ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 22 APR 2020 4:33PM by PIB Bengaluru

ಕೋವಿಡ್-19 ಹೊಸ ಮಾಹಿತಿ

 

ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗೆ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತಿವೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಇಂದು ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಹಿರಿಯ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಭ್ರಾತೃತ್ವದ ಎಲ್ಲಾ ಕಳವಳಗಳನ್ನು ನಿವಾರಿಸಿದ ಗೃಹ ಸಚಿವರು, ಅವರ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸರ್ಕಾರವು ಸರ್ವ ಪ್ರಯತ್ನಗಳನ್ನು ಮಾಡುವುದು ಎಂದು ಭರವಸೆ ನೀಡಿದ್ದಾರೆ.

ಅಲ್ಲದೆ, ಇತ್ತೀಚೆಗೆ ಆರೋಗ್ಯ ಸಚಿವಾಲಯವು ಕೋವಿಡ್-19 ಸೇವೆಗಳಿಗೆ ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಸಮರ್ಪಕ ಕ್ರಮಗಳನ್ನು ಖಾತ್ರಿಪಡಿಸುವಲ್ಲಿ ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. ಎಲ್ಲಾ ವೃತ್ತಿಪರರಿಗಿಂತ ಅವರ ಕೌಶಲ್ಯ ಮತ್ತು ಸೇವೆಯು ಪ್ರಸ್ತುತ ಕಾಲದಲ್ಲಿ ಜನರನ್ನು ಉಳಿಸಲು ಒಂದು ವಿಶಿಷ್ಟ ಸ್ಥಾನದಲ್ಲಿರಿಸುತ್ತದೆ ಎಂದು ಸಹ ಹೇಳಲಾಗಿದೆ. ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವೃದ್ಧಿ ತರಬೇತಿ, ವೈದ್ಯಕೀಯ ಸುರಕ್ಷತೆ, ಸಿಬ್ಬಂದಿ ಮಾರ್ಗಸೂಚಿ ಮತ್ತು ಸಮಯೋಚಿತ ಪಾವತಿ, ಮಾನಸಿಕ ಬೆಂಬಲ, ಮುಂಚೂಣಿ ಕಾರ್ಮಿಕರ ತರಬೇತಿ ಮತ್ತು ಜೀವ ವಿಮಾ ರಕ್ಷಣೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಹೆಚ್ಚುವರಿಯಾಗಿ, ಸಾಂಕ್ರಾಮಿಕ ರೋಗ ಕಾಯ್ದೆ, 1897 ಅಡಿಯಲ್ಲಿ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂದು ಸುಗ್ರೀವಾಜ್ಞೆಯನ್ನು ಪ್ರಕಟಿಸಲು ಕ್ಯಾಬಿನೆಟ್ ಶಿಫಾರಸು ಮಾಡಿದೆ.

ಎಲ್ಲಾ ರಾಜ್ಯಗಳಿಗೆ ಕ್ಷಿಪ್ರ ಪ್ರತಿಕಾಯ (ಆ್ಯಂಟಿಬಾಡಿ) ಪರೀಕ್ಷೆಯನ್ನು ಬಳಸುವ ಪ್ರೋಟೋಕಾಲ್ ಅನ್ನು ಐಸಿಎಂಆರ್ ರವಾನಿಸಿದೆ. ಪ್ರತಿಕಾಯ ಕ್ಷಿಪ್ರ ಪರೀಕ್ಷೆಗಳನ್ನು ಹೆಚ್ಚಾಗಿ ಕಣ್ಗಾವಲು ಸಾಧನವಾಗಿ ಬಳಸಲಾಗುತ್ತದೆ ಎಂದು ಪುನರುಚ್ಚರಿಸಲಾಗಿದೆ. ಜಾಗತಿಕವಾಗಿ, ಪರೀಕ್ಷೆಯ ಉಪಯುಕ್ತತೆಯು ವಿಕಸನಗೊಳ್ಳುತ್ತಿದೆ ಮತ್ತು ಪ್ರಸ್ತುತ ವ್ಯಕ್ತಿಗಳಲ್ಲಿ ಪ್ರತಿಕಾಯಗಳ ರಚನೆಯನ್ನು ಕಂಡುಹಿಡಿಯಲು ಇದನ್ನು ಬಳಸಲಾಗುತ್ತಿದೆ. ಪರೀಕ್ಷಾ ಫಲಿತಾಂಶಗಳು ಪ್ರದೇಶದ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಐಸಿಎಂಆರ್ ಗಮನಿಸಿದಂತೆ, ಪರೀಕ್ಷೆಗಳು ಕೋವಿಡ್-19 ಪ್ರಕರಣಗಳನ್ನು ಪತ್ತೆಹಚ್ಚುವ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಬದಲಾಯಿಸುವುದಿಲ್ಲ. ಕ್ಷೇತ್ರ ಪರಿಸ್ಥಿತಿಗಳಲ್ಲಿ ಕ್ಷಿಪ್ರ ಪ್ರತಿಕಾಯ ಪರೀಕ್ಷೆಯ ಉಪಯುಕ್ತತೆಯ ವ್ಯಾಪ್ತಿ ಮತ್ತು ವ್ಯಾಪ್ತಿಯನ್ನು ನಿರ್ಣಯಿಸಲು ವಿವಿಧ ರಾಜ್ಯಗಳಿಂದ ದತ್ತಾಂಶವನ್ನು ಸಂಗ್ರಹಿಸಲು ಐಸಿಎಂಆರ್ ನೆರವು ನೀಡಿದೆ ಮತ್ತು ಐಸಿಎಂಆರ್ ನಿಯಮಿತವಾಗಿ ರಾಜ್ಯಗಳಿಗೆ ಸಲಹೆ ನೀಡುತ್ತಲೇ ಇರುತ್ತದೆ. ಪರೀಕ್ಷೆಗಳಿಗೆ ನಿಗದಿತ ಪ್ರೋಟೋಕಾಲ್ ಅನ್ನು ಅನುಸರಿಸಲು ಮತ್ತು ಅವುಗಳನ್ನು ಯಾವ ಉದ್ದೇಶಗಳಿಗಾಗಿ ಬಳಸಬೇಕೆಂದು ರಾಜ್ಯಗಳಿಗೆ ಸೂಚಿಸಲಾಗಿದೆ.

ಭಾರತ ಸರ್ಕಾರವು ಟೆಲಿಫೋನಿಕ್ ಸಮೀಕ್ಷೆಯನ್ನು ನಡೆಸಲಿದ್ದು, ಅದರಲ್ಲಿ ನಾಗರಿಕರನ್ನು ತಮ್ಮ ಮೊಬೈಲ್ ಫೋನ್ ಮೂಲಕ 1921 ಸಂಖ್ಯೆಯಿಂದ ಎನ್ಐಸಿ ಮೂಲಕ ಸಂಪರ್ಕಿಸಬೇಕು. ಇದು ನೈಜವಾದ ಸಮೀಕ್ಷೆ. ಕೋವಿಡ್-19 ರೋಗಲಕ್ಷಣಗಳ ಹರಡುವಿಕೆ ಮತ್ತು ವಿತರಣೆಯ ಬಗ್ಗೆ ಸರಿಯಾದ ಪ್ರತಿಕ್ರಿಯೆ ಪಡೆಯಲು ಎಲ್ಲಾ ನಾಗರಿಕರು ಭಾಗವಹಿಸಲು ವಿನಂತಿಸಲಾಗಿದೆ. ಅಲ್ಲದೆ, ಇಂತಹ ರೀತಿಯ ಸಮೀಕ್ಷೆಯ ಸೋಗಿನಲ್ಲಿ ಕುಚೇಷ್ಟೆ ಮಾಡುವವರು ಅಥವಾ ಇತರ ಯಾವುದೇ ಸಂಖ್ಯೆಯ ಕರೆಗಳ ಬಗ್ಗೆ ದಯವಿಟ್ಟು ಎಚ್ಚರವಿರಲಿ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮಾಧ್ಯಮಗಳ ಮೂಲಕ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ. ಕಾರ್ಯದ ಅಧಿಕೃತ ಸ್ವರೂಪದ ಬಗ್ಗೆ ಜನರಿಗೆ ತಿಳಿಸಲು ಮತ್ತು ಕುಚೇಷ್ಟೆ ಮಾಡುವವರು ಅಥವಾ ಇತರ ಯಾವುದೇ ಸಂಖ್ಯೆಯಿಂದ ಫಿಶಿಂಗ್ / ಸಂಸ್ಥೆಯ ಹೆಸರಿನ ದುರಪಯೋಗದ ಪ್ರಯತ್ನಗಳಿಂದ ಇತರ ಯಾವುದೇ ಕರೆಗಳ ಬಗ್ಗೆ ಜಾಗೃತಿ ಮೂಡಿಸಲು ಸಹ ಕೋರಲಾಗಿದೆ. ಅವರು ಸಮೀಕ್ಷೆಯ ಮಾಹಿತಿಯನ್ನು ರಾಜ್ಯ ಆರೋಗ್ಯ ಇಲಾಖೆಯ ಸಾಮಾಜಿಕ ಮಾದ್ಯಮದಲ್ಲಿ ಮತ್ತು ಇತರ ಇಲಾಖೆಯ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಳ್ಳಲು ತಿಳಿಸಲಾಗಿದೆ.

ಪ್ರಸ್ತುತ, 3870 ಜನರನ್ನು ಗುಣಪಡಿಸಲಾಗಿದೆ ಇದರಿಂದ ಚೇತರಿಕೆಯು 19.36% ರಷ್ಟಾಗಿದೆ. ನಿನ್ನೆಯಿಂದ, 1383 ಹೊಸ ಪ್ರಕರಣಗಳ ಹೆಚ್ಚಳ ವರದಿಯಾಗಿದೆ. ಅಲ್ಲದೆ, ಭಾರತದಲ್ಲಿ ಕೋವಿಡ್-19 ಕ್ಕೆ ಒಟ್ಟು 19,984 ಜನರು ಪಾಸಿಟಿವೆ ಎಂದು ದೃಢಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 50 ಹೊಸ ಸಾವುಗಳು ವರದಿಯಾಗಿವೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1617341) Visitor Counter : 277