ರಕ್ಷಣಾ ಸಚಿವಾಲಯ

ಕೊವಿಡ್-19 ವಿರುದ್ಧ ಹೋರಾಡಲು ಪಿಪಿಇಗಳು ಮತ್ತು ಇತರ ಉತ್ಪನ್ನಗಳ ಉತ್ಪಾದನೆ ಕುರಿತು ವೆಬಿನಾರ್

Posted On: 17 APR 2020 7:13PM by PIB Bengaluru

ಕೊವಿಡ್-19 ವಿರುದ್ಧ ಹೋರಾಡಲು ಪಿಪಿಇಗಳು ಮತ್ತು ಇತರ ಉತ್ಪನ್ನಗಳ ಉತ್ಪಾದನೆ ಕುರಿತು ವೆಬಿನಾರ್

 

ಸರ್ಕಾರಿ ಮತ್ತು ಸರ್ಕಾರೆತರ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಕೊವಿಡ್-19 ಸಮರದ ಅವಶ್ಯಕ ಉತ್ಪನ್ನಗಳ ಬೇಡಿಕೆಗಳನ್ನ ಪೂರೈಸಲು ಸ್ಥಳೀಯ ಉದ್ಯಮಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ಉತ್ಪಾದಕ ಸಂಘ (ಎಸ್ ಐ ಡಿ ಎಮ್) ರಕ್ಷಣಾ ಸಂಶೋಧನಾ ಇಲಾಖೆ ಕಾರ್ಯದರ್ಶಿ ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ನೇತೃತ್ವದ ಡಿ ಆರ್ ಡಿ ಒ ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ ಇಂದು ವೆಬಿನಾರ್ ಆಯೋಜಿಸಿದೆ.

ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ಡಾ. ರೆಡ್ಡಿ ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಷ್ಟ್ರಕ್ಕೆ ಕೊವಿಡ್-19 ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ಉತ್ಪಾದಿಸಲು ಮುಂದೆ ಬಂದಿರುವ ಉದ್ಯಮಗಳ ಪ್ರಯತ್ನಗಳನ್ನು ಶ್ಲಾಘಿಸಿದರು. ಪಿಪಿಇಗಳಿಗಾಗಿ ಡಿ ಆರ್ ಡಿ ಒ ದ ಹೊಸ ವಿನ್ಯಾಸದ ಕುರಿತು ಅವರು ವಿವರಿಸಿದರು ಮತ್ತು ಅದನ್ನು ಬಳಸಲು ಇಚ್ಛಿಸುವ ಉದ್ಯಮಗಳೊಂದಿಗೆ ಸಂಪೂರ್ಣ ಜ್ಞಾನವನ್ನು ಹಂಚಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪಿಪಿಇ ವಸ್ತ್ರಗಳ ಮರುಬಳಕೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಕೂಡಾ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ವೆಂಟಿಲೇಟರ್ ಗಳು, ಆಮ್ಲಜನಕದ ಸಿಲೆಂಡರ್ ಗಳು, ಕನ್ನಡಕಗಳು, ಪರೀಕ್ಷಾ ಕಿಟ್ ಗಳು, ಸ್ವಾಬ್ ಗಳು ಮತ್ತು ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಂಗಳಂತಹ (ವಿಟಿಎಂ ಗಳು) ಆಪತ್ಕಾಲೀನ ವಸ್ತುಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಗಂಭೀರ ಪ್ರಯತ್ನವನ್ನು ಕೈಗೊಳ್ಳಲಾಗುತ್ತಿದೆ.

ಡಿ ಆರ್ ಡೊ ಒ ಪ್ರಸ್ತುತ 15 ರಿಂದ 20 ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಡಿಡಿಆರ್ & ಡಿ ಕಾರ್ಯದರ್ಶಿಗಳು ತಿಳಿಸಿದರು. ಕೊವಿಡ್-19 ರ ವಿರುದ್ಧ ಸುರಕ್ಷತೆಗಾಗಿ ಯುವಿ ಸಾನಿಟೈಸೇಷನ್ ಬಾಕ್ಸ್, ಕೈಯಲ್ಲಿ ಹಿಡಿಯಬಹುದಾದ ಯುವಿ ಉಪಕರಣ, ಕೊವ್ ಸ್ಯಾಕ್ (ಕೊವಿಡ್ ಮಾದರಿ ಸಂಗ್ರಹದ ಕಿಯೋಸ್ಕ್) ಕಾಲಿನಿಂದ ಚಲಿಸಬಹುದಾದ ಫ್ಯೂಮಿಗೇಶನ್ ಉಪಕರಣ, ಟಚ್ ಫ್ರೀ ಸ್ಯಾನಿಟೈಸರ್ ಗಳು ಮತ್ತು ಮುಖ ಕವಚದಂತಹ ಹೊಸದಾಗಿ ಅಭಿವೃದ್ಧಿಪಡಿಸಲಾದ ಉತ್ಪನ್ನಗಳ ಕುರಿತು ಅವರು ಮಾಹಿತಿ ನೀಡಿದರು.

ಈ ಚರ್ಚಾತ್ಮಕ ಸಂವಾದದ ವೇಳೆ ಉದ್ಯಮಗಳು ವಸ್ತುಗಳು, ಮೂಲ, ಪರೀಕ್ಷೆ, ಸೀಲೆಂಟ್ ಗಳು ಮತ್ತು ಡಿ ಆರ್ ಡಿ ಒ ಅಭಿವೃದ್ಧಿಪಡಿಸಿದ ಹೊಸ ಉತ್ಪನ್ನಗಳ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದವು. ಡಿ ಆರ್ ಡಿ ಒ ಪ್ರತಿನಿಧಿಗಳು ದಕ್ಷಿಣ ಭಾರತ ಜವಳಿ ಸಂಶೋಧನಾ ಸಂಘ (ಸಿಟ್ರಾ) ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಉಪಕರಣಗಳ ಕುರಿತಾದ ವಿವರವಾದ ತಾಂತ್ರಿಕ ಮಾಹಿತಿ ಡಿ ಆರ್ ಡಿ ಒ ದ ಮೂಲಕ ಸಂಪೂರ್ಣ ಉಚಿತವಾಗಿ ಉದ್ಯಮಗಳಿಗೆ ಲಭ್ಯವಿದೆ.

ವೆಬಿನಾರ್ ನಲ್ಲಿ ಪಾಲ್ಗೊಂಡ ಎಲ್ಲರ ಯಶಸ್ಸಿಗೆ ಶುಭ ಕೋರಿದರು ಹಾಗೂ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿ ಆರ್ ಡಿ ಒ ಮತ್ತು ಉದ್ಯಮಗಳ ನಡುವೆ ತಂತ್ರಜ್ಞಾನದ ಪಾಲುದಾರಿಕೆಗೆ ಮತ್ತಷ್ಟು ಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

***


(Release ID: 1615707) Visitor Counter : 281