ಕೃಷಿ ಸಚಿವಾಲಯ

ಹೊಲಗಳಲ್ಲಿ ದುಡಿಯುತ್ತಿರುವ ಕೊರೊನಾ ವೈರಸ್‌ನ ನಿಜವಾದ ಯೋಧರು

Posted On: 19 APR 2020 3:28PM by PIB Bengaluru

ಹೊಲಗಳಲ್ಲಿ ದುಡಿಯುತ್ತಿರುವ ಕೊರೊನಾ ವೈರಸ್‌ನ ನಿಜವಾದ ಯೋಧರು

ಲಾಕ್ ಡೌನ್ ಸಮಯದಲ್ಲಿ ರಬಿ ಬೆಳೆ ಕೊಯ್ಲು ಮತ್ತು ಬೇಸಿಗೆ ಬೆಳೆ ಬಿತ್ತನೆಗೆ ಯಾವುದೇ ಅಡ್ಡಿ ಇಲ್ಲ

ರಬಿ ಬೆಳೆಗಳಲ್ಲಿ, ದೇಶದಲ್ಲಿ ಕೊಯ್ಲು ಮಾಡಿದ 310 ಲಕ್ಷ ಹೆಕ್ಟೇರ್‌ನಲ್ಲಿ 67% ಗೋಧಿ ಬಿತ್ತನೆ

ಕಳೆದ ವರ್ಷ ಏಪ್ರಿಲ್ 17 ಕ್ಕೆ ಹೋಲಿಸಿದರೆ ಬೇಸಿಗೆ ಬೆಳೆ ಬಿತ್ತನೆ 14% ಹೆಚ್ಚಳ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಯೋಚಿತ ಕ್ರಮಗಳು ಮೌನವಾಗಿ ಕಾರ್ಯನಿರ್ವಹಿಸುತ್ತಿರುವ ರೈತರಿಗೆ ಮತ್ತು ಎಲ್ಲಾ ಪ್ರತಿಕೂಲತೆಗಳನ್ನು ಎದುರಿಸಿ ಹೊಲಗಳಲ್ಲಿ ಬೆವರು ಸುರಿಸಿ ಶ್ರಮಿಸುತ್ತಿರುವ ಕೃಷಿ ಕಾರ್ಮಿಕರಿಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ

 

ಇಂದು ಇರುವ ಅನಿಶ್ಚಿತತೆಯ ಮಧ್ಯೆ, ಭರವಸೆಯನ್ನು ನೀಡುವ ಒಂದು ಚಟುವಟಿಕೆ ಕೃಷಿಯದಾಗಿದೆ, ಇದು ಆಹಾರ ಭದ್ರತೆಯ ಧೈರ್ಯವನ್ನು ಸಹ ಒದಗಿಸುತ್ತಿದೆ. ಭಾರತದಾದ್ಯಂತ ಅಸಂಖ್ಯಾತ ರೈತರು ಮತ್ತು ಕೃಷಿ ಕಾರ್ಮಿಕರು ಎಲ್ಲಾ ಪ್ರತಿಕೂಲತೆಗಳ ನಡುವೆ ಮೈನವಾಗಿ ಬೆವರು ಸುರಿಸಿ ದುಡಿಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಯೋಚಿತ ಕ್ರಮದೊಂದಿಗೆ, ಕೊಯ್ಲು ಚಟುವಟಿಕೆಗಳಿಗೆ ಕನಿಷ್ಠ ಅಥವಾ ಯಾವುದೇ ಅಡ್ಡಿ ಬರದಂತೆ ಮತ್ತು ಬೇಸಿಗೆ ಬೆಳೆಗಳನ್ನು ನಿರಂತರವಾಗಿ ಬಿತ್ತನೆ ಮಾಡುವುದನ್ನು ಖಾತ್ರಿಪಡಿಸಿದೆ.

ಕೋವಿಡ್-19 ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗೃಹ ಸಚಿವಾಲಯವು ಏಕೀಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ, ಇದು ಕೃಷಿ ಚಟುವಟಿಕೆಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ. ಸಮಯೋಚಿತ ಕ್ರಮಗಳು ಮತ್ತು ವಿನಾಯಿತಿಗಳು ಆಶಾವಾದಿ ಫಲಿತಾಂಶಗಳಿಗೆ ಕಾರಣವಾಗಿವೆ. ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವಾಗ ಅವರ ಸುರಕ್ಷತೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಕಾರ್ಯನಿರ್ವಹಣೆಯ ರೀತಿ (ಎಸ್‌ಒಪಿ) ಗಳನ್ನು ರೈತರಿಗೆ ತಿಳಿಸಲಾಗಿದೆ. ಪೂರ್ವಭಾವಿ ಕ್ರಮಗಳ ಪರಿಣಾಮವಾಗಿ, ರಬಿ ಬೆಳೆಯ ಕೊಯ್ಲು ಚಟುವಟಿಕೆಗಳು ಮತ್ತು ಬೇಸಿಗೆ ಬೆಳೆಗಳ ಬಿತ್ತನೆ ಚಟುವಟಿಕೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ.

ರಬಿ ಬೆಳೆ ಕೊಯ್ಲಿನಲ್ಲಿ, 310 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ ಒಟ್ಟು ಗೋಧಿ ಬೆಳೆಗಳಲ್ಲಿ 63-67% ರಷ್ಟು ಈಗಾಗಲೇ ದೇಶದಲ್ಲಿ ಕೊಯ್ಲು ಮಾಡಲಾಗಿದೆ. ರಾಜ್ಯವ್ಯಾಪಿ ಕೊಯ್ಲು ಕೂಡ ಹೆಚ್ಚಾಗಿದೆ ಮತ್ತು ಮಧ್ಯಪ್ರದೇಶದಲ್ಲಿ 90-95%, ರಾಜಸ್ಥಾನದಲ್ಲಿ 80-85%, ಉತ್ತರಪ್ರದೇಶದಲ್ಲಿ 60-65%, ಹರಿಯಾಣದಲ್ಲಿ 30-35% ಮತ್ತು ಪಂಜಾಬ್‌ನಲ್ಲಿ 10-15% ಕ್ಕೆ ತಲುಪಿದೆ. ಹರಿಯಾಣ, ಪಂಜಾಬ್, ಉತರ ಪ್ರದೇಶದಲ್ಲಿ ಕಟಾವು ಅತ್ಯುತ್ತಮ ಸ್ಥಿತಿಯಲ್ಲಿದೆ ಮತ್ತು 2020 ರ ಏಪ್ರಿಲ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಪಂಜಾಬ್ 18000 ಕುಯ್ಲಿಕ್ಕು ಯಂತ್ರಗಳನ್ನು ನಿಯೋಜಿಸಿದೆ ಮತ್ತು ಹರಿಯಾಣವು 5000 ಕುಯ್ಲಿಕ್ಕು ಯಂತ್ರಗಳನ್ನು ಕೊಯ್ಲಿಗಾಗಿ ಮತ್ತು ಜಾಡಿಸಲು ನಿಯೋಜಿಸಿದೆ.

161 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ ಧಾನ್ಯಗಳಲ್ಲಿ ಕಡಲೆ ಬೇಳೆ, ಉದ್ದು, ಹೆಸರುಕಾಳು ಮತ್ತು ಬಟಾಣಿಗಳ ಕೊಯ್ಲು ಪೂರ್ಣಗೊಂಡಿದೆ. ಕಬ್ಬಿಗೆ ಸಂಬಂಧಿಸಿದಂತೆ, 54.29 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಸಿದ ಒಟ್ಟು ಪೈಕಿ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಂಜಾಬ್‌ನಲ್ಲಿ ಕೊಯ್ಲು ಪೂರ್ಣಗೊಂಡಿದೆ. ತಮಿಳುನಾಡು, ಬಿಹಾರ, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ 92-98% ಕೊಯ್ಲು ಪೂರ್ಣಗೊಂಡಿದೆ. ಉತ್ತರ ಪ್ರದೇಶದಲ್ಲಿ 75-80% ಪೂರ್ಣಗೊಂಡಿದೆ ಮತ್ತು ಇದು 2020 ರ ಮೇ ಮಧ್ಯದವರೆಗೆ ಮುಂದುವರಿಯುತ್ತದೆ.

ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ್, ಗುಜರಾತ್, ಕರ್ನಾಟಕ, ಕೇರಳ, ಒಡಿಶಾ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 28 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ ರಬಿ ಅಕ್ಕಿ ಕೊಯ್ಲು ಆರಂಭಿಕ ಹಂತದಲ್ಲಿದೆ ಏಕೆಂದರೆ ಧಾನ್ಯ ಇನ್ನೂ ಭರ್ತಿಯ ಹಂತದಲ್ಲಿದೆ ಮತ್ತು ಕೊಯ್ಲು ಸಮಯಗಳು ಬದಲಾಗುತ್ತವೆ.

ಎಣ್ಣೆಕಾಳು ಬೆಳೆಗಳ ಪೈಕಿ 69 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ ರಾಪ್ಸೀಡ್ ಸಾಸಿವೆ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ, ಜಾರ್ಖಂಡ್, ಗುಜರಾತ್, ಛತ್ತೀಸ್‌ಗಢ್, ಬಿಹಾರ, ಪಂಜಾಬ್, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊಯ್ಲು ಮಾಡಲಾಗಿದೆ. 4.7 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ ನೆಲಗಡಲೆ 85-90% ರಷ್ಟು ಕೊಯ್ಲು ಮಾಡಲಾಗಿದೆ.

ಬೇಸಿಗೆ ಬೆಳೆಗಳನ್ನು ಬೆಳೆಯುವುದು ಭಾರತದಲ್ಲಿನ ಹಳೆಯ ಸಂಪ್ರದಾಯವಾಗಿದ್ದು, ವಿಶೇಷವಾಗಿ ಆಹಾರ ಧಾನ್ಯಗಳ ಹೆಚ್ಚುವರಿ ಮನೆಯ ಅಗತ್ಯವನ್ನು ಪೂರೈಸುವುದಕ್ಕಾಗಿ ಮತ್ತು ಜಾನುವಾರುಗಳಿಗೆ ಆಹಾರವನ್ನು ನೀಡುವುದಕ್ಕಾಗಿ ಇದೆ. ಬೇಸಿಗೆ ಬೆಳೆಗಳಾದ ದ್ವಿದಳ ಧಾನ್ಯಗಳು, ಕಾಳುಗಳು, ಪೋಷಕಾಂಶ-ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ವೈಜ್ಞಾನಿಕವಾಗಿ ಬೆಳೆಸಲು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ಇದಲ್ಲದೆ, ರೈತರು ನೀರಿನ ಲಭ್ಯತೆಯ ಆಧಾರದ ಮೇಲೆ ಪೂರ್ವ ಭಾರತ ಮತ್ತು ಮಧ್ಯ ಭಾರತದ ಕೆಲವು ರಾಜ್ಯಗಳಲ್ಲಿ ಬೇಸಿಗೆ ಭತ್ತದ ಬೆಳೆಗಳನ್ನು ಸಹ ಬೆಳೆಯುತ್ತಾರೆ.

ಏಪ್ರಿಲ್ 17, 2020 ರಂತೆ, ದೇಶದಲ್ಲಿ ಬೇಸಿಗೆ ಬಿತ್ತನೆ ಕಳೆದ ವರ್ಷಕ್ಕೆ ಹೋಲಿಸಿದರೆ 14% ಹೆಚ್ಚಾಗಿದೆ. ಈ ಋತುವಿನಲ್ಲಿ ಪಡೆದ ಮಳೆ ಕಳೆದ ವರ್ಷಕ್ಕೆ ಹೋಲಿಸಿದರೆ 14% ಹೆಚ್ಚಾಗಿದೆ, ಇದು ಬೇಸಿಗೆ ಬೆಳೆಗಳನ್ನು ಬಿತ್ತಲು ಅನುಕೂಲಕರವಾಗಿದೆ. ಇಂದಿನಂತೆ, ಒಟ್ಟು ಬೇಸಿಗೆ ಬೆಳೆ ಪ್ರದೇಶವು 38.64 ಲಕ್ಷ ಹೆಕ್ಟೇರ್‌ನಿಂದ 52.78 ಲಕ್ಷ ಹೆಕ್ಟೇರ್‌ಗೆ ಏರಿದೆ. ದ್ವಿದಳ ಧಾನ್ಯಗಳು, ಕಾಳುಗಳು, ಪೌಷ್ಠಿಕಾಂಶದ-ಧಾನ್ಯಗಳು ಮತ್ತು ಎಣ್ಣೆಬೀಜಗಳ ವ್ಯಾಪ್ತಿಯು ಕಳೆದ ವರ್ಷಕ್ಕೆ ಹೋಲಿಸಿದರೆ 14.79 ಲಕ್ಷ ಹೆಕ್ಟೇರ್‌ನಿಂದ 20.05 ಲಕ್ಷ ಹೆಕ್ಟೇರ್‌ಗೆ ಏರಿದೆ.

ಸೀಡ್ ಡ್ರಿಲ್ ನೊಂದಿಗೆ ಬಿತ್ತನೆಗಾಗಿ ಬೇಸಿಗೆಯ ಹೆಸರುಕಾಳು ಬೀಜವನ್ನು ಸಂಸ್ಕರಿಸುವುದು

ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ, ಅಸ್ಸಾಂ, ಗುಜರಾತ್, ಕರ್ನಾಟಕ, ಛತ್ತೀಸ್‌ಗಢ್, ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಸುಮಾರು 33 ಲಕ್ಷ ಹೆಕ್ಟೇರ್‌ನಲ್ಲಿ ಬೇಸಿಗೆ ಅಕ್ಕಿ ಬಿತ್ತಲಾಗಿದೆ.

ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಛತ್ತೀಸ್‌ಗಢ್,, ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳುಗಳನ್ನು ಬಿತ್ತಲಾಗಿದೆ.

ಸೀಡ್ ಡ್ರಿಲ್ ನಿಂದ ಬಿತ್ತನೆ ಮಾಡಲಾಗಿರುವ ಬೇಸಿಗೆ ಹೆಸರುಕಾಳು ಬೆಳೆ

ಪಶ್ಚಿಮ ಬಂಗಾಳ, ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಛತ್ತೀಸ್‌ಗಢ್, ಮಧ್ಯಪ್ರದೇಶ, ಪಂಜಾಬ್ ಮತ್ತು ಬಿಹಾರ ರಾಜ್ಯಗಳಲ್ಲಿ ಸುಮಾರು 7.4 ಲಕ್ಷ ಹೆಕ್ಟೇರ್‌ನಲ್ಲಿ ತೈಲಬೀಜವನ್ನು ಬಿತ್ತಲಾಗಿದೆ. ಸೆಣಬಿನ ಬಿತ್ತನೆ ಪಶ್ಚಿಮ ಬಂಗಾಳದಲ್ಲಿಯೂ ಪ್ರಾರಂಭವಾಗಿದ್ದು ಮಳೆಯಿಂದ ಲಾಭ ಪಡೆದಿದೆ.

ಬೇಸಿಗೆ ಬೆಳೆ ಹೆಚ್ಚುವರಿ ಆದಾಯವನ್ನು ನೀಡುವುದಲ್ಲದೆ, ರಬಿ ಮತ್ತು ಖರೀಫ್ ನಡುವೆ ರೈತರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಬೇಸಿಗೆಯ ಬೆಳೆ, ವಿಶೇಷವಾಗಿ ಧಾನ್ಯಗಳ ಬೆಳೆಯಿಂದ ಮಣ್ಣಿನ ಆರೋಗ್ಯವನ್ನು ಸುಧಾರಿಸಲಾಗುತ್ತದೆ. ಯಾಂತ್ರಿಕೃತ ಬಿತ್ತನೆಯು ಬೇಸಿಗೆ ಬೆಳೆಗಳಿಗೆ ಅಪಾರ ಸಹಾಯ ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗದರ್ಶನವು ಕೊಯ್ಲು ಚಟುವಟಿಕೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದನ್ನು ಮಾತ್ರವಲ್ಲದೆ ರೈತರ ಕಠಿಣ ಪರಿಶ್ರಮದಿಂದ ಬೇಸಿಗೆ ಬೆಳೆಗಳ ಹೆಚ್ಚಿನ ವ್ಯಾಪ್ತಿಯನ್ನು ಖಾತ್ರಿಪಡಿಸಿದೆ.

***



(Release ID: 1616252) Visitor Counter : 431