ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಸ್ಥಾಪಿಸಲಾಗಿರುವ ಗೃಹ ಸಚಿವಾಲಯದ ನಿಯಂತ್ರಣ ಕೊಠಡಿ ಕಾರ್ಯಾಚರಣೆ ಪರಾಮರ್ಶೆ ನಡೆಸಿದ ಶ್ರೀ ಅಮಿತ್ ಷಾ
Posted On:
18 APR 2020 8:21PM by PIB Bengaluru
ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಸ್ಥಾಪಿಸಲಾಗಿರುವ ಗೃಹ ಸಚಿವಾಲಯದ ನಿಯಂತ್ರಣ ಕೊಠಡಿ ಕಾರ್ಯಾಚರಣೆ ಪರಾಮರ್ಶೆ ನಡೆಸಿದ ಶ್ರೀ ಅಮಿತ್ ಷಾ
ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಷಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಎಂಎಚ್ಎಯಿಂದ ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿ ಕಾರ್ಯಾಚರಣೆಗಳ ಬಗ್ಗೆ ನವದೆಹಲಿಯಲ್ಲಿಂದು ಪರಾಮರ್ಶೆ ನಡೆಸಿದರು.
ಗೃಹ ಸಚಿವರು, ನಿಯಂತ್ರಣ ಕೊಠಡಿಯಲ್ಲಿರುವ ಅಧಿಕಾರಿಗಳೊಂದಿಗೆ ನಾನಾ ರಾಜ್ಯಗಳಲ್ಲಿನ ಕೋವಿಡ್-19 ಸ್ಥಿತಿಗತಿ ಕುರಿತು ಪರಿಶೀಲಿಸಿದರು, ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು ಹಾಗೂ ಅವರು ಮಾಡಿರುವ ಗಣನೀಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಂಎಚ್ಎ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಅದು ಕೇವಲ ರಾಜ್ಯಗಳೊಂದಿಗೆ ಸಮನ್ವಯ ನಡೆಸುತ್ತಿರುವುದಲ್ಲದೆ, ಸಾಂಕ್ರಾಮಿಕ ಎದುರಿಸಲು ಕೇಂದ್ರ ಸರ್ಕಾರದ ನಾನಾ ಸಚಿವಾಲಯಗಳೊಂದಿಗೂ ಸಮನ್ವಯ ಸಾಧಿಸುತ್ತಿದೆ.
ವಕ್ತಾರರು, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ
Spokesperson, Ministry of Home Affairs
✔@PIBHomeAffairs
ಶ್ರೀ ಅಮಿತ್ ಷಾ, ಕೋವಿಡ್-19 ಕುರಿತು ರಚಿಸಲಾಗಿರುವ ಎಂಎಚ್ಎ ನಿಯಂತ್ರಣ ಕೊಠಡಿ ಕಾರ್ಯಗಳ ಬಗ್ಗೆ ಪರಿಶೀಲಿಸಿದರು ಮತ್ತು ಅಧಿಕಾರಿಗಳೊಂದಿಗೆ ನಾನಾ ರಾಜ್ಯಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
ನಿಯಂತ್ರಣ ಕೊಠಡಿ ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುತ್ತಿದೆ ಮತ್ತು ರಾಜ್ಯಗಳು ಮಾತ್ರವಲ್ಲದೆ, ಕೇಂದ್ರ ಸರ್ಕಾರದ ನಾನಾ ಸಚಿವಾಲಯ ಜೊತೆ ಸಮನ್ವಯ ಸಾಧಿಸುತ್ತಿದೆ.#IndiaFightsCorona
Spokesperson, Ministry of Home Affairs✔@PIBHomeAffairs
Shri @AmitShah reviewed the working of MHA control room & reviewed #COVID19 situation in various states in a meeting with officers.
The control room is operational 24/7 and is coordinating with states as well as with various ministries of central government.#IndiaFightsCorona
103
7:39 PM - Apr 18, 2020
Twitter Ads info and privacy
35 people are talking about this
ಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಜಿ. ಕಿಶನ್ ರೆಡ್ಡಿ ಮತ್ತು ಸಚಿವಾಲಯದ ನಿಯಂತ್ರಣ ಕೊಠಡಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು.
***
(Release ID: 1615934)
Visitor Counter : 150
Read this release in:
Urdu
,
Punjabi
,
English
,
Marathi
,
Hindi
,
Assamese
,
Bengali
,
Manipuri
,
Gujarati
,
Odia
,
Tamil
,
Telugu
,
Malayalam