ಉಪರಾಷ್ಟ್ರಪತಿಗಳ ಕಾರ್ಯಾಲಯ

ಭೂಮಿಯನ್ನು ಹಸಿರಾದ ಸ್ವಚ್ಛ ತಾಣವನ್ನಾಗಿ ಪರಿವರ್ತಿಸಲು ಉಪರಾಷ್ಟ್ರಪತಿ ಕರೆ

Posted On: 21 APR 2020 6:15PM by PIB Bengaluru

ಭೂಮಿಯನ್ನು ಹಸಿರಾದ ಸ್ವಚ್ಛ ತಾಣವನ್ನಾಗಿ ಪರಿವರ್ತಿಸಲು ಉಪರಾಷ್ಟ್ರಪತಿ ಕರೆ

ವಿಶ್ವ ಭೂಮಿ ದಿನದ 50ನೇ ವಾರ್ಷಿಕೋತ್ಸವದ ದಿನದಂದು ಮಾತನಾಡಿದ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಅಭಿವೃದ್ಧಿ ಮಾದರಿಗಳು ಮತ್ತು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬೇಕಾಗಿದೆ

ಹವಾಮಾನ ಸ್ನೇಹಿ ನೀತಿಗಳನ್ನು ಅಳವಡಿಸಿಕೊಂಡು ಸುಸ್ಥಿರ ಗ್ರಹವನ್ನಾಗಿ ಪರಿವರ್ತಿಸಲು ನಾವು ಕಾರ್ಯೋನ್ಮುಖರಾಗಬೇಕಾಗಿದೆ: ಉಪರಾಷ್ಟ್ರಪತಿ

ನವೀಕರಿಸಬಹುದಾದ ಇಂಧನಗಳು, ಹಸಿರು ಕಟ್ಟಡಗಳ ಕಲ್ಪನೆ, ಸ್ವಚ್ಛ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ವಾಹನಗಳಿಗೆ ಆದ್ಯತೆ ನೀಡಬೇಕಾಗಿದೆ: ಉಪರಾಷ್ಟ್ರಪತಿ

ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿಕಡಿಮೆ ಉಪಯೋಗಿಸು, ಪುನರ್ಬಳಕೆ ಮಾಡು ಮತ್ತು ಪುನರ್ತಯಾರಿಸುಮಂತ್ರವನ್ನು ಕೆಳಹಂತದಲ್ಲಿ ಮಾಡಬೇಕಾಗಿದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು

 

ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಹೀಗಾಗಿ, ಹಸಿರೀಕರಣ ಹೊಂದಿದ ಸ್ವಚ್ಛ ಭೂಮಿ ನಮ್ಮ ಆದ್ಯತೆಯಾಗಬೇಕು ಎಂದು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಎಲ್ಲ ನಾಗರಿಕರಿಗೆ ಕರೆ ನೀಡಿದರು.

ವಿಶ್ವ ಭೂಮಿ ದಿನದಂದು ಸಂದೇಶ ನೀಡಿದ ಉಪರಾಷ್ಟ್ರಪತಿ ಅವರು, ‘ನಮ್ಮ ತಾಯಿ ಸ್ವರೂಪದಲ್ಲಿ ನಿಸರ್ಗವನ್ನು ರಕ್ಷಿಸಲು ನಾವೆಲ್ಲರೂ ಪ್ರಥಮ ಆದ್ಯತೆ ನೀಡಬೇಕಾಗಿದೆ. ಅಭಿವೃದ್ಧಿ ಮಾದರಿಗಳಲ್ಲಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ತರಬೇಕಾಗಿದೆ’ ಎಂದು ಅವರು ಹೇಳಿದರು.

ಕೋವಿಡ್‌–19 ಸಾಂಕ್ರಾಮಿಕ ರೋಗವನ್ನು ಪ್ರಸ್ತಾಪಿಸಿದ ಅವರು, ನಮ್ಮ ಅಭಿವೃದ್ಧಿ ಮತ್ತು ಆರ್ಥಿಕ ಕಾರ್ಯತಂತ್ರಗಳನ್ನು ಈಗ ಪುನರ್‌ ವಿಮರ್ಶೆ ಮಾಡಬೇಕಾದ ಸಂದರ್ಭದಲ್ಲಿ ಈಗ ಒದಗಿ ಬಂದಿದೆ ಎಂದು ಉಪರಾಷ್ಟ್ರಪತಿ ಹೇಳಿದರು.

ಕೋವಿಡ್‌–19ರಿಂದ ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ಪ್ರಸ್ತಾಪಿಸಿದ ಅವರು, ‘ಲಾಕ್‌ಡೌನ್‌ನಿಂದ ಇಡೀ ವಿಶ್ವವೇ ಸ್ತಬ್ದವಾಗಿದೆ. ಮಾಲಿನ್ಯ ಮಟ್ಟ ಕಡಿಮೆಯಾಗಿದೆ ಮತ್ತು ವಾಯು ಗುಣಮಟ್ಟ ಸುಧಾರಿಸಿದೆ. ಇದರಿಂದ, ಪರಿಸರ ಸಮತೋಲನ ಕಾಪಾಡದೆ ನಾವೆಷ್ಟು ಹಾನಿ ಮಾಡಿದ್ದೇವೆ ಎನ್ನುವುದು ಈಗ ಅರಿವಾಗತೊಡಗಿದೆ.

ವಿಶ್ವ ಭೂಮಿ ದಿನ 2020 ಅನ್ನು ಪ್ರಸ್ತಾಪಿಸಿ ಮಾತನಾಡಿ ಉಪರಾಷ್ಟ್ರಪತಿ ಅವರು, ‘ನಮ್ಮ ಹಿಂದಿನ ತಪ್ಪುಗಳಿಂದ ಕಲಿಯಬೇಕಾಗಿದೆ. ನಿಸರ್ಗ ಮತ್ತು ಮಾನವ ಸಹಜೀವನ ನಡೆಸುವ ಮಹತ್ವವನ್ನು ಅರಿತುಕೊಳ್ಳಬೇಕು. ನಾವು ಅಂತರ ಸಂಪರ್ಕ ಹೊಂದಿದ ಜಗತ್ತಿನಲ್ಲಿದ್ದೇವೆ. ಇದೇ ರೀತಿ ವ್ಯಾಪಾರದ ಮನೋಧೋರಣೆ ಹೊಂದಿದ ಮನೋಭಾವದಲ್ಲೇ ಜೀವನ ಮುಂದುವರಿಸುವುದು ಸರಿ ಅಲ್ಲ. ಏಕೆಂದರೆ ಪ್ರತಿಯೊಂದು ಕ್ರಿಯೆಯು ಪರಿಸರ ಮೇಲೆ ಪರಿಣಾಮ ಬೀರುತ್ತದೆ.

ನಿಸರ್ಗ ರಕ್ಷಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ಕ್ರಿಯಾಶೀಲ ಯೋಧರಾಗಬೇಕು ಎಂದು ಉಪರಾಷ್ಟ್ರಪತಿ ಅವರು ಜನರಿಗೆ ಕರೆ ನೀಡಿದರು.

ವಿವಿಧ ವಲಯಗಳಲ್ಲಿ ಹವಾಮಾನ ಸ್ನೇಹಿ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು. ಈ ಮೂಲಕ ಮಾಲಿನ್ಯ ಮುಕ್ತ ಪರಿಸರವನ್ನು ಕಾಣಬೇಕು. ಹಸಿರುವ ಮನೆ ಅನಿಲ ಹೊರಸೂಸುವಿಕೆ 1990ಕ್ಕಿಂತಲೂ ಈಗ ಶೇಕಡ 50ರಷ್ಟು ಹೆಚ್ಚಾಗಿದೆ ಎಂದು ಯುಎನ್‌ಡಿಪಿ ತಿಳಿಸಿದೆ. ಹವಾಮಾನ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಂಡರೆ 2030ರ ವೇಳೆಗೆ 26 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಆರ್ಥಿಕ ಲಾಭವಾಗಬಹುದು. ಜತೆಗೆ, ಸುಸ್ಥಿರ ಇಂಧನದ ಬಗ್ಗೆ ಗಮನಹರಿಸುವುದರಿಂದ 2030ರ ವೇಳೆಗೆ ಕೇವಲ ಇಂಧನ ವಲಯದಲ್ಲೇ 18 ಮಿಲಿಯನ್‌ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಉಪರಾಷ್ಟ್ರಪತಿ ಅವರು ವಿವರಿಸಿದರು.

ವಾಯು ಮಾಲಿನ್ಯದಿಂದ ಜಾಗತಿಕವಾಗಿ ಪ್ರತಿ ವರ್ಷ ಏಳು ಮಿಲಿಯನ್‌ ಜನರು ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ, ನವೀಕರಿಸಬಹುದಾದ ಇಂಧನಗಳು, ಹಸಿರು ಕಟ್ಟಡ ಕಲ್ಪನೆ, ಸ್ವಚ್ಛ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕಲ್‌ ವಾಹನಗಳ ಬಳಕೆಗೆ ನಾವೆಲ್ಲರೂ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಉಪರಾಷ್ಟ್ರಪತಿ ಅವರು ಹೇಳಿದರು.

ಗಿಡಗಳನ್ನು ಅಪಾರ ಸಂಖ್ಯೆಯಲ್ಲಿ ನೆಡುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ‘ಕಡಿಮೆ ಉಪಯೋಗಿಸು, ಪುನರ್‌ ಬಳಕೆ ಮಾಡು ಮತ್ತು ಪುನರ್‌ ತಯಾರಿಸು’ ಮಂತ್ರವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಸುಸ್ಥಿರವಾದ ಜೀವನ ನಡೆಸಲು ನಾವೆಲ್ಲರೂ ಮುಂದಾಗಬೇಕು. ಉತ್ತಮ ಭವಿಷ್ಯಕ್ಕಾಗಿ ನಿಸರ್ಗ ಮತ್ತು ಸಂಸ್ಕೃತಿಯನ್ನು ರಕ್ಷಿಸಬೇಕು ಎಂದು ಉಪರಾಷ್ಟ್ರಪತಿ ಅವರು ಹೇಳಿದರು.

***



(Release ID: 1617098) Visitor Counter : 317