ಗ್ರಾಮೀಣಾಭಿವೃದ್ಧಿ ಸಚಿವಾಲಯ
2020ರ ಏಪ್ರಿಲ್ 20ರಿಂದ ಸೋಂಕಿಲ್ಲದ ಪ್ರದೇಶಗಳಲ್ಲಿ ವಿನಾಯಿತಿಗಳನ್ನು ನೀಡುವ ಬಗ್ಗೆ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್
Posted On:
18 APR 2020 7:45PM by PIB Bengaluru
2020ರ ಏಪ್ರಿಲ್ 20ರಿಂದ ಸೋಂಕಿಲ್ಲದ ಪ್ರದೇಶಗಳಲ್ಲಿ ವಿನಾಯಿತಿಗಳನ್ನು ನೀಡುವ ಬಗ್ಗೆ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್
ಪಿಎಂಎವೈ(ಜಿ), ಪಿಎಂಜಿಎಸ್ ವೈ, ಎನ್ಆರ್ ಎಲ್ಎಂ ಮತ್ತು ಮನ್ರೇಗಾ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ಎಲ್ಲ ಅಗತ್ಯ ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಪಾಲನೆಗೆ ಒತ್ತು ನೀಡಬೇಕೆಂದ ಶ್ರೀ ನರೇಂದ್ರ ಸಿಂಗ್ ತೋಮರ್
ಎನ್ಆರ್ ಎಲ್ಎಂ ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ದೊಡ್ಡ ಮಟ್ಟದಲ್ಲಿ ಮುಖ ರಕ್ಷಾಕವಚ, ಸ್ಯಾನಿಟೈಸರ್, ಸೋಪು ಮತ್ತು ಸಮುದಾಯ ಅಡುಗೆ ಕೋಣೆಗಳನ್ನು ನಡೆಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು
2020ರ ಏಪ್ರಿಲ್ 20ರಿಂದ ಸೋಂಕಿಲ್ಲದ ಪ್ರದೇಶಗಳಲ್ಲಿ ವಿನಾಯಿತಿಗಳನ್ನು ನೀಡುವ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸುಮಾರು ಎರಡೂವರೆ ಗಂಟೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅವರು ಸೋಂಕು ಹರಡದ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ(ಮನ್ರೇಗಾ), ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ), ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ(ಪಿಎಂಜಿಎಸ್ ವೈ) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್ಆರ್ ಎಲ್ಎಂ) ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿದರು.
ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಸವಾಲು ಅತ್ಯಂತ ಗಂಭೀರವಾಗಿದೆ, ಇದನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಮೂಲಸೌಕರ್ಯ ಬಲವರ್ಧನೆ ಮತ್ತು ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಗ್ರಾಮೀಣ ಜೀವನೋಪಾಯಗಳಿಗೆ ವಿಭಿನ್ನ ಅವಕಾಶ ಸೃಜಿಸುವ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಮನ್ರೇಗಾ ಅಡಿಯಲ್ಲಿ ಜಲ ಸಂರಕ್ಷಣೆ ಮತ್ತು ಜಲ ಮರುಪೂರಣ ಕಾಮಗಾರಿಗಳಿಗೆ ಒತ್ತು ನೀಡಬೇಕೆಂದ ಅವರು, ಜಲಶಕ್ತಿ ಸಚಿವಾಲಯ ಮತ್ತು ಭೂಸಂಪನ್ಮೂಲಗಳ ಇಲಾಖೆಯ ಯೋಜನೆಗಳೊಂದಿಗೆ ನೀರಾವರಿ ಕಾಮಗಾರಿಗಳನ್ನು ಸಮ್ಮಿಳಿತಗೊಳಿಸಿಕೊಳ್ಳಬೇಕು ಎಂದರು.
ಎನ್ಆರ್ ಎಲ್ಎಂ ಅಡಿಯಲ್ಲಿ ಸ್ವಸಹಾಯ ಗುಂಪುಗಳ ಮಹಿಳೆಯರು ಭಾರೀ ಪ್ರಮಾಣದಲ್ಲಿ ಮುಖ ರಕ್ಷಾಕವಚ, ಸ್ಯಾನಿಟೈಸರ್, ಸೋಪು ಉತ್ಪಾದನೆಯ ಜೊತೆಗೆ ಸಮುದಾಯ ಅಡುಗೆ ಕೋಣೆಗಳನ್ನು ನಡೆಸುತ್ತಿರುವುದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಗರಿಷ್ಠ ಸಂಖ್ಯೆಯ ಎಸ್ಎಚ್ ಜಿಗಳು ಮತ್ತು ಅವರ ಉತ್ಪನ್ನಗಳನ್ನು ಸರ್ಕಾರದ ಇ-ಮಾರುಕಟ್ಟೆ(ಜಿಇಎಂ) ಪೋರ್ಟಲ್ ನಲ್ಲಿ ಹಾಕಲಾಗಿದೆ. ಈ ಎಸ್ಎಚ್ ಜಿ ಉದ್ಯಮಗಳನ್ನು ಮತ್ತಷ್ಟು ವಿಸ್ತರಣೆ ಮಾಡಬೇಕು ಮತ್ತು ಬಲವರ್ಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಪಿಎಂಎವೈ(ಜಿ) ಅಡಿಯಲ್ಲಿ 48 ಲಕ್ಷ ವಸತಿ ಘಟಕಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಅವುಗಳನ್ನು ಈಗಾಗಲೇ 3 ಮತ್ತು 4ನೇ ಕಂತನ್ನು ಈಗಾಗಲೇ ಪಾವತಿಸಿರುವ ಫಲಾನುಭವಿಗಳಿಗೆ ನೀಡಬೇಕಾಗಿದೆ ಎಂದರು. ಪಿಎಂಜಿಎಸ್ ವೈ ಅಡಿಯಲ್ಲಿ ರಸ್ತೆ ಕಾಮಗಾರಿಗಳು ಮತ್ತು ಬಾಕಿ ಇರುವ ರಸ್ತೆ ಯೋಜನೆಗಳಿಗೆ ಹೆಚ್ಚಿನ ಗಮನಹರಿಸಿ, ತ್ವರಿತ ಟೆಂಡರ್ ಗಳಿಗೆ ಅನುಮೋದಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ), ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ(ಪಿಎಂಜಿಎಸ್ ವೈ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್ಆರ್ ಎಲ್ಎಂ) ಮತ್ತು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ(ಮನ್ರೇಗಾ), ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಾಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕು, ಈ ಕುರಿತಂತೆ ಸಚಿವಾಲಯ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು. ಆ ಸಲಹೆ ಸೂಚನೆಯಂತೆ ಕೆಲಸಗಾರರ ಸುರಕ್ಷತೆಯನ್ನು ದುಡಿಯುವ ಸ್ಥಳಗಳಲ್ಲಿ ಖಾತ್ರಿಪಡಿಸಲು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಹಣಕಾಸು ಸಂಪನ್ಮೂಲ ಲಭ್ಯವಿದೆ ಎಂದು ಭರವಸೆ ನೀಡಿದರು.
ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕೃಷಿ ಹಾಗೂ ರೈತ ಕಲ್ಯಾಣ ಸಚಿವರ ಸಲಹೆಗಳನ್ನು ಒಪ್ಪಿದವು. ಬಿಹಾರ, ಕರ್ನಾಟಕ, ಹರಿಯಾಣ ಮತ್ತು ಒಡಿಶಾ ವಿಶೇಷವಾಗಿ ಕೇಂದ್ರ ಸರ್ಕಾರ ಮನ್ರೇಗಾ ಯೋಜನೆ ಅಡಿ ಬಾಕಿ ಇದ್ದ ಶೇ. 100ರಷ್ಟು ಹಣವನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದವು. ಬಿಹಾರ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳು ಪಿಎಂಎವೈ(ಜಿ) ಅಡಿಯಲ್ಲಿ ಹೆಚ್ಚುವರಿ ಗುರಿಗೆ ಮನವಿ ಮಾಡಿದರು. ಒಡಿಶಾ ಎನ್ಆರ್ ಎಲ್ಎಂ ಅಡಿಯಲ್ಲಿ ಕೃಷಿ ಮತ್ತು ಕೃಷಿಯೇತರ ಉದ್ಯಮಗಳ ಉತ್ತೇಜನಕ್ಕೂ ಒತ್ತು ನೀಡಬೇಕೆಂದು ಕೋರಿತು.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಗ್ರಾಮೀಣಾಭಿವೃದ್ಧಿಯ ಕ್ಷೇತ್ರ ಸಿಬ್ಬಂದಿ, ಪಂಚಾಯತ್ ರಾಜ್ ಸಂಸ್ಥೆಗಳ ಸಿಬ್ಬಂದಿ ಮತ್ತು ಇತರೆ ಸಮುದಾಯ ಮಟ್ಟದ ಸಿಬ್ಬಂದಿಯನ್ನು ಒಗ್ಗೂಡಿಸುವ ಭರವಸೆ ನೀಡಿದವು ಮತ್ತು ಆ ಮೂಲಕ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದವು.
***
(Release ID: 1616030)
Visitor Counter : 326
Read this release in:
Punjabi
,
Malayalam
,
Assamese
,
English
,
Urdu
,
Hindi
,
Marathi
,
Manipuri
,
Gujarati
,
Odia
,
Tamil
,
Telugu