ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಶ್ರೀ ಗಡ್ಕರಿ ಅವರು ಸರ್ಕಾರ ಅನುಮತಿ ನೀಡಿರುವ ಪ್ರದೇಶಗಳಲ್ಲಿ ಕೆಲಸಗಳನ್ನು ಪುನರಾರಂಭಿಸುವಾಗ ಆರೋಗ್ಯದ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮಗಳಿಗೆ ಕರೆ ನೀಡಿದರು

Posted On: 23 APR 2020 7:02PM by PIB Bengaluru

ಶ್ರೀ ಗಡ್ಕರಿ ಅವರು ಸರ್ಕಾರ ಅನುಮತಿ ನೀಡಿರುವ ಪ್ರದೇಶಗಳಲ್ಲಿ ಕೆಲಸಗಳನ್ನು ಪುನರಾರಂಭಿಸುವಾಗ ಆರೋಗ್ಯದ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮಗಳಿಗೆ ಕರೆ ನೀಡಿದರು

 

ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಭಾರತ್ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು, ವಿವಿಧ ವಲಯಗಳ ಉದ್ಯಮಗಳು, ಮಾಧ್ಯಮಗಳು ಮತ್ತು ಇತರ ಪಾಲುದಾರರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋವಿಡ್ -19 ನಂತರದ ಸ್ಥಿತಿ : ಭಾರತದಲ್ಲಿ ಸವಾಲುಗಳು ಮತ್ತು ಹೊಸ ಅವಕಾಶಗಳುಕುರಿತು ಸಂವಹನ ನಡೆಸಿದರು. ಸಂವಾದದ ಸಮಯದಲ್ಲಿ, ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಎಂಎಸ್ಎಂಇಗಳು ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು ಮತ್ತು ಕೆಲವು ಸಲಹೆಗಳೊಂದಿಗೆ ಮತ್ತು ಎಂಎಸ್ಎಂಇ ವಲಯವನ್ನು ಚಾಲನೆಯಲ್ಲಿರುವಂತೆ ಮಾಡಲು ಸರ್ಕಾರದಿಂದ ಬೆಂಬಲವನ್ನು ಕೋರಿದರು.

ಶ್ರೀ ಗಡ್ಕರಿ ಅವರು ಉದ್ಯಮಕ್ಕೆ ಕರೆ ನೀಡಿದ್ದು, ಸರ್ಕಾರವು ಕೆಲವು ಉದ್ಯಮ ಕ್ಷೇತ್ರಗಳ ಕಾರ್ಯವನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟರೂ, ಕೋವಿಡ್-19 ಹರಡುವುದನ್ನು ತಡೆಗಟ್ಟಲು ಅಗತ್ಯವಾದ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದೆಯೆನ್ನುವುದನ್ನು ಕೈಗಾರಿಕೆಗಳು ಖಚಿತಪಡಿಸಿಕೊಳ್ಳಬೇಕು. ಅವರು ಪಿಪಿಇ (ಮುಖಗವಸುಗಳು, ಸ್ಯಾನಿಟೈಜರ್, ಕೈಗವಸುಗಳು ಇತ್ಯಾದಿ) ಬಳಕೆಗೆ ಒತ್ತು ನೀಡಿದರು ಮತ್ತು ಕಚೇರಿಗಳು / ವ್ಯವಹಾರ ಕಾರ್ಯಾಚರಣೆಗಳನ್ನು ಪುನರಾರಂಭಿಸುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದರು. ಕೈಗಾರಿಕೆಗಳು ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಆಶ್ರಯ ಮತ್ತು ಆಹಾರವನ್ನು ವ್ಯವಸ್ಥೆಗೊಳಿಸಬೇಕು ಮತ್ತು ತಡೆಗಟ್ಟುವ ಕ್ರಮಗಳು ಮತ್ತು ವ್ಯವಹಾರ ಚಟುವಟಿಕೆಗಳನ್ನು ಏಕಕಾಲದಲ್ಲಿ ಕೇಂದ್ರೀಕರಿಸಬೇಕು ಎಂದು ಹೇಳಿದರು.

ಹೆದ್ದಾರಿಗಳು ಮತ್ತು ಬಂದರುಗಳು ಕಾರ್ಯನಿರ್ವಹಿಸಲು ಆರಂಭಿಸಿವೆ ಮತ್ತು ಕಾಲಾನಂತರದಲ್ಲಿ ಕಾರ್ಯಾಚರಣೆಗಳು ಎಂದಿನಂತೆ ಇರಲಿವೆ ಎಂದು ಅವರು ಹೇಳಿದರು. ಎಂಎಸ್ಎಂಇ ಕ್ಷೇತ್ರದ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ, ರಫ್ತನ್ನು ಹೆಚ್ಚಿಸಲು ವಿಶೇಷ ಗಮನ ನೀಡುವುದು ಸಮಯದ ಅಗತ್ಯವಾಗಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ವಿದ್ಯುತ್ ವೆಚ್ಚ, ಸಾಗಾಣಿಕೆ ವೆಚ್ಚ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಅಗತ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ವಿದೇಶಿ ಆಮದನ್ನು ದೇಶೀಯ ಉತ್ಪಾದನೆಯೊಂದಿಗೆ ಬದಲಿಸಲು ಆಮದಿಗೆ ಪರ್ಯಾಯದ ಬಗ್ಗೆ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಅವರು ಒತ್ತಿ ಹೇಳಿದರು. ಉದ್ಯಮಗಳನ್ನು ತಂತ್ರಜ್ಞಾನದ ಬಳಕೆಗೆ ಒತ್ತಾಯಿಸಿದರು ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಗುಣಮಟ್ಟದ ಸುಧಾರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು..

ಚೀನಾದಿಂದ ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಂಡು ಬೇರೆಡೆಗೆ ಹೂಡಲು ಜಪಾನ್ ಸರ್ಕಾರ ತನ್ನ ಉದ್ಯಮಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ ಎಂದು ಸಚಿವರು ಹೇಳಿದರು. ಇದು ಭಾರತಕ್ಕೆ ಒಂದು ಅವಕಾಶ ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ದೆಹಲಿ - ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ, ಮತ್ತು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಿಕೇಂದ್ರೀಕರಣ ವಿಧಾನವನ್ನು ಕೇಂದ್ರೀಕರಿಸಿ ಕೈಗಾರಿಕಾ ಸಮೂಹಗಳು, ಕೈಗಾರಿಕಾ ಉದ್ಯಾನವನಗಳು, ಸ್ಮಾರ್ಟ್ ಗ್ರಾಮಗಳು ಮತ್ತು ಸ್ಮಾರ್ಟ್ ನಗರಗಳಲ್ಲಿ (ಸ್ಮಾರ್ಟ್ ಹಳ್ಳಿಗಳಿಗೆ ಹತ್ತಿರವಿರುವ) ಭವಿಷ್ಯದಲ್ಲಿ ಹೂಡಿಕೆ ಮಾಡಲು ಉದ್ಯಮಕ್ಕೆ ಇದು ಒಂದು ಅವಕಾಶವಾಗಿದೆ ಎಂದು ತಿಳಿಸಲಾಯಿತು. ಮತ್ತು ಅಂತಹ ಪ್ರಸ್ತಾಪಗಳನ್ನು ಎನ್ಎಚ್ಎಐಗೆ ಸಲ್ಲಿಸುವಂತೆ ಕೋರಿದರು. ಪ್ರತಿನಿಧಿಗಳು ಸೂಚಿಸಿದ ಕೆಲವು ವಿಷಯಗಳು ಮತ್ತು ನೀಡಿರುವ ಸಲಹೆಗಳೆಂದರೆ, ಬಡ್ಡಿ ಸಬ್ವೆನ್ಷನ್ ಯೋಜನೆಯ ಪ್ರಾರಂಭಕ್ಕೆ ಆದ್ಯತೆ ನೀಡುವುದು, ಎಂಎಸ್ಎಂಇಗಳ ವ್ಯಾಖ್ಯಾನವನ್ನು ಅಂತಿಮಗೊಳಿಸುವುದು, ಎಂಎಸ್ಎಂಇಗಳಿಗೆ ಕಾರ್ಯನಿರತ ಬಂಡವಾಳ ಸಾಲದ ಮಿತಿಯನ್ನು ಹೆಚ್ಚಿಸುವುದು, ಕೈಗಾರಿಕೆಗಳ ಪ್ರಾರಂಭಿಕ ಕಾರ್ಯಾಚರಣೆಗಳೊಂದಿಗೆ ಮಾರುಕಟ್ಟೆಗಳನ್ನು ತೆರೆಯುವುದು, ಆರ್ಬಿಐ ಸಂಬಂಧಿಸಿದ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಕೈಗಾರಿಕೆಗಳಿಗೆ ಹೆಚ್ಚುವರಿ ದ್ರವ್ಯತೆ ಒದಗಿಸುವುದು, ಇಎಸ್ಐನ ಕಾರ್ಪಸ್ ನಿಧಿಯನ್ನು ಬಳಸಿಕೊಳ್ಳುವ ಆಯ್ಕೆಯನ್ನು ಅನ್ವೇಷಿಸುವುದು ಇತ್ಯಾದಿಗಳಿಗೆ

ಪ್ರತಿನಿಧಿಗಳ ಪ್ರಶ್ನೆಗಳಿಗೆ ಶ್ರೀ ಗಡ್ಕರಿ ಪ್ರತಿಕ್ರಿಯಿಸಿ ಸಲಹೆಗಳನ್ನು ಕಳುಹಿಸುವಂತೆ ಕೋರಿದರು ಮತ್ತು ಸರ್ಕಾರದಿಂದ ಎಲ್ಲ ಸಹಾಯದ ಭರವಸೆ ನೀಡಿದರು. ಸಂಬಂಧಿತ ಇಲಾಖೆಗಳು / ಪಾಲುದಾರರೊಂದಿಗಿನ ಸಮಸ್ಯೆಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಕೋವಿಡ್-19 ಬಿಕ್ಕಟ್ಟಿನ ನಂತರ ಎಲ್ಲಾ ಸಂಬಂಧಿತ ಪಾಲುಗಾರರು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಶ್ರೀ ಗಡ್ಕರಿ ಒತ್ತಿ ಹೇಳಿದರು.

***


(Release ID: 1617774) Visitor Counter : 226