ರೈಲ್ವೇ ಸಚಿವಾಲಯ

ಕೋವಿಡ್-19 ವಿರುದ್ಧ ಅವಿರತ ಸಮರ, ರೈಲ್ವೆಯಿಂದ ಲಾಕ್ ಡೌನ್ ವೇಳೆ ದೇಶಾದ್ಯಂತ 1150 ಟನ್ ವೈದ್ಯಕೀಯ ಸಾಮಗ್ರಿಗಳ ಸಾಗಾಣೆ

Posted On: 19 APR 2020 3:27PM by PIB Bengaluru

ಕೋವಿಡ್-19 ವಿರುದ್ಧ ಅವಿರತ ಸಮರ, ರೈಲ್ವೆಯಿಂದ ಲಾಕ್ ಡೌನ್ ವೇಳೆ ದೇಶಾದ್ಯಂತ 1150 ಟನ್ ವೈದ್ಯಕೀಯ ಸಾಮಗ್ರಿಗಳ ಸಾಗಾಣೆ

ರಾಷ್ಟ್ರವ್ಯಾಪಿ ಲಾಕ್ ಡೌನ್ ವೇಳೆ ಆದ್ಯತೆಯ ಮೇಲೆ ನಿರಂತರ ವೈದ್ಯಕೀಯ ಸಾಮಗ್ರಿಗಳ ಸಾಗಾಣೆ ಖಾತ್ರಿಪಡಿಸಿದ ಭಾರತೀಯ ರೈಲ್ವೆ

ಲಾಕ್ ಡೌನ್ ವೇಳೆ ವಲಯ ರೈಲ್ವೆಗಳಿಂದ ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಸಾಗಾಣೆ ಉತ್ತೇಜನಕ್ಕೆ ಸರಕು ಸಾಗಾಣೆ ರೈಲುಗಳ ವೇಳಾಪಟ್ಟಿ ಕಾರ್ಯ ನಿರ್ವಹಣೆ

 

ಕೋವಿಡ್-19 ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಭಾರತೀಯ ರೈಲ್ವೆ, ಆದ್ಯತೆಯ ಮೇಲೆ ವೈದ್ಯಕೀಯ ಸಾಮಗ್ರಿಗಳನ್ನು ನಿರಂತರವಾಗಿ ಸಾಗಾಣೆ ಖಾತ್ರಿಪಡಿಸಿದೆ. ಭಾರತೀಯ ರೈಲ್ವೆ, ಔಷಧಗಳು, ಮಾಸ್ಕ್, ಆಸ್ಪತ್ರೆ ಉಪಕರಣಗಳು ಮತ್ತು ಇತರೆ ವೈದ್ಯಕೀಯ ಸಾಮಗ್ರಿಗಳನ್ನು ತನ್ನ ಸರಕು ಸೇವೆಗಳ ವೇಳಾಪಟ್ಟಿಯಂತೆ ನಿರಂತರವಾಗಿ ಸಾಗಾಣೆ ಮಾಡುತ್ತಿದೆ. ಆ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಆಗಿರುವ ಪ್ರತಿಕೂಲ ಪರಿಣಾಮಗಳು ಮತ್ತು ಸವಾಲುಗಳನ್ನು ಎದುರಿಸುವ ಸರ್ಕಾರದ ಪ್ರಯತ್ನಗಳನ್ನು ಬಲವರ್ಧನೆಗೊಳಿಸಿದೆ.

2020ರ ಏಪ್ರಿಲ್ 18ರ ವೇಳೆಗೆ ಭಾರತೀಯ ರೈಲ್ವೆ, ದೇಶದ ನಾನಾ ಭಾಗಗಳಿಗೆ ಸುಮಾರು 1150 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಸಾಗಾಣೆ ಮಾಡಿದೆ. ವಲಯವಾರು ವೈದ್ಯಕೀಯ ಸಾಮಗ್ರಿಗಳ ಸಾಗಣೆ ವಿವರ ಈ ಕೆಳಗಿನಂತಿದೆ :

 

ಕ್ರ. ಸಂಖ್ಯೆ

ವಲಯ

ತೂಕ(ಟನ್ ಗಳಲ್ಲಿ)

1

ದಕ್ಷಿಣ ರೈಲ್ವೆ

83.13

2

ಆಗ್ನೇಯ ಕೇಂದ್ರೀಯ ರೈಲ್ವೆ

15.10

3

ಪೂರ್ವ ಕೇಂದ್ರೀಯ ರೈಲ್ವೆ

1.28

4

ಈಶಾನ್ಯ ರೈಲ್ವೆ

2.88

5

ಪೂರ್ವ ಕರಾವಳಿ ರೈಲ್ವೆ

1.06

6

ದಕ್ಷಿಣ ಕೇಂದ್ರೀಯ ರೈಲ್ವೆ

47.22

7

ಕೇಂದ್ರೀಯ ರೈಲ್ವೆ

135.64

8

ಉತ್ತರ ಕೇಂದ್ರೀಯ ರೈಲ್ವೆ

74.32

9

ಪಶ್ಚಿಮ ಕೇಂದ್ರೀಯ ರೈಲ್ವೆ

27.17

10

ಆಗ್ನೇಯ ರೈಲ್ವೆ

2.82

11

ನೈಋತ್ಯ ರೈಲ್ವೆ

12.10

12

ಪೂರ್ವ ರೈಲ್ವೆ

8.52

13

ಈಶಾನ್ಯ ಪ್ರದೇಶ ರೈಲ್ವೆ

2.16

14

ವಾಯವ್ಯ ರೈಲ್ವೆ

8.22

15

ಪಶ್ಚಿಮ ರೈಲ್ವೆ

328.84

16

ಉತ್ತರ ರೈಲ್ವೆ

399.71

ಒಟ್ಟಾರೆ

1150.17 ಟನ್

 

ಭಾರತೀಯ ರೈಲ್ವೆ ಇಂತಹ ಸಂಕಷ್ಟದ ಸಮಯದಲ್ಲಿ ಮಾನವ ಜೀವಗಳನ್ನು ಮುಟ್ಟುತ್ತಿದೆ. ಅದು ದಿವ್ಯಾಂಗ ಮಗುವಿಗಾಗಿ ಒಂಟೆಗಳ ಹಾಲನ್ನು ಅಜ್ಮೀರ್ ನಿಂದ ಮುಂಬೈಗೆ ತನ್ನ ಸರಕು ಸಾಗಾಣೆ ರೈಲಿನಲ್ಲಿ ಸಾಗಾಣೆ ಮಾಡಿ, ಆ ಮೂಲಕ ಸಾಮಾಜಿಕ ಮಾಧ್ಯಮದ ಮೂಲಕ ನೆರವು ಯಾಚಿಸಿದ್ದ ಪೋಷಕರಿಗೆ ಸ್ಪಂದಿಸಿದೆ. ಅದೇ ರೀತಿ ಮತ್ತೊಂದು ದಿವ್ಯಾಂಗ ಮಗು ಅಜ್ಮೀರದಲ್ಲಿ ಗಂಭೀರ ನ್ಯೂನತೆಯನ್ನು ಎದುರಿಸುತ್ತಿತ್ತು, ಅದರ ಔಷಧಗಳ ದಾಸ್ತಾನು ಮುಗಿದಿತ್ತು, ಅವರ ಸಂಬಂಧಿಗಳು ರೈಲ್ವೆ ಇಲಾಖೆ ಮೊರೆ ಹೋಗಿದ್ದರು. ರೈಲ್ವೆ ಅಹಮದಾಬಾದ್ ನಿಂದ ಅಜ್ಮೀರ್ ಗೆ ಸರಕು ಸಾಗಾಣೆ ರೈಲ್ವೆಯಲ್ಲಿ ಆ ಔಷಧಗಳನ್ನು ಪೂರೈಸಿದೆ.

***


(Release ID: 1616074) Visitor Counter : 255