ರಕ್ಷಣಾ ಸಚಿವಾಲಯ

ಕೊವಿಡ್-19 ಮಾದರಿ ಪರೀಕ್ಷಿಸುವ ದೇಶದ ಮೊದಲ ಸಂಚಾರಿ ಪ್ರಯೋಗಾಲಯವನ್ನು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಉದ್ಘಾಟಿಸಿದರು; ದಿನಕ್ಕೆ 1000 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಸಬಹುದು

Posted On: 23 APR 2020 4:14PM by PIB Bengaluru

ಕೊವಿಡ್-19 ಮಾದರಿ ಪರೀಕ್ಷಿಸುವ ದೇಶದ ಮೊದಲ ಸಂಚಾರಿ ಪ್ರಯೋಗಾಲಯವನ್ನು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಉದ್ಘಾಟಿಸಿದರು; ದಿನಕ್ಕೆ 1000 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಸಬಹುದು

 

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ, ಇ ಎಸ್ ಐ ಸಿ ಆಸ್ಪತ್ರೆ, ಹೈದರಾಬಾದ್ ಮತ್ತು ಖಾಸಗಿ ಉದ್ಯಮದ ಸಹಯೋಗದೊಂದಿಗೆ, ಡಿ ಆರ್ ಡಿ ಒ ಅಭಿವೃದ್ಧಿಪಡಿಸಿರುವ ಸಂಚಾರಿ ವೈರಾಣು ಶಾಸ್ತ್ರ ಮತ್ತು ರೋಗ ಪತ್ತೆಹಚ್ಚುವ ಪ್ರಯೋಗಾಲಯ (ಎಂ ವಿ ಆರ್ ಡಿ ಎಲ್) ವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಹಲವಾರು ಸಮಯೋಚಿತ ನಿರ್ಣಯಗಳನ್ನು ಕೈಗೊಂಡಿದೆ ಹಾಗೂ ಇದೇ ಕಾರಣದಿಂದ ಇತರ ಕೆಲವು ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಕೊವಿಡ್-19 ಹರಡುವಿಕೆ ಬಹಳ ಕಡಿಮೆ ಪ್ರಮಾಣದಲ್ಲಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಆರು ತಿಂಗಳ ಸಮಯವನ್ನು ತೆಗೆದುಕೊಳ್ಳುವ ಜೈವಿಕ-ಸುರಕ್ಷತೆಯ ಹಂತ 2 ಮತ್ತು ಹಂತ 3 ರ ಪ್ರಯೋಗಾಲಯವನ್ನು ಕೆವಲ 15 ದಿನಗಳಲ್ಲಿ ಸ್ಥಾಪಿಸಿದ್ದಕ್ಕೆ ಶ್ರೀ ರಾಜನಾಥ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 1000 ಕ್ಕೂ ಹೆಚ್ಚು ಮಾದರಿಗಳನ್ನು ಪರಿಷ್ಕರಿಸುವ ಈ ಪ್ರಯೋಗಾಲಯ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು.

ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸುವುದು, ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು, ಭಾರತೀಯರನ್ನು ಇತರ ದೇಶಗಳಿಂದ ಸ್ಥಳಾಂತರಿಸುವುದು ಇತ್ಯಾದಿಗಳ ಮೂಲಕ, ಕೊವಿಡ್-19 ರ ವಿರುದ್ಧದ ಹೋರಾಟದಲ್ಲಿ ನಮ್ಮ ಸಶಸ್ತ್ರ ಪಡೆಗಳು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿವೆ ಮತ್ತು ಈ ಪ್ರಯತ್ನಗಳು ಹೀಗೇ ಮುಂದುವರೆಯುತ್ತವೆ ಎಂದು ಅವರು ಹೇಳಿದರು.

ರಾಜ್ಯ ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಮಾನ್ಯ ಶ್ರೀ ಜಿ ಕಿಶನ್ ರೆಡ್ಡಿ, ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಮಾನ್ಯ ಕೇಂದ್ರ ಸಚಿವರಾದ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್, ಮಾನ್ಯ ಐಟಿ ಉದ್ಯಮಗಳ ಸಚಿವರಾದ ಶ್ರೀ ಕೆ ಟಿ ರಾಮಾ ರಾವ್, ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ, ತೆಲಂಗಾಣ ಸರ್ಕಾರ, ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಚ ಮಲ್ಲಾ ರೆಡ್ಡಿ, ತೆಲಂಗಾಣ ಸರ್ಕಾರ ಮತ್ತು ಡಾ. ಜಿ ಸತೀಶ್ ರೆಡ್ಡಿ, ಕಾರ್ಯದರ್ಶಿ ಡಿಡಿಆರ್ & ಡಿ ಮತ್ತು ಅಧ್ಯಕ್ಷರು ಡಿ ಆರ್ ಡಿ ಒ, ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೊವಿಡ್-19 ಸ್ಕ್ರೀನಿಂಗ್ ಮತ್ತು ಅದಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು, ಹೈದರಾಬಾದ್ ಮೂಲದ ಇಮಾರತ್ ಸಂಶೋಧನಾ ಕೇಂದ್ರ (ಆರ್ ಸಿ ಐ) ಮತ್ತು ಹೈದರಾಬಾದ್ ನ ಇಎಸ್ಐಸಿ ಆಸ್ಪತ್ರೆಯ ಸಮಾಲೋಚನೆಯೊಂದಿಗೆ, ಹೈದರಾಬಾದ್ ನ ಡಿ ಆರ್ ಡಿ ಒ ಪ್ರಯೋಗಾಲಯ ಅಭಿವೃದ್ಧಿ ಪಡಿಸಿರುವ ಸಂಚಾರಿ ವೈರಾಣು ಸಂಶೋಧನಾ ಪ್ರಯೋಗಾಲಯ (ಎಂ ವಿ ಆರ್ ಎಲ್) ಇದೇ ಮೊದಲನೆಯದ್ದಾಗಿದೆ.

ಚಟುವಟಿಕೆಗಳನ್ನು ನಿರ್ವಹಿಸಲು ಅವಶ್ಯಕವಾದ ಸಂಚಾರಿ ವೈರಾಣು ಸಂಶೋಧನಾ ಪ್ರಯೋಗಾಲಯ ಬಿ ಎಸ್ ಎಲ್ 3 ಪ್ರಯೋಗಾಲಯ ಮತ್ತು ಬಿ ಎಸ್ ಎಲ್ 2 ಪ್ರಯೋಗಾಲಯದ ಸಂಯೋಜನೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜೈವಿಕ ಸುರಕ್ಷತಾ ಮಾನದಂಡಗಳ ಪ್ರಕಾರ ಈ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಈ ವ್ಯವಸ್ಥೆಯ ನಿರ್ಮಾಣದಲ್ಲಿ ವಿದ್ಯುತ್ ನಿಯಂತ್ರಕಗಳು, ಲ್ಯಾನ್, ಟೆಲಿಫೋನ್ ಕೇಬಲಿಂಗ್ ಮತ್ತು ಸಿಸಿ ಟಿವಿಗಳನ್ನು ಬಳಸಲಾಗಿದೆ.

ಈ ಸಂಚಾರಿ ಪ್ರಯೋಗಾಲಯಗಳು ಕೊವಿಡ್-19 ರ ರೋಗ ಪತ್ತೆಗೆ ಮತ್ತು ಔಷಧಿಗಳ ತಪಾಸಣೆಗಾಗಿ ವೈರಾಣುಗಳನ್ನು ಬೆಳೆಸಲು, ರೋಗದಿಂದ ಚೇತರಿಕೆ ಹೊಂದುತ್ತಿರುವ ವ್ಯಕ್ತಿಯಿಂದ ಪ್ಲಾಸ್ಮಾ ಪಡೆದ ಚಿಕಿತ್ಸೆಗಾಗಿ, ಕೊವಿಡ್-19 ರೋಗಿಗಳ ಸಮಗ್ರ ರೋಗ ನಿರೋಧಕ ವ್ಯಕ್ತಿಚಿತ್ರಣವನ್ನು ಲಸಿಕೆ ಅಭಿವೃದ್ಧಿಗಾಗಿ ಭಾರತೀಯ ಜನಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟವಾದ ಚಿಕಿತ್ಸಕ ಪ್ರಯೋಗಗಳನ್ನು ಕೈಗೊಳ್ಳುವುದಕ್ಕೆ ಸಹಾಯಕರವಾಗಲಿವೆ. ಪ್ರತಿದಿನ ಈ ಪ್ರಯೋಗಾಲಯ 1000-2000 ಮಾದರಿಗಳ ಪರೀಕ್ಷೆ ನಡೆಸಲಿದೆ. ಅವಶ್ಯಕತೆಗೆ  ಅನುಸಾರವಾಗಿ ದೇಶದ ಯಾವುದೇ ಭಾಗದಲ್ಲಿ ಈ ಪ್ರಯೋಗಾಲಯವನ್ನು ಅಳವಡಿಸಿಕೊಳ್ಳಬಹುದಾಗಿದೆ.

ಮೆಸ್ಸರ್ಸ್ ಐಕಾಮ್ ಕಂಟೇನರ್ ಗಳನ್ನು ಒದಗಿಸಲು, ಮೆಸ್ಸರ್ಸ್ ಐಕ್ಲೀನ್ ಸೂಕ್ತ ಸಮಯದಲ್ಲಿ ಬಿ ಎಸ್ ಎಲ್ 2 ಮತ್ತು ಬಿ ಎಸ್ ಎಲ್ 3 ಪ್ರಯೋಗಾಲಯ ವಿನ್ಯಾಸವನ್ನು ಮತ್ತು ನಿರ್ಮಾಣಕ್ಕೆ ಹಾಗೂ ಮೆಸ್ಸರ್ಸ್ ಹೈಟೆಕ್ ಹೈಡ್ರಾಲಿಕ್ಸ್, ಬೇಸ್ ಫ್ರೇಮ್ ಒದಗಿಸಲು ಮುಂದೆ ಬಂದಿರುವುದಾಗಿ ಡಿ ಆರ್ ಡಿ ಒ ತಿಳಿಸಿದೆ,

https://ci6.googleusercontent.com/proxy/xebTv1wVgqu7b0sgeNH3jHipOR1oNXCKTHpn0ktjBgfr1DaGYlUIYgRqoq6v3N3itLReJkWznj56Y7L7Y211bxTxXg7VKveZaWb8So96q50VJd0hie1z=s0-d-e1-ft#https://static.pib.gov.in/WriteReadData/userfiles/image/image001PZPE.jpg

https://ci4.googleusercontent.com/proxy/AJjjzEr3zxoXQXg7yEzmaSCXsVkjANhJiqxyLGlYDp3TTLes_WEFe4mb4vfGMoDZbO3yOV95Eg1KWby_TLP_KoY3JdNUSjosg2KS_DWT7FuS6_5kqoT2=s0-d-e1-ft#https://static.pib.gov.in/WriteReadData/userfiles/image/image002851I.jpg

https://ci5.googleusercontent.com/proxy/fs3wmnS1YtU3LYBf9TdD7NLaUBOH7kLNOKgji4h-pg3uA51Y6xLU7DqDBKM7nS2tWooKVWVfbG0zHLn3Vg9jTkpJTZuSPBs-QAuxHiwa4918u3NEhse6=s0-d-e1-ft#https://static.pib.gov.in/WriteReadData/userfiles/image/image003ACQQ.jpg

https://ci5.googleusercontent.com/proxy/qj0QXTzCWPvIQCacJReHwRwoVlGO5ydCIaQPq-eFqjEGecmcprv0NCtD__EJNlDr7WfdYxWV7SyTHnzYHmqMN7SWX7hPP7CMygMLh66E8A6HJ0ESG0M3=s0-d-e1-ft#https://static.pib.gov.in/WriteReadData/userfiles/image/image00422E9.jpg

***



(Release ID: 1618042) Visitor Counter : 242