ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪಿಐಬಿ ಫ್ಯಾಕ್ಟ್ ಚೆಕ್ ಐದು ವಿಷಯಗಳ ಬಗ್ಗೆ ಟ್ವೀಟ್ ಮಾಡಿ ಅಧಿಕೃತ ಆವೃತ್ತಿ ಪ್ರಕಟ

Posted On: 20 APR 2020 8:56PM by PIB Bengaluru

ಪಿಐಬಿ ಫ್ಯಾಕ್ಟ್ ಚೆಕ್ ಐದು ವಿಷಯಗಳ ಬಗ್ಗೆ ಟ್ವೀಟ್ ಮಾಡಿ ಅಧಿಕೃತ ಆವೃತ್ತಿ ಪ್ರಕಟ

ವದಂತಿ:ಜೆಹನಾಬಾದ್ ನಲ್ಲಿ ಹಸಿವು ತಾಳದೆ ಕಪ್ಪೆ ತಿಂದ ಮಕ್ಕಳು

ಸ್ಪಷ್ಟೀಕರಣ: ಯುಪಿ ಪೊಲೀಸರಿಂದ ವಾಟ್ಸ್ ಅಪ್ ಗುಂಪುಗಳಿಗೆ ಯಾವುದೇ ನಿಯಮ ಮತ್ತು ಷರತ್ತು ಇಲ್ಲ

 

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಹರಡುವಿಕೆಯನ್ನು ಪರಿಶೀಲಿಸಲು ಮತ್ತು ಸರ್ವೋನ್ನತ ನ್ಯಾಯಾಲಯದ ಅಭಿಪ್ರಾಯದ ಅನುಸರಣೆಯ ಹಿನ್ನೆಲೆಯಲ್ಲಿ, ಪಿಐಬಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವದಂತಿಗಳನ್ನು ಬಯಲು ಮಾಡಲು ಸಮರ್ಪಿತವಾದ ಘಟಕ ಸ್ಥಾಪಿಸಿದೆ. ‘PIBFactCheck’ ಪಿಐಬಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗುವ ಸಂದೇಶಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮತ್ತು ಸುಳ್ಳು ಸುದ್ದಿಗಳನ್ನು ಬಯಲು ಮಾಡಲು ಆ ವಿಷಯಗಳ ಸಮಗ್ರ ಪರಾಮರ್ಶೆ ನಡೆಸುತ್ತದೆ. ಇದರ ಜೊತೆಗೆ, PIB_India ಹ್ಯಾಂಡಲ್ ಮತ್ತು ಪಿಐಬಿ ಪ್ರಾದೇಶಿಕ ಘಟಕಗಳ ಹಲವಾರು ಟ್ವಿಟರ್ ಹ್ಯಾಂಡಲ್ ಗಳು ಅಧಿಕೃತ ಮತ್ತು ಸಮಂಜಸವಾದ ಆವೃತ್ತಿಯನ್ನು ಹ್ಯಾಷ್ ಟ್ಯಾಗ್ #PIBFactCheck ನಲ್ಲಿ ಯಾವುದೇ ವಿಷಯದ ಸತ್ಯಾಂಶವನ್ನು ಟ್ವಿಟಕ್ ಸಮುದಾಯಕ್ಕಾಗಿ ಪ್ರಕಟಿಸುತ್ತಿದೆ.

ಯಾವುದೇ ವ್ಯಕ್ತಿ PIBFactCheckಗೆ ಬರಹ, ಧ್ವನಿ, ವಿಡಿಯೋ ತುಣುಕು ಸೇರಿದಂತೆ ಯಾವುದೇ ಸಾಮಾಜಿಕ ತಾಣದ ಸಂದೇಶವನ್ನು ಅದರ ನಿಖರತೆಗಾಗಿ ಸಲ್ಲಿಸಬಹುದು. ಇದನ್ನು ಆನ್ ಲೈನ್ ಮೂಲಕ ಫೇಸ್ ಬುಕ್ ಸಂಪರ್ಕ https://factcheck.pib.gov.in/ ಅಥವಾ ವಾಟ್ಸ್ ಆ್ಯಪ್ ಸಂಖ್ಯೆ. +918799711259 ಅಥವಾ ಇ-ಮೇಲ್: pibfactcheck[at]gmail[dot]com. ಗೆ ಸಲ್ಲಿಸಬಹುದು. ವಿವರಗಳು ಪಿಐಬಿಯ ಅಂತರ್ಜಾಲ ತಾಣ: https://pib.gov.in ನಲ್ಲೂ ಲಭ್ಯ.

PIBFactCheck ಇಂದು ಐದು ವಿಷಯಗಳ ಕುರಿತಂತೆ ಅಧಿಕೃತ ಆವೃತ್ತಿಯ ಟ್ವೀಟ್ ಮಾಡಿದೆ. ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಪ್ರಮುಖ ಟ್ರಿಂಡಿಂಗ್ ವದಂತಿ ಎಂದರೆ ಮನೆಯಲ್ಲಿ ತಿನ್ನಲು ಏನೂ ಇಲ್ಲದೆ ಬಿಹಾರದ ಜೆಹನಾಬಾದ್ ನ ಮಕ್ಕಳು ಕಪ್ಪೆಗಳನ್ನು ತಿನ್ನುತ್ತಿದ್ದಾರೆ ಎಂದು ಪ್ರಮುಖ ಮಾಧ್ಯಮ ಪೋರ್ಟಲ್ ತಿಳಿಸಿದೆ ಈ ವಿಡಿಯೋ ವೈರಲ್ ಆಗಿದೆ. ಇದರ ಸತ್ಯವನ್ನು ಪಿಐಬಿ ಹೊರಹಾಕಿದೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಜೆಹನಾಬಾದ್ ಜಿಲ್ಲಾಧಿಕಾರಿ ಮಕ್ಕಳ ಮನೆಗಳಲ್ಲಿ ಸಾಕಷ್ಟು ಆಹಾರ ಧಾನ್ಯ ದಾಸ್ತಾನಿದೆ ಎಂದು ತಿಳಿಸಿದ್ದಾರೆ.

PIBFactCheck ಸ್ವಯಂಪ್ರೇರಿತವಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಜನರ ಮೇಲೆ ಹೈಪೋಕ್ಲೋರೈಡ್ ನಂತಹ ಕೀಟನಾಶಕ ಸಿಂಪಡಿಸಬಹುದು ಎಂಬ ವದಂತಿಯನ್ನು ಬಯಲು ಮಾಡಿದೆ. ಜನರು ಪದೇ ಪದೆ ಸ್ಪರ್ಶಿಸುವಂತ ಸ್ಥಳಗಳ ಸ್ವಚ್ಛತೆಗಾಗಿ ಇದನ್ನು ಬಳಸಲಾಗುತ್ತದೆ, ಇದು ಮನುಷ್ಯರಿಗೆ ಅಪಾಯಕಾರಿ ಎಂದು ಹೇಳಿದೆ. ಇದೇ ಸ್ಪಷ್ಟೀಕರಣವನ್ನು ಮುಂಬೈ ಪಿಐಬಿ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿದೆ.

ಈ ಮಧ್ಯೆ ಪಿಐಬಿ ಲಖನೌ ಉತ್ತರ ಪ್ರದೇಶ ಪೊಲೀಸರು, ವಾಟ್ಸ್ ಆ್ಯಪ್ ಗುಂಪುಗಳಿಗೆ ಯುಪಿ ಡಯಲ್ 112, ನಿಯಮ ಮತ್ತು ಷರತ್ತುಗಳನ್ನು ವಿಧಿಸಿದೆ ಎಂಬ ವದಂತಿಯನ್ನೂ ಹೊರಗೆ ಎಳೆದಿದೆ. ಇಂಥ ಯಾವುದೇ ಸಲಹೆಯನ್ನೂ ನೀಡಲಾಗಿಲ್ಲ ಎಂದು ತಿಳಿಸಿದೆ. ಲಖನೌ ಪಿಐಬಿ, ಅಂಬೇಡ್ಕರ್ ನಗರದ ಯುವಕ ರಿಜ್ವಾನ್ ಪೊಲೀಸರು ಮಾಡಿದ ಗಾಯದಿಂದ ಮೃತಪಟ್ಟಿರುವುದಾಗಿ ಮಾಧ್ಯಮವೊಂದರಲ್ಲಿ ಬಂದಿದ್ದ ಸುಳ್ಳು ಸುದ್ದಿಯ ಸತ್ಯಾಂಶವನ್ನು ಬಯಲಿಗೆಳೆದಿದ್ದು, ಮೃತ ಯುವಕನ ಮರಣೋತ್ತರ ಪರೀಕ್ಷಾ ವರದಿ, ಆತನ ಸಾವು ಪೆರಿಕಾರ್ಡಿಯಲ್ ಎಫ್ಯೂಷನ್ ನಿಂದ ಸಂಭವಿಸಿದೆ ಎಂದು ತಿಳಿಸಿ, 4 ಪುಟಗಳ ಮರಣೋತ್ತರ ವರದಿ ಮತ್ತು ಚಿತ್ರಗಳನ್ನು ಸಲ್ಲಿಸಿದೆ.

***



(Release ID: 1616830) Visitor Counter : 218