ರಕ್ಷಣಾ ಸಚಿವಾಲಯ
ಭಾರತೀಯ ನೌಕಾಪಡೆ ಸದಾ ಸನ್ನದ್ಧ ಮತ್ತು ಯಾವುದೇ ತುರ್ತು ಎದುರಿಸಲು ಸಿದ್ಧ
Posted On:
18 APR 2020 7:28PM by PIB Bengaluru
ಭಾರತೀಯ ನೌಕಾಪಡೆ ಸದಾ ಸನ್ನದ್ಧ ಮತ್ತು ಯಾವುದೇ ತುರ್ತು ಎದುರಿಸಲು ಸಿದ್ಧ
ಮುಂಬೈನ ಸಮುದ್ರ ತೀರದಲ್ಲಿದ್ದ ಐಎನ್ಎಸ್ ಆಂಗ್ರೆಯಲ್ಲಿನ 26 ನಾವಿಕರಿಗೆ ಕೋವಿಡ್-19 ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅದನ್ನು ಹೊರತುಪಡಿಸಿದರೆ ಈವರೆಗೂ ನೌಕೆಯಲ್ಲಿ ಕ್ಷಿಪಣಿಗಳಲ್ಲಿ ಅಥವಾ ಭಾರತೀಯ ನೌಕಾಪಡೆಯ ವಾಯುನೆಲೆಯಲ್ಲಿ ಯಾವುದೇ ಒಂದೇ ಒಂದು ಕೋವಿಡ್ ಪ್ರಕರಣವೂ ದೃಢಪಟ್ಟಿಲ್ಲ. ನಮ್ಮ ನೌಕಾಪಡೆ ಎಲ್ಲ ಮೂರು ಆಯಾಮಗಳಲ್ಲೂ ಸದಾ ಸರ್ವ ಸನ್ನದ್ಧವಾಗಿ ಇದ್ದು, ಅದರ ಜಾಲ ಮತ್ತು ಆಸ್ತಿಯ ವ್ಯಾಪ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ನೌಕಾಪಡೆ ಸನ್ನದ್ಧ ಸ್ಥಿತಿಯಲ್ಲಿದ್ದು, ಅದರ ಸಾಮರ್ಥ್ಯವನ್ನು ಸಾಂಕ್ರಾಮಿಕ ರೋಗ ಎದುರಿಸಲು ಮತ್ತು ನೆರೆಹೊರೆಯ ಮಿತ್ರ ರಾಷ್ಟ್ರಗಳಿಗೆ ಸಹಕಾರ ನೀಡಲು ರಾಷ್ಟ್ರೀಯ ಉದ್ದೇಶಕ್ಕೆ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ನಮ್ಮ ಪೂರ್ವದಲ್ಲಿನ ಮಲಾಕ್ಕಾದಿಂದ ಪಶ್ಚಿಮದಲ್ಲಿನ ಬಾಬ್ ಎಲ್- ಮಾನ್-ದೇಬ್ ವರೆಗಿನ ಭಾರೀ ದೊಡ್ಡ ಸಾಗರ ವ್ಯಾಪ್ತಿಯಲ್ಲಿ ಪಹರೆ ಮುಂದುವರಿದಿದೆ. ಅಡೇನ್ ಕೊಲ್ಲಿಯಿಂದ ಹಡಗುಗಳ್ಳರನ್ನು ತಡೆಯಲು ಮತ್ತು ನಮ್ಮ ವರ್ತಕರ ಹಡಗುಗಳನ್ನು ರಕ್ಷಿಸುವ ಸಂಕಲ್ಪವನ್ನು ಪುನರುಚ್ಚರಿಸಲಾಗಿದೆ.
ಈ ಕೋವಿಡ್-19 ಪ್ರಕರಣಗಳ ಪರಿಣಾಮ ಏಪ್ರಿಲ್ 7ರಂದು ಒಬ್ಬ ನಾವಿಕನಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಶ್ಚಿಮ ನೌಕಾ ಕಮಾಂಡ್ ನಲ್ಲಿ ವ್ಯಾಪಕವಾಗಿ ತಪಾಸಣೆ ಮತ್ತು ಪರೀಕ್ಷೆ ಹಾಗೂ ಸಂಪರ್ಕ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಎಲ್ಲ ನಾವಿಕರನ್ನು ಶಂಕಿತರನ್ನಾಗಿ ಮುಂದುವರಿಸಲಾಗಿತ್ತು ಮತ್ತು ಅವರನ್ನು ಐಎನ್ಎಚ್ಎಸ್ ಅಸ್ವಿನಿ ಅಲ್ಲಿ ಉತ್ತಮ ವೈದ್ಯಕೀಯ ವೃತ್ತಿಪರರ ಆರೈಕೆಯಲ್ಲಿ ನಿಗಾ ವಹಿಸಲಾಗಿತ್ತು.
ಓರ್ವ ನಾವಿಕನಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಘಟಕವನ್ನು ಮುಚ್ಚಲಾಗಿತ್ತು. ನಂತರ ನಿಯಂತ್ರಣ ವಲಯ ಮತ್ತು ಬಫರ್ --- ಪ್ರದೇಶವನ್ನು ನಿಯೋಜಿಸಲಾಗಿತ್ತು ಮತ್ತು ಆಗಾಗ್ಗೆ ಸೋಂಕು ಹರಡುವ ಆವೃತ್ತಿಯನ್ನು ಕತ್ತರಿಸಲು ಸೋಂಕು ನಿವಾರಣಾ ದ್ರಾವಣ ಸಿಂಪಡಣೆ ಮಾಡುವ ಕೆಲಸ ಮಾಡಲಾಗಿದೆ.
ನೌಕಾಪಡೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲೂ ಕಠಿಣ ಲಾಕ್ ಡೌನ್ ನಿಯಮ ಪಾಲಿಸಲಾಗುತ್ತಿದ್ದು, ಸಿಬ್ಬಂದಿ ಮತ್ತು ಕುಟುಂಬಗಳಿಗೆ ಕಠಿಣ ಕ್ವಾರಂಟೈನ್ ಮತ್ತು ಸುರಕ್ಷಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಮನೆ ಮನೆಗೆ ಭೇಟಿ ನೀಡಿ, ತಪಾಸಣೆ ನಡೆಸಲಾಗಿದೆ.
ಹಿಂದಿನಂತೆ ಕರಾವಳಿ ಮತ್ತು ಸಮುದ್ರದ ವರೆಗಿನ ಭದ್ರತಾ ಯೋಜನೆಗಳು ಮುಂದುವರಿದಿವೆ. ಕಾರ್ಯಾಚರಣೆ ಘಟಕಗಳಲ್ಲಿನ ಸಿಬ್ಬಂದಿಗೆ 14 ದಿನಗಳ ಕ್ವಾರಂಟೈನ್ ಮುಗಿಸಿ, ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಮತ್ತು ನಾಗರಿಕ ಆಡಳಿತ ಅಥವಾ ನೆರೆಯ ಮಿತ್ರ ರಾಷ್ಟ್ರಗಳಿಗೆ ನೆರವು ಸೇರಿದಂತೆ ಎಲ್ಲ ಸಂದರ್ಭಗಳಿಗೆ ಸಜ್ಜುಗೊಳಿಸಲಾಗಿದೆ.
ಮುಂಬೈ, ಗೋವಾ, ಕೊಚ್ಚಿ ಮತ್ತು ವಿಶಾಖಪಟ್ಟಣಂ ನೌಕಾ ಆವರಣಗಳಲ್ಲಿ ಹಲವು ಕ್ವಾರಂಟೈನ್ ಸೌಕರ್ಯಗಳನ್ನು ಸ್ಥಾಪಿಸಿ, ಅವುಗಳನ್ನು ದೇಶವಾಸಿಗಳಿಗೆ ಸಜ್ಜಾಗಿಡಲಾಗಿದೆ. ಕಳೆದ ವಾರ 44 ಇರಾನೇತರ ಯಾತ್ರಾರ್ಥಿಗಳನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಜಮ್ಮು ಕಾಶ್ಮೀರದಿಂದ ಕರೆತಂದು ಅವರನ್ನು ಮುಂಬೈನ ನೌಕಾ ಸೌಕರ್ಯದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅವರಿಗೆ ಭಾರತೀಯ ನೌಕಾಪಡೆಯಿಂದ ಸೂಕ್ತ ಆರೈಕೆ ನಂತರ ಅವರು ತಮ್ಮ ತವರಿಗೆ ಮರಳಿದರು. ಅಲ್ಲದೆ ನೌಕಾಪಡೆಯ ವಿಮಾನಗಳು ಅಗತ್ಯ ಪೂರೈಕೆ ಮತ್ತು ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರಗಳಿಗೆ ನೆರವಾಗುತ್ತಿದೆ.
ಭಾರತೀಯ ನೌಕಾಪಡೆ ತನ್ನ ಅನುಭವಗಳನ್ನು ಹಂಚಿಕೊಳ್ಳುವಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದು, ಅದು ನಿರ್ದಿಷ್ಟ ಕಾರ್ಯಾನುಷ್ಠಾನ ಶಿಷ್ಟಾಚಾರ(ಎಸ್ಒಪಿ) ಅಳವಡಿಸಿಕೊಂಡಿದ್ದು, ಅದನ್ನು ಭಾರತೀಯ ಸಾಗರ ನೌಕಾ ಸಿಂಪೋಸಿಯಂ(ಐಒಎನ್ಎಸ್) ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಆ ಶಿಷ್ಟಾಚಾರವನ್ನು ಇತರೆಯವರಿಗೆ ಹಂಚಿಕೊಳ್ಳಲಾಗಿದೆ.
ಭಾರತೀಯ ನೌಕಾಪಡೆ ಸೋಂಕು ಹರಡುವುದನ್ನು ನಿಯಂತ್ರಿಸಲು ಗರಿಷ್ಠ ಪ್ರಮಾಣದ ಪ್ರಯತ್ನಗಳನ್ನು ನಡೆಸಲು ಬದ್ಧವಾಗಿದೆ ಮತ್ತು ಸಾಗರದ ವ್ಯಾಪ್ತಿಯಲ್ಲಿ ಯಾವುದೇ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ.
***
(Release ID: 1616031)
Visitor Counter : 247