ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಪ್ರಸ್ತುತ ಇರುವ ಸ್ಥಳದಿಂದ ಅದೇ ರಾಜ್ಯ/ ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರಿಸಲು ಅನುಸರಿಸಬೇಕಾದ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ (ಎಸ್ಒಪಿ)
Posted On:
19 APR 2020 3:37PM by PIB Bengaluru
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಪ್ರಸ್ತುತ ಇರುವ ಸ್ಥಳದಿಂದ ಅದೇ ರಾಜ್ಯ/ ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರಿಸಲು ಅನುಸರಿಸಬೇಕಾದ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ (ಎಸ್ಒಪಿ)
ಕಾರ್ಮಿಕರು ಪ್ರಸ್ತುತ ಇರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಹೊರಗೆ ಸಂಚಾರಕ್ಕೆ ಅವಕಾಶವಿಲ್ಲ
ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಉದ್ಯಮ, ಕೈಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಇತರೆ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಾವು ಕೆಲಸ ಮಾಡುತ್ತಿದ ಜಾಗದಿಂದ ಇನ್ನೊಂದು ಜಾಗಕ್ಕೆ ವರ್ಗಾವಣೆಗೊಂಡಿದ್ದಾರೆ ಮತ್ತು ಅವರು ರಾಜ್ಯಗಳು/ಕೇಂದ್ರಾಡಳಿತ ಸರ್ಕಾರಗಳು ನಡೆಸುತ್ತಿರುವ ಪರಿಹಾರ/ನಿರಾಶ್ರಿತರ ಶಿಬಿರಗಳಲ್ಲಿ ನೆಲೆಸಿದ್ದಾರೆ. ಸೋಂಕುರಹಿತ ವಲಯದ ಹೊರಗಡೆ ಹೆಚ್ಚುವರಿಯಾಗಿ ಹೊಸ ಚಟುವಟಿಕೆಗಳನ್ನು ನಡೆಸಲು 2020ರ ಏಪ್ರಿಲ್ 20ರಿಂದ ಅನ್ವಯವಾಗುವಂತೆ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಆ ಪ್ರಕಾರ ಕೈಗಾರಿಕೆಗಳು ಉತ್ಪಾದನಾ, ಕಟ್ಟಡ ನಿರ್ಮಾಣ, ಕೃಷಿ ಮತ್ತು ಮನ್ರೇಗಾ ಕಾಮಗಾರಿಗಳಲ್ಲಿ ತೊಡಗಿದ್ದ ಕೆಲಸಗಾರರು ಸೋಂಕಿಲ್ಲದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದೆ.
ಕೇಂದ್ರ ಗೃಹ ಸಚಿವಾಲಯ ತನ್ನ ಹಿಂದಿನ ಆದೇಶಗಳಲ್ಲಿ ದಿನಾಂಕ 29 ಮಾರ್ಚ್ 2020, 15 ಏಪ್ರಿಲ್ 2020 ಮತ್ತು 16 ಏಪ್ರಿಲ್ 2020 ಆದೇಶಗಳನ್ನು ಮುಂದುವರಿಸುತ್ತಾ, ನಿರ್ದಿಷ್ಟ ಕಾರ್ಯಾಚರಣೆ ಮಾನದಂಡ(ಎಸ್ಒಪಿ)ಅನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದೊಳಗೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ಸಾಗಾಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಕಟಿಸಿ, ಕಠಿಣ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದೆ.
ಆ ಕಾರ್ಮಿಕರನ್ನು ರಾಜ್ಯದ/ಕೇಂದ್ರಾಡಳಿತ ಪ್ರದೇಶದೊಳಗೆ ಸಾಗಾಣೆ ಮಾಡಲು ಅನುಕೂಲವಾಗುವಂತೆ ಕುರಿತಂತೆ ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ :
· ಪ್ರಸ್ತುತ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪರಿಹಾರ ಅಥವಾ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು ಸ್ಥಳೀಯ ಸಂಬಂಧಿಸಿದ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡಿರಬೇಕು ಮತ್ತು ಅವರು ಬೇರೆ ಬೇರೆ ಬಗೆಯ ಕೆಲಸಗಳನ್ನು ಮಾಡಲು ಅರ್ಹತೆ ಹೊಂದಿದ್ದಾರೆಯೇ ಎಂಬುದರ ಕುರಿತು ಅವರ ಕೌಶಲ್ಯದ ಬಗ್ಗೆ ಮೌಲ್ಯಮಾಪನ ಮಾಡಬೇಕು.
· ವಲಸೆ ಕಾರ್ಮಿಕರ ಒಂದು ಗುಂಪು ಒಂದು ವೇಳೆ ತಾವು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ವಾಪಸ್ಸಾಗಬೇಕೆಂದು ಬಯಸಿದರೆ ಅದು ಆ ಅವರು ಪ್ರಸ್ತುತ ನೆಲೆಸಿದ ರಾಜ್ಯದೊಳಗೇ ಇದ್ದರೆ ಅವರನ್ನು ತಪಾಸಣೆಗೊಳಪಡಿಸಬೇಕು ಮತ್ತು ಯಾರಿಗೆ ಸೋಂಕಿಲ್ಲವೋ ಅವರ ನಿಗದಿತ ದುಡಿಯುವ ಸ್ಥಳಗಳಿಗೆ ಸಾಗಾಣೆ ಮಾಡಬೇಕು.
· ಪ್ರಸ್ತುತ ಕಾರ್ಮಿಕರು ನೆಲೆಸಿರುವ ಆ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಹೊರಗೆ ಅವರ ಸಂಚಾರಕ್ಕೆ ಅವಕಾಶವಿಲ್ಲ ಎಂಬುದನ್ನು ಗಮನಿಸಬೇಕು.
· ಅವರು ಒಂದು ವೇಳೆ ಬಸ್ ನಲ್ಲಿ ಸಂಚರಿಸುವಂತಿದ್ದರೆ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯನ್ನು ಖಾತ್ರಿಪಡಿಸಬೇಕು ಮತ್ತು ಅವರ ಸಾಗಾಣೆಗೆ ಬಳಸುವ ಬಸ್ ಗಳನ್ನು ಆರೋಗ್ಯಾಧಿಕಾರಿಗಳ ಮಾರ್ಗಸೂಚಿಯಂತೆ ಸ್ಯಾನಿಟೈಸ್ ಮಾಡಿಸಿರಬೇಕು.
· ಕೋವಿಡ್-19 ನಿರ್ವಹಣೆಗೆ ನೀಡಲಾಗಿರುವ ರಾಷ್ಟ್ರೀಯ ನಿರ್ದೇಶನಗಳ ಕುರಿತು 2020ರ ಏಪ್ರಿಲ್ 15ರಂದು ಪ್ರಕಟಿಸಿರುವ ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
· ಸ್ಥಳೀಯ ಅಧಿಕಾರಿಗಳು ಕಾರ್ಮಿಕರ ಪ್ರಯಾಣದ ಅವಧಿಯಲ್ಲಿ ಅವರಿಗೆ ಆಹಾರ, ನೀರು ಇತ್ಯಾದಿಯನ್ನು ಒದಗಿಸಿಕೊಡಬೇಕು.
ಆದೇಶಕ್ಕೆ ಇಲ್ಲಿ ಕ್ಲಿಕ್ ಮಾಡಿ
***
(Release ID: 1616075)
Visitor Counter : 247
Read this release in:
Punjabi
,
English
,
Urdu
,
Marathi
,
Hindi
,
Assamese
,
Bengali
,
Gujarati
,
Odia
,
Tamil
,
Telugu
,
Malayalam