ಗೃಹ ವ್ಯವಹಾರಗಳ ಸಚಿವಾಲಯ

ಕೆಲವು ವರ್ಗಗಳನ್ನು ಹೊರತುಪಡಿಸಿ ಭಾರತಕ್ಕೆ ವಲಸೆ ಚೆಕ್ ಪೋಸ್ಟ್‌ಗಳ ಮೂಲಕ ಬರಲು ವಿದೇಶಿಯರು ಮತ್ತು ಎಲ್ಲಾ ಒಳಬರುವ ಪ್ರಯಾಣಿಕರಿಗೆ ನೀಡಲಾಗಿದ್ದ ಎಲ್ಲಾ ವೀಸಾಗಳು 2020 ರ ಮೇ 3 ರವರೆಗೆ ರದ್ದು

Posted On: 17 APR 2020 9:03PM by PIB Bengaluru

ಕೆಲವು ವರ್ಗಗಳನ್ನು ಹೊರತುಪಡಿಸಿ ಭಾರತಕ್ಕೆ ವಲಸೆ ಚೆಕ್ ಪೋಸ್ಟ್ಗಳ ಮೂಲಕ ಬರಲು ವಿದೇಶಿಯರು ಮತ್ತು ಎಲ್ಲಾ ಒಳಬರುವ ಪ್ರಯಾಣಿಕರಿಗೆ ನೀಡಲಾಗಿದ್ದ ಎಲ್ಲಾ ವೀಸಾಗಳು 2020 ಮೇ 3 ರವರೆಗೆ ರದ್ದು

 

ದೇಶದಲ್ಲಿ ಕೋವಿಡ್-19 ಸೋಂಕು ಮುಂದುವರಿದಿರುವ ಹಿನ್ನೆಲೆಯಲ್ಲಿ, ರಾಜತಾಂತ್ರಿಕ, ಅಧಿಕೃತ, ವಿಶ್ವಸಂಸ್ಥೆ/ ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಮತ್ತು ಯೋಜನಾ ವಿಭಾಗಗಳಿಗೆ ಸೇರಿದವರನ್ನು ಹೊರತುಪಡಿಸಿ, ಉಳಿದೆಲ್ಲಾ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳ ಅಮಾನತು ಅವಧಿಯನ್ನು ಕೇಂದ್ರ ಗೃಹ ಸಚಿವಾಲಯವು ಮೇ 3, 2020 ರವರೆಗೆ ವಿಸ್ತರಿಸಿದೆ.

ಯಾವುದೇ 107 ವಲಸೆ ಚೆಕ್ ಪೋಸ್ಟ್ಗಳ ಮೂಲಕ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರ ಸಂಚಾರವನ್ನು 2020 ಮೇ 3 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಗೃಹಸಚಿವಾಲಯ ನಿರ್ದೇಶಿಸಿದೆ. ಆದಾಗ್ಯೂ, ಯಾವುದೇ ಅಗತ್ಯ ಅಥವಾ ಅಗತ್ಯವಲ್ಲದ ಸರಕು ಸಾಗಣೆಯ ವಾಹನಗಳು, ವಿಮಾನಗಳು, ಹಡಗುಗಳು, ರೈಲುಗಳು ಇತ್ಯಾದಿಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ. ಇವುಗಳ ಸಿಬ್ಬಂದಿ, ನಾವಿಕರು, ಚಾಲಕರು, ಸಹಾಯಕರು, ಕ್ಲೀನರ್ ಗಳನ್ನು ಕೋವಿಡ್-19 ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.

***



(Release ID: 1615700) Visitor Counter : 196