ಗೃಹ ವ್ಯವಹಾರಗಳ ಸಚಿವಾಲಯ

ಸಿಬ್ಬಂದಿಗಳು ಕೋವಿಡ್-19 ಪಾಸಿಟಿವ್ ಕಂಡುಬಂದರೆ ಕಂಪೆನಿ ಸಿ.ಇ.ಒ.ಗಳನ್ನು ಕಾನೂನಿನಡಿ ಹೊಣೆಗಾರರನ್ನಾಗಿ ಮಾಡಲಾಗುವುದೆಂಬ ಕೈಗಾರಿಕಾ ಸಂಘಟನೆಗಳ ಕಳವಳದಲ್ಲಿ ಹುರುಳಿಲ್ಲ ಎಂದು ಎಂ.ಎಚ್.ಎ. ಸ್ಪಷ್ಟನೆ

Posted On: 23 APR 2020 8:47PM by PIB Bengaluru

ಸಿಬ್ಬಂದಿಗಳು ಕೋವಿಡ್-19 ಪಾಸಿಟಿವ್ ಕಂಡುಬಂದರೆ ಕಂಪೆನಿ ಸಿ...ಗಳನ್ನು ಕಾನೂನಿನಡಿ ಹೊಣೆಗಾರರನ್ನಾಗಿ ಮಾಡಲಾಗುವುದೆಂಬ ಕೈಗಾರಿಕಾ ಸಂಘಟನೆಗಳ ಕಳವಳದಲ್ಲಿ ಹುರುಳಿಲ್ಲ ಎಂದು ಎಂ.ಎಚ್.. ಸ್ಪಷ್ಟನೆ

ಕಂಟೈನ್ಮೆಂಟ್ ವಲಯದ ಹೊರಗೆ ಇರುವ ಪ್ರದೇಶಗಳಲ್ಲಿ 15.04.2020 ಕ್ಕೆ ಮೊದಲು ಅನುಮತಿಸಲಾದ ಕೈಗಾರಿಕೆಗಳಿಗೆ ಅಧಿಕಾರಿಗಳಿಂದ ಪ್ರತ್ಯೇಕ/ ಹೊಸ ಅನುಮತಿ ಅಗತ್ಯವಿಲ್ಲ

 

ಗೃಹ ವ್ಯವಹಾರಗಳ ಸಚಿವಾಲಯವು (ಎಂ.ಎಚ್..) ದಿನಾಂಕ 15.04.2020 ರಂದು ಹೊರಡಿಸಿರುವ ಕೋವಿಡ್ -19 ವಿರುದ್ದದ ಹೋರಾಟಕ್ಕೆ ಸಂಬಂಧಿಸಿದ ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳಡಿಯಲ್ಲಿ ಹಾಟ್ ಸ್ಪಾಟ್ ಗಳು ಮತ್ತು ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿ ಕೆಲವು ಕಾರ್ಯಚಟುವಟಿಕೆಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

(https://www.mha.gov.in/sites/default/files/MHA%20order%20dt%2015.04.2020%2C%20with%20Revised%20Consolidated%20Guidelines_compressed%20%283%29.pdf)

ಮಾರ್ಗದರ್ಶಿಗಳ ಜೊತೆ, ಕೋವಿಡ್ -19 ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ಮತ್ತು ಕಾರ್ಯಾಚರಣಾ ಪ್ರಕ್ರಿಯೆಯ ಮಾನದಂಡಗಳನ್ನು (ಎಸ್..ಪಿ.) ಸಾಮಾಜಿಕ ಅಂತರ ಕಾಪಾಡುವಿಕೆ ಹಾಗು ಕಚೇರಿಗಳಲ್ಲಿ, ಕಾರ್ಯಾಗಾರಗಳಲ್ಲಿ, ಕಾರ್ಖಾನೆಗಳಲ್ಲಿ, ಮತ್ತು ಇತರ ವ್ಯವಸ್ಥೆಗಳಲ್ಲಿ ಅನುಸರಿಸಬೇಕಾದ ಸ್ವಚ್ಚತಾ ಕ್ರಮಗಳನ್ನು ನಿರ್ದಿಷ್ಟಪಡಿಸಿದೆ. ಕೆಲಸದ ಸ್ಥಳಗಳು ಮತ್ತು ಕೈಗಾರಿಕೆಗಳು ಹಾಗು ವಾಣಿಜ್ಯ ಸಂಸ್ಥೆಗಳು ಮಾರ್ಗದರ್ಶಿಗಳನ್ನು ಅನುಸರಿಸಬೇಕಾಗುತ್ತದೆ. ಮತ್ತು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಸಚಿವಾಲಯದ (ಎಂ.. ಎಚ್.ಎಫ್.ಡಬ್ಲ್ಯು.) ಅಧಿಸೂಚಿಸಿದ ಆರೋಗ್ಯ ಮಾನದಂಡ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತದೆ.

ಮಾರ್ಗದರ್ಶಿಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿರುವುದರಿಂದ, ಉತ್ಪಾದನಾ ಸೌಲಭ್ಯ ಹೊಂದಿರುವ ಕಂಪೆನಿಗಳಿಂದ ಕೆಲವು ಕಳವಳಗಳು ಮಾಧ್ಯಮಗಳಲ್ಲಿ ವ್ಯಕ್ತವಾಗಿವೆ . ಅವುಗಳಲ್ಲಿ ಕೆಲವು ಕೆಳಗಿನಂತಿವೆ:

· ಕಾರ್ಖಾನೆಗಳಲ್ಲಿ ಕೋವಿಡ್ -19 ಪಾಸಿಟಿವ್ ಸಿಬ್ಬಂದಿ ಕಂಡುಬಂದರೆ ಆಗ ಸರಕಾರವು ಸಿ...ಅವರನ್ನು ಜೈಲಿಗೆ ಕಳುಹಿಸುವುದರ ಜೊತೆಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ

· ಇಂತಹ ಪರಿಸ್ಥಿತಿಯಲ್ಲಿ ಕಾರ್ಖಾನೆಯ ಆವರಣವನ್ನು 3 ತಿಂಗಳು ಸೀಲ್ ಮಾಡಲಾಗುತ್ತದೆ.

· ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ , ಕಾರ್ಖಾನೆಯನ್ನು 2 ದಿನಗಳ ಕಾಲ ಮುಚ್ಚಲಾಗುತ್ತದೆ ಮತ್ತು ಪೂರ್ಣ ಕ್ರಮಾನುಸರಣೆಯ ಬಳಿಕ ಪುನರಾರಂಭಕ್ಕೆ ಅವಕಾಶ ನೀಡಲಾಗುತ್ತದೆ.

ಇಂತಹ ಯಾವುದೇ ನಿಬಂಧನೆಗಳು ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳಲ್ಲಿ ಇಲ್ಲ ಎಂದು ಸ್ಪಷ್ಟೀಕರಿಸಲಾಗಿದೆ ಮತ್ತು ಆದುದರಿಂದ ಇಂತಹ ತಪ್ಪಾಗಿ ಅರ್ಥೈಸಲಾಗಿರುವ ಕಳವಳಗಳಲ್ಲಿ ಹುರುಳಿಲ್ಲ.

ಇನ್ನೂ ಮುಂದುವರೆದು ಸ್ಪಷ್ಟೀಕರಿಸುವುದೇನೆಂದರೆ ದಿನಾಂಕ 15.04.2020 ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳ ಪ್ರಕಾರ 24.03. 2020 ರಂದು ಹೊರಡಿಸಲಾದ ಮೊದಲಿನ ಮಾರ್ಗದರ್ಶಿಗಳ ಅನ್ವಯ ಎಲ್ಲಾ ರೀತಿಯ ಮೊದಲಿನ ಚಟುವಟಿಕೆಗಳು ( ಸೇರಿಕೆ ಅಡಿಯಲ್ಲಿ ಅನುಮತಿಸಲಾದವು ಸಹಿತ ), ಮತ್ತು ಅದಕ್ಕೆ ಸೇರ್ಪಡೆ ಮಾಡಲಾದ ನಿರ್ದಿಷ್ಟ ಹೊಸ ಚಟುವಟಿಕೆಗಳು ಕೂಡಾ ಅನುಮತಿಸಲ್ಪಟ್ಟಿವೆ. ಆದುದರಿಂದ ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳು ಈಗಾಗಲೇ ಮತ್ತು ಮೊದಲೇ ಒದಗಿಸಲಾದ ವಿನಾಯಿತಿಗಳನ್ನು ಕಡಿತ ಮಾಡುವುದಿಲ್ಲ. ಆದರೆ ವಿನಾಯಿತಿ ನೀಡಲಾದ ಕಾರ್ಯಚಟುವಟಿಕೆಯು ಕಂಟೈನ್ ಮೆಂಟ್ ವಲಯದಲ್ಲಿ ಬಂದರೆ ಆಗ ಸಡಿಲಿಕೆ ಇರುವುದಿಲ್ಲ.

ಆದುದರಿಂದ ಕಂಟೈನ್ ಮೆಂಟ್ ವಲಯದ ಹೊರಗೆ ಇರುವ ವಲಯಗಳಲ್ಲಿ ಬರುವ ಕೈಗಾರಿಕೆಗಳಿಗೆ 15.04.2020 ಕ್ಕೆ ಮೊದಲು ಕಾರ್ಯಾಚರಿಸಲು ಅನುಮತಿ ನೀಡಿದ್ದರೆ ಪ್ರತ್ಯೇಕ/ ಹೊಸ ಅನುಮತಿಗಳು ಅಧಿಕಾರಿಗಳಿಂದ ಪಡೆಯುವ ಅಗತ್ಯವಿಲ್ಲ. ಎಸ್..ಪಿ.ಗಳ ಪಾಲನೆ, ಸಾಮಾಜಿಕ ಅಂತರ ಪಾಲನೆಯ ಬಗ್ಗೆ ಅದರಲ್ಲಿ ಒತ್ತಿ ಹೇಳಲಾಗಿದೆಯೇ ಹೊರತು ಲಾಕ್ ಡೌನ್ ಅವಧಿಯಲ್ಲಿ ಅನುಮತಿಸಲಾದ ಕರ್ಯಚಟುವಟಿಕೆಗಳ ಪುನರಾರಂಭಕ್ಕೆ ಹೊಸ ಪರವಾನಗೆಯಾಗಲೀ, ಶಾಸನಾತ್ಮಕ ಅನುಮೋದನೆಯಾಗಲೀ ಬೇಕಾಗಿಲ್ಲ.

ಎಂ.ಎಚ್..ಯು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿರುವ ಸಂದೇಶದಲ್ಲಿ ಕೈಗಾರಿಕಾ ಕ್ಷೇತ್ರದ ಸಂಸ್ಥೆಗಳು ಮತ್ತು ಕ್ಷೇತ್ರ ಕಚೇರಿಗಳಿಗೆ ಲಾಕ್ ಡೌನ್ ಕ್ರಮಗಳ ಮಾರ್ಗದರ್ಶಿಗಳ ಬಗ್ಗೆ ತಿಳಿಸುವಂತೆ ಕೋರಿದೆ. ಅದರಲ್ಲಿ ಸಾಂಕ್ರಾಮಿಕ ಹರಡದಂತೆ ನಿರ್ಬಂಧಿಸುವ ಕ್ರಮಗಳನ್ನು ಅನುಸರಿಸಬೇಕಾದ ಬಗ್ಗೆ ತಿಳಿಸಲಾಗಿದೆ. ಮತ್ತು ಇವುಗಳನ್ನು ಉತ್ಪಾದನಾ/ ವಾಣಿಜ್ಯಿಕ ಸಂಸ್ಥೆಗಳ ಆಡಳಿತಗಳಿಗೆ ಕಿರುಕುಳ ನೀಡಲು ದುರ್ಬಳಕೆ ಮಾಡಿಕೊಳ್ಳಬಾರದು ಎಂದೂ ನಿರ್ದೇಶನ ನೀಡಲಾಗಿದೆ.

ರಾಜ್ಯಗಳಿಗೆ ನೀಡಲಾಗಿರುವ ಅಧಿಕೃತ ಸಂದೇಶಕ್ಕೆ ಇಲ್ಲಿ ಕ್ಲಿಕ್ ಮಾಡಿರಿ

 

***


(Release ID: 1617771) Visitor Counter : 234