ಕೃಷಿ ಸಚಿವಾಲಯ

ಕೋವಿಡ್‌-19 ಸಾಂಕ್ರಾಮಿಕ ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದಾದ್ಯಂತ ಸಕಾಲಕ್ಕೆ ಅಗತ್ಯ ವಸ್ತುಗಳನ್ನು ನಿರಂತರವಾಗಿ ಪೂರೈಸಲು ಸರ್ಕಾರದಿಂದ ಸಮಯೋಚಿತ ಮಧ್ಯಸ್ಥಿಕೆ

Posted On: 21 APR 2020 6:21PM by PIB Bengaluru

ಕೋವಿಡ್‌-19 ಸಾಂಕ್ರಾಮಿಕ ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದಾದ್ಯಂತ ಸಕಾಲಕ್ಕೆ ಅಗತ್ಯ ವಸ್ತುಗಳನ್ನು ನಿರಂತರವಾಗಿ ಪೂರೈಸಲು ಸರ್ಕಾರದಿಂದ ಸಮಯೋಚಿತ ಮಧ್ಯಸ್ಥಿಕೆ

11.37 ಲಕ್ಷ ಹೆಚ್ಚು ಲಾರಿಗಳು ಮತ್ತು 2.3 ಲಕ್ಷ ಸಾರಿಗೆದಾತರು ಇ–ನ್ಯಾಮ್‌ಗೆ ಸಂಪರ್ಕ ಹೊಂದಿದ್ದಾರೆ

 

ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ ಸಚಿವಾಲಯವು ಸಗಟು ಮಾರುಕಟ್ಟೆಯನ್ನು ವಿಕೇಂದ್ರೀಕರಣಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಜತೆಗೆ, ಅಗತ್ಯ ವಸ್ತುಗಳ ವಿತರಣೆಯ ಸರಪಳಿ ನಿರಂತರವಾಗಿ ಇರುವಂತೆ ವ್ಯವಸ್ಥೆಗಳನ್ನು ಮಾಡಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ನ್ಯಾಮ್‌) ಪೋರ್ಟಲ್‌ನಲ್ಲಿ ಎರಡು ಹೊಸ ವಿಷಯಗಳನ್ನು ಸೇರಿಸಿ ಪರಿಷ್ಕರಿಸಲಾಗಿದೆ. (ಎ) ಉಗ್ರಾಣಗಳ ಆಧಾರಿತ ವ್ಯಾಪಾರ ಕಾರ್ಯತಂತ್ರ ಮತ್ತು (ಬಿ) ಕೃಷಿಕರ ಉತ್ಪಾದಕರ ಸಂಘಟನೆಗಳು. ಉಗ್ರಾಣಗಳ ಆಧಾರಿತ ವ್ಯಾಪಾರಿಂದ ಕೃಷಿಕರು ತಮ್ಮ ಉತ್ಪನ್ನಗಳನ್ನು ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರದಿಂದ (ಡಬ್ಲ್ಯೂಡಿಆರ್‌ಎ) ನೋಂದಾಯಿತ ಉಗ್ರಾಣಗಳಿಂದ ಮಾರಾಟ ಮಾಡಲು ಅವಕಾಶ ದೊರೆಯುತ್ತದೆ. ಎಫ್‌ಪಿಒ ವ್ಯಾಪಾರದ ವ್ಯವಸ್ಥೆ ಅಡಿಯಲ್ಲಿ ಎಫ್‌ಪಿಒಗಳು ತಮ್ಮ ಉತ್ಪನ್ನಗಳನ್ನು ಸಂಗ್ರಹ ಕೇಂದ್ರದಿಂದ ಚಿತ್ರಗಳು ಮತ್ತು ಗುಣಮಟ್ಟದ ಅಂಶಗಳನ್ನು ನಮೂದಿಸಿ ಅಪ್‌ಲೋಡ್‌ ಮಾಡಬೇಕು. ಮಂಡಿಗಳಿಗೆ ಭೇಟಿ ನೀಡದೆ ಆನ್‌ಲೈನ್‌ ಬಿಡ್ಡಿಂಗ್‌ಗೆ ಇವುಗಳನ್ನು ಅಪ್‌ಲೋಡ್‌ ಮಾಡಬೇಕು. ಇದುವರೆಗೆ 12 ರಾಜ್ಯಗಳ( ಪಂಜಾಬ್‌, ಒಡಿಶಾ, ಗುಜರಾತ್‌, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಖಾಂಡ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌) ಎಫ್‌ಪಿಒಗಳು ಈ ರೀತಿಯ ವ್ಯಾಪಾರದಲ್ಲಿ ತೊಡಗಿದ್ದಾರೆ.

ರೈತರಿಂದ/ಎಫ್‌ಪಿಒಗಳು/ ಸಹಕಾರಿ ಸಂಸ್ಥೆಗಳಿಂದ ನೇರ ಮಾರುಕಟ್ಟೆಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೃಷಿ ಸಚಿವಾಲಯದಿಂದ ಸೂಚನೆ ನೀಡಲಾಗಿದೆ. ರಾಜ್ಯಗಳ ಎಪಿಎಂಸಿ ನಿಯಂತ್ರಣವನ್ನು ಕಡಿಮೆ ಮಾಡಬೇಕು ಎಮದು ಸಲಹೆ ನೀಡಲಾಗಿದೆ. ಎಫ್‌ಪಿಒಗಳು ತಮ್ಮ ಸಮೀಪದ ನಗರ ಮತ್ತು ಪಟ್ಟಣಗಳಲ್ಲಿ ತರಕಾರಿಗಳನ್ನು ಪೂರೈಸುತ್ತಿದ್ದಾರೆ. ಸರಕು ಸಾಗಾಣಿಕೆಯ ಸಂಚಾರ ಮತ್ತು ವ್ಯಾಪಾರ–ವಹಿವಾಟಿನಲ್ಲಿ ಆಗುವ ಸಮಸ್ಯೆಗಳನ್ನು ಸಕಾಲಕ್ಕೆ ಬಗೆಹರಿಸಲಾಗುತ್ತಿದೆ. ಎಫ್‌ಪಿಒಗಳಿಗೆ ಪಾಸ್‌ಗಳು ಮತ್ತು ಇ–ಪಾಸ್‌ಗಳನ್ನು ವಿತರಿಸಲು ರಾಜ್ಯ ಸರ್ಕಾರಗಳು ಈಗಾಗಲೇ ನಿರ್ಧರಿಸಿವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಇ–ನ್ಯಾಮ್‌ ಎನ್ನುವುದು ಸಾಮಾಜಿಕ ಅಂತರ ಕಾಪಾಡಲು ಪ್ರಮುಖ ಅಸ್ತ್ರವಾಗಿದೆ. ರಾಜ್ಯ ಸರ್ಕಾರಗಳು ವರ್ಚುವಲ್‌ ವ್ಯಾಪಾರ ವೇದಿಕೆ ಇ–ನ್ಯಾಮ್‌ಗೆ ಉತ್ತೇಜನ ನೀಡುತ್ತಿವೆ. ಇದರಿಂದ, ಕೃಷಿ ಉತ್ಪನ್ನಗಳ ನಿರ್ವಹಣೆ ಮತ್ತು ವಹಿವಾಟಿನಲ್ಲಿ ಜನರ ಸಂಪರ್ಕ ಕಡಿಮೆಯಾಗುತ್ತಿದೆ. ಯಾವ ಸ್ಥಳದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಿ ಇಡಲಾಗಿದೆಯೋ ಅಲ್ಲಿಂದಲೇ ಆನ್‌ಲೈನ್‌ ಮೂಲಕವೇ ವ್ಯಾಪಾರ ನಡೆಯುತ್ತಿದೆ.

ಜಾರ್ಖಂಡ್‌ನಂತಹ ರಾಜ್ಯಗಳು ಫಾರ್ಮ್‌ ಗೇಟ್‌ ವ್ಯಾಪಾರವನ್ನು ಇ–ನ್ಯಾಮ್‌ ಮೂಲಕ ಆರಂಭಿಸಿವೆ. ರೈತರು ಆನ್‌ಲೈನ್‌ ಬಿಡ್ಡಿಂಗ್‌ಗಾಗಿ ತಮ್ಮ ಕೃಷಿ ಉತ್ಪನ್ನಗಳ ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದಕ್ಕಾಗಿ ಎಪಿಎಂಸಿಗೆ ತೆರಳುವ ಅಗತ್ಯವಿಲ್ಲ. ಇದೇ ರೀತಿ, ಎಫ್‌ಪಿಒಗಳು ಇ–ನ್ಯಾಮ್‌ ಅಡಿಯಲ್ಲಿ ವ್ಯಾಪಾರ ಮಾಡಲು ತಮ್ಮ ಕೃಷಿ ಉತ್ಪನ್ನಗಳನ್ನು ಸಂಗ್ರಹ ಕೇಂದ್ರಗಳಿಂದಲೇ ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ.

ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವುದು ಕಷ್ಟಕರ ಮತ್ತು ಅನಿವಾರ್ಯವೂ ಹೌದು. ಹೀಗಾಗಿಯೇ ಸಚಿವಾಲಯವು ರೈತ ಸ್ನೇಹಿ ಮೊಬೈಲ್‌ ಅಪ್ಲಿಕೇಷನ್‌ ‘ಕಿಸಾನ್‌ ರಥ್‌’ ಅನ್ನು ಆರಂಭಿಸಿದೆ. ಇದರಿಂದ, ರೈತರು ಮತ್ತು ವ್ಯಾಪಾರಿಗಳು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಾಗಾಣಿಕೆ ಮಾಡಲು ವಾಹನಗಳ ಹುಡುಕಾಟ ನಡೆಸಲು ಅನುಕೂಲವಾಗುತ್ತದೆ. ಪ್ರಾಥಮಿಕ ಹಂತದ ಸಾಗಾಣಿಕೆಯು ರೈತರ ಜಮೀನುಗಳಿಂದ ಮಂಡಿಗಳು, ಎಫ್‌ಪಿಒ ಕೇಂದ್ರಗಳು, ಗ್ರಾಮಗಳ ಹಾಥ್‌ಗಳು, ರೈಲ್ವೆ ನಿಲ್ದಾಣಗಳು ಮತ್ತು ಉಗ್ರಾಣಗಳಿಗೆ ತಲುಪಿಸುವುದಾಗಿದೆ. ದ್ವಿತೀಯ ಹಂತದ ಸಾಗಾಣಿಕೆಯು ಮಂಡಿಯೀಂದ ಅಂತರರಾಜ್ಯ ಮತ್ತು ರಾಜ್ಯದ ಒಳಗಿನ ಮಂಡಿಗಳಿಗೆ, ಸಂಸ್ಕರಣಾ ಘಟಕಗಳಿಗೆ, ರೈಲ್ವೆ ನಿಲ್ದಾಣಗಳಿಗೆ ಹಾಗೂ ರಾಜ್ಯದ ಒಳಗಿನ ಮತ್ತು ಅಂತರರಾಜ್ಯ ಉಗ್ರಾಣಗಳಿಗೆ ಮತ್ತು ಸಗಟುದಾರರಿಗೆ ಇತ್ಯಾದಿಗಳಿಗೆ ತಲುಪಿಸುವುದಾಗಿದೆ. ಇದರಿಂದ ಸುಗಮವಾಗಿ ರೈತರು ಮತ್ತು ಉಗ್ರಾಣಗಳು, ಎಫ್‌ಪಿಒಗಳು, ಎಪಿಎಂಸಿ ಮಂಡಿಗಳು ಮತ್ತು ಅಂತರ ಮತ್ತು ಅಂತರರಾಜ್ಯ ಖರೀದಿದಾರರ ನಡುವೆ ಸಂಪರ್ಕ ಸಾಧಿಸಿ ಸ್ಪರ್ಧಾತ್ಮಕ ದರಗಳಲ್ಲಿ ಸಾಗಾಣಿಕೆ ಮಾಡಲು ಸಾಧ್ಯವಾಗುತ್ತದೆ. ಜತೆಗೆ, ಸಕಾಲಕ್ಕೆ ತಲುಪಿಸುವುದರಿಂದ ಆಹಾರ ವ್ಯರ್ಥವಾಗುವುದು ಕಡಿಮೆಯಾಗುತ್ತದೆ. ಇದರಿಂದ, ಅತಿ ಕಡಿಮೆ ಅವಧಿಕಯಲ್ಲಿ ನಾಶವಾಗುವ ವಸ್ತುಗಳನ್ನು ಸಕಾಲಕ್ಕೆ ತಲುಪಿಸುವುದರಿಂದ ಇವುಗಳಿಗೂ ಉತ್ತಮ ಬೆಲೆ ದೊರೆಯುತ್ತದೆ. ‘ಕಿಸಾನ್‌ ರಥ್‌’ ಆ್ಯಪ್‌ ಅಪ್ಲಿಕೇಷನ್‌ ಅನ್ನು ಇ–ನ್ಯಾಮ್‌ ಮತ್ತು –ನ್ಯಾಮ್‌ ಮಂಡಿಗಳು ಇಲ್ಲದವರಿಗೂ ಅಭಿವೃದ್ಧಿಪಡಿಸಲಾಗಿದೆ.

ಇ–ನ್ಯಾಮ್‌ ವೇದಿಕೆ ಅಡಿಯಲ್ಲಿ ಸರಕು ಸಾಗಾಣಿಕೆದಾರರ ಪಟ್ಟಿಯನ್ನು ನೀಡಲಾಗಿದೆ. ಮಂಡಿಗಳಿಂದ ವಿವಿಧ ಸ್ಥಳಗಳಿಗೆ ಕೃಷಿ ಉತ್ಪನ್ನಗಳನ್ನು ಸಕಾಲಕ್ಕೆ ತಲುಪಿಸಲು ಸಾಗಾಣಿಕೆದಾರರನ್ನು ಸುಲಭವಾಗಿ ಸಂಪರ್ಕಿಸಲು ವ್ಯಾಪಾರಗಳಿಗೆ ಅನುಕೂಲವಾಗುತ್ತದೆ. 11.37 ಲಕ್ಷ ಟ್ರಕ್‌ಗಳು ಮತ್ತು 2.3 ಲಕ್ಷ ಸಾಗಾಣಿಕೆದಾರರು ಈ ವ್ಯವಸ್ಥೆಯಲ್ಲಿ ಈಗಾಗಲೇ ಸಂಪರ್ಕದಲ್ಲಿದ್ದಾರೆ.

ಅಗತ್ಯ ವಸ್ತುಗಳನ್ನು ಅಂತರರಾಜ್ಯ ಮಾರ್ಗದಲ್ಲಿ ಸಾಗಾಣಿಕೆ ಮಾಡುವುದನ್ನು ಸರ್ಕಾರ ಈಗಾಗಲೇ ಮುಕ್ತಗೊಳಿಸಿ ನಿರ್ಧಾರ ಕೈಗೊಂಡಿದೆ. ಕೃಷಿ ಸಚಿವಾಲಯವು ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಗಳ ಜತೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಅಂತರ ರಾಜ್ಯ ಮಟ್ಟದಲ್ಲಿ 24 ಗಂಟೆಯೂ ಸಾಗಾಣಿಕೆ ಮಾಡಲು ಅವಕಾಶ ನೀಡಿದೆ. ಮುಂಜಾಗ್ರತ ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳದೆ ಸರ್ಕಾರವು ಹಣ್ಣು ಮತ್ತು ತರಕಾರಿ ಹಾಗೂ ಕೃಷಿ– ಗ್ರಾಹಕರ ಮಾರುಕಟ್ಟೆಗಳ ಕಾರ್ಯನಿರ್ವಹಣೆ ಮೇಲೆ ನಿಗಾವಹಿಸಿದೆ.

ಮಹಾರಾಷ್ಟ್ರದಿಂದ ಇತರ ರಾಜ್ಯಗಳಿಗೆ ಈರುಳ್ಳಿ ಸಾಗಾಣಿಕೆ ಮಾಡಲು ಸಚಿವಾಲಯವು ಮಹಾರಾಷ್ಟ್ರ ಮಂಡಿ ಮಂಡಳಿ ಜತೆ ಸಂಪರ್ಕದಲ್ಲಿದೆ. ಪ್ರಸ್ತುತ, ನಾಸಿಕ್‌ ಜಿಲ್ಲೆಯಲ್ಲಿನ ಎಪಿಎಂಸಿಗಳು ಪ್ರತಿ ದಿನ 300 ಲಾರಿಯನ್ನು ಈರುಳ್ಳಿಯನ್ನು ದೇಶದ ವಿವಿಧ ಭಾಗಗಳಿಗೆ ನಿಯಮಿತವಾಗಿ ಕಳುಹಿಸುತ್ತಿವೆ. ಇವುಗಳಲ್ಲಿ ದೆಹಲಿ, ಹರಿಯಾಣ, ಬಿಹಾರ, ತಮಿಳುನಾಡು, ಪಂಜಾಬ್‌, ಕೋಲ್ಕತ್ತ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಒಡಿಶಾ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಗೆ ಈರುಳ್ಳಿ ರವಾನಿಸಲಾಗುತ್ತಿದೆ.

ಅಗತ್ಯ ವಸ್ತುಗಳು ಹಾಗೂ ಹಣ್ಣು ಮತ್ತು ತರಕಾರಿ ವಿತರಣೆ ಮತ್ತು ದರಗಳ ಮೇಲೆ ನಿಗಾವಹಿಸಲು ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗಿದೆ. ಜತೆಗೆ, ಈಶಾನ್ಯ ರಾಜ್ಯಗಳಿಗೂ ಅಗತ್ಯ ವಸ್ತುಗಳು ಪೂರೈಕೆಯಾಗುವಂತೆ ಅಂತರರಾಜ್ಯ ಸಾಗಾಣಿಕೆ ಮೇಲೆ ನಿಗಾವಹಿಸಲಾಗಿದೆ.

***



(Release ID: 1617201) Visitor Counter : 203