ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೊರೊನಾ ಸವಾಲಿಗೆ ಭಾರತ ಸಮರ್ಥ ಹಾಗು ಸಂಪನ್ಮೂಲಗಳನ್ನು ಹೊಂದಿದೆ: ಡಾ. ಹರ್ಷ್ ವರ್ಧನ್
Posted On:
23 APR 2020 9:10PM by PIB Bengaluru
ಕೊರೊನಾ ಸವಾಲಿಗೆ ಭಾರತ ಸಮರ್ಥ ಹಾಗು ಸಂಪನ್ಮೂಲಗಳನ್ನು ಹೊಂದಿದೆ: ಡಾ. ಹರ್ಷ್ ವರ್ಧನ್
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ
ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತದ ಪ್ರತಿಸ್ಪಂದನೆಯು ಪೂರ್ವಭಾವಿ, ಹತೋಟಿಯಲ್ಲಿಡುವ ಮತ್ತು ಶ್ರೇಣೀಕೃತವಾದುದ್ದಾಗಿದೆ ” ಎಂದು ಡಾ.ಹರ್ಷ್ ವರ್ಧನ್ ಹೇಳಿದರು
"ನಾವು ಈ ವೈರಸ್ ಅನ್ನು ಖಂಡಿತವಾಗಿ ಸೋಲಿಸುತ್ತೇವೆ" - ಡಾ. ಹರ್ಷ್ ವರ್ಧನ್
ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತದ ಪ್ರತಿಸ್ಪಂದನೆಯು ಪೂರ್ವಭಾವಿಯಾಗಿ, ಹತೋಟಯಲ್ಲಿಡುವ ಮತ್ತು ಶ್ರೇಣೀಕೃತವಾದುದ್ದಾಗಿದೆ ” ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್ ಒ) ಯ ಸದಸ್ಯ ರಾಷ್ಟ್ರಗಳ.ಆರೋಗ್ಯ ಸಚಿವರೊಂದಿಗೆ ಕೋವಿಡ್ ನ ನಿಯಂತ್ರಣಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ವಾಸ್ತವೋಪಮ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸುವಾಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ್ ವರ್ಧನ್ ಹೇಳಿದರು.
ಆರಂಭದಲ್ಲಿ, ಡಾ. ಹರ್ಷ್ ವರ್ಧನ್, "ವಿಶ್ವದ ಕೋವಿಡ್-19 ನಲ್ಲಿನ ಪ್ರಸ್ತುತ ಪರಿಸ್ಥಿತಿ ಆತಂಕಕಾರಿಯಾಗಿದ್ದು ಮತ್ತು ಸಾವುನೋವುಗಳ ಸಂಖ್ಯೆಯನ್ನು ತಗ್ಗಿಸಲು ವಿಶೇಷ ಕ್ರಮಗಳ ಅಗತ್ಯವಿದೆ" ಎಂದು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳನ್ನು ಉದ್ದೇಶಿಸಿ ಡಾ. ಹರ್ಷ್ ವರ್ಧನ್, "ನಾವು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭೇಟಿಯಾಗುತ್ತಿದ್ದೇವೆ ಮತ್ತು ಕೋವಿಡ್-19 ಅನ್ನು ನಿರ್ಮೂಲನೆ ಮಾಡಲು ನಮ್ಮ ಉತ್ತಮ ರೀತಿಗಳನ್ನು ಹಂಚಿಕೊಳ್ಳುವ ಮೂಲಕ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.” ಪ್ರೋತ್ಸಾಹದ ನುಡಿಗಳನ್ನಾಡಿದರು.
ಡಾ. ಹರ್ಷ್ ವರ್ಧನ್, "ಭಾರತವು ಮೊದಲು ಕೋವಿಡ್ -19 ಕ್ಕೆ ಪ್ರತಿಕ್ರಿಯಿಸಿತು ಮತ್ತು ನಮ್ಮ ಕೊರೊನಾ ಯೋಧರ ಅಮೂಲ್ಯ ಮತ್ತು ಪ್ರಾಮಾಣಿಕ ಸೇವೆಗಳಿಂದಾಗಿ ಪ್ರಪಂಚದ ಉಳಿದ ಭಾಗಗಳಿಗಿಂತ ಭಾರತವು ಉತ್ತಮ ಸ್ಥಾನದಲ್ಲಿದೆ." ರೋಗದ ಸಂಭಾವ್ಯ ನೊಂದವರು ಅಥವಾ ರೋಗ ಹೊಂದಿರುವವರ ಮೇಲ್ವಿಚಾರಣೆ ಮಾಡಲು ಸರ್ಕಾರಿ ಸಂಸ್ಥೆಗಳು ನಡೆಸಿದ ಸಕ್ರಿಯ ಕಣ್ಗಾವಲು ಪ್ರಯತ್ನಗಳನ್ನು ಉಲ್ಲೇಖಿಸಿ ಡಾ. ಹರ್ಷ್ ವರ್ಧನ್, “ನಮಗೆ ಶತ್ರು ಮತ್ತು ಅದು ಇರುವ ಸ್ಥಳ ತಿಳಿದಿದೆ. ಸಮುದಾಯ ಕಣ್ಗಾವಲು, ವಿವಿಧ ಸಲಹೆಗಳ ವಿತರಣೆ, ಕ್ಲಸ್ಟರ್ ನಿಯಂತ್ರಣ ಮತ್ತು ಕ್ರಿಯಾತ್ಮಕ ತಂತ್ರದ ಮೂಲಕ ನಾವು ಈ ಶತ್ರುವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ”
ಕೋವಿಡ್-19 ನಿಂದ ಉಂಟಾಗುವ ಬಿಕ್ಕಟ್ಟನ್ನು ದೇಶದ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಅವಕಾಶವಾಗಿ ಹೇಗೆ ಮಾರ್ಪಡಿಸಲಾಗಿದೆ ಎಂಬುದರ ಕುರಿತು ಮಾತನಾಡಿದ ಡಾ. ಹರ್ಷ್ ವರ್ಧನ್, “ಆರಂಭದಲ್ಲಿ ಕೋವಿಡ್-19 ಗಾಗಿ ಪರೀಕ್ಷೆಗಳನ್ನು ಮಾಡಲು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಯಲ್ಲಿ ನಮಗೆ ಒಂದೇ ಪ್ರಯೋಗಾಲಯವಿತ್ತು. ಕಳೆದ 3 ತಿಂಗಳುಗಳಲ್ಲಿ ನಾವು ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 230 ಕ್ಕೆ ಏರಿಸಿದ್ದೇವೆ ಮತ್ತು 16,000 ಕ್ಕೂ ಹೆಚ್ಚು ಸಂಗ್ರಹ ಕೇಂದ್ರಗಳನ್ನು ಹೊಂದಿರುವ 87 ಖಾಸಗಿ ಪ್ರಯೋಗಾಲಯಗಳ ಸಹಾಯದಿಂದ. ಇಲ್ಲಿಯವರೆಗೆ ನಾವು ಕೋವಿಡ್-19 ಗಾಗಿ 5 ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದ್ದೇವೆ. ನಾವು ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲಿದ್ದೇವೆ ಮತ್ತು ನಮ್ಮ ಪ್ರಸ್ತುತ ದೈನಂದಿನ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 55,000 ರಿಂದ 1 ಲಕ್ಷಕ್ಕೆ ಮೇ 31, 2020 ರ ವೇಳೆಗೆ ಹೆಚ್ಚಿಸಲಿದ್ದೇವೆ. ”
ಬಿಕ್ಕಟ್ಟನ್ನು ಎದುರಿಸಲು ದೇಶವು ಮಾಡಿರುವ ಸಿದ್ಧತೆಗಳ ಕುರಿತು ಇನ್ನಷ್ಟು ವಿವರಿಸಿದ ಅವರು, “ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ರೋಗಿಗಳಿಗೆ ಸಿದ್ಧತೆಯನ್ನು ಸರ್ಕಾರ ಖಚಿತಪಡಿಸಿದೆ. ರೋಗದ ತೀವ್ರತೆಯ ಆಧಾರದ ಮೇಲೆ ಸರ್ಕಾರವು ಕೋವಿಡ್ ಚಿಕಿತ್ಸಾ ಸೌಲಭ್ಯಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಿದೆ, ಅವುಗಳೆಂದರೆ - ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಕೋವಿಡ್ ಆರೈಕೆ ಕೇಂದ್ರಗಳು, ಕೋವಿಡ್ ಆರೋಗ್ಯ ಕೇಂದ್ರಗಳು - ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಮತ್ತು ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಮೀಸಲಾದ ಕೋವಿಡ್ ಆಸ್ಪತ್ರೆಗಳು. ರೋಗದ ತೀವ್ರತೆಗೆ ಅನುಗುಣವಾಗಿ ರೋಗಿಗಳ ವರ್ಗಾವಣೆಗೆ ಅನುಕೂಲವಾಗುವಂತೆ ಈ ಮೂರು ರೀತಿಯ ಕೋವಿಡ್ ಕೇಂದ್ರಗಳನ್ನು ಸರಿಯಾಗಿ ಹೊಂದಿಸಲಾಗಿದೆ. ನಾವು ದೇಶದ ಎಲ್ಲಾ 2,033 ಮೀಸಲಾದ ಸೌಲಭ್ಯಗಳಲ್ಲಿ 1,90,000 ಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳು, 24,000 ಕ್ಕೂ ಹೆಚ್ಚು ಐಸಿಯು ಹಾಸಿಗೆಗಳು ಮತ್ತು 12,000 ಕ್ಕೂ ಹೆಚ್ಚು ವೆಂಟಿಲೇಟರ್ಗಳನ್ನು ಹೊಂದಿದ್ದೇವೆ. ಈ ಎಲ್ಲಾ ಸೌಲಭ್ಯಗಳನ್ನು ಕಳೆದ 3 ತಿಂಗಳಲ್ಲಿ ಸಂಘಟಿಸಲಾಗಿದೆ.”
ಇದಲ್ಲದೆ, ಅಪಾಯದ ಬಗ್ಗೆ ತಿಳಿದುಕೊಳ್ಳುವ ಜನರ ಕುತೂಹಲಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಉಲ್ಲೇಖಿಸುವಾಗ, ಡಾ.ಹರ್ಷ್ ವರ್ಧನ್ ಅವರು 7.2 ಕೋಟಿಗೂ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿರುವ ‘ಆರೋಗ್ಯಸೆತು’ ಮೊಬೈಲ್ ಆ್ಯಪ್ ನ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸಿದರು. ಕೋವಿಡ್-19ರ ವಿರುದ್ಧದ ನಮ್ಮ ಸಂಯೋಜಿತ ಹೋರಾಟದಲ್ಲಿ ಅಗತ್ಯ ಆರೋಗ್ಯ ಸೇವೆಗಳನ್ನು ಭಾರತದ ಜನರೊಂದಿಗೆ ಸಂಪರ್ಕಿಸಲು ಭಾರತ ಸರ್ಕಾರ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಇದು. ಕೋವಿಡ್-19 ಒಳಗೊಂಡಿರುವ ಅಪಾಯಗಳು, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ಸಲಹೆಗಳ ಬಗ್ಗೆ, ಅಪ್ಲಿಕೇಶನ್ನ ಬಳಕೆದಾರರನ್ನು ತಲುಪಲು ಮತ್ತು ತಿಳಿಸಲು ಭಾರತ ಸರ್ಕಾರದ ಉಪಕ್ರಮಗಳನ್ನು ಹೆಚ್ಚಿಸುವ ಉದ್ದೇಶವನ್ನು ಈ ಅಪ್ಲಿಕೇಶನ್ ಹೊಂದಿದೆ ಎಂದು ಹೇಳಿದರು.
ತಮ್ಮ ಮಾತುಕತೆಯನ್ನು ಮುಕ್ತಾಯಗೊಳಿಸಿದ ಅವರು, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವನ್ನು ಶ್ಲಾಘಿಸಿದ ಅವರು, “ನಮ್ಮ ಪ್ರಧಾನ ಮಂತ್ರಿಯಲ್ಲಿ ಒಬ್ಬ ಮಹಾನ್ ನಾಯಕರನ್ನು ಕಾಣಬಹುದು, ಏಕೆಂದರೆ ಅವರು ಬಹಳ ಶೀಘ್ರಗ್ರಾಹಿಯಾಗಿದ್ದು ಕಾಲಕಾಲಕ್ಕೆ ತಜ್ಞರು ನೀಡುವ ಸಲಹೆಗಳನ್ನು ಅನುಸರಿಸುತ್ತಾರೆ ಇವುಗಳು ಭಾರತವು ಕೋವಿಡ್-19 ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಪ್ರಮುಖವಾಗಿವೆ. ಲಾಕ್ಡೌನ್ ಯಶಸ್ವಿಯಾಗಲು ನಮ್ಮ ಪ್ರಯತ್ನಗಳನ್ನು ಜನರು ಬೆಂಬಲಿಸಿದ್ದಾರೆ. ನಾವು ಯಾವುದೇ ಸಂಭವನೀಯತೆಗೆ ಸಿದ್ಧರಾಗಿದ್ದೇವೆ ಎಂದು ನಾನು ಭರವಸೆ ನೀಡಬಲ್ಲೆ ಮತ್ತು ಎಲ್ಲಾ ರೋಗಿಗಳಿಗೆ ಆರೋಗ್ಯಕರವಾಗಲು ಮತ್ತು ಬರುವ ಎಲ್ಲ ಸಮಯದಲ್ಲೂ ಸರಿಹೊಂದುವಂತೆ ನಾವು ಸರಿಯಾದ ಆರೋಗ್ಯ ಸೇವೆಯನ್ನು ಒದಗಿಸುವ ಸ್ಥಿತಿಯಲ್ಲಿದ್ದೇವೆ" ಎಂದು ಅವರು ಹೇಳಿದರು.
***
(Release ID: 1617796)
Visitor Counter : 217