಟುಂಬದ ಯೋಗಕ್ಷೇಮ ಖಚಿತಪಡಿಸುವುದು ಮತ್ತು ಅವರಿಗೆ ಎಲ್ಲ ಪರಿಹಾರಗಳು ದೊರೆಯುವಂತೆ ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.  

***



(Release ID: 1618044) Visitor Counter : 305