ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಏಪ್ರಿಲ್‌ 1ರಿಂದ 20ರವರೆಗೆ ಕೋವಿಡ್‌ 19ಗೆ ಸಂಬಂಧಿಸಿದಂತೆ 25,000 ಕ್ಕೂ ಹೆಚ್ಚು ಸಮಸ್ಯೆಗಳಿಗೆ ಪೋರ್ಟಲ್‌ ಮೂಲಕ ಪರಿಹಾರ: ಡಾ. ಜಿತೇಂದ್ರ ಸಿಂಗ್‌

Posted On: 20 APR 2020 8:05PM by PIB Bengaluru

ಏಪ್ರಿಲ್‌ 1ರಿಂದ 20ರವರೆಗೆ ಕೋವಿಡ್‌ 19ಗೆ ಸಂಬಂಧಿಸಿದಂತೆ 25,000 ಕ್ಕೂ ಹೆಚ್ಚು ಸಮಸ್ಯೆಗಳಿಗೆ ಪೋರ್ಟಲ್ಮೂಲಕ ಪರಿಹಾರ: ಡಾ. ಜಿತೇಂದ್ರ ಸಿಂಗ್
 

ಏಪ್ರಿಲ್‌ 1ರಿಂದ 20ರವರೆಗೆ ಕೋವಿಡ್‌ 19ಗೆ ಸಂಬಂಧಿಸಿದಂತೆ ಸುಮಾರು 25,000 ಕ್ಕೂ ಹೆಚ್ಚು ಸಮಸ್ಯೆಗಳಿಗೆ ಸಮಸ್ಯೆಗಳಿಗೆ ಪೋರ್ಟಲ್ಮೂಲಕ ಪರಿಹಾರ ನೀಡಲಾಯಿತು ಎಂದು ಕೇಂದ್ರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಪಿಎಂಒ, ಸಿಬ್ಬಂದಿ, ಸಾರ್ವಜನಿಕರ ಕುಂದುಕೊರತೆಗಳು, ಅಣುಶಕ್ತಿ, ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ತಿಳಿಸಿದ್ದಾರೆ.

ಸಿಬ್ಬಂದಿ ಸಚಿವಾಲಯದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತಗಳ ಇಲಾಖೆ (ಡಿಎಆರ್ಪಿಜಿ) ರೂಪಿಸಿರುವರಾಷ್ಟ್ರೀಯ ಮಾನಿಟರಿಂಗ್ ಡ್ಯಾಷ್ಬೋರ್ಡ್‌’ ವರ್ಷದ ಏಪ್ರಿಲ್‌ 1ರಂದು ಆರಂಭಿಸಲಾಯಿತು. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ಘೋಷಿಸಿದ್ದರಿಂದ ಕ್ರಮಕೈಗೊಳ್ಳಲಾಗಿತ್ತು. ಕಳೆದ ಮೂರು ವಾರಗಳಲ್ಲಿ ದೇಶದ ವಿವಿಧೆಡೆಯಿಂದ ಪೋರ್ಟಲ್ಗೆ ಅಪಾರ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಸ್ವೀಕರಿಸಲಾಗಿದೆ. ಏಪ್ರಿಲ್‌ 1 ವೇಳೆಗೆ ಕೋವಿಡ್ಗೆ ಸಂಬಂಧಿಸಿದಂತೆ 332 ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಿ ನೋಂದಾಯಿಸಿಕೊಳ್ಳಲಾಯಿತು. ಬಳಿಕ, ಕೇವಲ 15 ದಿನಗಳಲ್ಲಿ ಅಂದರೆ ಏಪ್ರಿಲ್‌ 16 ವೇಳೆಗೆ ಸಂಖ್ಯೆಯು 5,566 ಕುಂದುಕೊರತೆಗಳ ಪ್ರಕರಣಗಳನ್ನು ಸ್ವೀಕರಿಸಿಕೊಳ್ಳಲಾಯಿತು.

https://ci4.googleusercontent.com/proxy/WUzjX1saRAYxdt_x6OBQPI-W4IcZUnYVtIv_ouBBqdRbTi35QrmNKZqzwvboqhwcKhytQ3B3gCBuf99UzBGokCjwQSfK8GyV273u_F3D8Dw9IHPDflxk=s0-d-e1-ft#https://static.pib.gov.in/WriteReadData/userfiles/image/image001WUOH.jpg

 

ನಿರಂತರವಾಗಿ 24 ಗಂಟೆಯೂ ರಾಷ್ಟ್ರೀಯ ಮಾನಿಟರಿಂಗ್ಡ್ಯಾಷ್ಬೋರ್ಡ್ನಿರ್ವಹಿಸಿದ ಸಾರ್ವಜನಿಕ ಕುಂದುಕೊರತೆ ಇಲಾಖೆ ಸಿಬ್ಬಂದಿಗೆ ಡಾ. ಜಿತೇಂದ್ರ ಸಿಂಗ್ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರೀತಿಯ ನಿರ್ವಹಣೆಯಿಂದಾಗಿ ಕೇವಲ 1.57 ದಿನಗಳಲ್ಲಿ ಕುಂದುಕೊರತೆಗಳನ್ನು ಪರಿಹರಿಸಿ ಇತ್ಯರ್ಥಗೊಳಿಸಲಾಗಿದೆ.

ಕುಂದುಕೊರತೆಯ ಪೋರ್ಟಲ್ನ್ಯಾಷನಲ್ಮಾನಿಟಿರಿಂಗ್ಡ್ಯಾಷಬೋರ್ಟ್‌(https://darpg.gov.in) ಕೋವಿಡ್ಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷವಾಗಿ ರೂಪಿಸಲಾಗಿದೆ. ಇದು ಕೋವಿಡ್ಗೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೀಮಿತವಾಗಿ ರೂಪಿಸಲಾಗಿದೆ. ಇದರಿಂದ ಕೋವಿಡ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ನೋಂದಣಿ ಮಾಡಿಕೊಂಡು ಪರಿಹಾರ ರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕೋವಿಡ್ಗೆ ಸಂಬಂಧಿಸಿದಂತೆ 14,982 ಕುಂದುಕೊರತೆಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಇತರ ಕುಂದುಕೊರತೆಗಳನ್ನು ಕೇಂದ್ರದ ವಿವಿಧ ಸಚಿವಾಲಯಗಳಿಗೆ ಕಳುಹಿಸಲಾಗಿದೆ. ವಲಸೆ ಕಾರ್ಮಿಕರು, ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳು ಮತ್ತು ಕ್ವಾರಂಟೈನ್‌, ಆಹಾರ ಮತ್ತು ನಾಗರಿಕರ ಸರಬರಾಜು, ಬ್ಯಾಂಕಿಂಗ್‌, ಹಣಕಾಸು ವಲಯದ ವಿಷಯಗಳು, ವೇತನ, ಉದ್ಯೋಗಿಗಳ ವಿಷಯಗಳು, ಶಾಲೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಹೆಚ್ಚು ಗಮನ ನೀಡಲಾಗುತ್ತಿದೆ.

***



(Release ID: 1616828) Visitor Counter : 204