ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ವಾರಣಾಸಿಯಲ್ಲಿ ವಿಶೇಷ ಡ್ರೋನ್ ಗಳನ್ನು ಬಳಸಿ ಕೊವಿಡ್ ಸೋಂಕು ನಿವಾರಕ ಸಿಂಪಡಣೆ

Posted On: 23 APR 2020 6:41PM by PIB Bengaluru

ವಾರಣಾಸಿಯಲ್ಲಿ ವಿಶೇಷ ಡ್ರೋನ್ ಗಳನ್ನು ಬಳಸಿ ಕೊವಿಡ್ ಸೋಂಕು ನಿವಾರಕ ಸಿಂಪಡಣೆ

 

ಭಾರತ ಸರ್ಕಾರದ, ಪ್ರಧಾನ ವೈಜ್ಞಾನಿಕ ಸಲಹಾ ಸಮಿತಿಯ (ಪಿ ಎಸ್ ಎ) ಕಚೇರಿ ಮತ್ತು ಭಾರತದ ರಾಷ್ಟ್ರೀಯ ಹೂಡಿಕೆ ಪ್ರೋತ್ಸಾಹ ಏಜೆನ್ಸಿ, ಇನ್ವೆಸ್ಟ್ ಇಂಡಿಯಾ, ಅಗ್ನಿ ಯೋಜನೆಯೊಂದಿಗೆ ಮತ್ತು ಇನ್ವೆಸ್ಟ್ ಇಂಡಿಯಾ ಬಿಸಿನೆಸ್ ಇಮ್ಯೂನಿಟಿ ವೇದಿಕೆ (ಬಿ ಐ ಪಿ) ಯೊಂದಿಗೆ ಜೊತೆಗೂಡಿ, ವಿಶೇಷವಾಗಿ ವಿನ್ಯಾಸ ಮಾಡಲಾದ ಡ್ರೋನ್ ಗಳನ್ನು ಬಳಸಿ ವಾರಣಾಸಿಯಲ್ಲಿ ಕೊವಿಡ್ ಸೋಂಕು ನಿವಾರಕ ಸಿಂಪಡಣೆಗೆ ಮುಂದಾಗಿವೆ.

ಸರ್ಕಾರದ ಕೊವಿಡ್-19 ತಡೆಯುವ ತಂತ್ರಗಳು, ಜಾಗತಿಕ ಮಟ್ಟದಲ್ಲಿ ಬಳಸುತ್ತಿರುವ ಉತ್ತಮ ಅಭ್ಯಾಸಗಳಿಗೆ ಸಮಾನವಾಗಿವೆ: ಸಂಪರ್ಕದ ಅವಕಾಶಗಳನ್ನು ಕಡಿಮೆಗೊಳಿಸುವುದರ ಮೂಲಕ, ಭಾರತೀಯರನ್ನು ಕೊವಿಡ್-19 ನಿಂದ ರಕ್ಷಿಸಲಾಗುತ್ತಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಇದನ್ನು ಸಾಧಿಸಲು ಸರ್ಕಾರ ಸ್ಥಳೀಯ ಪ್ರಾಧಿಕಾರಕ್ಕೆ ಉತ್ತೇಜನ ನೀಡುತ್ತಿದೆ.

ಡ್ರೋನ್ ಗಳು ಇದಕ್ಕೆ ತಕ್ಕ ಉತ್ತರ. ಡ್ರೋನ್ ಗಳನ್ನು ಬಳಸಿ ಅಧಿಕಾರಿಗಳು ಹೆಚ್ಚು ಜನ ನಿಬಿಡ ಪ್ರದೇಶಗಳಲ್ಲಿ ಮತ್ತು ಸೂಕ್ಷ್ಮ ನಗರ ಪ್ರದೇಶಗಳಲ್ಲಿ ರೋಗ ನಿವಾರಕ ಔಷಧಿಯನ್ನು ಸಿಂಪಡಿಸಬಹುದು: ಇದು ಕೊವಿಡ್-19 ನಿಂದ ನಗರವಾಸಿಗಳನ್ನು ರಕ್ಷಿಸುವುದಲ್ಲದೇ, ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ಮಾನವ ಸಂಪರ್ಕ ತಗ್ಗಿಸುವ ಮೂಲಕ ಸುರಕ್ಷಿತವಾಗಿಡುತ್ತದೆ.

ಗರುಡ ಏರೋಸ್ಪೇಸ್ ಗೆ ಸಹಾಯ, ಚೆನ್ನೈ ಮೂಲದ ಡ್ರೋನ್ ಸ್ಟಾರ್ಟ್ ಅಪ್ ಕಂಪೆನಿ, ವಾರಣಾಸಿಯ ರೋಗ ನಿರೋಧಕ ಸಿಂಪಡಣೆಗೆ ಆಸಕ್ತಿ ತೋರಿದೆ: ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಪ್ರಾಧಿಕಾರಗಳೊಂದಿಗೆ ತಂಡ ಕಾರ್ಯನಿರ್ವಹಿಸಿದ್ದು, ಗರುಡ ಟೆಕ್ನೊಲಜೀಸ್ ಮತ್ತು ಅದರ ಸಿಬ್ಬಂದಿಯನ್ನು ವಾರಣಾಸಿಗೆ ಕರೆತರಲು ಸಹಾಯ ಮಾಡಿದೆ. ತಂಡ ಈ ಕಾರ್ಯಾಚರಣೆಯ ಪ್ರತಿ ಹಂತದಲ್ಲೂ ಸಹಕಾರ ನೀಡಿ ಪರಿವೀಕ್ಷಿಸಿತು. ಇದರಿಂದ ಸರ್ಕಾರ ಮತ್ತು ಆವಿಷ್ಕಾರಕರು ಒಗ್ಗೂಡಿ ಕೊವಿಡ್-19 ವಿರುದ್ಧ ಹೋರಾಟಮಾಡಲು ಸಹಾಯ ಮಾಡಿತು.

ವಾರಣಾಸಿಯಲ್ಲಿ ಡ್ರೋನ್ ಕಾರ್ಯಾಚರಣೆ ಈಗಷ್ಟೇ ಆರಂಭವಾಗಿದೆ. ತಂಡ ಇಂತಹ ಕಾರ್ಯಾಚರಣೆಯನ್ನು ದೇಶದ ವಿವಿಧ ನಗರಗಳಿಗೂ ವಿಸ್ತರಿಸಲಿದೆ.

ಇದು ಸರ್ಕಾರ ಮತ್ತು ಆವಿಷ್ಕಾರಕರ ಸಹಭಾಗಿತ್ವದೊಂದಿಗೆ, ಕೊವಿಡ್-19 ರ ವಿರುದ್ಧ ನಮ್ಮ ಭಾರತೀಯ ಅಧಿಕಾರಿಗಳು ಹೋರಾಡಲು ಹೊಸ ತಂತ್ರಜ್ಞಾನವನ್ನು ಬಳಸುವ ಮತ್ತೊಂದು ಪ್ರಯತ್ನವಾಗಿದೆ.

 

https://ci6.googleusercontent.com/proxy/wTljMXhtFVlSXHifZMkDzH0dhjhr0pGQP1wvgb383uPKGB46XJ6sHKxMa_kemvIrjz4TG4fxwXh5CLCqHTbOKJnfbovDU9v3d11CSRrQAhIL2WqtPFNE=s0-d-e1-ft#https://static.pib.gov.in/WriteReadData/userfiles/image/image001U7IY.gif

***(Release ID: 1617800) Visitor Counter : 196