ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಪ್ರಸಕ್ತ ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅವಕಾಶವಾದಿಗಳು ಭಾರತೀಯ ಕಂಪನಿಗಳನ್ನು ಖರೀದಿಸುವುದನ್ನು/ ಹೊಂದುವುದನ್ನು ನಿಯಂತ್ರಿಸುವ ಸಂಬಂಧ ಎಫ್ ಡಿಐ ಗೆ ತಿದ್ದುಪಡಿ ಮಾಡಿದ ಸರ್ಕಾರ

Posted On: 18 APR 2020 3:58PM by PIB Bengaluru

ಪ್ರಸಕ್ತ ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅವಕಾಶವಾದಿಗಳು ಭಾರತೀಯ ಕಂಪನಿಗಳನ್ನು ಖರೀದಿಸುವುದನ್ನು/ ಹೊಂದುವುದನ್ನು ನಿಯಂತ್ರಿಸುವ ಸಂಬಂಧ ಎಫ್ ಡಿಐ ಗೆ ತಿದ್ದುಪಡಿ ಮಾಡಿದ ಸರ್ಕಾರ

 

ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅವಕಾಶವಾದಿಗಳು ಭಾರತೀಯ ಕಂಪನಿಗಳನ್ನು ಖರೀದಿಸಲು/ ಹೊಂದುವುದನ್ನು ನಿಯಂತ್ರಿಸುವ ಸಂಬಂಧ ಭಾರತ ಸರ್ಕಾರ ವಿದೇಶಿ ನೇರ ಬಂಡವಾಳ (ಎಫ್ ಡಿಐ) ನೀತಿಯನ್ನು ಪರಾಮರ್ಶೆ ನಡೆಸಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ 2017ರ ಸಮಗ್ರ ಎಫ್ ಡಿಐ ನೀತಿಯಲ್ಲಿನ ತಿದ್ದುಪಡಿ ಪ್ಯಾರಾ 3.1.1ಕ್ಕೆ ತಿದ್ದುಪಡಿ ತಂದಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ಈ ಸಂಬಂಧ ಪತ್ರಿಕಾ ಪ್ರಕಟಣೆ ಸಂಖ್ಯೆ 3(2020ರ ಸರಣಿ)ಅನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ಸ್ಥಿತಿ ಮತ್ತು ಪರಿಷ್ಕೃತ ಸ್ಥಿತಿಯ ವಿವರಗಳು ಈ ಕೆಳಗಿನಂತಿವೆ.

ಪ್ರಸಕ್ತ ಸ್ಥಿತಿ :

ಪ್ಯಾರಾ 3.1.1: ಭಾರತದಲ್ಲಿ ಅನಿವಾಸಿಯರ ಸಂಸ್ಥೆ ಬಂಡವಾಳ ಹೂಡಬೇಕಾದರೆ ಎಫ್ ಡಿಐ ನೀತಿಯಲ್ಲಿ ಸೂಚಿಸಲಾಗಿರುವ ವಲಯಗಳು ಮತ್ತು ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ವಲಯಗಳಲ್ಲಿ ನಿರ್ಬಂಧವಿದೆ. ಆದರೆ ಬಾಂಗ್ಲಾದೇಶದ ಪ್ರಜೆ ಅಥವಾ ಅಲ್ಲಿ ನೋಂದಾಯಿಸಿಕೊಂಡಿರುವ ಸಂಸ್ಥೆ ಸರ್ಕಾರಿ ಮಾರ್ಗದಲ್ಲಿ ಮಾತ್ರ ಬಂಡವಾಳ ಹೂಡಿಕೆ ಮಾಡಬಹುದು. ಅಲ್ಲದೆ ಪಾಕಿಸ್ತಾನದ ಪ್ರಜೆ ಅಥವಾ ಪಾಕಿಸ್ತಾನದಲ್ಲಿ ನೋಂದಾಯಿಸಿರುವ ಸಂಸ್ಥೆ, ಸರ್ಕಾರಿ ವಲಯದಲ್ಲಿ ಮಾತ್ರ ಬಂಡವಾಳ ಹೂಡಬಹುದು. ಆದರೆ ರಕ್ಷಣಾ, ಬಾಹ್ಯಾಕಾಶ, ಅಣು ಇಂಧನವನ್ನು ಹೊರತುಪಡಿಸಿ, ಉಳಿದ ವಲಯಗಳು/ಚಟುವಟಿಕೆಗಳಲ್ಲಿ ವಿದೇಶಿ ಬಂಡವಾಳಕ್ಕೆ ನಿರ್ಬಂಧವಿದೆ.

ಪರಿಷ್ಕೃತ ಸ್ಥಿತಿ

ಪ್ಯಾರಾ 3.1.1 :

3.1.1() ಭಾರತೀಯರಲ್ಲದವರ ಸಂಸ್ಥೆ ಭಾರತದಲ್ಲಿ ಬಂಡವಾಳ ಹೂಡಬಹುದು. ಆದರೆ ಎಫ್ ಡಿಐನಲ್ಲಿ ಸೂಚಿಸಿರುವ ಚಟುವಟಿಕೆಗಳು ಮತ್ತು ವಲಯಗಳನ್ನು ಹೊರತುಪಡಿಸಿ, ಇತರೆ ಚಟುವಟಿಕೆ ವಲಯಗಳಿಗೆ ನಿರ್ಬಂಧವಿದೆ. ಆದರೆ ಭಾರತದೊಂದಿಗೆ ಭೂಗಡಿಯನ್ನು ಹಂಚಿಕೊಂಡಿರುವ ಯಾವುದೇ ರಾಷ್ಟ್ರ ಅಥವಾ ಭಾರತದಲ್ಲಿ ಬಂಡವಾಳ ಹೂಡಿಕೆಯಿಂದ ಲಾಭ ಪಡೆದಿರುವ ಮಾಲಿಕನಿರಬೇಕು ಅಥವಾ ಇತರೆ ಯಾವುದೇ ರಾಷ್ಟ್ರದ ಪ್ರಜೆಯಾಗಿದ್ದರೂ ಅವರು ಸರ್ಕಾರದ ಮಾರ್ಗದಲ್ಲಿ ಮಾತ್ರ ಬಂಡವಾಳ ಹೂಡಿಕೆ ಮಾಡಬೇಕು. ಅಂತೆಯೇ ಪಾಕಿಸ್ತಾನದ ಪ್ರಜೆ ಅಥವಾ ಅಲ್ಲಿ ನೋಂದಾಯಿಸಿಕೊಂಡಿರುವ ಸಂಸ್ಥೆ ಬಂಡವಾಳ ಹೂಡಬಹುದು. ಆದರೆ ಅದು ಸರ್ಕಾರದ ಮಾರ್ಗದಲ್ಲಿ ಮಾತ್ರ ಇರಬೇಕು, ಆದರೆ ಬಾಹ್ಯಾಕಾಶ, ರಕ್ಷಣೆ, ಅಣುಇಂಧನ ಮತ್ತು ಇತರೆ ವಲಯ/ಚಟುವಟಿಕೆಗಳಿಗೆ ವಿದೇಶಿ ಬಂಡವಾಳ ಹೂಡಿಕೆಗೆ ನಿರ್ಬಂಧವಿದೆ.

3.1.1(ಬಿ) ಭಾರತದಲ್ಲಿ ಹಾಲಿ ಅಸ್ಥಿತ್ವದಲ್ಲಿರುವ ಕಂಪನಿಗಳ ವರ್ಗಾವಣೆ ಅಥವಾ ಭವಿಷ್ಯದಲ್ಲಿ ಎಫ್ ಡಿಐ ಹೂಡಿಕೆ ಮಾಡಲಿರುವ ಕಂಪನಿಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವು ಪ್ಯಾರಾ 3.1.1(ಎ) ವ್ಯಾಪ್ತಿಗೆ/ನಿರ್ಬಂಧಕ್ಕೆ ಒಳಪಡುವಂತಿದ್ದರೆ ಫಲಾನುಭವಿ ಮಾಲಿಕರು ಅಂತಹ ಸಂದರ್ಭದಲ್ಲಿ ಮಾಲಿಕತ್ವ ಬದಲಾವಣೆಗೆ ಸರ್ಕಾರದ ಅನುಮೋದನೆ ಅಗತ್ಯವಿದೆ.

ಈ ಮೇಲಿನ ನಿರ್ಧಾರ ಫೆಮಾ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗಲಿದೆ.

***(Release ID: 1615922) Visitor Counter : 297