ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಪೆನ್ಷನ್ ಕಡಿತದ ಯಾವುದೇ ಪ್ರಸ್ತಾಪ ಇಲ್ಲ
Posted On:
19 APR 2020 12:38PM by PIB Bengaluru
ಪೆನ್ಷನ್ ಕಡಿತದ ಯಾವುದೇ ಪ್ರಸ್ತಾಪ ಇಲ್ಲ
ಈಗಿರುವ ಜಾಗತಿಕ ಸಾಂಕ್ರಾಮಿಕ ಕೋವಿಡ್- 19 ಹಿನ್ನೆಲೆಯಲ್ಲಿ ಮತ್ತು ಆರ್ಥಿಕ ಪರಿಸ್ತಿತಿಯ ಹಿನ್ನೆಲೆಯಲ್ಲಿ ಸರಕಾರವು ಪೆನ್ಷನ್ ಕಡಿಮೆ ಮಾಡುವ ಅಥವಾ ನಿಲ್ಲಿಸುವ ಬಗ್ಗೆ ಚಿಂತಿಸುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವುದು ಪೆನ್ಷನರುಗಳ ಚಿಂತೆಗೆ ಕಾರಣವಾಗಿದೆ. ಈ ವದಂತಿಗಳು ಕೇಂದ್ರ ಸರಕಾರದ ಸಿಬ್ಬಂದಿ , ಸಾರ್ವಜನಿಕ ಕುಂದು ಕೊರತೆ ಮತ್ತು ಪೆನ್ಷನ್ ಸಚಿವಾಲಯದ ಪೆನ್ಷನ್ ಮತ್ತು ಪೆನ್ಷನ್ ದಾರರ ಕಲ್ಯಾಣ ಇಲಾಖೆಯ ಗಮನಕ್ಕೆ ಬಂದಿದೆ.
ಈ ಮೊದಲೇ ಸ್ಪಷ್ಟೀಕರಿಸಿದಂತೆ, ಪೆನ್ಷನ್ ಕಡಿತ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಎದುರು ಇಲ್ಲ ಎಂಬುದನ್ನು ಮತ್ತೊಮ್ಮೆ ಪುನರುಚ್ಚರಿಸಲಾಗುತ್ತಿದೆ. ಸರಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ , ಬದಲು ಪೆನ್ಷನರುಗಳ ಕಲ್ಯಾಣ ಮತ್ತು ಕ್ಷೇಮಕ್ಕೆ ಬದ್ದವಾಗಿರುತ್ತದೆ ಎಂದೂ ಅದು ಹೇಳಿದೆ.
***
(Release ID: 1616060)
Visitor Counter : 221
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam