ಗೃಹ ವ್ಯವಹಾರಗಳ ಸಚಿವಾಲಯ

ಹಿರಿಯ ನಾಗರಿಕರಿಗೆ ಮನೆಯಲ್ಲಿ ಆರೈಕೆ ನೀಡುವವರು, ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್, ನಗರ ಪ್ರದೇಶಗಳಲ್ಲಿನ ಆಹಾರ ಸಂಸ್ಕರಣಾ ಘಟಕಗಳು ಕೋವಿಡ್-19 ಲಾಕ್‌ಡೌನ್ ನಿರ್ಬಂಧಗಳಿಂದ ವಿನಾಯಿತಿ ಪಡೆದಿವೆ

Posted On: 21 APR 2020 9:10PM by PIB Bengaluru

ಹಿರಿಯ ನಾಗರಿಕರಿಗೆ ಮನೆಯಲ್ಲಿ ಆರೈಕೆ ನೀಡುವವರು, ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್, ನಗರ ಪ್ರದೇಶಗಳಲ್ಲಿನ ಆಹಾರ ಸಂಸ್ಕರಣಾ ಘಟಕಗಳು ಕೋವಿಡ್-19 ಲಾಕ್ಡೌನ್ ನಿರ್ಬಂಧಗಳಿಂದ ವಿನಾಯಿತಿ ಪಡೆದಿವೆ

 

ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಲಾಕ್ಡೌನ್ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು (ಎಂಎಚ್) ಹೊರಡಿಸಿದ ಏಕೀಕೃತ ಪರಿಷ್ಕೃತ ಮಾರ್ಗಸೂಚಿಗಳ (https://www.mha.gov.in/sites/default/files/MHA%20order%20dt%2015.04.2020%2C) ಅಡಿಯಲ್ಲಿ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ

ಮೇಲಿನ ಉಲ್ಲೇಖಿತ ಆದೇಶಗಳ ಅಡಿಯಲ್ಲಿ ನೀಡಲಾದ ಮಾರ್ಗಸೂಚಿಗಳಲ್ಲಿ ಈಗಾಗಲೇ ಅನುಮತಿಸಲಾದ ವರ್ಗಗಳಲ್ಲಿನ ನಿರ್ದಿಷ್ಟ ಸೇವೆಗಳು/ ಚಟುವಟಿಕೆಗಳ ವಿನಾಯಿತಿಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ನಿಟ್ಟಿನಲ್ಲಿ, ಇದನ್ನು ಸ್ಪಷ್ಟಪಡಿಸಲಾಗಿದೆ :-

  • 8 () ಅಧಿನಿಯಮಅಡಿಯಲ್ಲಿ ಸಾಮಾಜಿಕ ವಲಯ - ಬೆಡ್ ಸೈಡ್ ಅಟೆಂಡೆಂಟ್ಗಳು ಮತ್ತು ತಮ್ಮ ಮನೆಗಳಲ್ಲಿ ವಾಸಿಸುವ ಹಿರಿಯ ನಾಗರಿಕರ ಆರೈಕೆ ನೀಡುವವರನ್ನು ಒಳಗೊಂಡಿದೆ.
  • 11 (v) ಅಧಿನಿಯಮ ಅಡಿಯಲ್ಲಿರುವ ಸಾರ್ವಜನಿಕ ಉಪಯುಕ್ತತೆಗಳು ಪ್ರಿಪೇಯ್ಡ್ ಮೊಬೈಲ್ ಸಂಪರ್ಕಕ್ಕಾಗಿ ರೀಚಾರ್ಜ್ ಸೌಲಭ್ಯಗಳನ್ನು ಒಳಗೊಂಡಿವೆ.
  • 13 () ಅಧಿನಿಯಮ ಅಡಿಯಲ್ಲಿ ಅಗತ್ಯ ವಸ್ತುಗಳ ಸರಬರಾಜು ನಗರ ಪ್ರದೇಶಗಳಲ್ಲಿರುವ ಬ್ರೆಡ್ ಕಾರ್ಖಾನೆಗಳು, ಹಾಲು ಸಂಸ್ಕರಣಾ ಘಟಕಗಳು, ಹಿಟ್ಟು ಗಿರಣಿಗಳು, ದಾಲ್ ಗಿರಣಿಗಳು ಮುಂತಾದ ಆಹಾರ ಸಂಸ್ಕರಣಾ ಘಟಕಗಳನ್ನು ಒಳಗೊಂಡಿದೆ.

ಆದಾಗ್ಯೂ, ಲಾಕ್ಡೌನ್ ಕ್ರಮಗಳಲ್ಲಿ ನಿಗಧಿಪಡಿಸಿರುವಂತೆ, ಕಚೇರಿಗಳು, ಕಾರ್ಯಾಗಾರಗಳು, ಕಾರ್ಖಾನೆಗಳು ಮತ್ತು ಸಂಸ್ಥೆಗಳಿಗೆ ಸಾಮಾಜಿಕ ಅಂತರವಿಡಲು ರಾಷ್ಟ್ರೀಯ ಕೋವಿಡ್-19 ನಿರ್ದೇಶನಗಳು ಮತ್ತು ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಬೇಕು.

ತಳಮಟ್ಟದಲ್ಲಿ ಅಸ್ಪಷ್ಟತೆಯನ್ನು ತಪ್ಪಿಸಲು, ಮೇಲಿನಂತೆ ಜಿಲ್ಲಾ ಅಧಿಕಾರಿಗಳು ಮತ್ತು ಕ್ಷೇತ್ರ ಸಂಸ್ಥೆಗಳಿಗೆ ತಿಳಿಸಲು ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ.

ರಾಜ್ಯಗಳಿಗೆ ಅಧಿಕೃತ ಸಂವಹನವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

***


(Release ID: 1617253) Visitor Counter : 209