ಹಣಕಾಸು ಸಚಿವಾಲಯ

ಹೊಸ ಅಭಿವೃದ್ಧಿ ಬ್ಯಾಂಕ್ ನ ಗೌರ್ನರ್ ಗಳ ಮಂಡಳಿಯ 5ನೇ ವಾರ್ಷಿಕ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್

Posted On: 20 APR 2020 9:20PM by PIB Bengaluru

ಹೊಸ ಅಭಿವೃದ್ಧಿ ಬ್ಯಾಂಕ್ ನ ಗೌರ್ನರ್ ಗಳ ಮಂಡಳಿಯ 5ನೇ ವಾರ್ಷಿಕ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್


https://ci3.googleusercontent.com/proxy/UHTiosbDQ-b5QsseoQ_-ZlA9MUe4OqORwd6cmByBRumuZqs8onJADklFqeCadAIWOpqV1TtrzeKNFgnIXbtMK5tLn_kqyMJ-CEPsOb0jx_vXOHiPt9Ys=s0-d-e1-ft#https://static.pib.gov.in/WriteReadData/userfiles/image/image001M8GK.jpg

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ನವದೆಹಲಿಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹೊಸ ಅಭಿವೃದ್ಧಿ ಬ್ಯಾಂಕ್ ನ ಗೌರ್ನರ್ ಗಳ ಮಂಡಳಿಯ 5ನೇ ವಾರ್ಷಿಕ ಸಭೆಯಲ್ಲಿ ಭಾಗಿಯಾಗಿದ್ದರು.

ಎನ್ ಡಿಬಿಯನ್ನು ಬ್ರಿಕ್ಸ್ ರಾಷ್ಟ್ರಗಳು(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಇವು 2014ರಲ್ಲಿ ಸ್ಥಾಪಿಸಿದವು. ಈ ಬ್ಯಾಂಕ್ ನ ಉದ್ದೇಶ, ಬ್ರಿಕ್ಸ್ ರಾಷ್ಟ್ರಗಳಲ್ಲಿ ಹಾಗೂ ಬೆಳವಣಿಗೆ ಹೊಂದುತ್ತಿರುವ ಆರ್ಥಿಕ ಮಾರುಕಟ್ಟೆಗಳಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದು ಮತ್ತು ಮೂಲಸೌಕರ್ಯಕ್ಕೆ ಸಂಪನ್ಮೂಲಗಳನ್ನು ಕ್ರೂಢೀಕರಿಸುವುದಾಗಿದೆ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ, ಪ್ರಾದೇಶಿಕ ಹಣಕಾಸು ಸಂಸ್ಥೆಗಳು ಮತ್ತು ಬಹು ಹಂತದ ಪೂರಕ ಪ್ರಯತ್ನಗಳನ್ನು ಕೈಗೊಳ್ಳುವುದಾಗಿದೆ. ಎನ್ ಡಿಬಿ ಈವರೆಗೆ ಭಾರತದ ಸುಮಾರು 4,183 ಮಿಲಿಯನ್ ಡಾಲರ್ ಮೊತ್ತದ 14 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಹಣಕಾಸು ಸಚಿವರು, ಸಭೆಯ ತಮ್ಮ ಆರಂಭಿಕ ಭಾಷಣದಲ್ಲಿ, ಎನ್ ಡಿಬಿ ವಿಶ್ವಾಸಾರ್ಹ ಜಾಗತಿಕ ಹಣಕಾಸು ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಅದು ಹೆಚ್ಚಿನ ಸುಸ್ಥಿರತೆ ಮತ್ತು ಸಮಗ್ರ ಧೋರಣೆಯೊಂದಿಗೆ ಯಶಸ್ವಿಯಾಗುತ್ತಿರುವುದಕ್ಕೆ ಶ್ಲಾಘಿಸಿದರು.

ಕೋವಿಡ್-19 ಕುರಿತ ಚರ್ಚೆಯಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಭಾರತಕ್ಕೆ ಒಂದು ಬಿಲಿಯನ್ ಡಾಲರ್ ತುರ್ತು ಆರ್ಥಿಕ ನೆರವು ಸೇರಿದಂತೆ ಒಟ್ಟಾರೆ ಬ್ರಿಕ್ಸ್ ರಾಷ್ಟ್ರಗಳಿಗೆ 5 ಬಿಲಿಯನ್ ಡಾಲರ್ ಆರ್ಥಿಕ ನೆರವು ತ್ವರಿತವಾಗಿ ಬಿಡುಗಡೆ ಮಾಡಿದ ಎನ್ ಡಿಬಿ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಅವರು, ಈ ಸೌಕರ್ಯದಡಿ ನೀಡುತ್ತಿರುವ ಸಹಾಯವನ್ನು 10 ಬಿಲಿಯನ್ ಡಾಲರ್ ಗೆ ಹೆಚ್ಚಳ ಮಾಡಬೇಕೆಂದು ಸಲಹೆ ಮಾಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೋವಿಡ್-19 ತುರ್ತು ನಿಧಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದನ್ನು ಉಲ್ಲೇಖಿಸಿದ ಅವರು, ಕೋವಿಡ್-19 ನಿಯಂತ್ರಣಕ್ಕೆ ಅಗತ್ಯ ರಾಷ್ಟ್ರಗಳಿಗೆ ಭಾರತ ಗಂಭೀರ ವೈದ್ಯಕೀಯ ಪೂರೈಕೆಯನ್ನು ಮಾಡುತ್ತಿದೆ ಎಂದು ಹೇಳಿದರು. ಬ್ರೆಜಿಲ್ ನ ಹಣಕಾಸು ಸಚಿವರು, ಗಂಭೀರ ಔಷಧ ರೂಪದಲ್ಲಿ ಭಾರತ ಸಕಾಲದಲ್ಲಿ ಸಹಾಯ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು.

ಶ್ರೀಮತಿ ಸೀತಾರಾಮನ್ ಅವರು, ಕೋವಿಡ್-19ನ ಎದುರಿಸಲು ಭಾರತ ಕೈಗೊಂಡಿರುವ ಹಲವು ನಿರ್ಧಾರಗಳ ಚಿತ್ರಣವನ್ನು ನೀಡಿದರು. ಅದರಲ್ಲಿ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಭಾರತ ಸರ್ಕಾರ 2 ಬಿಲಿಯನ್(15,000 ಕೋಟಿ ರೂ.) ಹಂಚಿಕೆ ಮಾಡಿರುವುದು ಬಡವರು ಮತ್ತು ದುರ್ಬಲ ವರ್ಗದವರ ಸಂಕಷ್ಟ ನಿರ್ಮೂಲನೆಗೆ 25 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಸಾಮಾಜಿಕ ಬೆಂಬಲ ಯೋಜನೆಗಳ ಘೋಷಣೆ, ಮುಂಚೂಣಿಯಲ್ಲಿರುವ ಸುಮಾರು 2.2 ಮಿಲಿಯನ್ ಆರೋಗ್ಯ ಕಾರ್ಯಕರ್ತರಿಗೆ ತಲಾ 67,000 ಡಾಲರ್(50 ಲಕ್ಷ ರೂ.) ವಿಮಾ ಸೌಕರ್ಯ, ಹಲವು ಸಂಸ್ಥೆಗಳಿಗೆ ಸಾಂಸ್ಥಿಕ ಮತ್ತು ನಿಯಂತ್ರಣ ಆದೇಶಗಳಿಂದ ವಿನಾಯಿತಿ, ಆರ್ ಬಿಐನಿಂದ ಹಣಕಾಸು ನೀತಿ ಸಡಿಲ ಮತ್ತಿತರ ಕ್ರಮಗಳು ಸೇರಿವೆ.

ಎನ್ ಡಿಬಿ, ಇತರೆ ಬಹು ಉಪಯೋಗಿ ಅಭಿವೃದ್ಧಿ ಬ್ಯಾಂಕ್ ಗಳು(ಎಂಡಿಬಿ) ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು(ಐಎಫ್ಐಎಸ್) ಜೊತೆ ಗೂಡಿ, ಜಿ-20 ವೇದಿಕೆ ಸೇರ್ಪಡೆಯಾಗಲು ನಡೆಸುತ್ತಿರುವ ಪ್ರಯತ್ನಗಳಿಗೆ ನಿರ್ಮಲಾ ಸೀತಾರಾಮನ್ ಭಾರೀ ಉತ್ತೇಜನ ನೀಡಿದರು. ಅಂತಿಮವಾಗಿ ಅವರು ಬ್ರಿಕ್ಸ್ ರಾಷ್ಟ್ರಗಳು ತಮ್ಮ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ವಿನೂತನ ಪದ್ಧತಿಗಳನ್ನು ಪಾಲಿಸುವ ಮೂಲಕ ಬೆಂಬಲ ನೀಡುವಂತೆ ಎನ್ ಡಿಬಿಗೆ ಕರೆ ನೀಡಿದರು.

***(Release ID: 1616598) Visitor Counter : 19